ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ಕರ್ನಾಟಕ ಏಕೀಕರಣ ಚಳುವಳಿಯ ಸಂಪೂರ್ಣ ಮಾಹಿತಿ

ಕರ್ನಾಟಕದ ಏಕೀಕರಣ ಚಳುವಳಿ

ಸ್ನೇಹಿತರೆ ಕರ್ನಾಟಕ ರಾಜ್ಯದ ಏಕೀಕರಣ ಚಳುವಳಿಗೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳನ್ನು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುತ್ತದೆ. ಈ ಬಗ್ಗೆ ಕನ್ನಡಿಗರಾಗಿ ನಮ್ಮ ರಾಜ್ಯದ ಇತಿಹಾಸ ತಿಳಿಯುವುದು ಕೂಡಾ ನಮ್ಮ ಕರ್ತವ್ಯ ಆದ್ದರಿಂದ ಕರ್ನಾಟಕದ ಏಕೀಕರಣಕ್ಕೆ ಸಂಬಂಧಿಸಿದಂತ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. 

ವಿವಿಧ ಪ್ರಾಂತ್ಯಗಳಲ್ಲಿ ಹಂಚಿ ಹೋಗಿದ್ದ ಕರ್ನಾಟಕದ ಭಾಗಗಳು 



ಪ್ರಾಂತ್ಯಗಳು ಊರುಗಳು
1 ಮೈಸೂರು ಸಂಸ್ಥಾನ ಹಳೇ ಮೈಸೂರು 
ಬೆಂಗಳೂರು, ಕೋಲಾರ, ತುಮಕೂರು,
ಮಂಡ್ಯ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, 
ಚಿತ್ರದುರ್ಗ
2 ಮದ್ರಾಸ್‌ ಪ್ರಾಂತ್ಯ ದಕ್ಷಿಣ ಕನ್ನಡ, ಕೊಳ್ಳೇಗಾಲ, ಕೊಡಗು, ಬಳ್ಳಾರಿ
3 ಬಾಂಬೆ ಪ್ರಾಂತ್ಯ ಬೆಳಗಾವಿ, ಧಾರವಾಡ, ವಿಜಯಪುರ, ಕಾರವಾರ
4 ಕೋಡಗು ಚೀಫ್‌ ಕಮೀಷನರ್
5 ಇನ್ನು ಹಲವಾರು ಪ್ರಾಂತ್ಯ


ಕರ್ನಾಟಕ ಏಕೀಕರಣ ಚಳುವಳಿಯ ಸಂಪೂರ್ಣ ಮಾಹಿತಿ
ಕರ್ನಾಟಕ ಏಕೀಕರಣ ಚಳುವಳಿ


ಕರ್ನಾಟಕದ ಏಕೀಕರಣ ಸಮ್ಮೇಳನ

ಕರ್ನಾಟಕ ಏಕೀಕರಣ ಕಲ್ಪನೆ ಕೊಟ್ಟವರು ಡಿಪ್ಯೂಟಿ ಚನ್ನಬಸಪ್ಪ ಹಾಗೂ ಕರ್ನಾಟಕದ ಏಕೀಕರಣದ ಶಿಲ್ಪಿ ಎಂದು ಆಲೂರು ವೆಂಕಟರಾಯ ಅವರನ್ನು ಕರೆಯುತ್ತೇವೆ. 

ಕರ್ನಾಟಕ ಏಕೀಕರಣದಲ್ಲಿ ಸಂಘ ಸಂಸ್ಥೆಗಳು

1887 ಕರ್ನಾಟಕ ಭಾಷೋಜೀನಿ ಸಭಾ ಕೆ. ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲಿ ಸ್ಥಾಪನೆಯಾಗುತ್ತದೆ ಕರ್ನಾಟಕ ವಿದ್ಯಾವರ್ಧಕ ಸಂಘ 1890ರಲ್ಲಿ R.H. ದೇಶಪಾಂಡೆ ಅವರ ನೇತೃತ್ವದಲ್ಲಿ ಸ್ಥಾಪನೆಯಾಗುತ್ತದೆ. ಹಾಗೂ 1915ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗುತ್ತದೆ. ಪ್ರಮುಖವಾಗಿ ಇದು ಏಕೀಕರಣದ ಗುರಿಯನ್ನು ಹೊಂದಿತ್ತು. ಪ್ರಮುಖವಾಗಿ ಕರ್ನಾಟಕ ಸಭಾ 1916 ಧಾರವಾಡದಲ್ಲಿ ಸ್ಥಾಪನೆಯಾಗುತ್ತದೆ. ಮತ್ತು ಕರ್ನಾಟಕದ ಏಕೀಕರಣ ಸಮೀತಿ 1924ರಲ್ಲಿ ಪ್ರಥಮ ಸಭೆಯನ್ನು ಬೆಳಗಾವಿಯಲ್ಲಿ ನಡೆಸಿತು ಆಗ ಪ್ರಮುಖವಾಗಿ ಈ ಒಂದು ಸಭೆಯ ಅಧ್ಯಕ್ಷತೆಯನ್ನು ವಹಿಸಿದವರು ಸರ್. ಸಿದ್ದಪ್ಪ ಕಂಬಳಿ. 

ಕರ್ನಾಟಕ ಏಕೀಕರಣ ಸಭೆಯ ಅಧ್ಯಕ್ಷರುಗಳು

ಪ್ರಮುಖವಾಗಿ 1928 ರಂದು ಹಾಗೂ ಫ.ಗು. ಹಳಕಟ್ಟಿ ಅವರು ಧಾರವಾಡದ ಕರ್ನಾಟಕ ಏಕೀಕರಣದ ಸಭೆಯ ಅಧ್ಯಕ್ಷರಾಗಿದ್ದರು. ಅದೇ ರೀತಿಯಾಗಿ 1947 ರಂದು ಕಾಸರಗೋಡಿನಲ್ಲಿ ಆರ್.ಆರ್. ದಿವಾಕರ ಅಧ್ಯಕ್ಷತೆಯಾಗಿದ್ದರು. 

ಮೋತಿಲಾಲ್ ನೆಹರು ಸಮಿತಿ 1928 

1928 ರಂದು ಮೂತಿಲಾಲ್ ನೆಹರು ಅವರ ನೇತೃತ್ವದಲ್ಲಿ ಒಂದು ಆಯೋಗವನ್ನು ನೇಮಿಸಲಾಗುತ್ತದೆ. ಈ ಆಯೋಗದಲ್ಲಿ ಸುಭಾಷ್ ಚಂದ್ರ ಬೋಸ್, ಸರ್ ತೇಜ್ ಬಹದ್ದೂರ್ ಸಾಹೀಬ್, ಖುರೇಷಿ, ಸರ್ ಅಲಿ ಇಮಾಮ್ ಮೊದಲಾದವರು ಪ್ರಮುಖ ಸದಸ್ಯರಾಗಿದ್ದರು. ಕರ್ನಾಟಕ ಏಕೀಕರಣ ಸಂಘ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಗಳೆರಡು ಕೂಡಿ ಮೋತಿಲಾಲ್ ನೆಹರು ಸಮಿತಿಯ ಮುಂದೆ ತಮ್ಮ ಬೇಡಿಕೆ ಇಟ್ಟವು. ನಂತರ ಕರ್ನಾಟಕದ ಏಕೀಕರಣಕ್ಕೆ ಒಪ್ಪಿಗೆಯನ್ನು ನೀಡಲಾಯಿತು ಮತ್ತು ಮುಂದಿನ ಅಧಿವೇಶನದಲ್ಲಿ ಅಂಗೀಕರಿಸಿ ಅದನ್ನು ಬ್ರಿಟಿಷ್ ಸಹಕಾರಕ್ಕೆ ಬೇಡಿಕೆ ಸಲ್ಲಿಸಿತು.

ಸೈಮನ್ ಕಮಿಷನ್ 1928

1928 ರಲ್ಲಿ ಭಾರತಕ್ಕೆ ಬಂದ ಸೈಮನ್ ಕಮಿಷನ್ ಭಾಷಾವಾರು ಪ್ರಾಂತ್ಯಗಳ ರಚನೆ ಅಗತ್ಯತೆಯನ್ನು ಗುರುತಿಸಿತು ಹಾಗೂ ಕರ್ನಾಟಕ ಪ್ರಾಂತ್ಯ ರಚನೆಯು ರಾಜಕೀಯವಾಗಿ ಎಲ್ಲ ಅರ್ಹತೆಗಳನ್ನು ಪಡೆದಿದೆ ಎಂಬುದನ್ನು ಸೂಚಿಸುತ್ತದೆ. 1930 ರಿಂದ 32ರ ವರೆಗೆ ಲಂಡನ್ ನಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನದಲ್ಲಿ ಬೆನಗಲ್ ರಾಯರು ಮತ್ತು ಮಿರ್ಜಾ ಇಸ್ಮಾಯಿಲ್ ಅವರು ಕರ್ನಾಟಕದ ವಿಷಯವನ್ನು ಪ್ರಸ್ತಾಪಿಸಿದರು. 

ಕರ್ನಾಟಕದ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದವರು 

ಆಲೂರು ವೆಂಕಟರಾಯರು, ಪಿ.ವಿ. ಮಾಧವರಾವ್, ಕಡಪಾ ರಾಘವೇಂದ್ರ ರಾವ್, ಪಂಡಿತ್ ತಾರಾನಾಥ್, ಅಂದಾನಪ್ಪ ದೊಡ್ಡಮೇಟಿ(ಕರ್ನಾಟಕ ಏಕೀಕರಣಕ್ಕಾಗಿ 15 ದಿನಗಳ ಉಪವಾಸ), ಶಿವರಾಮ ಕಾರಂತ ಇನ್ನು ಹಲವು ವ್ಯಕ್ತಿಗಳು ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ್ದಾರೆ. 


ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪದ ಮಾಹಿತಿ : 👉 ಕ್ಲಿಕ್‌ ಮಾಡಿ 



ಕರ್ನಾಟಕ ಏಕೀಕರಣದ ಪ್ರಮುಖ ಆಯೋಗಗಳು 


ಧಾರ್ ಆಯೋಗ 1948

ಅಲಹಾಬಾದ್ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಎಸ್ಕೆ ಧಾರ್ ಅವರ ನೇತೃತ್ವದಲ್ಲಿ ಈ ಒಂದು ಸಮಿತಿಯನ್ನು ರಚನೆ ಮಾಡಲಾಯಿತು. ಇದರಲ್ಲಿ ಡಾಕ್ಟರ್ ಪನ್ನಾಲಾಲ್ ಮತ್ತು ಜಗತ್ ನಾರಾಯಣ್ ಲಾಲ್ ಸದಸ್ಯರಾಗಿ ಮತ್ತು ಬಿಸಿ ಬ್ಯಾನರ್ಜಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಮುಖ್ಯವಾಗಿ ಈ ಒಂದು ಆಯೋಗ ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ್, ಪ್ರತಿಯೊಂದು ರಾಜ್ಯಕ್ಕೂ ಭಾಷೆಗಳ ಆಧಾರದ ಮೇಲೆ ಪ್ರಾಂತ್ಯಗಳನ್ನು ರಚಿಸಲು ಸಾಧ್ಯವಿಲ್ಲ ಎಂಬ ವರದಿಯನ್ನು ನೀಡುತ್ತದೆ. ಮುಖ್ಯವಾಗಿ ಈ ಒಂದು ಆಯೋಗದ ವರದಿಯನ್ನು ಕನ್ನಡಿಗರು ವಿರೋಧಿಸುತ್ತಾರೆ.

ಜೆ.ವಿ.ಪಿ ಕಮಿಟಿ 1948 

ಮುಖ್ಯವಾಗಿ ಈ ಕಮಿಟಿಯಲ್ಲಿ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಪಟ್ಟಾಭಿ ಸೀತಾರಾಮಯ್ಯನವರನ್ನ ಒಳಗೊಂಡ ಸಮಿತಿಯಾಗಿತ್ತು. 
ಮುಖ್ಯವಾಗಿ ಈ ಒಂದು ಸಮಿತಿಯ ಕೆಲಸ ಕರ್ನಾಟಕ ಆಂಧ್ರ ಪ್ರದೇಶ ಮತ್ತು ಕೇರಳ ರಾಜ್ಯಗಳ ಕುರಿತು ವರದಿಯನ್ನು ಮಾಡಬೇಕಾಗಿತ್ತು. ಇದು ಆಂಧ್ರಪ್ರದೇಶದ ರಚನೆಗೆ ಒಪ್ಪಿ ಕರ್ನಾಟಕ ಮತ್ತು ಕೇರಳದ ಬೇಡಿಕೆಗಳನ್ನು ತಿರಸ್ಕರಿಸಿತು. 

ಆಂಧ್ರಪ್ರದೇಶದ ರಚನೆ

ಆಂಧ್ರಪ್ರದೇಶದ ರಚನೆಗೆ ಒತ್ತಾಯಿಸಿ ಪೊಟ್ಟಿ ಶ್ರೀರಾಮುಲು 1952ರ ಅಕ್ಟೋಬರ್ ನಲ್ಲಿ 52 ದಿನಗಳ ಆಮರಣಾಂತ ಉಪವಾಸ ಕೈಗೊಂಡು ನಿಧನರಾದರು. ಇದರಿಂದ ಆಂಧ್ರಪ್ರದೇಶದಲ್ಲಿ ತೀವ್ರವಾಗಿ ಗಲಭೆಗಳು ಉಂಟಾದವು. ಆದ್ದರಿಂದ ತಕ್ಷಣವೇ ಆಂಧ್ರಪ್ರದೇಶದ ರಚನೆಗೆ ಅವಕಾಶ ನೀಡಲಾಯಿತು. ಇದರಿಂದಾಗಿ 1953 ನವೆಂಬರ್ ಒಂದರಂದು ಆಂಧ್ರಪ್ರದೇಶ ರಚನೆಯಾಗುತ್ತದೆ. ಈ ವರ್ಷದಲ್ಲಿ ಪ್ರಮುಖವಾಗಿ ಬಳ್ಳಾರಿಗೆ ಸಂಬಂಧಪಟ್ಟಂತೆ ಸಮಸ್ಯೆ ಉಂಟಾಗುತ್ತದೆ. ಅದಕ್ಕೆ ಜಸ್ಟಿಸ್ ವಾಂಚಾ ಸಮಿತಿಯನ್ನು ನೇಮಕ ಮಾಡಲಾಗುತ್ತದೆ ಇದು ಪ್ರಮುಖವಾಗಿ ಬಳ್ಳಾರಿಯ ತಾಲೂಕುಗಳಾದ ಅಧೋನಿ, ಆಲೂರು, ರಾಮದುರ್ಗ ತಾಲೂಕುಗಳನ್ನು ಆಂಧ್ರಪ್ರದೇಶಕ್ಕೂ ಮತ್ತು ಮೈಸೂರಿಗೆ ಬಳ್ಳಾರಿಯನ್ನು ಸೇರಿಸಲಾಯಿತು. 

ರಾಜ್ಯ ಪುನರ್ ವಿಂಗಡಣಾ ಆಯೋಗ 1953

ಕೇಂದ್ರ ಸರ್ಕಾರದ 1953ರ ಡಿಸೆಂಬರ್ 29ರಂದು ರಾಜ್ಯ ಪುನರ್ ವಿಂಗಡಣಾ ಸಮಿತಿ ನೇಮಿಸಲಾಗುತ್ತದೆ. ಇದರಲ್ಲಿ ಫಜಲ್ ಅಲಿ, ಕೆ.ಎಂ. ಪಣಿಕ್ಕರ್, ಹೃದಯನಾಥ್ ಕುಂಜ್ರು ನೇಮಕಗೊಳ್ಳುತ್ತಾರೆ ಇದರ ಅಧ್ಯಕ್ಷತೆ ವಹಿಸಿದವರು ಫಜಲ್ ಅಲಿ. ಮುಖ್ಯವಾಗಿ ಈ ಸಮಿತಿ ರಾಷ್ಟ್ರಾದ್ಯಂತ ಪ್ರವಾಸವನ್ನು ಕೈಗೊಂಡು 1955 ಸೆಪ್ಟೆಂಬರ್ 30ರಂದು ತನ್ನ ವರದಿಯನ್ನು ಸಲ್ಲಿಸುತ್ತದೆ. ಮುಖ್ಯವಾಗಿ ಈ ಆಯೋಗ ಮೈಸೂರು ರಾಜ್ಯದ ರಚನೆಗೆ ಅವಕಾಶವನ್ನು ನೀಡುತ್ತದೆ.  ಇದರಿಂದಾಗಿ 1956 ನವೆಂಬರ್ 1 ರಂದು ವಿಶಾಲ ಮೈಸೂರು ರಾಜ್ಯ ರಚನೆಯಾಗುತ್ತದೆ. 

ಹೊರ ರಾಜ್ಯದಲ್ಲಿ ಉಳಿದು ಹೋಗಿರುವ ಕನ್ನಡ ಪ್ರದೇಶಗಳು. 

1. ಕೇರಳ - ಕಾಸರಗೋಡು ತಾಲೂಕು 
2. ಆಂಧ್ರ ಪ್ರದೇಶ್ - ಆಲೂರು, ಅದವಾನಿ, ರಾಯದುರ್ಗ, ಮಡಕಶಿರಾ ತಾಲೂಕು
3. ಮಹಾರಾಷ್ಟ್ರ - ಸೊಲ್ಲಾಪುರ, ಚಂದ್ಗಡ್, ಜತ್ತ, ಗಡಹಿಂಗ್ಲಜ, ಅಕ್ಕಲಕೋಟೆ ಪ್ರದೇಶಗಳು, 
4. ತಮಿಳುನಾಡು - ತಾಳವಾಡಿ, ನಿಲಗಿರಿ, ಮತ್ತು ಹೊಸೂರು 



ಕರ್ನಾಟಕ ಎಂದು ಮರುನಾಮಕರಣ 

ದೇವರಾಜ್ ಅರಸ್ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಬೇಕು ಎಂಬುದನ್ನು ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ ಚಳುವಳಿಗಿಳಿಯಿತು. ಇದರಿಂದಾಗಿ ವಿಶಾಲ ಮೈಸೂರು ರಾಜ್ಯಕ್ಕೆ ರಾಜ್ಯದ ರಾಜಕೀಯ, ಸಂಸ್ಕೃತಿಕ, ಇತಿಹಾಸದ ಹಿನ್ನೆಲೆಯನ್ನು ಆಧರಿಸಿ 1973 ನವೆಂಬರ್ 1 ರಂದು ವಿಶಾಲ ಮೈಸೂರು ರಾಜ್ಯಕ್ಕೆ "ಕರ್ನಾಟಕ" ಎಂದು ಮರುನಾಮಕರಣ ಮಾಡಲಾಯಿತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

Karnataka 540 Forest Guard Physical Date 2025