ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ಆದಿತ್ಯಾ L1 ಮೀಷನ್‌ ಕುರಿತು ಸಂಪೂರ್ಣ ಮಾಹಿತಿ

ಇಸ್ರೋ ಅದಿತ್ಯಾ L1 ಮೀಷನ್‌ ಕುರಿತು ಸಂಪೂರ್ಣ ಮಾಹಿತಿ 

ಇಸ್ರೋದ ಆದಿತ್ಯಾ ಎಲ್‌ 1 ಮೀಷನ್‌ ಒಂದು ಐದು ವರ್ಷದ ಯೋಜನೆಯಾಗಿದ್ದು ಇದು ಭೂಮಿಯಿಂದ ಸುಮಾರು 1.5 Million (೧೫  ಲಕ್ಷ ಕಿಲೋಮೀಟರ್‌) ದೂರದಲ್ಲಿ ಇದ್ದು ಸೂರ್ಯನ ಮೇಲ್ಮೈ ಕುರಿತು ಅಧ್ಯಯನ ನಡೆಸಲಿದೆ. ಮುಖ್ಯವಾಗಿ ಇದು ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೀಷನ್‌ ಆಗಿದೆ. ಆದಿತ್ಯಾ L1 ಮೀಷನ್‌ ಆಸ್ಟ್ರೋಸ್ಯಾಟ್‌ 2015 ರ ನಂತರ ಭಾರತದ ಎರಡನೇಯ ಬಾಹ್ಯಾಕಾಶ ಆಧಾರಿತ ಖಗೋಳ ಮೀಷನ್‌ ಆಗಿದೆ. 


ಆದಿತ್ಯಾ L1 ಮೀಷನ್‌ ಕುರಿತು ಸಂಪೂರ್ಣ ಮಾಹಿತಿ
About Aditya L1 Mission 

ಆದಿತ್ಯಾ ಎಲ್‌ 1 ಹೆಸರು ಏಕೆ ? 

ಪ್ರಮುಖವಾಗಿ ಈ ಒಂದು ಯೋಜನೆಯನ್ನು ಮೊದಲು ಭಾರತೀಯ ಬಾಹ್ಯಾಕಾಶ ಸಲಹಾ ಸಮೀತಿ 2008 ರಲ್ಲಿ ರೂಪಿಸಿತ್ತು. ಸೂರ್ಯ ಮತ್ತು ಭೂಮಿಯ ನಡುವಿನ ವ್ಯವಸ್ಥೆಯ ಲಾಂಗ್ರೇಜ್‌ ಪಾಯಿಂಟ್‌ 01 ನಲ್ಲಿ ಭೂಮಿಯಿಂದ 1.5 Million  ಕಿಲೋ ಮೀಟರ್‌ ದೂರದಲ್ಲಿ ಹಾಲೋ ಕಕ್ಷೆಯಲ್ಲಿ ಇರಿಸಲಾಗಿದೆ. ಇದು ಸೂರ್ಯ ಮತ್ತು ಭೂಮಿಯ ದೂರದ 1% ಆಗಿದೆ. ಪ್ರಮುಖವಾಗಿ ಈ ಒಂದು ಪಾಯಿಂಟ್‌ ನಲ್ಲಿ ಉಪಗ್ರಹವನ್ನು ಇರಿಸುವುದರ ಪ್ರಮುಖ ಉದ್ದೇಶವೆಂದರೆ ಯಾವುದೇ ಅಡೆತಡೆಯಿಲ್ಲದೆ ಸೂರ್ಯನ ಮೇಲ್ಮೈಯನ್ನು ಅಧ್ಯಯನ ಮಾಡಲು ಇದು ಸಹಕಾರಿಯಾಗಿದೆ. 

ಪ್ರಮುಖ ಉದ್ದೇಶಗಳು 

ಸೂರ್ಯನ ಕುರಿತು ಕೂತುಹಲಕಾರಿ ಸಂಗತಿಗಳ ಬಗ್ಗೆ ತಿಳಿಯುವುದು ಇದರಿಂದ ಸಾಧ್ಯವಾಗುತ್ತದೆ. ಸೂರ್ಯನ ಪ್ರಭಾವದ ಕುರಿತು ಉದಾಹರಣೆಗೆ ವಿಕಿರಣತೆ, ಉಷ್ಣ, ಕಣದ ಪ್ರಭಾವ ಹಾಗೂ ಕಾಂತೀಯ ಕ್ಷೇತ್ರದ ಕುರಿತು ಅಧ್ಯಯನ ಮಾಡಲು ಈ ಒಂದು ಯೋಜನೆ ಸಹಕಾರಿಯಾಗಲಿದೆ.  


ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಾಹ್ಯಾಕಾಶ ಸಂಸ್ಥೆಗಳ ಕುರಿತು ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲೀಕ್‌ ಮಾಡಿ 👉 ಕ್ಲಿಕ್‌ ಹಿಯರ್

ಆದಿತ್ಯಾ L1 ಮೀಷನ್‌ ಕುರಿತು ಸಂಪೂರ್ಣ ಮಾಹಿತಿ 

  • ಇದು ಭಾರತದ ಮೊದಲ ಸೌರ ಮೀಷನ್‌ ಆಗಿದೆ
  • PSLV C-57 (XL) Variant ಮೂಲಕವಾಗಿ ಉಡಾವಣಾ ಮಾಡಲಾಯಿತು
  • ಇದು ಸೆಪ್ಟೆಂಬರ್‌ 2 2023 ರಂದು ಆಂಧ್ರ ಪ್ರದೇಶದ ಸತೀಶ್‌ ಧವನ್‌ ಸ್ಪೇಸ್‌ ಸೆಂಟರ್‌ನಿಂದ ಶ್ರೀ ಹರಿಕೋಟದಿಂದ  ಉಡಾವಣೆ ಮಾಡಲಾಯಿತು
  • ಇದು 07 ಪೇಲೋಡ್‌ಗಳನ್ನು ಒಳಗೊಂಡಿದೆ. 
  • ಇದು ಜನವರಿ 06 ರಂದು ಹಾಲೋ ಅರ್ಬಿಟ್‌ ಅನ್ನು ತಲುಪಲಿದೆ.

ಆದಿತ್ಯಾ L1 ಮೀಷನ್‌ ಕುರಿತು ಸಂಪೂರ್ಣ ಮಾಹಿತಿ
Aditya L1 Mission


07 ಪೇಲೋಡ್‌ 

  1. VELC : Visible Emission Line Coronagraph
  2. SUIT : Solar Ultraviolet Imaging Telescope 
  3. SoLEXS : Solar Low Energy X-Ray Spectrometer 
  4. HEL1OS : High Energy L1 Orbiting X-Ray Spectrometer 
  5. ASPEX : Aditya Solar wind Particle Experiment 
  6. PAPA : Plasma Analyzer Package for Aditya 
  7. Magnetometer 
ಇದರಲ್ಲಿ ಮುಖ್ಯವಾಗಿ 04 ಪೇಲೋಡ್ಗಳು ಸೂರ್ಯನ ಕಿರಣಗಳ ಬಗ್ಗೆ ಮತ್ತು 03 ಪೇಲೋಡ್ಗಳು ಸೂರ್ಯನ ಮೇಲ್ಮೈ ಕುರಿತು ಅಧ್ಯಯನ ನಡೆಸಲಿವೆ. 

ಪೇಲೋಡ್‌ ಎಂದರೇನು ? 

ಒಂದು ರಾಕೇಟ್‌ ಹೊತ್ತೋಯ್ಯುವ ತೂಕದ ಸಾಮಾಗ್ರಿಗಳಿಗೆ ಪೇಲೋಡ್‌ ಎಂದು ಕರೆಯುತ್ತೆವೆ. ಅಂದರೆ ಆದಿತ್ಯಾ ಎಲ್‌ 1 ಕೃತಕ ಉಪಗ್ರಹ ಹೊಂದಿದ ಇತರೆ ಸಾಮಾಗ್ರಿಗಳ ತೂಕಗಳು ಅಂದರೆ ಇತರೆ ಉಪಕರಣಗಳು ಎಂದರ್ಥ ಈ ಮೀಷನ್‌ ನಲ್ಲಿ ಏಳು ಪೇಲೋಡ್‌ಗಳನ್ನು ಒಳಗೊಂಡಿದ್ದು ಅವುಗಳ ಮಾಹಿತಿಯನ್ನು ಮೇಲೆ ನಿಡಲಾಗಿದೆ ನೋಡಿಕೋಳ್ಳಬಹುದಾಗಿದೆ. ವಿವಿಧ ಪೇಲೋಡ್‌ಗಳು ಬೇರೆ ಬೇರೆ ಕೆಲಸವನ್ನು ನಿರ್ವಹಿಸುತ್ತವೆ. 

ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಲಾದ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ : ಇಸ್ರೋ 

ಇತ್ತೀಚಿನ ಅನ್ವೇಷನೆಗಳು

ಒಂದು ವರ್ಷದಿಂದ ಸೂರ್ಯನ ಮೇಲೆ ನಿಗಾ ಇಟ್ಟಿರುವ ಆದಿತ್ಯ ಎಲ್‌ 1 ಸೌರ ಜ್ವಾಲೆಗಳನ್ನು ಸೆರೆಹಿಡಿದು ಇತ್ತೀಚಿಗೆ ಇಸ್ರೋಗೆ ಕಳುಹಿಸಲಾಗಿತ್ತು ಮತ್ತು ಈ ಚಿತ್ರಗಳನ್ನು ಇಸ್ರೋ ತಮ್ಮ ಆಫೀಶಿಯಲ್‌ ವೇಬ್ಸೈಟ್ನಲ್ಲಿ ಪ್ರಕಟಿಸಲಾಗಿತ್ತು. ಸೌರ ಜ್ವಾಲೆಗಳ ದೃಶ್ಯಗಳನ್ನು ಆದಿತ್ಯ ಎಲ್‌ 1 ನಲ್ಲಿ ಇರುವ (Ultraviolet Imaging Telescope)   ಸೆರೆಹಿಡಿದಿದೆ ಮತ್ತು ಆದಿತ್ಯ ಎಲ್‌ 1 (X-ray spectrometer) ಮೊದಲ ಬಾರಿಗೆ ಸೌರ ಜ್ವಾಲೆಗಳ ಕ್ಷ ಕಿರಣಗಳನ್ನು ದಾಖಲಿಸಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

Call Letter Update of Central and State Government Recruitment