ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ಯುಪಿಎಸ್‌ಸಿ ನಾಗರೀಕ ಸೇವಾ ಪರೀಕ್ಷೆಯ ಪಠ್ಯಕ್ರಮ ಕುರಿತು ಮಾಹಿತಿ

UPSC Civil Service Exam Syllabus

ಭಾರತೀಯ ನಾಗರೀಕ ಸೇವಾ ಯುಪಿಎಸ್‌ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಸ್ವರೂಪ ಮತ್ತು ಪಠ್ಯಕ್ರಮದ ಕುರಿತು ಮಾಹಿತಿ ಹಾಗೂ ಸಿಲಬಸ್‌ನಲ್ಲಿ ಇರುವ ವಿಷಯಗಳ ಸಂಪೂರ್ಣ ಮಾಹಿತಿಯ ಪಿಡಿಎಫ್‌ ನೀಡಲಾಗಿದ್ದು. ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇದು ಅನುಕೂಲಕರವಾಗಿದೆ. 

ಮುಖ್ಯವಾಗಿ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಸ್ವರೂಪ ಯಾವ ರೀತಿಯಾಗಿರುತ್ತದೆ ಮತ್ತು ಪ್ರತಿಯೊಂದು ಪೇಪರ್‌ನಲ್ಲಿರು ವಿಷಯಗಳ ಟಾಪಿಕ್‌ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿರುತ್ತದೆ. ಮುಖ್ಯವಾಗಿ ಕೇಂದ್ರಿಯ ಲೋಕಸೇವಾ ಆಯೋಗ ತಮ್ಮ ಒಂದು ಅಧಿಕೃತವಾದ ಜಾಲತಾಣದಲ್ಲಿ ಹೋರಡಿಸಿರುವ ಸಿಲಬಸ್‌ ಕಾಪಿಯನ್ನು ನೀಡಲಾಗಿರುತ್ತದೆ ಆದ್ದರಿಂದ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಇಲಾಖೆ ನಿಡಿರುವ ಸಿಲಬಸ್‌ ಪ್ರಕಾರವಾಗಿ ತಮ್ಮ ತಯಾರಿಯನ್ನು ನಡೆಸಬಹುದಾಗಿದೆ. 


ಯುಪಿಎಸ್‌ಸಿ ನಾಗರೀಕ ಸೇವಾ ಪರೀಕ್ಷೆಯ ಪಠ್ಯಕ್ರಮ ಕುರಿತು ಮಾಹಿತಿ, UPSC Civil Service Exam Syllabus
UPSC Civil Service Exam Syllabus


UPSC Civil Service Exam Syllabus ಎಷ್ಟು ಮುಖ್ಯ ? 

ಸ್ನೇಹಿತರೆ ಯುಪಿಎಸ್‌ಸಿ ನಾಗರೀಕ ಸೇವಾ ಪರೀಕ್ಷೆಯನ್ನು ನಡೆಸುವ ಕೇಂದ್ರಿಯ ಲೋಕಸೇವಾ ಆಯೋಗವು ತಾವು ನಿಗದಿಪಡಿಸಿದ ಪಠ್ಯಕ್ರಮದ ವಿಷಯಗಳಿಗೆ ತಕ್ಕಂತೆ ಪೂರ್ವಭಾವಿ ಪರೀಕ್ಷೆಯ ಮತ್ತು ಮುಖ್ಯ ಪರೀಕ್ಷೆಯ ಪೇಪರ್‌ ಸಿದ್ಧಪಡಿಸುತ್ತದೆ. ಮುಖ್ಯವಾಗಿ ಇಲಾಖೆ ಈ ಒಂದು ಸಿಲಬಸ್‌ ಏನಿದೆ ಇದನ್ನು ಚಾಚು ತಪ್ಪದೇ ಪಾಲಿಸುತ್ತದೆ ಆದ್ದರಿಂದ ನಾಗರೀಕ ಸೇವಾ ಪರೀಕ್ಷೆಯ ಆಕಾಂಕ್ಷಿಗಳು ಸಿಲಬಸ್‌ ಏನಿದೆ ಅದನ್ನು ನೋಡಿ ತಮ್ಮ ತಯಾರಿ ನಡೆಸಬಹುದು. 

UPSC ಪರೀಕ್ಷಾ ಹಂತಗಳು 

  1. ಪೂರ್ವಭಾವಿ ಪರೀಕ್ಷೆ (Prelims)
  2. ಮುಖ್ಯ ಪರೀಕ್ಷೆ (Mains)
  3. ವ್ಯಕ್ತಿತ್ವ ಪರೀಕ್ಷೆ (Personality Test) 

ಪೂರ್ವಭಾವಿ ಪರೀಕ್ಷೆ 

ನಾಗರೀಕ ಸೇವಾ ಪರೀಕ್ಷೆಯಲ್ಲಿ ಮೊದಲಿಗೆ ಅರ್ಜಿಯನ್ನು ಹಾಕಿರುವ ಎಲ್ಲಾ ಅಭ್ಯರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆ ಸ್ವರೂಪ ಮತ್ತು ಸಿಲಬಸ್‌ ಈ ಕೇಳಗಿನಂತಿದೆ. 




Prelims Exam Pattern
Objective Type Exam 400 Marks with Negative
SL NO Paper Marks Total Time
1 General Studies
(ಸಾಮಾನ್ಯ ಅಧ್ಯಯನ)
200 400 Marks 120 M
2 CSAT 200 120 M


Note : ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಮಾಹಿತಿ

  • ಎರಡು ಪ್ರಶ್ನೆ ಪತ್ರಿಕೆಗಳು ಬಹು ಆಯ್ಕೆಯ ಪ್ರಶ್ನೆ (MCQ) ಪತ್ರಿಕೆಗಳಾಗಿವೆ
  • ಪ್ರತಿಯೊಂದು ಪ್ರಶ್ನೆ ಪತ್ರಿಕೆಯು 02 ಅಂಕದಂತೆ 100 ಪ್ರಶ್ನೆಗಳನ್ನ ಒಳಗೊಂಡಿರುತ್ತವೆ ಅಂದರೆ ಪ್ರತಿಯೊಂದು ಪ್ರಶ್ನೆ ಪತ್ರಿಕೆ 200 ಅಂಕಗಳನ್ನ ಒಳಗೊಂಡಿದೆ. CSAT 80 Questions * 2.5 Marks Each
  • ಪ್ರಶ್ನೆ ಪತ್ರಿಕೆ ಒಂದು ಮತ್ತು ಪ್ರಶ್ನೆ ಪತ್ರಿಕೆ ಎರಡು ಒಟ್ಟು 400 ಅಂಕಗಳಿವೆ
  • ಪ್ರಶ್ನೆ ಪತ್ರಿಕೆ ಎರಡು [ CSAT ] ಇದರಲ್ಲಿ ಶೇಕಡ 33 (66 Marks) ಅರ್ಹತೆ ಪಡೆಯಲು ಇರುವ ಮಾನದಂಡ.
  • ಎರಡು ಪ್ರಶ್ನೆ ಪತ್ರಿಕೆಗಳು ಕೂಡ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರತ್ತೆ.
  • ಪ್ರತಿಯೊಂದು ಪ್ರಶ್ನೆ ಪತ್ರಿಕೆ ಉತ್ತರಿಸಲು ಎರಡು ಗಂಟೆಗಳ ಕಾಲ ಕಾಲಾವಕಾಶ ಇರುತ್ತೆ.
  • 1/3 Negative Marks

ಮುಖ್ಯ ಪರೀಕ್ಷೆ 

ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ. ಈ ಒಂದು ಮುಖ್ಯಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಈ ಕೇಳಗಿನಂತಿದೆ.


IAS Mains Exam
Paper Subject Maximum Marks Time
Qualifying Paper A One of the Indian Languages from the languages include in 8th Schedule 300 3 Hours
Qualifying Paper B English 300 3 Hours
1 Essay (ಪ್ರಬಂಧ ಬರಹ) 250 3 Hours
2 GS-I (Indian Heritage and culture History and Geography of the world and society 250 3 Hours
3 GS-II (Governance Constitution Polity, Social Justice And International Relations 250 3 Hours
4 GS-III (Technology, Economics Development, Bio-Diversity, Environment, Security and Disaster Management 250 3 Hours
5GS-IV (Ethics, Integrity and Aptitude) 250 3 Hours
6 Optional Subject (1) Paper -1 250 3 Hours
7 Optional Subject (2) Paper -2 250 3 Hours
Written Total  1750
Personality Test (Interview) 275
Grand Total 2025


Note : ಮುಖ್ಯ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಮಾಹಿತಿ

  • ಪೇಪರ್ A ಮತ್ತು ಪೇಪರ್ B ಇದು ಒಬ್ಬ 10ನೇ ತರಗತಿಯ ವಿದ್ಯಾರ್ಥಿಗೆ ಇರಬೇಕಾದ ಕನಿಷ್ಠ ವಿದ್ಯಾ ಮಟ್ಟಕ್ಕೆ ಸಮನಾಗಿರುತ್ತದೆ.
  • ಪೇಪರ್ A ಮತ್ತು ಪೇಪರ್ B ಇದನ್ನು ಮೆರಿಟ್ ಗೆ ಕನ್ಸಿಡರ್ ಮಾಡಲಾಗುವುದಿಲ್ಲ ಇದು ಕೇವಲ ಅರ್ಹತೆಯ ಮಾನದಂಡಗಳಾಗಿವೆ. 
  • ಪ್ರಬಂಧಗಳು, (Essay) ಸಾಮಾನ್ಯ ಅಧ್ಯಯನ, (General Studies) ಐಚ್ಚಿಕ ವಿಷಯದ (Optional Paper) ಪೇಪರ್ ನಲ್ಲಿ ಪಡೆದ ಅಂಕಗಳು ಪರಿಗಣಿಸಲಾಗುತ್ತದೆ.

ವ್ಯಕ್ತತ್ವ ಪರೀಕ್ಷೆ 

ಮುಖ್ಯ ಪರೀಕ್ಷೆಯ ನಂತರ ಅಭ್ಯರ್ಥಿಗಳಿಗೆ ಸಂದರ್ಶನ ಇರುತ್ತದೆ ಇದಕ್ಕೆ ಸಂದರ್ಶನ ಎನ್ನುವುದಕ್ಕಿಂತಲು ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆ ಎನ್ನಬಹುದು. ಮುಖ್ಯವಾಗಿ ಇಲ್ಲಿ ಅಭ್ಯರ್ಥಿಗಳ ಜ್ಞಾನದ ಪರೀಕ್ಷೆಗಿಂತ ಅಭ್ಯರ್ಥಿಗಳ ವ್ಯಕ್ತಿತ್ವದ ಪರೀಕ್ಷೆಯನ್ನು ಕೈಗೋಳ್ಳಲಾಗುತ್ತದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಇರುವ ತಾಳ್ಮೆ, ಸಮಸ್ಯೆಗಳಿಗೆ ಪರಿಹಾರ ಕೈಗೋಳ್ಳುವ ಸಾಮರ್ಥ್ಯವನ್ನು ಪರಿಕ್ಷಿಸಲಾಗುತ್ತದೆ. 


ಯಾವ ಪ್ರಕಾರದ ಪ್ರಶ್ನೆಗಳಿರುತ್ತವೆ ? 

ಸಾಮಾನ್ಯವಾಗಿ ಯುಪಿಎಸ್‌ಸಿ ವ್ಯಕ್ತಿತ್ವದ ಪರೀಕ್ಷೆಯು ನೀವು ಅರ್ಜಿಯಲ್ಲಿ ನೀಡಿರುವ ಮಾಹಿತಿಗಳ ಮೇಲೆ ಇರುತ್ತದೆ. ಹಾಗೂ ಅಭ್ಯರ್ಥಿಗಳು ನೀಡುವ ಉತ್ತರಗಳಿಗೆ ತಕ್ಕಂತೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸಾಮಾನ್ಯವಾಗಿ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳು ಯಾವ ರೀತಿ ಇರುತ್ತವೆ ಎಂಬುವುದನ್ನು ಈ ಕೇಳಗಿನಂತೆ ನೀಡಲಾಗಿದೆ. 

  • ಅಭ್ಯರ್ಥಿಗಳ ಪರಿಚಯ ಮತ್ತು ಅಭ್ಯರ್ಥಿಗಳು ಬೆಳೆದು ಬಂದ ರಾಜ್ಯದ, ಜಿಲ್ಲೆಯ, ಊರಿನ ಬಗ್ಗೆ 
  • ಅಭ್ಯರ್ಥಿಗಳ ವಿದ್ಯಾರ್ಹತೆಯ ಬಗ್ಗೆ
  • ಅಭ್ಯರ್ಥಿಗಳಲ್ಲಿರುವ ಕೌಶಲ್ಯದ ಬಗ್ಗೆ
  • ಪ್ರಚಲಿತ ವಿದ್ಯಮಾನದ ಬಗ್ಗೆ
  • ಅಭ್ಯರ್ಥಿಗಳ ಕೆಲಸದ ಬಗ್ಗೆ
  • ಅಭ್ಯರ್ಥಿಗಳು ತೆಗೆದುಕೊಂಡಿರುವ ಐಚ್ಛಿಕ ವಿಷಯದ ಕರಿತು ಪ್ರಶ್ನೆ ಕೇಳಲಾಗುತ್ತದೆ.

ಸ್ನೇಹಿತರೆ ಮೇಲೆ ತಿಳಿಸಲಾದ ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯಪರೀಕ್ಷೆಯ ಪೇಪರ್‌ಗೆ ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆ ಸ್ವರೂಪ ಯಾವ ರೀತಿಯಾಗಿರುತ್ತದೆ. ಆ ವಿಷಯಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಪಠ್ಯಕ್ರಮದ ಪಿಡಿಎಫ್‌ ಕೇಳಗಡೆ 👇 ನೀಡಲಾಗಿದ್ದು ಅಭ್ಯರ್ಥಿಗಳು ಡೌನ್ಲೋಡ್‌ ಮಾಡಿ ಕೊಳ್ಳಬಹುದಾಗಿದೆ.

UPSC CSE SYLLABUS COPY




ಸ್ನೇಹಿತರೆ ಕರ್ನಾಟಕ ರಾಜ್ಯ ಲೋಕಸೇವಾ ಆಯೋಗ ನಡೆಸುವ ಕೆಎಎಸ್‌ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆ ಸ್ವರೂಪ ಮತ್ತು ಪಠ್ಯಕ್ರಮದ ವಿವರವನ್ನು ನೀಡಲಾಗಿದ್ದು ಸಿಲಬಸ್‌ ನ ಮಾಹಿತಿಯನ್ನು ಕೇಳಗೆ ನೀಡಲಾಗಿದ್ದು ಅಭ್ಯರ್ಥಿಗಳು ನೋಡಿಕೊಳ್ಳಬಹುದು. 

Click Here to Get KAS Syllabus : 👉  KAS Syllabus 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Call Letter Update of Central and State Government Recruitment