ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

Features of Lokpal and Lokayukta Act 2013

Lokpal and Lokayukta Act 2013 Explained

ಸ್ನೇಹಿತರೆ ಭ್ರಷ್ಟಾಚಾರ ನಿಗ್ರಹಣೆಯಲ್ಲಿ ಲೋಕಪಾಲ ಮತ್ತು ಲೋಕಾಯುಕ್ತದ ಕುರಿತಾದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಕಷ್ಟು ಪ್ರಶ್ನೆಗಳು ಬಂದಿರುತ್ತವೆ ಮತ್ತು KAS, UPSC, PSI ಪ್ರಬಂಧ ಭ್ರಷ್ಟಾಚಾರ ವಿಷಯಗಳಿಗೆ ಸಂಬಂಧಪಟ್ಟಂತೆ ಲೋಕಪಾಲ್ ಮತ್ತು ಲೋಕಾಯುಕ್ತ ಇವುಗಳ ಪಾತ್ರ ಎಂತಹದ್ದು ಎಂಬುದನ್ನು ವಿವರಿಸುವುದರ ಮೂಲಕವಾಗಿ ಪ್ರಬಂಧದಲ್ಲಿ ನಿಮ್ಮ ಅಂಕಗಳನ್ನ ಹೆಚ್ಚಿಸಿಕೊಳ್ಳಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ & ವಿವಿಧ ಸಂಸ್ಥೆಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಲೋಕಪಾಲ್ ಮತ್ತು ಲೋಕಾಯುಕ್ತದ ಕುರಿತು ಪ್ರಶ್ನೆಗಳು ಬಂದಿರುವುದನ್ನು ಗಮನಿಸಬಹುದು ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಇದರ ಬಗ್ಗೆ ತಿಳಿದುಕೊಳ್ಳುವುದು ಪ್ರಮುಖವಾಗಿದೆ.


Features of Lokpal and Lokayukta Act 2013, Lokpal and Lokayukta Act 2013 Explained
Lokpal and Lokayukta Act, 2013

ಸ್ನೇಹಿತರೆ ಲೋಕಪಾಲ ಕಾಯ್ದೆ 2014 ಜನವರಿ 1 ರಂದು ರಾಷ್ಟ್ರಪತಿಗಳ ಅಂಕಿತ ಪಡೆಯುವುದರ ಮೂಲಕವಾಗಿ ಜನೇವರಿ 16ರಂದು ಅಧಿಕೃತವಾಗಿ ಜಾರಿಗೊಳಿಸಲಾಯಿತು. ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ರೂಪಿಸಬೇಕು ಎಂಬ ನಿಟ್ಟಿನಲ್ಲಿ ಅಣ್ಣ ಹಜಾರೆ ಅವರ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ ಈ ಲೋಕಪಾಲ ಕಾಯ್ದೆಯನ್ನು ಜಾರಿಗೊಳಿಸಲಾಯಿತು. 

ಲೋಕಪಾಲ ಕುರಿತು ಮಾಹಿತಿ 


ಲೋಕಪಾಲ ರಚನೆ ಹೇಗೆ ಇರುತ್ತದೆ 

ಮುಖ್ಯವಾಗಿ ಲೋಕಪಾಲ ರಚನೆಯು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಅಥವಾ ನಿರ್ದಿಷ್ಟ ಅರ್ಹತೆ ಹೊಂದಿರುವ ವ್ಯಕ್ತಿ ಇದರ ಮುಖ್ಯ ಸ್ಥಾನವನ್ನು ವಹಿಸಿಕೊಳ್ಳುತ್ತಾರೆ. ಮುಖ್ಯವಾಗಿ ಇವರನ್ನು ಭಾರತದ ರಾಷ್ಟ್ರಪತಿಗಳು ಆಯ್ಕೆ ಮಾಡುತ್ತಾರೆ (ಭಾರತದ ರಾಷ್ಟ್ರಪತಿಗಳು ಇವರನ್ನು ಆಯ್ಕೆ ಮಾಡುವುದು Selection Committee ಶಿಫಾರಸ್ಸಿನ ಮೇರೆಗೆ) ಲೋಕಪಾಲ್ ಗರಿಷ್ಠ 8 ಸದಸ್ಯರನ್ನು ಒಳಗೊಂಡಿರುತ್ತದೆ ಇದರಲ್ಲಿ ಅರ್ಧದಷ್ಟು ಜನರು ನ್ಯಾಯಾಂಗದ ಸದಸ್ಯರು ಮತ್ತು ಅರ್ಧದಷ್ಟು ಜನರು ವಿವಿಧ ವಿಷಯಗಳ ಪಂಡಿತರನ್ನು ಒಳಗೊಂಡಿರುತ್ತದೆ. 

ಲೋಕಪಾಲ ಮೂರು ಪ್ರಮುಖ ವಿಭಾಗಗಳು

1. ಕಾರ್ಯದರ್ಶಿ : ಲೋಕಪಾಲ ತನ್ನ ಆಡಳಿತಾತ್ಮಕ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಲು ಒಬ್ಬ ಕಾರ್ಯದರ್ಶಿಯನ್ನು ಒಳಗೊಂಡಿರುತ್ತದೆ. 

2. ತನಿಖೆ ದಳ : ಲೋಕಪಾಲ ಸಂಸ್ಥೆ ತಾನು ತೆಗೆದುಕೊಳ್ಳುವ ದೂರುಗಳ ಬಗ್ಗೆ ತನಿಖೆ ನಡೆಸಲು ಒಂದು ತನಿಖಾ ದಳವನ್ನು ಒಳಗೊಂಡಿದೆ. ಈ ತನಿಖಾ ದಳದ ಮೂಲಕ ತನಿಖೆಯನ್ನು ಕೈಗೊಳ್ಳಬಹುದು ಅಥವಾ ಬೇರೆ ಸಂಸ್ಥೆಗಳಿಗೂ ಕೂಡ (CBI - Central Bureau of Investigation) ತನಿಖೆಯನ್ನು ಕೈಗೊಳ್ಳಲು ಅನುಮಾಡಿ ಕೊಡಬಹುದು ಇದು ಪ್ರಮುಖವಾಗಿ ಲೋಕಪಾಲ ವಿವೇಚನೆಗೆ ಬಿಟ್ಟದ್ದು. 

3. ಲೋಕಪಾಲ ವಿವಿಧ ದೂರುಗಳಿಗೆ ಸಂಬಂಧಿಸಿದಂತೆ ಒಂದು ಪ್ರಾಸಿಕ್ಯೂಷನ್ ವಿಭಾಗವನ್ನ ಕೂಡ ಒಳಗೊಂಡಿರುತ್ತದೆ. 

ಲೋಕಪಾಲ ಕಾರ್ಯ ಯಾವ ರೀತಿ ಇರುತ್ತೆ ? 

ಈ ಸಂಸ್ಥೆ ಪ್ರಮುಖವಾಗಿ ಪ್ರಧಾನಮಂತ್ರಿಗಳು, ಮಂತ್ರಿಗಳು, ಸಂಸದರು, ಕೇಂದ್ರ ಸರ್ಕಾರದ ಎಲ್ಲಾ ವರ್ಗದ ನೌಕರರು ಇವರ ವಿರುದ್ಧ ಕೇಳಿ ಬರುವ ಭ್ರಷ್ಟಾಚಾರದ ದೂರುಗಳಿಗೆ ಸಂಬಂಧಿಸಿದಂತೆ ತನಿಕೆಯನ್ನು ಕೈಗೊಳ್ಳುವ ಅಧಿಕಾರವನ್ನು ಒಳಗೊಂಡಿದೆ. ಮತ್ತು ಭ್ರಷ್ಟಾಚಾರದ ವಿಷಯಗಳಿಗೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್ ಗಳ ಹಾಗೆ ಅಧಿಕಾರವನ್ನು ಹೊಂದಿದೆ. ಭ್ರಷ್ಟಾಚಾರ ಸಾಬೀತಾದ ವ್ಯಕ್ತಿಗಳನ್ನು ಕೆಲಸದಿಂದ ತೆಗೆದುಹಾಕುವಂತೆ ಇದು ಶಿಫಾರಸುಗಳನ್ನು ಮಾಡುತ್ತದೆ. ಲೋಕಪಾಲರಿಗೆ ಯಾವುದೇ ವ್ಯಕ್ತಿಯನ್ನು ನ್ಯಾಯಾಲಯಗಳಿಗೆ ಇರುವ ಹಾಗೆ ಶಿಕ್ಷಿಸುವ ಅಧಿಕಾರ ಇಲ್ಲ.


Note: ಒಂದು ವೇಳೆ ಪ್ರಧಾನಮಂತ್ರಿಗಳಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ಆರೋಪ ಕೇಳಿ ಬಂದಲ್ಲಿ ಕೆಲವೊಂದಿಷ್ಟು ಷರತ್ತುಗಳ ಮೂಲಕ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ. ಅಂತರಾಷ್ಟ್ರೀಯ ಸಂಬಂಧಗಳು, ಬಾಹ್ಯ ಮತ್ತು ಆಂತರಿಕ ಭದ್ರತೆ, ಸಾರ್ವಜನಿಕ ವ್ಯವಸ್ಥೆ, ಪರಮಾಣು ಶಕ್ತಿ, ಇಂತಹ ವಿಷಯಗಳಲ್ಲಿ ತನಿಖೆ ನಡೆಸಲು ಕಾಯಿದೆಯಲ್ಲಿ ಅವಕಾಶ ಇಲ್ಲ. ಹಾಗಾದರೆ ಪ್ರಧಾನಮಂತ್ರಿಯ ವಿರುದ್ಧ ಭ್ರಷ್ಟಾಚಾರದ ತನಿಖೆಯನ್ನು ಮಾಡುವವರು ಯಾರು ? ಇದಕ್ಕೆ ಉತ್ತರ ಲೋಕಪಾಲ್ ಸಂಸ್ಥೆಯೇ ನಡೆಸುತ್ತದೆ ಆದರೆ ಲೋಕಪಾಲನ 2/3 ರಷ್ಟು ಸದಸ್ಯರು ಅನುಮೋದಿಸಬೇಕು ಮತ್ತು ತನಿಖೆಯನ್ನು ನಡೆಸುವಾಗ ವಿಷಯಗಳು ಗೌಪ್ಯವಾಗಿರಬೇಕು. 


ಲೋಕಾಯುಕ್ತದ ಕುರಿತು ಮಾಹಿತಿ 

ವಿವಿಧ ರಾಜ್ಯ ಸರ್ಕಾರಗಳು ತಮ್ಮ ರಾಜ್ಯ ಸರ್ಕಾರದ ಮಂತ್ರಿಗಳು ಮತ್ತು ನೌಕರರ ವಿರುದ್ಧದ ಭ್ರಷ್ಟಾಚಾರಗಳನ್ನು ತನಿಖೆ ಮಾಡಲು ಲೋಕಾಯುಕ್ತರನ್ನು ಒಳಗೊಂಡಿರುತ್ತದೆ. ಈ ಲೋಕಾಯುಕ್ತದ ಪ್ರಮುಖ ಕಾರ್ಯಗಳು ಏನು, ಇದರ ರಚನೆ ಹೇಗೆ, ಇದರ ಅಧಿಕಾರಗಳೇನು ಮತ್ತು ಜವಾಬ್ದಾರಿಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. 

ಪ್ರತಿಯೊಂದು ರಾಜ್ಯವು ತನ್ನದೇ ಆದ ಲೋಕಾಯುಕ್ತ ಕಾಯ್ದೆಯನ್ನು ರೂಪಿಸುವ ಅಧಿಕಾರವನ್ನು ಹೊಂದಿದೆ ಹೀಗಾಗಿ ಬೇರೆ ಬೇರೆ ರಾಜ್ಯಗಳಿಗೆ ಸಂಬಂಧಪಟ್ಟಂತೆ ಲೋಕಾಯುಕ್ತದ ಕಾಯ್ದೆಗಳು ಬೇರೆ ಬೇರೆಯಾಗಿರುತ್ತದೆ. 

ಕರ್ನಾಟಕ ರಾಜ್ಯದ ಲೋಕಾಯುಕ್ತ ಕಾಯಿದೆ 1984 ಮತ್ತು ಮೊಟ್ಟ ಮೊದಲ ಬಾರಿಗೆ ಲೋಕಾಯುಕ್ತ ಕಾಯ್ದೆಯನ್ನು ಜಾರಿಗೆ ತಂದ ರಾಜ್ಯ ಮಹಾರಾಷ್ಟ್ರ 1971. 

ಲೋಕಾಯುಕ್ತರ ರಚನೆ 

ರಾಜ್ಯದ ರಾಜ್ಯಪಾಲರು ಲೋಕಾಯುಕ್ತರನ್ನು ನೇಮಕ ಮಾಡುವ ಅಧಿಕಾರವನ್ನು ಹೊಂದಿದ್ದಾರೆ. ಒಬ್ಬ ಮುಖ್ಯಸ್ಥರು ಮತ್ತು ಒಂದು ಅಥವಾ ಇಬ್ಬರು ಉಪ ಲೋಕಾಯುಕ್ತರನ್ನು ನೇಮಿಸುವ ಅಧಿಕಾರ ಹೊಂದಿದ್ದಾರೆ. 

ಲೋಕಾಯುಕ್ತವು ಪ್ರಮುಖವಾಗಿ ಮೂರು ವಿಭಾಗಗಳನ್ನು ಒಳಗೊಂಡಿದೆ. 

1. ತನಿಖಾ ವಿಭಾಗ, 2. Technical Audit cell, 3. Police Wing 

ಲೋಕಾಯುಕ್ತರ ಅಧಿಕಾರಗಳು ಮತ್ತು ಕಾರ್ಯವೈಖರಿ 

  • ರಾಜ್ಯ ನಾಗರಿಕ ಸೇವಾ ಹುದ್ದೆಗಳು, ರಾಜ್ಯದ ಎಲ್ಲಾ ವರ್ಗದ ನೌಕರರು, ಮಂತ್ರಿಗಳು, ಶಾಸಕರ ವಿರುದ್ಧ ಕೇಳಿ ಬರುವ ಭ್ರಷ್ಟಾಚಾರದ ಆರೋಪಗಳ ತನಿಖೆ ನಡೆಸುವ ಅಧಿಕಾರವನ್ನು ಒಳಗೊಂಡಿದೆ. 
  • ಭ್ರಷ್ಟ ಅಧಿಕಾರಿಗಳನ್ನು ಬಂಧಿಸಿ ಅವರ ವಿರುದ್ಧ ತನಿಖೆ ನಡೆಸುವ ಅಧಿಕಾರವನ್ನು ಒಳಗೊಂಡಿದೆ.
  • ಕರ್ನಾಟಕ ಲೋಕಾಯುಕ್ತ ಭ್ರಷ್ಟ ಅಧಿಕಾರಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಹೊಂದಿದೆ.
  • ಲೋಕಾಯುಕ್ತರು ಭ್ರಷ್ಟ ಅಧಿಕಾರಿಗಳನ್ನು ಕೆಲಸದಿಂದ ತೆಗೆದುಹಾಕುವಂತೆ, ವಜಾಗೊಳಿಸುವಂತೆ ಕೇವಲ ಶಿಫಾರಸ್ಸು ಮಾಡುವ ಅಧಿಕಾರವನ್ನು ಒಳಗೊಂಡಿದೆ. 
  • ಸಿವಿಲ್ ನ್ಯಾಯಾಲಯಗಳಂತೆ ಕೆಲವೊಂದಿಷ್ಟು ಅಧಿಕಾರಗಳನ್ನು ಹೊಂದಿದೆಯಾದರೂ ಕೂಡ ವ್ಯಕ್ತಿಗಳನ್ನು ಶಿಕ್ಷಿಸುವ ಅಧಿಕಾರ ಲೋಕಾಯುಕ್ತಕ್ಕೆ ಇಲ್ಲ ವ್ಯಕ್ತಿಗಳನ್ನ ಶಿಕ್ಷಿಸುವ ಅಧಿಕಾರ ನ್ಯಾಯಾಲಯಕ್ಕೆ ಮಾತ್ರ ಇರುವಂತದ್ದು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Karnataka 540 Forest Guard Physical Date 2025