ಭಾರತದ ಇತಿಹಾಸ ಮತ್ತು ಪ್ರಮುಖ ರಾಜ ಮನೆತನಗಳು ನೋಟ್ಸ್
ಭಾರತೀಯ ಇತಿಹಾಸದ ಪ್ರಶ್ನೋತ್ತರಗಳ PDF Notes : SDA, FDA, PSI, Civil Police Constable, CAR/DAR, KSRP, ಮುಖ್ಯವಾಗಿ ಎಲ್ಲಾ ಸ್ಪಧಾ೯ತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ
ಶಾತವಾಹನರ ರಾಜಮನೆತನ
ಶಾತವಾಹನರ ಸ್ಥಾಪಕ : ಸಿಮುಖ
ಶಾತವಾಹನರ ಮೊದಲ ರಾಜಧಾನಿ : ಕೋಟಿಲಿಂಗ ಅಂದರೆ ಈಗಿನ ಆಂಧ್ರಪ್ರದೇಶ
ಶಾತವಾಹನರ ಎರಡನೆಯ ರಾಜಧಾನಿ : ದಾರಣಿಕೋಟಾ
ಶಾತವಾಹನರ ರಾಜಮನೆತನದ ಪ್ರಮುಖ ಪ್ರಶ್ನೋತ್ತರಗಳು
ಮೌರ್ಯ ಸಾಮ್ರಾಜ್ಯದ ನಂತರ ಅಧಿಕಾರಕ್ಕೆ ಬಂದವರು
ಶಾತವಾಹನರ ರಾಜಧಾನಿ - ಪ್ರತಿಷ್ಠಾನ
ಶಾತವಾಹನರ ನಾಣ್ಯಗಳು ದೊರೆತ ಸ್ಥಳ - ಚಂದ್ರವಳ್ಳಿ ಮತ್ತು ಬ್ರಹ್ಮಗಿರಿ
ಒಂದನೇ ಶಾತಕರ್ಣಿಗೆ ಇದ್ದ ಬಿರುದು - ದಕ್ಷಿಣಾಪಥಪತಿ
ಏಕ ಬ್ರಾಹ್ಮಣ ಎಂಬ ಬಿರುದು ಹೊಂದಿದ ಶಾತವಾಹನರ ರಾಜ - ಗೌತಮಿಪುತ್ರ ಶಾತಕರ್ಣಿ
ಶಾತವಾಹನರಲ್ಲಿ ಅತ್ಯಂತ ಪ್ರಸಿದ್ಧ ಅರಸ - ಗೌತಮಿಪುತ್ರ ಶಾತಕರ್ಣಿ
ಶಾತವಾಹನರ ಕಾಲದ ವ್ಯಾಪಾರ ವಿವರ ತಿಳಿಯಲು ಇರುವ ಪ್ರಮುಖ ದಾಖಲೆ - ಟಾಲೆಮಿಯ ಬರಹಗಳು
ಶಾತವಾಹನರ ಕಾಲದಲ್ಲಿ ಚಿನ್ನದ ಗಣಿಗಾರಿಕೆ ನಡೆಸುತ್ತಿದ್ದ ಸ್ಥಳ - ಹಟ್ಟಿ
ಕುಶಾನರ ರಾಜಮನೆತನ
ಮೌರ್ಯರ ನಂತರ ಬಂದ ರಾಜಮನೆತನ ವಾದ ಕುಶಾನರು ಯೂಚಿ ಸಂತತಿಯವರು. ಕುಜಲ್ ಕಾಡ್ ಫೈಸಿಸ್ ಈ ಮನೆತನದ ಸ್ಥಾಪಕ ಕುಶಾನರ ವಂಶದ ಪ್ರಮುಖ ದೊರೆ ಕಾನಿಷ್ಕ ಕ್ರಿಸ್ತಶಕ 78ರಿಂದ ಕಾನಿಷ್ಕನು ಹೊಸ ಯುಗ ನಾಂದಿಹಾಡಿದನು ಇದನ್ನು ಶಕ ಯುಗವೆಂದು ಕರೆಯುತ್ತೇವೆ
ಪುರುಷಪುರವು ಕಾನಿಷ್ಕನ ರಾಜಧಾನಿಯಾಗಿತ್ತು. ಕಾನಿಷ್ಕನ ನೇತೃತ್ವದ ನಾಲ್ಕನೇ ಬೌದ್ಧ ಸಮಾವೇಶವನ್ನು ಕಾಶ್ಮೀರದಲ್ಲಿ ನಡೆಸಲಾಯಿತು.
ಕುಶಾನರ ರಾಜಮನೆತನದ ಪ್ರಶ್ನೋತ್ತರಗಳು
ಕುಶಾನರ ರಾಜಮನೆತನದಲ್ಲಿ ಅತ್ಯಂತ ಪ್ರಸಿದ್ಧ ದೊರೆ - ಕಾನಿಷ್ಕ
ಕಾನಿಷ್ಕನ ಆಳ್ವಿಕೆಯ ಬಗ್ಗೆ ತಿಳಿಸುವ ಶಾಸನ - ಸಾರನಾಥ ಶಾಸನ
ಕನಿಷ್ಕನ ಆಸ್ಥಾನದಲ್ಲಿದ್ದ ಪ್ರಸಿದ್ಧ ಬೌದ್ಧ ವಿದ್ವಾಂಸರು - ಅಶ್ವಘೋಷ ಹಾಗೂ ವಸುಮಿತ್ರ
4ನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ಕಾಶ್ಮೀರದ ಕುಂಡಲವನ
ಎರಡನೇ ಅಶೋಕ ಎಂದು ಕರೆಯಲ್ಪಡುವ ಕುಶಾನರ ದೊರೆ - ಕಾನಿಷ್ಕ
ಕುಶಾನರ ಕಾಲದಲ್ಲಿ ಪ್ರಚಾರಗೊಂಡ ಕಲಾಶೈಲಿ - ಗಾಂಧಾರ
ಕುಶಾನರ ಕಾಲದಲ್ಲಿ ಬೌದ್ಧ ವಿಗ್ರಹಗಳು ನಿರ್ಮಾಣಗೊಂಡ ಶೈಲಿ - ಮಥುರಾ ಶೈಲಿ
ರಾಜತರಂಗಿಣಿ ಗ್ರಂಥವನ್ನು ಬರೆದವರು - ಕಲ್ಹಣ
ಅಶ್ವಘೋಷನ ಬರೆದ ಕೃತಿ - ಬುದ್ಧ ಚರಿತ
ಕರ್ನಾಟಕದ ಕದಂಬರು ರಾಜಮನೆತನ
ಕರ್ನಾಟಕದ ಮೊಟ್ಟ ಮೊದಲ ರಾಜವಂಶ ಅದುವೇ ಕದಂಬರ ರಾಜವಂಶ ಇವರ ರಾಜಧಾನಿ ಬನವಾಸಿ ಇವರನ್ನು ಬನವಾಸಿಯ ಕದಂಬರು ಎನ್ನುವರು ಕದಂಬ ವಂಶದ ಸ್ಥಾಪಕ ಮಯೂರವರ್ಮ ಈ ಸಂತತಿಯ ಸ್ಥಾಪಕ
ಕದಂಬರ ಕಾಲದ ತಾಳಗುಂದ ಶಾಸನವು ಕರ್ನಾಟಕದಲ್ಲಿ ದೊರೆತಿರುವ ಮೊಟ್ಟ ಮೊದಲ ಸಂಸ್ಕೃತ ಶಾಸನವಾಗಿದೆ. ಹಲ್ಮಿಡಿ ಶಾಸನವು ಕನ್ನಡದಲ್ಲಿ ದೊರೆತ ಮೊಟ್ಟಮೊದಲ ಕನ್ನಡದ ಶಾಸನವಾಗಿದೆ. ಮಳವಳ್ಳಿ ಶಾಸನವು ಪ್ರಾಕೃತ ಭಾಷೆಯ ಪರಿಚಯ ಮಾಡುತ್ತದೆ.
ಕರ್ನಾಟಕ ಕದಂಬರು ರಾಜಮನೆತನದ ಪ್ರಮುಖ ಪ್ರಶ್ನೋತ್ತರಗಳು
ಕದಂಬ ವಂಶದ ಸ್ಥಾಪಕ - ಮಯೂರವರ್ಮ
ಬನವಾಸಿ ಗಿದ್ದ ಇತರ ಹೆಸರುಗಳು
* ವನವಾಸಿ * ವೈಜಯಂತಿ, * ಬೈಜಾಂಟಿಯಮ್
ಕದಂಬರ ರಾಜ ಲಾಂಛನ - ಸಿಂಹ, ವಾನರ ಧ್ವಜ
ಮಯೂರವರ್ಮನ ಸಾಧನೆಗಳನ್ನು ತಿಳಿಸುವ ಶಾಸನ - ಚಂದ್ರವಳ್ಳಿ ಶಾಸನ
ಕದಂಬರಲ್ಲಿ ಶ್ರೇಷ್ಠ ಆಡಳಿತಗಾರನಾಗಿದ್ದ ದೊರೆ - ಕಾಕುತ್ಸವರ್ಮ
ಕದಂಬ ಅರಸರು ಅನುಸರಿಸಿದ ಧರ್ಮ - ವೈದಿಕ ಧರ್ಮ
ಕದಂಬರ ಆರಾಧ್ಯದೈವ - ತಾಳಗುಂದದ ಪ್ರಣವೇಶ್ವರ
ಹಲ್ಮಿಡಿ ಶಾಸನವನ್ನು ಕೆತ್ತಿಸಿದವರು - ಕಾಕುತ್ಸವರ್ಮ
ಗಂಗರ ರಾಜಮನೆತನ 350-1004
ಗಂಗ ವಂಶದ ಸಂಸ್ಥಾಪಕರು ಇಕ್ಷ್ವಾಕು ವಂಶದವರು ಇವರು ಕುವಲಾಲ, ತಲಕಾಡು, ಹಾಗೂ ಮಾನ್ಯಪುರದಲ್ಲಿ ರಾಜ್ಯವನ್ನು ಆಳಿದ ಮನೆತನ ಗಂಗವಾಡಿ ರಾಜ್ಯವು ದಂಡಿಗನಿಂದ ಪ್ರಾರಂಭವಾಯಿತು ಗಂಗರಲ್ಲಿ ಪ್ರಸಿದ್ಧನಾದವನು ದುರ್ವಿನಿತನು ಗಂಗರು ಜೈನ ಮತಾವಲಂಬಿಗಳಾಗಿದ್ದರು ಚಾವುಂಡರಾಯನು ಶ್ರವಣಬೆಳಗೊಳದಲ್ಲಿ 58 ಅಡಿ ಏಕಶಿಲಾ ಗೊಮ್ಮಟೇಶ್ವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದರು ಪ್ರತಿ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಸಲಾಗುತ್ತದೆ. ಗಂಗರ ಪ್ರಮುಖ ವಾಸ್ತುಶಿಲ್ಪ ಕೊಡುಗೆ ಮಾನಸ್ತಂಭ ಮತ್ತು ಬ್ರಹ್ಮ ಮಾನಸ್ತಂಭಗಳು.
ಗಂಗರ ಪ್ರಮುಖ ಸಾಹಿತ್ಯ ಕೃತಿಗಳು
ಇಮ್ಮಡಿ ಮಾಧವ : ದತ್ತಕ ಸೂತ್ರ
ಶ್ರೀಪುರುಷ : ಗಜಶಾಸ್ತ್ರ
ಎರಡನೇ ಶಿವಮಾರ : ಗಜಾಷ್ಠಕ
ಹೇಮಸೇನ : ರಾಘವ ಪಾಂಡವೀ
ವಾದೀಬಸಿಂಹ : ಗದ್ಯ ಚಿಂತಾಮಣಿ, ಕ್ಷಾತ್ರ ಚೂಡಾಮಣಿ
ನೇಮಿಚಂದ್ರ : ದ್ರವ್ಯಸಾರ ಸಂಗ್ರಹ
ಚಾವುಂಡರಾಯ : ಚಾವುಂಡರಾಯ ಪುರಾಣ
ಗುಪ್ತ ಸಾಮ್ರಾಜ್ಯ ರಾಜಮನೆತನ
ಕ್ರಿಸ್ತಶಕ ನಾಲ್ಕನೇ ಶತಮಾನದಲ್ಲಿ ಗುಪ್ತರ ಸಾಮ್ರಾಜ್ಯ ಉದಯಿಸಿತು ಮೊದಲನೆಯ ಚಂದ್ರಗುಪ್ತನು ಲಿಚ್ಚವಿಯ ಯುವರಾಣಿಯನ್ನು ಮದುವೆಯಾಗಿ ತನ್ನ ರಾಜ್ಯದ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ನಂತರ ಕ್ರಿಸ್ತಶಕ 320 ರಲ್ಲಿ ಗುಪ್ತಶಕೆ ಪ್ರಾರಂಭವಾಯಿತು ಇವನನ್ನು ಮಹಾರಾಜಾಧಿರಾಜ ಎಂದು ಕರೆಯುತ್ತಾರೆ. ಸಮುದ್ರಗುಪ್ತನ ಸಾಧನೆಗಳ ಬಗ್ಗೆ ತಿಳಿಸುವ ಶಾಸನ ಹರಿಸೇನನ ಅಲಹಾಬಾದ್ ಶಾಸನ ಇದು ಮುಖ್ಯವಾಗಿ ಸಂಸ್ಕೃತ ಭಾಷೆಯಲ್ಲಿದೆ.
ಕ್ರಿಸ್ತಶಕ 275 ರಲ್ಲಿ ಗುಪ್ತ ಸಾಮ್ರಾಜ್ಯ ಉಗಮವಾಯಿತು ಗುಪ್ತ ಸಾಮ್ರಾಜ್ಯದ ಸ್ಥಾಪಕ ಶ್ರೀ ಗಪ್ತ ಒಂದನೇ ಚಂದ್ರಗುಪ್ತ ಈ ಸಾಮ್ರಾಜ್ಯದ ಪ್ರಮುಖ ದೊರೆ.
ಗುಪ್ತ ಸಾಮ್ರಾಜ್ಯದ ಪ್ರಮುಖ ದೊರೆಯಾದ ಸಮುದ್ರಗುಪ್ತನನ್ನು ಭಾರತದ ನೆಪೋಲಿಯನ್ ಎಂದು ಕರೆದಿದ್ದಾರೆ ಅಷ್ಟೇ ಅಲ್ಲದೆ ಸಮುದ್ರಗುಪ್ತ ದಿಗ್ವಿಜಯಗಳ ವೀರ ಎಂಬ ಪ್ರಖ್ಯಾತಿಯನ್ನು ಕೂಡ ಪಡೆದಿದ್ದನು
ಗುಪ್ತ ರಾಜಮನೆತನದ ಪ್ರಶ್ನೋತ್ತರಗಳು
ಗುಪ್ತರ ರಾಜಧಾನಿ - ಪಾಟಲಿಪುತ್ರ
ಗುಪ್ತರ ಕಾಲದಲ್ಲಿ ವಿಪುಲವಾಗಿ ಬೆಳೆದ ಭಾಷೆ - ಸಂಸ್ಕೃತ
ಗುಪ್ತರ ಕಾಲದಲ್ಲಿ ಜನಪ್ರಿಯವಾಗಿದ್ದ ಲಿಪಿ - ದೇವನಾಗರಿ
ವಿಷ್ಣುಶರ್ಮ ಬರೆದ ಗ್ರಂಥ - ಪಂಚತಂತ್ರ
ಅಷ್ಟಾಂಗ ಸಂಗ್ರಹ ಎಂಬ ಕೃತಿಯನ್ನು ಬರೆದವರು - ವಾಗ್ಭಟ
ಗುಪ್ತರ ಆಳ್ವಿಕೆಯ ಅವಧಿಯಲ್ಲಿ ಭಾರತಕ್ಕೆ ಬಂದ ಚೀನಿ ಯಾತ್ರಿಕ - ಪಾಹಿಯಾನ ಬರೆದ ಗ್ರಂಥ ಘೋ ಕೋ ಕಿ
ಭಾರತದ ನ್ಯೂಟನ್ ಎಂದು ಯಾರನ್ನು ಕರೆಯುತ್ತಾರೆ - ಬ್ರಹ್ಮಗುಪ್ತನನ್ನು ಭಾರತದ ನ್ಯೂಟನ್ ಎಂದು ಕರೆಯುತ್ತಾರೆ
ಗುಪ್ತ ವಂಶದ ಕಡೆಯ ದೊರೆ - ವಿಷ್ಣುಗುಪ್ತ
ಗುಪ್ತರ ಕಾಲದಲ್ಲಿ ಜೈನ ಸಮ್ಮೇಳನ ನಡೆದ ಸ್ಥಳ - ವಲ್ಲಭಿ
ಎರಡನೇ ಚಂದ್ರಗುಪ್ತನ ಎರಡನೇ ರಾಜಧಾನಿಯಾಗಿದ್ದ ನಗರ - ಉಜ್ಜಯನಿ
ಎರಡನೇ ಚಂದ್ರಗುಪ್ತ ಕ್ರಿಸ್ತಶಕ (280-412)
ವಿಕ್ರಮಾದಿತ್ಯ ಎಂಬ ಬಿರುದನ್ನು ಹೊಂದಿದ್ದನು ಎರಡನೇ ಚಂದ್ರಗುಪ್ತನ ಬಗ್ಗೆ ದೆಹಲಿ ಕುತುಬ್ ಮಿನಾರ್ ಬಳಿಯಿರುವ ಮೆಹರೌಲಿ ಕಬ್ಬಿನ ಸ್ತಂಭ ಶಾಸನ ವಿವರಿಸುತ್ತದೆ.
ಗುಪ್ತರ ರಾಜ ಭಾಷೆ - ಸಂಸ್ಕೃತ
ಗುಪ್ತರ ಕಾಲವನ್ನು ಭಾರತದ ಸುವರ್ಣಯುಗ ಎಂದು ಕರೆಯುತ್ತಾರೆ.
2ನೇ ಚಂದ್ರಗುಪ್ತನ ಆಸ್ತಾನದಲ್ಲಿ ನವರತ್ನಗಳೆಂಬ ಕವಿಗಳಿದ್ದರು
ಗುಪ್ತ ಸಾಮ್ರಾಜ್ಯದ ಸಾಹಿತ್ಯ ಸಂಪತ್ತು
ಕಾಳಿದಾಸನ ಪ್ರಮುಖ ಕೃತಿಗಳು
ರಘುವಂಶ, ಕುಮಾರ ಸಂಭವ, ಋತುಸಂಹಾರ, ಎಂಬ ಪ್ರಮುಖ ಕಾವ್ಯಗಳನ್ನು ರಚಿಸಿದ್ದಾರೆ ಹಾಗೂ ಅಭಿಜ್ಞಾನ ಶಾಕುಂತಲ ಕವಿರತ್ನ ಕಾಳಿದಾಸರ ಪ್ರಮುಖ ನಾಟಕವಾಗಿದೆ ಕಾಳಿದಾಸನ ಮೇಘದೂತ ಪ್ರಮುಖ ಕಾವ್ಯವಾಗಿದೆ.
ಗುಪ್ತರ ಕಾಲದ ಇತರ ಕೃತಿಗಳು
ಶೂದ್ರಕನ ಮೃಚ್ಛಕಟಿಕ ಹಾಗೂ ವಿಶಾಖದತ್ತನ ಮುದ್ರಾರಾಕ್ಷಸ ಪ್ರಮುಖ ಈ ಕಾಲದ ಕೃತಿಗಳಾಗಿವೆ
ಧನ್ವಂತರಿ : ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸಿದ್ಧ ವಿದ್ವಾಂಸರಾಗಿದ್ದು ವೈದ್ಯಶಾಸ್ತ್ರದ ಪಿತಾಮಹ ಎಂದೇ ಕರೆಯುತ್ತಾರೆ ಇವರು ಆಯುರ್ವೇದದ ನಿಘಂಟು ರಚಿಸಿದ್ದಾರೆ ಹಾಗೂ ಚರಕ ಮಹಾಋಷಿಯು ಚರಕ ಸಂಹಿತೆ ಎಂಬ ವೈದ್ಯಕೀಯ ಗ್ರಂಥವನ್ನು ರಚಿಸಿದ್ದಾರೆ.
ಸುಶ್ರುತ : ಶಸ್ತ್ರಚಿಕಿತ್ಸಾ ವೈದ್ಯರಾಗಿದ್ದು ಸುಶ್ರುತ ಸಂಹಿತೆ ಕೃತಿಯನ್ನು ರಚಿಸಿದ್ದಾರೆ ಭಾರತೀಯ ವೈದ್ಯಶಾಸ್ತ್ರದಲ್ಲಿ ಶಸ್ತ್ರ ಚಿಕಿತ್ಸೆ ನೀಡುವ ಕ್ರಮವನ್ನು ಮೊದಲ ಬಾರಿಗೆ ಪರಿಚಯಿಸಿದವರಾಗಿದ್ದಾರೆ
ಆರ್ಯಭಟ : ಆರ್ಯಭಟ ಖಗೋಳ ಮತ್ತು ಗಣಿತಶಾಸ್ತ್ರ ಗಳ ಪ್ರಖ್ಯಾತ ವಿಜ್ಞಾನಿಯಾಗಿದ್ದು ಇವರು ಸೊನ್ನೆಯನ್ನು ಕಂಡುಹಿಡಿದರು ಹಾಗೂ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣಗಳ ಬಗ್ಗೆ ಭೂಮಿಯ ಚಲನೆಯ ಬಗ್ಗೆ ತಿಳಿಸಿದ್ದಾರೆ.
ವರಹಮಿರ : ಇವರು ಖಗೋಳಶಾಸ್ತ್ರಜ್ಞನಾಗಿದ್ದು ಪಂಚಸಿದ್ಧಾಂತಿಕ ಎಂಬ ಖಗೋಳಶಾಸ್ತ್ರವನ್ನು ರಚಿಸಿದರು ಇದನ್ನು ಖಗೋಳಶಾಸ್ತ್ರದ ಬೈಬಲ್ ಎಂದೇ ಕರೆಯುತ್ತಾರೆ. ಅಷ್ಟೇ ಅಲ್ಲದೆ ವರಹಮೀರ ಅವರು ಪ್ರಮುಖ ಗಣಿತಶಾಸ್ತ್ರಜ್ಞರಾಗಿದ್ದರು.
ಬಾಣಭಟ್ಟ : ಬಾಣಭಟ್ಟನ ಹರ್ಷ ಚರಿತ್ರೆ
ವರ್ಧನ ರಾಜವಂಶ
ವರ್ಧನ ವಂಶದ ಸ್ಥಾಪಕ ಪುಷ್ಯಭೂತಿ ಈ ವಂಶದ ಪ್ರಮುಖ ದೊರೆ ಹರ್ಷವರ್ಧನ ಚಾಲುಕ್ಯರ ಎರಡನೇ ಪುಲಿಕೇಶಿಯು ಹರ್ಷವರ್ಧನನನ್ನು ನರ್ಮದಾ ನದಿಯ ದಂಡೆಯಲ್ಲಿ ಸೋಲಿಸಿದರ ಬಗ್ಗೆ ರವಿಕೀರ್ತಿಯು ತನ್ನ ಬರವಣಿಗೆಯಲ್ಲಿ ಪ್ರಶಂಶಿಸಿದ್ದಾರೆ. ಹರ್ಷವರ್ಧನನು ಬೌದ್ಧ ಧರ್ಮಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದ್ದರು ಬೌದ್ಧರ ನಳಂದ ವಿಶ್ವವಿದ್ಯಾಲಯ ಹೆಚ್ಚಿನ ಪ್ರಾಶಸ್ತ್ಯವನ್ನು ಪಡೆದಿದೆ.
ವರ್ಧನ ರಾಜವಂಶದ ಪ್ರಶ್ನೋತ್ತರಗಳು
ವರ್ಧನರ ಆರಂಭಿಕ ಅರಸರಲ್ಲಿ ಪ್ರಮುಖ ದೊರೆ - ಪ್ರಭಾಕರ ವರ್ಧನ
ಪ್ರಭಾಕರ ವರ್ಧನನ ಮಕ್ಕಳು - ರಾಜವರ್ಧನ, ಹರ್ಷವರ್ಧನ, ರಾಜಶ್ರೀ
ಹರ್ಷವರ್ಧನನು ಮಹಾಧರ್ಮ ಸಮ್ಮೇಳನವನ್ನು ಎಲ್ಲಿ ನಡೆಸಿದನು - ಪ್ರಯಾಗ ಅಲಹಾಬಾದ್
ಹರ್ಷವರ್ಧನನು ಬರೆದ ಸಸ್ಕೃತ ನಾಟಕಗಳು - ರತ್ನಾವಳಿ, ಹಾಗೂ ನಾಗಾನಂದ ಪ್ರಮುಖ ನಾಟಕಗಳಾಗಿವೆ
ಹೂಯೆನ್ ತ್ಸಾಂಗ ಬರೆದ ಪ್ರವಾಸ ಅನುಭವಗಳ ಕೃತಿ -
ಸಿ ಯು ಕಿ
ಥಾನೇಶ್ವರ ವರ್ಧನರು
ಕನೊಜ್ ಇವರ ರಾಜಧಾನಿಯಾಗಿತ್ತು ವರ್ಧನ ವಂಶದ ಪ್ರಮುಖ ದೊರೆಯಾದ ಹರ್ಷವರ್ಧನನ ಆಸ್ಥಾನದ ಕವಿ ಬಾಣಭಟ್ಟ ಇವರು ಬರೆದ ಪ್ರಮುಖ ಕೃತಿ ಹರ್ಷಚರಿತ ಹರ್ಷವರ್ಧನನ ಆಸ್ಥಾನಕ್ಕೆ ಭೇಟಿ ನೀಡಿದ ಚೀನಿಯಾತ್ರಿಕ ಹ್ಯೂಯನ್ ತ್ಸಾಂಗ್ ಇವನು ಬರೆದಿರುವ ಸಿಯುಕಿ ಗ್ರಂಥವು ಹರ್ಷವರ್ಧನನ ಬಗ್ಗೆ ತಿಳಿಸುತ್ತದೆ.
ಶಾತವಾಹನರು ರಾಜವಂಶ
ಶಾತವಾಹನರ ರಾಜವಂಶವನ್ನು ಸಿಮುಖ ಸ್ಥಾಪಿಸಿದರು ಶ್ರೀಕಾಕುಲಂಕವನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು
ಶಾತವಾಹನರ ಪ್ರಮುಖ ದೊರೆ ಗೌತಮಿಪುತ್ರ ಶಾತಕರ್ಣಿಯು ಪ್ರಸಿದ್ಧ ದೊರೆಯಾಗಿದ್ದನು ಗೌತಮಿಪುತ್ರ ಶಾತಕರ್ಣಿಯು 'ತ್ರೈಸಮುದ್ರತೋಯ ಪೀತವಾಹನ' 'ಶಾತವಾಹನ ಕುಲಯಶ: ಪ್ರತಿಷ್ಠಾಪನಾಕಾರ' ಎಂಬ ಪ್ರಮುಖ ಬಿರುದನ್ನು ಹೊಂದಿದ್ದನು. ನಾಸಿಕ್, ಕಲ್ಯಾಣ್, ಬ್ರೋಚ್, ಭಟ್ಕಳ್, ಇವು ಶಾತವಾಹನರ ಪ್ರಮುಖ ವ್ಯಾಪಾರ ಕೇಂದ್ರಗಳಾಗಿದ್ದವು. ಹಾಲನು ಗಾಥಾಸಪ್ತಸತಿ ಎಂಬ ಗ್ರಂಥವನ್ನು ಪ್ರಾಕೃತ ಭಾಷೆಯಲ್ಲಿ ರಚಿಸಿದರು ಶ್ರೀಮಂತ ವರ್ತಕ ಭೂತಪಾಲನು ಕಾರ್ಲೆಯಲ್ಲಿ ಚೈತ್ಯಾಲಯವನ್ನು ನಿರ್ಮಿಸಿದನು.
ಕಂಚಿಯ ಪಲ್ಲವರು ಕ್ರಿಸ್ತಶಕ (350 ರಿಂದ 895)
ಪಲ್ಲವರು ತಮಿಳುನಾಡಿನ ಪ್ರಥಮ ರಾಜರುಗಳು ಪಲ್ಲವರ ಮನೆತನದ ಸ್ಥಾಪಕ ಶಿವಸ್ಕಂದವರ್ಮ ಈ ಸಂತತಿಯ ಮೂಲದವರಾಗಿದ್ದಾರೆ ಮೊದಲನೇ ನರಸಿಂಹವರ್ಮನು ಪಲ್ಲವ ಅರಸರಲ್ಲಿ ಪ್ರಸಿದ್ಧನಾಗಿದ್ದನು. ಈತ ಇಮ್ಮಡಿ ಪುಲಿಕೇಶಿಯನ್ನ ಸೋಲಿಸಿ ವಾತಾಪಿಯನ್ನು ವಶಪಡಿಸಿಕೊಂಡನು ಇದರಿಂದ ಇವನಿಗೆ ಮಹಾಮಲ್ಲ ಮತ್ತು ವಾತಾಪಿಕೊಂಡ ಎಂಬ ಬಿರುದುಗಳು ಬಂದವು.
ಕಂಚಿಯ ಸಮುದ್ರತೀರದಲ್ಲಿ ಮಹಾಬಲಿಪುರಂ ಎಂಬ ನಗರವನ್ನು ನಿರ್ಮಿಸಿದರು ಪಲ್ಲವರು ರಾಜ್ಯವನ್ನು ಮಂಡಲ ನಾಡು ಗ್ರಾಮಗಳಾಗಿ ವಿಭಾಗಿಸಿದ್ದರು ಭೋಜಕನು ಗ್ರಾಮದ ಆಡಳಿತವನ್ನು ನೋಡಿಕೊಳ್ಳುತ್ತಿದ್ದನು. ಪಲ್ಲವರಲ್ಲಿ ಪ್ರಮುಖ ದೊರೆ ಮಹೇಂದ್ರವರ್ಮ ಈತನು ಸಂಸ್ಕೃತ ಭಾಷೆಯಲ್ಲಿ "ಮತ್ತ ವಿಲಾಸ ಪ್ರಹಸನ" ಕೃತಿಯನ್ನು ರಚಿಸಿದ್ದಾರೆ.
ಪಲ್ಲವರ ವಾಸ್ತುಶಿಲ್ಪ ಕೇಂದ್ರಗಳು ಕಂಚಿ ಮತ್ತು ಮಹಾಬಲಿಪುರಂಗಳಾಗಿದ್ದು ಮಹಾಬಲಿಪುರಂನಲ್ಲಿ ಕಲ್ಲಿನಲ್ಲಿ ಕೊರೆದು ನಿರ್ಮಿಸಿರುವ ಪಂಚರಥಗಳು ಸುಪ್ರಸಿದ್ಧ ಏಕಶಿಲಾ ದೇವಾಲಯಗಳಾಗಿವೆ ಹಾಗೂ ಕಂಚಿಯಲ್ಲಿ ಕೈಲಾಸನಾಥ, ಏಕಾಂಬರನಾಥ, ಮತ್ತು ವೈಕುಂಠ ಪೆರುಮಾಳರ್ ದೇವಾಲಯಗಳನ್ನು ನಿರ್ಮಿಸಿದ್ದಾರೆ.
ಕಂಚಿಯ ಪಲ್ಲವರ ರಾಜಮನೆತನದ ಪ್ರಮುಖ ಪ್ರಶ್ನೋತ್ತರಗಳು
ಪಲ್ಲವರ ದೊರೆ ಒಂದನೇ ಮಹೇಂದ್ರವರ್ಮನ ಸೋಲಿಸಿದ ಬಾದಾಮಿ ಚಾಲುಕ್ಯರ ದೊರೆ - ಇಮ್ಮಡಿ ಪುಲಿಕೇಶಿ
ಇಮ್ಮಡಿ ಪುಲಕೇಶಿಯನ್ನು ಸೋಲಿಸಿದ ಪಲ್ಲವರ ದೊರೆ - ಒಂದನೇ ನರಸಿಂಹವರ್ಮ
ಮಹಾಬಲಿಪುರದ ಅನೇಕ ದೇವಾಲಯ ಹಾಗೂ ಏಕಶಿಲಾ ರಥಗಳನ್ನು ನಿರ್ಮಿಸಿದವರು - ಒಂದನೇ ನರಸಿಂಹವರ್ಮ
ಪಲ್ಲವರ ಕೊನೆಯ ದೊರೆ - ಅಪರಾಜಿತ
ಪಲ್ಲವರ ಕಾಲದ ಪ್ರಖ್ಯಾತ ಕವಿ ದಂಡಿ ಬರೆದ ಕೃತಿ - ದಶಕುಮಾರ ಚರಿತ
ಪಲ್ಲವರ ಕಾಲದಲ್ಲಿ ಪ್ರಾಮುಖ್ಯತೆ ಪಡೆದ ಶಿಲ್ಪಕಲಾ ಶೈಲಿ - ದ್ರಾವಿಡ ಶೈಲಿ
ಪಲ್ಲವರ ಅವನತಿಯ ನಂತರ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ರಾಜವಂಶ - ಚೋಳ ವಂಶ
0 ಕಾಮೆಂಟ್‌ಗಳು