ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

Swachh Bharat Mission : ಸ್ವಚ್ಛ ಭಾರತ ಅಭಿಯಾನಕ್ಕೆ 10 ವರ್ಷ

ಸ್ವಚ್ಛ ಭಾರತ ಅಭಿಯಾನಕ್ಕೆ ಹತ್ತು ವರ್ಷ : 10 years completion of Swachh Bharat Mission 

ಸ್ನೇಹಿತರೆ ಮಹಾತ್ಮ ಗಾಂಧೀಜಿ ಅವರ ರಾಮ ರಾಜ್ಯದ ಪರಿಕಲ್ಪನೆಯಂತೆ ಪ್ರತಿಯೊಂದು ಗ್ರಾಮ ನಗರಗಳಲ್ಲಿ ಸ್ವಚ್ಛತೆ ಕಾಪಾಡುವುದು ಇದರೊಂದಿಗೆ ಕೇವಲ ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿರುವುದು ಅಷ್ಟೇ ಅಲ್ಲ ನಮ್ಮ ಆರೋಗ್ಯವೂ ಕೂಡ ಉತ್ತಮ ರೀತಿಯಲ್ಲಿ ನಾವು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದ್ದ ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಭಾರತದ ಪ್ರಧಾನ ಮಂತ್ರಿಗಳು ಶ್ರೀ ನರೇಂದ್ರ ಮೋದಿ ಅವರು ಇಡೀ ರಾಷ್ಟ್ರ ವ್ಯಾಪ್ತಿ ಸ್ವಚ್ಛ ಭಾರತ ಅಭಿಯಾನಕ್ಕೆ ಕರೆಕೊಟ್ಟರು. 


Swachh Bharat Mission : ಸ್ವಚ್ಛ ಭಾರತ ಅಭಿಯಾನಕ್ಕೆ 10 ವರ್ಷ
Swachh Bharath Mission SBM


ಮಹಾತ್ಮ ಗಾಂಧೀಜಿಯವರ 145 ನೇ ಜನ್ಮ ದಿನ ಅಕ್ಟೋಬರ್ 2 ರಂದು ಈ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನದ ಆಚರಣೆ 2019ರೊಳಗಾಗಿ ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಸಂಪೂರ್ಣವಾಗಿ ಸಾಕಾರಗೊಳಿಸುವ ಧ್ಯೇಯವನ್ನು ತೊಟ್ಟರು. 

ಸ್ವಚ್ಛ ಭಾರತದ ಪರಿಕಲ್ಪನೆಗೆ ಕರೆಕೊಟ್ಟಾಗ ದೇಶದಲ್ಲಿನ ಸೈನಿಕರು, ರೈತರು, ಕವಿಗಳು, ಸಾಹಿತಿಗಳು, ದೊಡ್ಡ ದೊಡ್ಡ ಉದ್ಯಮದಾರರು, ಸಿನಿಮಾ ಕ್ಷೇತ್ರದ ನಟ ನಟಿಯರು ಈ ಒಂದು ಸ್ವಚ್ಛ ಭಾರತದ ಪರಿಕಲ್ಪನೆಗೆ ಜೊತೆಗೂಡಿದರು. ಭಾರತದ ಪ್ರಧಾನ ಮಂತ್ರಿಗಳು ಸ್ವತಃ ಕೈಯಲ್ಲಿ ಜಾಡು ಹಿಡಿದು ಕಸವನ್ನು ಸ್ವಚ್ಛಗೊಳಿಸುವುದರ ಮೂಲಕವಾಗಿ ಇಡೀ ದೇಶದ ಜನತೆಗೆ ಸ್ವಚ್ಛ ಭಾರತದಲ್ಲಿ ತಮ್ಮ ಪಾಲ್ಗೊಳ್ಳುವಿಕೆಯಲ್ಲಿ ಮಹತ್ವದ ಅರಿವನ್ನು ಮೂಡಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಈ ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಸುವ್ಯವಸ್ಥಿತವಾಗಿ ಬಳಸಿಕೊಳ್ಳುವುದರ ಮೂಲಕ #MyCleanIndia ಎಂಬ ಧ್ಯೇಯದೊಂದಿಗೆ ರಾಷ್ಟ್ರ ವ್ಯಾಪ್ತಿ ಈ ಒಂದು ಪರಿಕಲ್ಪನೆ ಪಸರಿಸಲು ಸಹಕಾರಿಯಾಯಿತು. ಇದರಿಂದಾಗಿ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮತ್ತು ಮಹತ್ವ ತಿಳಿಯುವಂತಾಯಿತು. 

Swachh Bharat Mission : ಸಾಧನೆಗಳು 

ಸ್ವಚ್ಛ ಭಾರತದ ಪರಿಕಲ್ಪನೆಯಲ್ಲಿ ಗ್ರಾಮೀಣ ಮಟ್ಟದಲ್ಲಿ ಶೌಚಾಲಯಗಳನ್ನು ನಿರ್ಮಿಸುವುದರ ಮೂಲಕವಾಗಿ ಬಯಲು ಬಹಿರ್ದೆಸೆ ಮುಕ್ತ ರಾಷ್ಟ್ರವನ್ನಾಗಿ ಮಾಡುವ ಪರಿಕಲ್ಪನೆ ಹೊತ್ತಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 11.68 ಕೋಟಿ ಶೌಚಾಲಯಗಳ ನಿರ್ಮಾಣವನ್ನು ಮಾಡಲಾಗಿದೆ ಮತ್ತು ನಗರ ಪ್ರದೇಶದಲ್ಲಿ 63 ಲಕ್ಷಕ್ಕೂ ಅಧಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. 6.36 ಲಕ್ಷ ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ.

ಜನರ ಆರೋಗ್ಯದಲ್ಲಿ ಉತ್ತಮ ಬದಲಾವಣೆ ತಂದಿದೆ ಇದರಿಂದ ಜನರ ಜೀವಿತಾವಧಿ ಹಾಗೂ ಆರೋಗ್ಯ ಸುಧಾರಣೆ ಹೆಚ್ಚಿದೆ.

ಸ್ವಚ್ಛ ಭಾರತ ಮಿಷನ್ ನಿಂದಾಗಿ 2014 ರಿಂದ 2019 ರವರೆಗಿನ ಅವಧಿಯಲ್ಲಿ ಅತಿಸಾರ, ಅಪೌಷ್ಟಿಕತೆ, ವಿವಿಧ ರೋಗಗಳಿಂದ ಮೂರು ಲಕ್ಷಕ್ಕಿಂತಲೂ ಅಧಿಕ ಸಾವುಗಳನ್ನು ತಪ್ಪಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

2011ರ ಜನಗಣತಿಯ ಪ್ರಕಾರವಾಗಿ ಶೇಕಡಾ 53ರಷ್ಟು ಮನೆಗಳಲ್ಲಿ ಯಾವುದೇ ಶೌಚಾಲಯಗಳೆ ಇರಲಿಲ್ಲ ಈ ನಿಟ್ಟಿನಲ್ಲಿ 2024ರ ಪ್ರಸ್ತುತವಾಗಿ 10 ವರ್ಷಗಳಲ್ಲಿ ಸುಮಾರು 82% ಮನೆಗಳಿಗೆ ಶೌಚಾಲಯಗಳ ಸೌಲಭ್ಯವನ್ನು ಒದಗಿಸಲಾಗಿದೆ. 

ಪ್ರತಿಯೊಂದು ನಗರ ಹಳ್ಳಿಗಳಲ್ಲಿ ಶೌಚಾಲಯಗಳ ನಿರ್ಮಾಣ ಮಾಡಿರುವುದರಿಂದ ಮಹಿಳೆಯರ ಸುರಕ್ಷತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಸುತ್ತಮುತ್ತಲಿನ ವಾತಾವರಣದ ಕಲುಷಿತದಿಂದ ಮಕ್ಕಳ ಮೇಲೆ ಆಗ್ತಾ ಇದ್ದ ಆರೋಗ್ಯದ ಸಮಸ್ಯೆಗಳ ಪ್ರಮಾಣ  ಕಡಿಮೆಯಾಗಿದೆ ಇದರಿಂದ ಮಕ್ಕಳ ಆರೋಗ್ಯ ಸುಧಾರಿಸಿದೆ.

ಸ್ನೇಹಿತರೆ ಸ್ವಚ್ಛ ಭಾರತ ಅಭಿಯಾನದಿಂದ ಇಡೀ ಗ್ರಾಮ, ನಗರ, ತಾಲೂಕು, ಜಿಲ್ಲೆ, ರಾಜ್ಯ, ದೇಶದಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದರ ಮೂಲಕ ಹಾಗೂ ಅದರ ಮಹತ್ವವನ್ನು ಸಾರುವ ಮೂಲಕ ನಮ್ಮ ಸುತ್ತಮುತ್ತಲಿನ ವಾತಾವರಣ ಶಾಲೆ, ಆಸ್ಪತ್ರೆಗಳು, ಸಾರ್ವಜನಿಕ ಸ್ಥಳಗಳು, ರೈಲ್ವೆ ನಿಲ್ದಾಣ, ಬಸ್ಸು ನಿಲ್ದಾಣ ಐತಿಹಾಸಿಕ ಸ್ಥಳಗಳು, ಪ್ರವಾಸೋದ್ಯಮ ತಾಣಗಳಲ್ಲಿ ಸ್ವಚ್ಛತೆಯನ್ನ ಕಾಪಾಡುವುದರ ಮೂಲಕ ಆ ಸ್ಥಳದ ಸೌಂದರ್ಯ ಮತ್ತು ಜನತೆಯ ಆರೋಗ್ಯ ಎರಡನ್ನು  ಕಾಪಾಡಬಹುದು ಮತ್ತು ಈ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ದಿನನಿತ್ಯ ಶ್ರಮ ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರಿಗೆ ನಮನಗಳು.

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

Karnataka 540 Forest Guard Physical Date 2025