ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ಕರ್ನಾಟಕ ಲೋಕಸೇವಾ ಆಯೋಗ ಕೆಎಎಸ್‌ ಪರೀಕ್ಷೆಯ ಪಠ್ಯಕ್ರಮ

ಕೆಪಿಎಸ್‌ಸಿ ಕೆಎಎಸ್‌ ಪರೀಕ್ಷೆಯ ಪಠ್ಯಕ್ರಮ

ಕರ್ನಾಟಕ ಲೋಕಸೇವಾ ಆಯೋಗದಿಂದ ಕೆಎಎಸ್‌ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆ ಸ್ವರೂಪ ಮತ್ತು ಪಠ್ಯಕ್ರಮದ ಕುರಿತು ಮಾಹಿತಿಯನ್ನು ನೀಡಲಾಗಿದೆ. ಮುಂಬರುವ ಕೆಎಎಸ್‌ ಪರೀಕ್ಷೆಗೆ ಇದು ಬಹಳ ಅನುಕೂಲವಾಗುತ್ತದೆ. ಕೆಎಎಸ್‌ ಪರೀಕ್ಷೆಗೆ ತಯಾರಿ ನಡೆಸಬೇಕೆನ್ನುವ ಅಭ್ಯರ್ಥಿಗಳಿಗೆ ಇದು ಸಹಕಾರಿಯಾಗುತ್ತದೆ. ಈ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಸ್ವರೂಪ ಮತ್ತು ಪಠ್ಯಕ್ರಮವನ್ನು ಕೆಪಿಎಸ್‌ಸಿ ಅಧಿಕೃತ ವೇಬ್ಸೈಟ್‌ ದಿಂದ ನೀಡಲಾಗಿರುತ್ತದೆ. 

ಕೆಎಎಸ್‌ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಈ ಒಂದು ಮಾಹಿತಿಯನ್ನು ಪಡೆದುಕೊಂಡು ತಮ್ಮ ಪರೀಕ್ಷೆಯ ತಯಾರಿಯನ್ನು ನಡೆಸಬಹುದಾಗಿದೆ. 


ಕರ್ನಾಟಕ ಲೋಕಸೇವಾ ಆಯೋಗ ಕೆಎಎಸ್‌ ಪರೀಕ್ಷೆಯ ಪಠ್ಯಕ್ರಮ
KPSC KAS Exam Syllabus


KPSC KAS Exam Syllabus

ಕೆಎಎಸ್‌ ಸ್ಪರ್ಧಾತ್ಮಕ ಪರೀಕ್ಷೆಯು ಪ್ರಮುಖವಾಗಿ ಮೂರು ಹಂತಗಳನ್ನು ಒಳಗೊಂಡಿರುತ್ತದೆ. ಈ ಮೂರು ಹಂತದ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಪರೀಕ್ಷೆಯ ಪ್ರತಿ ವಿಷಯದ ಮಾಹಿತಿಯನ್ನು ನೀಡಲಾಗಿದೆ. ಹಾಗೂ ಪ್ರತಿಯೊಂದು ಹಂತದಲ್ಲಿ ನಿಗದಿಪಡಿಸಲಾದ ಅಂಕಗಳ ಪ್ರಮಾಣ ಎಷ್ಟು ಎಂಬುವುದನ್ನು ನೀಡಲಾಗಿದೆ. ಇದರಿಂದ ಅಭ್ಯರ್ಥಿಗಳಿಗೆ ಇಲಾಖೆ ನೀಡಿರುವ ಸಿಲಬಸ್‌ ಪ್ರಕಾರ ಅಧ್ಯಯನ ಮಾಡಲು ಸಹಕಾರಿಯಾಗಲಿದೆ.

 ನೇಮಕಾತಿ ಮೂರು ಹಂತಗಳು 


  1. ಪೂರ್ವಭಾವಿ ಪರೀಕ್ಷೆ (Prelims Exam)
  2. ಮುಖ್ಯ ಪರೀಕ್ಷೆ (Mains Exam)
  3. ವ್ಯಕ್ತಿತ್ವ ಪರೀಕ್ಷೆ (Personality Test) 



 ಕೆಎಎಸ್‌ ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮ 



ಕ್ರ.ಸಂ/

ವಿಷಯ

ಪ್ರಶ್ನೆಗಳ ಸಂಖ್ಯೆ

ಅಂಕಗಳು

ಪತ್ರಿಕೆ - 01

1

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಾಮುಖ್ಯತೆ ವಿಷಯಗಳನ್ನು ಒಳಗೊಂಡಂತೆ ಸಾಮಾನ್ಯ ಅಧ್ಯಯನ

40

80

2

ಮಾನವಿಕ ಶಾಸ್ತ್ರ

60

120

 

Total

100

200

ಪತ್ರಿಕೆ - 02

1

ರಾಜ್ಯದ ಪ್ರಾಮುಖ್ಯತೆಗೆ ಸಂಬಂಧಿಸಿದಂತೆ ಸಾಮಾನ್ಯ ಅಧ್ಯಯನ

40

80

2

ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ – ಪರಿಸರ ಮತ್ತು ಪರಿಸರ ವಿಜ್ಞಾನ

30

60

3

ಸಾಮಾನ್ಯ ಮನೋಸಾಮರ್ಥ್ಯ

30

60

 

Total

100

200


ಪ್ರಮುಖ ಮಾಹಿತಿ 

  • ಪ್ರತಿ ಪ್ರಶ್ನೆಗೆ ಎರಡು ಅಂಕಗಳಂತೆ ಪ್ರತಿ ಪತ್ರಿಕೆಯು 100 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
  • ಪ್ರತಿ ಪತ್ರಿಕೆಯು ಗರಿಷ್ಠ 200 ಅಂಕಗಳು ಮತ್ತು 02 ಗಂಟೆಗಳ ಕಾಲಾವಧಿಯನ್ನು ಹೊಂದಿರುತ್ತದೆ.
  • ಎರಡು ಪತ್ರಿಕೆಗಳಿಗೆ ಒಟ್ಟು 400 ಅಂಕಗಳನ್ನು ನಿಗದಿಪಡಿಸಿದೆ. 
  • ಪೂರ್ವಭಾವಿ ಪ್ರಶ್ನೆ ಪತ್ರಿಕೆಗಳು ವಸ್ತುನಿಷ್ಠ ಬಹು ಆಯ್ಕೆ (MCQ) ಮಾದರಿಯ ಪ್ರಶ್ನೆ ಪತ್ರಿಕೆ ಯಾಗಿರುತ್ತದೆ. 

ಮೇಲೆ ತಿಳಿಸಲಾದ ಪೂರ್ವಭಾವಿ ಪರೀಕ್ಷೆಗೆ ಸಂಬಂದಿಸಿದ ಪಠ್ಯಕ್ರಮದ ಅಂಶಗಳು ಯಾವವು ಎಂಬುವುದನ್ನು ಈ ಕೇಳಗಿನಂತೆ ನೀಡಲಾಗಿದೆ ಅಭ್ಯರ್ಥಿಗಳು ಸಿಲಬಸ್‌ ಮೇಲೆ ಕ್ಲಿಕ್‌ ಮಾಡಿ ಪೂರ್ವಭಾವಿ ಪರೀಕ್ಷೆಯ ಸಿಲಬಸ್‌ ಡೌನ್ಲೋಡ್‌ ಮಾಡಿಕೊಳ್ಳಬಹುದು. 

👉  Click Here


 ಕೆಎಎಸ್ ಮುಖ್ಯ ಪರೀಕ್ಷೆಯ ಪಠ್ಯಕ್ರಮ‌ 


ಪತ್ರಿಕೆಗಳು

ವಿಷಯ

ಅಂಕ

ಅವಧಿ

 

ಅರ್ಹತಾ ಪತ್ರಿಕೆಗಳು

 

 

ಕಡ್ಡಾಯ ಕನ್ನಡ

 

150

 

2 Hours

ಕಡ್ಡಾಯ ಇಂಗ್ಲಿಷ್

 

150

2 Hours

ಕಡ್ಡಾಯ ಪತ್ರಿಕೆಗಳು

ಪತ್ರಿಕೆ-1

ಪ್ರಬಂಧ

250

3 Hours

ಪತ್ರಿಕೆ-2

ಸಾಮಾನ್ಯ ಅಧ್ಯಯನ

250

3 Hours

ಪತ್ರಿಕೆ-3

ಸಾಮಾನ್ಯ ಅಧ್ಯಯನ

250

3 Hours

ಪತ್ರಿಕೆ-4

ಸಾಮಾನ್ಯ ಅಧ್ಯಯನ

250

3 Hours

ಪತ್ರಿಕೆ-5

ಸಾಮಾನ್ಯ ಅಧ್ಯಯನ

250

3 Hours

 

 

Total

1250

 


ಪ್ರಮುಖ ಮಾಹಿತಿ 

  • ಅರ್ಹತಾ ಪತ್ರಿಕೆಗಳು 150 ಅಂಕದ ಕಡ್ಡಾಯ ಕನ್ನಡ ಪತ್ರಿಕೆ ಮತ್ತು 150 ಅಂಕದ ಕಡ್ಡಾಯ ಇಂಗ್ಲಿಷ್ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿದೆ.
  • ಅರ್ಹತಾ ಪರೀಕ್ಷೆಗಳು ಎಂದರೆ ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲಿಷ್ ಪತ್ರಿಕೆಗಳು. ಈ ಪತ್ರಿಕೆಗಳಲ್ಲಿ ಅರ್ಹತೆಗಾಗಿ ಪ್ರತಿಯೊಂದು ಪತ್ರಿಕೆಯಲ್ಲಿ ಕನಿಷ್ಠ 35% ಅಂಕಗಳನ್ನು ಪಡೆಯಲೇಬೇಕು.
  • ಈ ಎರಡು ಪತ್ರಿಕೆಗಳಲ್ಲಿ ಪಡೆದ ಅಂಕಗಳನ್ನು ಮೆರಿಟ್ ನಿರ್ಧರಿಸುವುದಕ್ಕಾಗಿ ಪರಿಗಣಿಸುವುದಿಲ್ಲ ಇದು ಕೇವಲ ಅರ್ಹತೆಯನ್ನು ಮಾತ್ರ ನಿರ್ಧರಿಸುತ್ತದೆ.
  • ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ನಿಗದಿಪಡಿಸಿದ ಕನಿಷ್ಠ ಅಂಕಗಳನ್ನು ಪಡೆಯದೇ ಇರುವ ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಗೆ ಮತ್ತು ಆಯ್ಕೆಗೆ ಅರ್ಹರಾಗತಕ್ಕದ್ದಲ್ಲ. 
  • ಕಡ್ಡಾಯ ಕನ್ನಡ ಪತ್ರಿಕೆ ಉತ್ತರಿಸಲು 02 ಗಂಟೆಗಳ ಕಾಲ ಕಾಲಾವಕಾಶ ನೀಡಲಾಗುತ್ತದೆ.
  • ಕಡ್ಡಾಯ ಇಂಗ್ಲಿಷ್ ಪತ್ರಿಕೆ ಉತ್ತರಿಸಲು 02 ಗಂಟೆಗಳ ಕಾಲ ಕಾಲಾವಕಾಶ ನೀಡಲಾಗುತ್ತದೆ.
  • ಮುಖ್ಯ ಪರೀಕ್ಷೆ ಪತ್ರಿಕೆ-01 
  • ಇಲ್ಲಿ ಎರಡು ಪ್ರಬಂಧಗಳು ಇರುತ್ತವೆ
  • ಪ್ರಬಂಧವನ್ನು ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಬರೆಯಬಹುದು.
  • ಪ್ರತಿ ಪ್ರಬಂಧಕ್ಕೆ 125 ಅಂಕಗಳನ್ನು ನೀಡಲಾಗುತ್ತದೆ ಅಂದರೆ ಎರಡು ಪ್ರಬಂಧಗಳಿಗೆ 250 ಅಂಕಗಳನ್ನು ನಿಗದಿಪಡಿಸಲಾಗಿದೆ.
  • ಪ್ರಬಂಧವನ್ನು ಉತ್ತರಿಸಲು 03 ಗಂಟೆಗಳ ಕಾಲ ಕಾಲಾವಕಾಶ ನೀಡಲಾಗುತ್ತದೆ.
  • ಮುಖ್ಯ ಪರೀಕ್ಷೆ ಪತ್ರಿಕೆ-2, ಪತ್ರಿಕೆ-3, ಪತ್ರಿಕೆ-4, ಪತ್ರಿಕೆ-5, ಇವು ಸಾಮಾನ್ಯ ಅಧ್ಯಯನದ ಪ್ರಶ್ನೆಪತ್ರಿಕೆಗಳು ಇವು ತಲಾ 250 ಅಂಕಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಪ್ರಶ್ನೆ ಪತ್ರಿಕೆ ಉತ್ತರಿಸಲು 03 ಗಂಟೆಗಳ ಕಾಲ ಕಾಲಾವಕಾಶವನ್ನು ನೀಡಲಾಗುತ್ತದೆ.
  • ಮುಖ್ಯ ಪರೀಕ್ಷೆಯ ಎಲ್ಲಾ ಪ್ರಶ್ನೆ ಪತ್ರಿಕೆಗಳು ವಿವರಣಾತ್ಮಕ (Descriptive) ಪ್ರಶ್ನೆಪತ್ರಿಕೆಗಳಾಗಿರುತ್ತವೆ. ಅಂದರೆ ಕೋಟ್ಟಿರುವ ಪ್ರಶ್ನೆಗಳಿಗೆ ವಿವರಣಾತ್ಮಕವಾಗಿ ಉತ್ತರಿಸುವುದಾಗಿರುತ್ತದೆ.
  • ಮುಖ್ಯಪರೀಕ್ಷೆಯ ಒಟ್ಟು ಅಂಕಗಳು 1250 

ಮೇಲೆ ತಿಳಿಸಲಾದ ಮುಖ್ಯ ಪರೀಕ್ಷೆಗೆ ಸಂಬಂದಿಸಿದ ಪಠ್ಯಕ್ರಮದ ಅಂಶಗಳು ಯಾವವು ? ಎಂಬುವುದನ್ನು ಈ ಕೇಳಗಿನಂತೆ ನೀಡಲಾಗಿದೆ ಅಭ್ಯರ್ಥಿಗಳು ಸಿಲಬಸ್‌ ಮೇಲೆ ಕ್ಲಿಕ್‌ ಮಾಡಿ ಪೂರ್ವಭಾವಿ ಪರೀಕ್ಷೆಯ ಸಿಲಬಸ್‌ ಡೌನ್ಲೋಡ್‌ ಮಾಡಿಕೊಳ್ಳಬಹುದು. 

👉  Click Here 

ಈಗಾಗಲೇ ತಿಳಿಸಿರುವಂತೆ ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲಿಷ ಪರೀಕ್ಷೆಗೆ ಸಂಬಂಧಿಸಿದಂತ ಪ್ರಶ್ನೆ ಪತ್ರಿಕೆಯ ಸ್ವರೂಪ ಮತ್ತು ಪಠ್ಯಕ್ರಮದ ವಿಷಯಗಳನ್ನು ಈ ಕೇಳಗಿನಂತೆ ನೀಡಲಾಗಿದೆ ಅಭ್ಯರ್ಥಿಗಳು ನೋಡಿಕೊಳ್ಳಬಹುದು ಹಾಗೂ ಈ ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲಿಷ್‌ ಪರೀಕ್ಷೆಯು ಕೇವಲ ಅರ್ಹತೆಯನ್ನು ನಿರ್ಧರಿಸುತ್ತದೆ ಈ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಶೇಕಡಾ 35% ರಷ್ಟು ಅಂಕವನ್ನು ಪಡೆಯಲೇ ಬೇಕು ಅಂದರೆ ಕಡ್ಡಾಯ ಕನ್ನಡ ಪರೀಕ್ಷೆಯ ಒಟ್ಟು ಅಂಕದಲ್ಲಿ ಶೇಕಡಾ 35% ರಷ್ಟು ಮತ್ತು ಕಡ್ಡಾಯ ಇಂಗ್ಲಿಷ್‌ ಪರೀಕ್ಷೆಯ ಒಟ್ಟು ಅಂಕದಲ್ಲಿ ಶೇಕಡಾ 35% ರಷ್ಟು ಅಂಕ ಪಡೆಯಬೇಕು. ಮುಖ್ಯವಾಗಿ ಈ ಅರ್ಹತಾ ಪರೀಕ್ಷೆಯಲ್ಲಿ ಗಳಿಸುವ ಅಂಕವನ್ನು ಮೇರಿಟ್‌ಗೆ ಪರಿಗಣಿಸುವುದಿಲ್ಲ. 




ಅರ್ಹತಾ ಪರೀಕ್ಷೆಗಳು 

ಸಾಮಾನ್ಯ ಕನ್ನಡ

ಕ್ರ.ಸಂ

ವಿಷಯ

ಅಂಕಗಳು

1

ವಿಷಯದ ಸಮಗ್ರ ಅರ್ಥೈಸುವಿಕೆ

25 ಅಂಕಗಳು

2

ಪದ ಪ್ರಯೋಗ

25 ಅಂಕಗಳು

3

ವಿಷಯ ಸಂಕ್ಷೇಪಣೆ

25 ಅಂಕಗಳು

4

ಪದ ಜ್ಞಾನ

25 ಅಂಕಗಳು

5

ಲಘು ಪ್ರಬಂಧ

25 ಅಂಕಗಳು

6

ಇಂಗ್ಲಿಷನಿಂದ ಕನ್ನಡಕ್ಕೆ ಭಾಷಾಂತರ

25 ಅಂಕಗಳು

 

ಒಟ್ಟು ಅಂಕಗಳು

150



ಸಾಮಾನ್ಯ ಇಂಗ್ಲಿಷ

SL No

Subject

Marks

1

Comprehension of Given Passage

25 Marks

2

Precise Writing

25 Marks

3

Usage

25 Marks

4

Vocabulary

25 Marks

5

Short Essay

25 Marks

6

Communication Skill

25 Marks

 

Total Marks

150



 ವ್ಯಕ್ತಿತ್ವ ಪರೀಕ್ಷೆ 


ಮುಖ್ಯ ಪರೀಕ್ಷೆಯ ನಂತರ ವ್ಯಕ್ತಿತ್ವ ಪರೀಕ್ಷೆ ಇರುತ್ತೆ ಈ ಒಂದು ವ್ಯಕ್ತಿತ್ವ ಪರೀಕ್ಷೆಗೆ ಒಟ್ಟು 50 ಅಂಕಗಳನ್ನು ನಿಗದಿಪಡಿಸಲಾಗಿದೆ. ಇಲ್ಲಿ ಮುಖ್ಯವಾಗಿ ಒಬ್ಬ ವ್ಯಕ್ತೀಯ ವ್ಯಕ್ತಿತ್ವ ಪರೀಕ್ಷೆಯನ್ನು ಮಾಡಲಾಗುತ್ತದೆ ಹೋರತು ಅಭ್ಯರ್ಥಿಗಳ ಜ್ಞಾನದ ಪರೀಕ್ಷೆ ಅಲ್ಲ ಏಕೆಂದರೆ ಜ್ಞಾನದ ಪರೀಕ್ಷೆಯನ್ನು ಈಗಾಗಲೇ ಪೂರ್ವಭಾವಿ ಮತ್ತು ಮುಖ್ಯಪರೀಕ್ಷೆಯಲ್ಲಿ ಮಾಡಲಾಗಿರುತ್ತದೆ. ಆದ್ದರಿಂದ ಇಲ್ಲಿ ವ್ಯಕ್ತಿಯ ವ್ಯಕ್ತಿತ್ವ ಯಾವ ರೀತಿ ಇದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಹೇಗೆ ಎಂಬುವುದನ್ನು ಇಲ್ಲಿ ಅಳತೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಮುಖ್ಯವಾಗಿ ಮುಖ್ಯ ಪರೀಕ್ಷೆಯಲ್ಲಿ ಗಳಿಸುವ ಅಂಕ ಮತ್ತು ವ್ಯಕ್ತಿತ್ವ ಪರೀಕ್ಷೆಯಲ್ಲಿ ನೀವು ಗಳಿಸುವ ಅಂಕವು ನಿಮ್ಮ ಆಯ್ಕೆಯನ್ನು ತಿಳಿಸುತ್ತದೆ. 

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯ ಸಿಲಬಸ್‌ಗಾಗಿ : 👉 ಕ್ಲಿಕ್‌ ಮಾಡಿ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Call Letter Update of Central and State Government Recruitment