ಭಾರತೀಯ ಬಾಹ್ಯಾಕಾಶ ಕೇಂದ್ರಗಳ ಮಾಹಿತಿ
ಭಾರತದಲ್ಲಿ ಇರುವ ಬಾಹ್ಯಾಕಾಶ ಕೇಂದ್ರಗಳ ಬಗ್ಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಒಂದು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸರಳವಾಗಿ ಉತ್ತರಿಸಲು ನಮ್ಮ ದೇಶದಲ್ಲಿರುವ ಪ್ರಮುಖ ಬಾಹ್ಯಾಕಾಶ ಕೇಂದ್ರಗಳ ಕುರಿತು ಮಾಹಿತಿಯನ್ನು ನೀಡಲಾಗಿದೆ.
ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಬಾಹ್ಯಾಕಾಶ ಸಂಶೋಧನೆ ಭಾರತೀಯ ರಾಷ್ಟ್ರೀಯ ಸಮಿತಿ 1962 ರಲ್ಲಿ ಸ್ಥಾಪಿತವಾಯಿತು. ಇದು ಮುಂದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾಗಿ 1969 ಆಗಸ್ಟ್ 15 ರಂದು ISRO (Indian Space Research Organization) ಎಂಬುದಾಗಿ ಪುನರ್ ರಚಿಸಲ್ಪಡುತ್ತದೆ. ಇಸ್ರೋದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ.
![]() |
ಭಾರತೀಯ ಬಾಹ್ಯಾಕಾಶ ಕೇಂದ್ರಗಳು |
ಬಾಹ್ಯಾಕಾಶ ಕೇಂದ್ರಗಳು
ಭಾರತೀಯ ಬಾಹ್ಯಾಕಾಶ ಸಂಸ್ಥೆ ISRO ಹಾಗೂ ಅದಕ್ಕೆ ಬಿಡಿ ಭಾಗಗಳನ್ನು ಒದಗಿಸುವ ಮತ್ತು ತಂತ್ರಜ್ಞಾನದ ನೆರವನ್ನು ಒದಗಿಸುವ ವಿವಿಧ ಕೇಂದ್ರಗಳನ್ನು ಈ ಕೆಳಗಿನಂತೆ ನೀಡಲಾಗಿದ್ದು ಇವು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಿವೆ.
ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ
Vikram Sarabhai Space Centre ಇದರ ಮುಖ್ಯ ಕಚೇರಿ ಕೇರಳದ ತಿರುವನಂತಪುರಂನಲ್ಲಿದೆ. ಪ್ರಮುಖವಾಗಿ ಇಲ್ಲಿ ಉಡಾವನ ವಾಹನಗಳ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಮತ್ತು ಸಂಶೋಧನೆಯ ಕೈಗೊಳ್ಳುವುದು ಇದರ ಮುಖ್ಯ ಕೆಲಸ. ಈ ಬಾಹ್ಯಾಕಾಶ ಕೇಂದ್ರದ ಪ್ರಮುಖ ಸಾಧನೆಗಳು. ಸೆಟಲೈಟನ್ನ ಲಾಂಚ್ ಮಾಡಲು ಬೇಕಾದ ವೆಹಿಕಲ್ ಅನ್ನು ಅಭಿವೃದ್ಧಿಪಡಿಸುವುದಾಗಿದೆ. ಉದಾಹರಣೆಗೆ
- PSLV : Polar Satellite Launch Vehicle
- GSLV : Geosynchronous Satellite Launch Vehicle
- GSLV MK 3 ಹಾಗೂ ಮರುಬಳಕೆ ಮಾಡಬಹುದಾದ ಉಡಾವನ (launch vehicle) ವಾಹನಗಳ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು.
ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ
ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಸ್ಥೆ ಅಂದರೆ (Indian institute of Space science and technology) 2007 ರಲ್ಲಿ ಇದನ್ನು ಇಸ್ರೋ ಸ್ಥಾಪಿಸುತ್ತದೆ. ಇದರ ಮುಖ್ಯ ಕಚೇರಿ ಕೇರಳದ ತಿರುವನಂತಪುರದಲ್ಲಿದೆ. ಇದು ಡೀಮ್ಡ್ ಯೂನಿವರ್ಸಿಟಿಯಾಗಿದೆ.
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ
SDSC (Satish Dhawan Space Centre) ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಇದು ಪ್ರಮುಖವಾಗಿ ಭಾರತದ ಬಾಹ್ಯಾಕಾಶ ಸಂಸ್ಥೆಯ ಪ್ರಾಥಮಿಕ ಬಾಹ್ಯಾಕಾಶ ನಿಲ್ದಾನ ಮತ್ತು ಉಡಾವನ ಕೇಂದ್ರವಾಗಿದೆ. ಪ್ರಮುಖವಾಗಿ ಇಲ್ಲಿ ರಾಕೆಟ್ಗಳ ಉಡಾವಣೆಯನ್ನು ಮಾಡಲಾಗುತ್ತದೆ.
ರಾಷ್ಟ್ರೀಯ ವಾಯುಮಂಡಲ ಸಂಶೋಧನಾ ಪ್ರಯೋಗಾಲಯ
National Atmosphere Research Laboratory ಇದರ ಮುಖ್ಯ ಕಚೇರಿ ಆಂಧ್ರಪ್ರದೇಶದ ಗಡಂಕಿಯಲ್ಲಿದೆ. ಇದು ಮುಖ್ಯವಾಗಿ ಬಾಹ್ಯಾಕಾಶ ಸಂಶೋಧನೆಯನ್ನು ಕೈಗೊಳ್ಳುತ್ತದೆ.
ಯು.ಆರ್. ರಾವ್ ಉಪಗ್ರಹ ಕೇಂದ್ರ
ಯು.ಆರ್. ರಾವ್ ಉಪಗ್ರಹ ಕೇಂದ್ರ ಇದು ಪ್ರಮುಖವಾಗಿ ಬೆಂಗಳೂರಿನಲ್ಲಿ ಕಚೇರಿಯನ್ನು ಹೊಂದಿದೆ. ಇದು ಉಪಗ್ರಹಗಳ ವಿನ್ಯಾಸ (Design), ಸಂವಹನ, ಸಂಚರಣೆ, ದೂರಸಂವೇದಿ ವೈಜ್ಞಾನಿಕ ಮತ್ತು ಸಣ್ಣ ಉಪಗ್ರಹಗಳ ಕಾರ್ಯಾಚರಣೆಯ ಪ್ರಮುಖ ಕೇಂದ್ರವಾಗಿದೆ.
ಗಗನಯಾನ ಕೇಂದ್ರ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ISRO ದ ಮುಂದಿನ ಯೋಜನೆಯಾದ ಗಗನಯಾನಕ್ಕೆ ಸಂಬಂಧಿಸಿದಂತೆ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿಯನ್ನು ಹೊಂದಿದೆ. ಈಗಾಗಲೇ ರಷ್ಯಾದ ವಿಜ್ಞಾನಿಗಳು ನಮ್ಮ ದೇಶದ ಗಗನಯಾನಿಗಳಿಗೆ ತರಬೇತಿಯನ್ನು ನೀಡುತ್ತಿದ್ದಾರೆ. ಪ್ರಮುಖವಾಗಿ ಈ ಒಂದು ಯೋಜನೆಯನ್ನು 2025 ರಲ್ಲಿ ಯಶಸ್ವಿ ಮಾಡುವುದಾಗಿ ISROದ ಮುಖ್ಯಸ್ಥರು ಎಸ್ ಸೋಮನಾಥನ್ ತಿಳಿಸಿದ್ದಾರೆ.
ISTRAC : ISRO Telemetry Tracking and Command Network
ಪ್ರಮುಖವಾಗಿ ಇದರ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ. ಮುಖ್ಯವಾಗಿ ಇದರ ಕೆಲಸ ಉಪಗ್ರಹಗಳು ಮತ್ತು ಉಡಾವನ ವಾಹನಗಳ ಕಾರ್ಯಾಚರಣೆಗೆ ಟ್ರ್ಯಾಕಿಂಗ್ ಸೌಲಭ್ಯ, ಟೆಲಿಮೆಟ್ರಿ ಮತ್ತು ಕಮಾಂಡ್ ಬೆಂಬಲವನ್ನು ಒದಗಿಸುವುದಾಗಿದೆ. ಭಾರತದಲ್ಲಿ ಮುಖ್ಯವಾಗಿ ಎರಡು ಕಂಟ್ರೋಲಿಂಗ್ ಸೆಂಟರ್ ಗಳು ಇರತಕ್ಕಂತಹದು. ಅದರಲ್ಲಿ ಪ್ರಮುಖವಾಗಿ ಒಂದು ನಮ್ಮ ಕರ್ನಾಟಕದ ಹಾಸನ್ ಜಿಲ್ಲೆಯಲ್ಲಿದ್ದರೆ ಮತ್ತೊಂದು ಮಧ್ಯ ಪ್ರದೇಶದ ಭೂಪಾಲ್ ದಲ್ಲಿದೆ.
ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ (SAC)
ಇದರ ಕೇಂದ್ರ ಕಚೇರಿ ಗುಜರಾತಿನ ಅಹಮದಾಬಾದ್ ನಲ್ಲಿದೆ. SAC ಇದರ ಪ್ರಮುಖ ಉದ್ದೇಶವು ಹವಾಮಾನವನ ತಿಳಿಸುವ ಉಪಗ್ರಹಗಳಿಗಾಗಿ ಪೇಲೋಡ್ ಅಭಿವೃದ್ಧಿಪಡಿಸುವ ಕೇಂದ್ರವಾಗಿದೆ.
ಭಾರತೀಯ ರಿಮೋಟ್ ಸೆನ್ಸಿಂಗ್ ಸಂಸ್ಥೆ (IIRS)
1966 ರಲ್ಲಿ ಉತ್ತರಾಖಂಡನ ಡೆಹ್ರಾಡೂನ್ ನಲ್ಲಿ ಸ್ಥಾಪಿಸಲಾಯಿತು. ಇದರ ಮುಖ್ಯ ಉದ್ದೇಶ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಡಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳು, ಪರಿಸರ ಮತ್ತು ವಿಪತ್ತು ನಿರ್ವಹಣೆಗಾಗಿ ರಿಮೋಟ್ ಸೆನ್ಸಿಂಗ್, ಜಿಯೋ ಇನ್ ಫಾರ್ಮ್ಯಾಟಿಕ್ಸ್ ಜಿಪಿಎಸ್ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವ ಉನ್ನತ ಶಿಕ್ಷಣ ಮತ್ತು ತರಬೇತಿಯ ಸಂಸ್ಥೆಯಾಗಿದೆ.
ಈಶಾನ್ಯ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ
ಇದರ ಮುಖ್ಯ ಕಚೇರಿ ಮೇಘಾಲಯದ 'ಉಮಿಯಂ' ನಲ್ಲಿದೆ. ಇದರ ಮುಖ್ಯ ಉದ್ದೇಶ ಉತ್ತಮ ಬಾಹ್ಯಾಕಾಶ ತಂತ್ರಜ್ಞಾನದ ಬೆಂಬಲವನ್ನು ಒದಗಿಸುವುದು ಹಾಗೂ ಈಶಾನ್ಯ ಪ್ರದೇಶಗಳಲ್ಲಿ ಅಭಿವೃದ್ಧಿಯ ಪ್ರಕ್ರಿಯೆಗಳನ್ನು ಹೆಚ್ಚಿಸುವುದು.
Take Free Mock Test About Science and Tech : 👉 Click Here
ಭಾರತೀಯ ಬಾಹ್ಯಾಕಾಶ ನಿಗಮಗಳು
ಪ್ರಸ್ತುತವಾಗಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರೆ ಬಾಹ್ಯಾಕಾಶ ನಿಗಮಗಳು ಇದು ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವ ಹೊಂದಿರುವ ನಿಗಮಗಳಾಗಿವೆ.
ಆಂಟ್ರಿಕ್ಸ್ ಕಾರ್ಪೊರೇಷನ್ ಲಿಮಿಟೆಡ್
ಕಮರ್ಷಿಯಲ್ ಸೆಟಲೈಟ್ ಲಾಂಚಿಂಗ್ ಹಾಗೂ ಸೇವೆಗಳನ್ನು ಸುಗಮಗೊಳಿಸಲು ಸ್ಥಾಪಿಸಲಾದ ನಿಗಮ ಇದರ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ ಮತ್ತು ಇದು ಸಂಪೂರ್ಣವಾಗಿ ಸರ್ಕಾರದ ಒಡೆತನದಲ್ಲಿರುವ ನಿಗಮ.
NSIL : New space India limited
ಇದರ ಮುಖ್ಯ ಕಚೇರಿಯು ಕೂಡ ಬೆಂಗಳೂರಿನಲ್ಲಿದೆ ಇದು ಕೂಡ ವಾಣಿಜ್ಯ ಬಾಹ್ಯಾಕಾಶ ಸೇವೆಗಳು ಮತ್ತು ಅಪ್ಲಿಕೇಶನ್ಗಳನ್ನು ಸಕ್ರಿಯಗೊಳಿಸುತ್ತದೆ.
Manufacturer of SSLV (Small Satellite Launch Vehicle)
IN-SPACE
ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ ಇದರ ಕೇಂದ್ರ ಕಚೇರಿ ಗುಜರಾತಿನ ಅಹಮದಾಬಾದ್ ನಲ್ಲಿದೆ.
ಇದು ಕೇಂದ್ರದ ಬಾಹ್ಯಾಕಾಶ ಇಲಾಖೆ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯವನ್ನ ನಿರ್ವಹಿಸುತ್ತ ಇದೆ. ಇದನ್ನು ಖಾಸಗಿ ಭಾಗವಹಿಸುವಿಕೆಯನ್ನು ಸಕ್ರಿಯೆಗೊಳಿಸಲು ಮತ್ತು ಸುಗಮಗೊಳಿಸಲು ರಚಿಸಲಾಗಿದೆ.
0 ಕಾಮೆಂಟ್ಗಳು