ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

Karnataka Forest Guard Recruitment for 540 Post

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ Forest Guard ನೇಮಕಾತಿ

ಅರಣ್ಯ ರಕ್ಷಕ ಹುದ್ದೆಗಳ ಹೊಸ ನೇಮಕಾತಿ ಅಧಿಸೂಚನೆ 

Karnataka Forest Guard Recruitment : ಕರ್ನಾಟಕ ನಾಗರಿಕ ಸೇವಾ ನಿಯಮಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಾವಳಿ 2021 ಸರ್ಕಾರದ ಅಧಿಸೂಚನೆ ಕರ್ನಾಟಕ ಅರಣ್ಯ ಇಲಾಖೆ ಸೇವೆಗಳು  (ನೇಮಕಾತಿ) (ತಿದ್ದುಪಡಿ) ನಿಯಮ 2019ರನ್ವಯ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 540 ಅರಣ್ಯ ರಕ್ಷಕ ಹುದ್ದೆಗಳಿಗೆ ಅಧಿಸೂಚನೆ ಇದೀಗ ಪ್ರಕಟವಾಗಿದೆ.


Karnataka Forest Guard Recruitment for 540 Post
Forest Guard Recruitment 


Karnataka Forest Guard Recruitment  2023-24


ನೇಮಕಾತಿ ವಿವರ ಮಾಹಿತಿ
ಹುದ್ದೆಯ ಹೆಸರು ಅರಣ್ಯ ರಕ್ಷಕ ಹುದ್ದೆಗಳು (Forest Guard)
ಉದ್ಯೋಗದ ಸ್ಥಳ ಕರ್ನಾಟಕ
ಒಟ್ಟು ಹುದ್ದೆಗಳು  540 ಹುದ್ದೆಗಳು
ಉದ್ಯೋಗದ ವಿಧ ಖಾಯಂ ಸರ್ಕಾರಿ ಹುದ್ದೆಗಳು
ಸಾಮಾನ್ಯ ಅರ್ಹತೆ
  • ಕರ್ನಾಟಕದ ಅಭ್ಯರ್ಥಿಯಾಗಿರಬೇಕು
  • ಕನ್ನಡವನ್ನು ಓದಲು ಬರೆಯಲು ಬರಬೇಕು
  • ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಡರಾಹಿರಬೇಕು
ವಿದ್ಯಾರ್ಹತೆ
  • 12TH Pass (ದ್ವೀತಿಯ ಪಿಯುಸಿ)
  • 3 Years Diploma
  • 2 Year ITI
ವಯೋಮಿತಿ ಕನಿಷ್ಠ :  18 ವರ್ಷ 
ಗರಿಷ್ಠ :  General 27 ವರ್ಷ
ಗರಿಷ್ಠ ವಯೋಮಿತಿ 
  • SC/ST : 32 ವರ್ಷ 
  • Cat - I : 32 ವರ್ಷ 
  • 2A/2B/3A/3B : 30 ವರ್ಷ 
  • ಮಾಜಿ ಸೈನಿಕರಿಗೆ : ಸೇವಾ ಅವಧಿ + ಮೂರು ವರ್ಷ
ವೇತನ 23500 - 47560
ಅರ್ಜಿ ಸಲ್ಲಿಸುವ ವಿಧಾನ Online ಮುಖಾಂತರ
ನೋಟಿಫಿಕೇಶನ್
Apply Here  Click Here 
FAQ ನೇಮಕಾತಿಗೆ ಸಂಭಂದಿಸಿದ ಪ್ರಶ್ನೆಗಳು


ಪ್ರಮುಖ ದಿನಾಂಕಗಳು

ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕ : 01-12-2023
ಅರ್ಜಿಯನ್ನು ಸಲಸಲಿಸಲು ಕೊನೆಯ ದಿನಾಂಕ : 30-12-2023
ಅರ್ಜಿಶುಲ್ಕ ಪಾವತಿಸಲು ಕೊನೆಯ ದಿನಾಂಕ : 05-01-2024 

ತತ್ಸಮಾನ ವಿದ್ಯಾರ್ಹತೆ ಎಂದರೇನು ? 

  • ಸಿ.ಬಿ.ಎಸ್.ಸಿ ಮತ್ತು ಐ.ಸಿ.ಎಸ್.ಸಿ ಕ್ಲಾಸ್‌ 12TH
  • ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳು ನಡೆಸುವ ಕ್ಲಾಸ್‌ 12TH
  • ಮೂರು ವರ್ಷದ ಡಿಪ್ಲೋಮಾ ಮತ್ತು ಎರಡು ವರ್ಷದ ಐ.ಟಿ.ಐ 
  • ಈ ಮೇಲೆ ತಿಳಿಸಲಾದ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಲು ಅವಕಾಶ ಇದೆ. 


Diploma ಹಾಗೂ ITI ಅಭ್ಯರ್ಥಿಗಳು  ಅರ್ಜಿ ಸಲ್ಲಿಸಬಹುದಾ? 

Diploma and ITI ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು ಆದರೆ ಅವರು NIOS ವತಿಯಿಂದ ಅಥವಾ ಕರ್ನಾಟಕ ಪಿಯುಸಿ ಪರೀಕ್ಷಾ ಮಂಡಳಿ ವತಿಯಿಂದ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಪಾಸು ಆಗಿರುವ ಪ್ರಮಾಣ ಪತ್ರವನ್ನು ಹಾಜರುಪಡಿಸಿದ್ದಲ್ಲಿ ಮಾತ್ರ ದ್ವಿತೀಯ ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಲಾಗುತ್ತದೆ.
ಡಿಪ್ಲೋಮಾ ಮತ್ತು ವೃತ್ತಿಪರ ಶಿಕ್ಷಣವನ್ನು ಪಡೆದ ಅಭ್ಯರ್ಥಿಗಳು ತಮ್ಮ ಬಳಿ ಪಿಯುಸಿಗೆ ತತ್ಸಮಾನ ಇರುವ ಪ್ರಮಾಣ ಪತ್ರ ಇದ್ದಲ್ಲಿ ಅರ್ಜಿಯನ್ನು ಸಲ್ಲಿಸಬಹುದು. 

ಅರ್ಜಿಯನ್ನು ಸಲ್ಲಿಸುವ ವಿಧಾನ 

ಈ ಒಂದು ಅರಣ್ಯ ರಕ್ಷಕ (Forest Guard Recruitment) ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್‌ಗೆ ಭೇಟಿ ನೀಡಿ ಆನಲೈನ್‌ ಮುಖಾಂತರ ಮಾತ್ರ ಅರ್ಜಿಯನ್ನು ಸಲ್ಲಿಸಲು ಅವಕಾಶ ಇದೆ. ಇದನ್ನು ಹೋರತುಪಡಿಸಿ ಯಾವುದೇ ಮೂಲಗಳ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ಇರುವುದಿಲ್ಲ. 

ಅರ್ಜಿ ಶುಲ್ಕದ ವಿವರ 

ಸಾಮಾನ್ಯ ಅರ್ಹತೆ, ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ
  • ಪುರುಷ ಅಭ್ಯರ್ಥಿಗಳಿಗೆ : 200 + 20
  • ಮಹಿಳಾ ಅಭ್ಯರ್ಥಿಗಳಿಗೆ : 100 + 20
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕೆಟೆಗರಿ 1 ಅಭ್ಯರ್ಥಿಗಳಿಗೆ 
  • ಪುರುಷ ಅಭ್ಯರ್ಥಿಗಳಿಗೆ : 100 + 20 
  • ಮಹಿಳಾ ಅಭ್ಯರ್ಥಿಗಳಿಗೆ : 50 + 20 

ಅರ್ಜಿ ಶುಲ್ಕದ ಪಾವತಿ ಹೇಗೆ ?

ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಿದ ನಂತರದಲ್ಲಿ ಚಲನ್‌ ಪ್ರತಿ ತೆಗೆದುಕೊಂಡು ಅದನ್ನು ಇ-ಪಾವತಿ ವ್ಯವಸ್ಥೆ ಇರುವ ಯಾವುದಾದರೊಂದು ಅಂಚೆ ಕಛೇರಿಯಲ್ಲಿ ಪಾವತಿಸಬೇಕು. ನಂತರ ಪಾವತಿಸಿದ ಚಲನ್‌ ಪ್ರತಿಯನ್ನು ನೇಮಕಾತಿ ಪ್ರಕ್ರೀಯೆ ಮುಗಿಯುವ ತನಕ ತಮ್ಮ ಬಳಿಯಲ್ಲಿಯೆ ಇಟ್ಟುಕೊಂಡಿರಬೇಕು.
ನಿಗದಿತ ಸಮಯಕ್ಕೆ ಸರಿಯಾಗಿ ಅರ್ಜಿಶುಲ್ಕ ಪಾವತಿ ಮಾಡಬೇಕು.
ನಿಗದಿತ ಸಮಯದೋಳಗೆ ಅರ್ಜಿಶುಲ್ಕ ಪಾವತಿಸದಿದ್ದರೆ ಆ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

ಅರ್ಜಿಯನ್ನು ಸಲ್ಲಿಸುವ ಅಧಿಕೃತ ಜಾಲತಾಣ 

ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಅಧಿಕೃತ ವೆಬ್ಸೈಟ್‌ ಆದ https://aranya.gov.in ಅಥವಾ ನೇಮಕಾತಿಯ ವೆಬ್ಸೈಟ್‌  ಆದ https://kfdrecruitment.in  ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. 

ಆಯ್ಕೆ ವಿಧಾನ ಹೇಗೆ ? Selection Process

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆ ವಿಧಾನವು ಹಲವು ಹಂತಗಳನ್ನು ಒಳಗೊಂಡಿರುತ್ತದೆ. 

ಆಯ್ಕೆ ಹಂತಗಳು ಈ ಕೆಳಗಿನಂತಿವೆ 

1. PUC ಮೆರಿಟ್ ಮೇಲೆ Physical 

ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ತಾವು ಪಿಯುಸಿಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ 1:20 ಅಂದರೆ ಒಂದು ಹುದ್ದೆಗೆ 20 ಅಭ್ಯರ್ಥಿಗಳಿಗೆ Physical ಗೆ ಕರೆಯಲಾಗುತ್ತದೆ. Physical ಆದ ಅಭ್ಯರ್ಥಿಗಳಿಗೆ ನಂತರದಲ್ಲಿ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಮೊದಲಿಗೆ physical standard test ನಡೆಸಲಾಗುತ್ತದೆ.


2. ವೈದ್ಯಕೀಯ ಪರೀಕ್ಷೆ (Medical Test) 

ವೈದ್ಯಕೀಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ನ್ಯೂನ್ಯತೆಗಳನ್ನು ಪರೀಕ್ಷೆ ಮಾಡಲಾಗುತ್ತದೆ ಹಾಗೂ ಅಭ್ಯರ್ಥಿಗಳ ಕೇಳುವ ಸಾಮರ್ಥ್ಯ ಶ್ರವಣ ಶಕ್ತಿ ಬಗ್ಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ ಹಾಗೂ ಅಭ್ಯರ್ಥಿಗಳ ದೃಷ್ಟಿಯನ್ನು ಕೂಡ ಪರೀಕ್ಷೆ ಮಾಡಲಾಗುತ್ತದೆ. 

3. ದೈಹಿಕ ತಾಳ್ವಿಕ ಪರೀಕ್ಷೆ ಮತ್ತು ಸಮರ್ಥತೆ ಪರೀಕ್ಷೆ 

* Physical Endurance Test
* Physical Efficiency Test 

4. ಸ್ಪರ್ಧಾತ್ಮಕ ಪರೀಕ್ಷೆ 

ಸ್ಪರ್ಧಾತ್ಮಕ ಪರೀಕ್ಷೆಯು ನೂರು ಅಂಕಗಳನ್ನು ಹೊಂದಿರುವ ವಸ್ತುನಿಷ್ಠ ಮಾದರಿಯ ಪ್ರಶ್ನೆ ಪತ್ರಿಕೆ ಆಗಿರುತ್ತದೆ. 
ಗಣಿತದ ವಿಷಯದಲ್ಲಿ 40 ಅಂಕ
ಸಾಮಾನ್ಯ ಜ್ಞಾನದಲ್ಲಿ 60 ಅಂಕ ಒಳಗೊಂಡಿರುತ್ತದೆ.
0.25 ಋಣಾತ್ಮಕ ಅಂಕಗಳನ್ನು ಕೂಡ ಹೊಂದಿರುತ್ತದೆ.

5. ಅಂತಿಮ ಆಯ್ಕೆ 

ಅಂತಿಮ ಆಯ್ಕೆಯನ್ನು ಅಭ್ಯರ್ಥಿಗಳು ತಾವು ದ್ವಿತೀಯ ಪಿಯುಸಿಯಲ್ಲಿ ಪಡೆದ ಅಂಕಗಳ ಶೇಕಡ 50ರಷ್ಟು ಅಂದರೆ ಅಭ್ಯರ್ಥಿಗಳು ಒಂದು ವೇಳೆ ದ್ವಿತೀಯ ಪಿಯುಸಿಯಲ್ಲಿ 80 ಅಂಕಗಳನ್ನು ಗಳಿಸಿದ್ದರೆ ಅದರ 50% ರಷ್ಟು ಅಂದರೆ 40 ಮಾರ್ಕ್ಸ್ ಅನ್ನು ಮೆರಿಟ್ಗೆ ಪರಿಗಣನೆ ಮಾಡಲಾಗುತ್ತದೆ ಹಾಗೂ ನೂರು ಅಂಕದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಏನು ಇಲಾಖೆ ನಡೆಸಲಾಗುತ್ತದೆ ಅದರಲ್ಲಿ ಅಭ್ಯರ್ಥಿಗಳು ಪಡೆದ ಅಂಕದ ಶೇಕಡ 50ರಷ್ಟು ಅಂದರೆ ಅಭ್ಯರ್ಥಿಗಳು ಏನಾದರೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 70 ಅಂಕಗಳನ್ನು ಗಳಿಸಿದರೆ ಅದರ 50% ರಷ್ಟು ಅಂದರೆ 35 ಅಂಕಗಳನ್ನು ಪರಿಗಣಿಸಲಾಗುತ್ತದೆ. 
ಒಟ್ಟು ಅಭ್ಯರ್ಥಿಗಳು ತಾವು ಪಿಯುಸಿ ಪಡೆದ ಅಂಕದ ಶೇಕಡ 50ರಷ್ಟು + ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆಯುವ ಅಂಕದ ಶೇಕಡ 50ರಷ್ಟು. 



ಹಳೆಯ ವರ್ಷದ ಪ್ರಶ್ನೆ ಪತ್ರಿಕೆಗಳು | Forest Guard PYQ Papers

ಮುಖ್ಯವಾಗಿ ಈ ಒಂದು ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನ ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗೆ ನೀಡಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು.


Recent SSC GD Recruitment Link 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Call Letter Update of Central and State Government Recruitment