ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ಎಥನಾಲ್ ಉತ್ಪಾದನೆಯಲ್ಲಿ ಭಾರತ ಮೂರನೇ ಅತಿದೊಡ್ಡ ರಾಷ್ಟ್ರ

ಎಥನಾಲ್ ಉತ್ಪಾದನೆಯಲ್ಲಿ ಭಾರತ ಅತ್ಯುತ್ತಮ ಸಾಧನೆ 

ಜಗತ್ತಿನ ಅತಿ ಪ್ರಬಲ ಎಥನಾಲ್ ಉತ್ಪಾದನಾ ಮೂರು ರಾಷ್ಟ್ರಗಳಲ್ಲಿ ಭಾರತ ಮೂರನೇ ಸ್ಥಾನವನ್ನು ಪಡೆದಿದೆ. ಭಾರತ ಸುಸ್ಥಿರ ಅಭಿವೃದ್ಧಿ ಸಾಧಿಸಲು ಮತ್ತು ಜೈವಿಕ ಇಂಧನದ ಬಳಕೆ ಉತ್ತೇಜಿಸಲು ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ಪ್ರಮುಖ ನಿರ್ಧಾರಗಳಿಂದ ಭಾರತವು ಈ ಪ್ರಮುಖ ಸಾಧನೆಯನ್ನು ಮಾಡಿದೆ. 


ಎಥನಾಲ್ ಉತ್ಪಾದನೆಯಲ್ಲಿ ಭಾರತ ಮೂರನೇ ಅತಿದೊಡ್ಡ ರಾಷ್ಟ್ರ
India 3rd in Ethanol Production 


ಜಗತ್ತಿನ ಅತಿ ದೊಡ್ಡ ಎಥನಾಲ್ ಉತ್ಪಾದಕ ರಾಷ್ಟ್ರಗಳು 

ಭಾರತವು ಇತ್ತೀಚೆಗೆ ಜಗತ್ತಿನ ಅತಿ ದೊಡ್ಡ ಮೂರನೇ ಎಥನಾಲ್ ಉತ್ಪಾದಕ ಮತ್ತು ಗ್ರಾಹಕ ರಾಷ್ಟ್ರವಾಗಿ  ಹೊರಹೊಮ್ಮಿದೆ. ಅಮೆರಿಕ ಮತ್ತು ಬ್ರೆಜಿಲ್ ನಂತರದಲ್ಲಿ ಭಾರತವು ಅತಿ ಹೆಚ್ಚು ಎಥೆನಾಲ್ ಉತ್ಪಾದಿಸುವ ರಾಷ್ಟ್ರವಾಗಿದೆ. ಇದಕ್ಕೆ ಸರ್ಕಾರ ಕೈಗೊಂಡಿರುವ ಹಲವು ಕಾರ್ಯಕ್ರಮಗಳು ಮತ್ತು ಪ್ರೋತ್ಸಾಹ ಸಹಕಾರಿಯಾಗಿದೆ.

ಎಥನಾಲ್ ಯಾವುದಕ್ಕೆ ಬಳಕೆಯಾಗುತ್ತದೆ 

ಎಥೈಲ್ ಆಲ್ಕೋಹಾಲ್ ಎಂದು ಎಥನಾಲ್ ಅನ್ನು ಕರೆಯಲಾಗುತ್ತದೆ. ಇದನ್ನು ಮುಖ್ಯವಾಗಿ ಕೃಷಿಯ ಉಪ ಉತ್ಪನ್ನಗಳು ಮತ್ತು ಜೈವಿಕ ತ್ಯಾಜ್ಯಗಳಿಂದ ಕೂಡ ತಯಾರು ಮಾಡಲಾಗುತ್ತದೆ. ಇದು ನವೀಕರಿಸಬಹುದಾದ ಜೈವಿಕ ಇಂಧನ (Bio Fuel) ಆಗಿದೆ. 19ನೇ ಶತಮಾನದಿಂದಲೂ ಕೂಡ ಇದನ್ನು ಜೈವಿಕ ಇಂಧನವಾಗಿ ಬಳಕೆ ಮಾಡಲಾಗುತ್ತಿದೆ.  

ಇತ್ತೀಚೆಗೆ ಭಾರತೀಯ ವಾಯುಪಡೆ ಸುದ್ದಿಯಲ್ಲಿದೆ ಅದರ ಸಂಪೂರ್ಣ ಮಾಹಿತಿಗಾಗಿ :  👉  Click Here 

ಸರ್ಕಾರದ ಉಪಕ್ರಮಗಳು (Government Initiatives) 

ಭಾರತದ ಈ ಸಾಧನೆಗೆ ಸರ್ಕಾರವು ಹಲವಾರು ಉಪಕ್ರಮಗಳನ್ನು ಯೋಜಿಸಿದೆ. 2030ರ ಸುಸ್ಥಿರ ಅಭಿವೃದ್ಧಿಯ ಕಡೆಗೆ ಗಮನ ಇಟ್ಟು ಈ ನಿಟ್ಟಿನಲ್ಲಿ ಭಾರತವು ಜೈವಿಕ ಇಂಧನದ ಮಹತ್ವ ಮತ್ತು ಅದರ ಪರಿಣಾಮಕಾರಿ ಬಳಕೆಗೆ ಹೆಚ್ಚು ಒತ್ತನ್ನು ಕೊಟ್ಟು ಸಾಗುತ್ತಿದೆ. ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳಲ್ಲಿ ಎಥೆನಾಲ್ ಉತ್ಪಾದನಾ ಘಟಕಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕವಾಗಿ ಸುಸ್ಥಿರ ಅಭಿವೃದ್ಧಿಯ ಗುರಿಗಳು SDG 07 (Affordable and clean energy) and SDG 13th (Climate Action) ಗುರಿಯನ್ನು ಸಾಧಿಸಲು ಮುಂದಾಗಿದೆ.

ಕೃಷಿಯ ಉಪ ಉತ್ಪನ್ನಗಳಿಂದ ಮತ್ತು ಜೈವಿಕ ತ್ಯಾಜ್ಯಗಳಿಂದ ಎಥೆನಾಲ್ ತಯಾರಿಸುವುದರಿಂದ ರೈತರಿಗೆ ಕಬ್ಬು ಬೆಳೆಗಾರರಿಗೆ ಉತ್ತಮ ಪ್ರೋತ್ಸಾಹವನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಸಾಂಪ್ರದಾಯಿಕ ಇಂಧನವಾದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅವಲಂಬನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಎಥನಾಲ್ ಬ್ಲೆಂಡಿಂಗ್ ಯೋಜನೆಯನ್ನು ರೂಪಿಸಿದ್ದು ಈ ಮೂಲಕವಾಗಿ 5% ಎಥನಾಲ್ ಅನ್ನು ಡೀಸೆಲ್ ನಲ್ಲಿಯೂ ಮತ್ತು 20% ಎಥನಾಲ್ ಅನ್ನು ಪೆಟ್ರೋಲ್ ನಲ್ಲಿ Blend ಮಾಡಿ ಸಾಂಪ್ರದಾಯಿಕ ಇಂಧನದ ಅತಿ ಅವಲಂಬನೆಯನ್ನು ಕಡಿಮೆ ಮಾಡುವ ಗುರಿ ಹೊಂದಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Call Letter Update of Central and State Government Recruitment