ಭಾರತೀಯ ವಾಯುಪಡೆ ದಿನ : Indian Air Force Day
ನಭ ಸ್ಪರ್ಶಂ ದೀಪ್ತಮ್ - ಆಕಾಶವನ್ನು ವೈಭವದಿಂದ ಸ್ಪರ್ಶಿಸು ಇದು ಭಾರತೀಯ ವಾಯುಪಡೆಯ ಧ್ಯೇಯ ವಾಕ್ಯವಾಗಿದೆ. ಭಾರತದ ರಕ್ಷಣೆಯಲ್ಲಿ ಭಾರತೀಯ ಭೂ ಸೇನೆ, ನೌಕಾ ಸೇನೆ, ಭಾರತೀಯ ವಾಯು ಸೇನೆ ತಮ್ಮದೇ ಆದ ಕೊಡುಗೆ ನೀಡಿವೆ. ಭಾರತೀಯ ವಾಯು ಸೇನೆಯ ಸೈನಿಕರಿಗೆ ಗೌರವಾರ್ಥವಾಗಿ ಪ್ರತಿ ವರ್ಷ ಅಕ್ಟೋಬರ್ 8 ರಂದು ಭಾರತೀಯ ವಾಯುಪಡೆಯ ದಿನವನ್ನು ಆಚರಿಸಲಾಗುತ್ತದೆ.
ಈ 92ನೇ ವರ್ಷದ ವಾರ್ಷಿಕೋತ್ಸವದಲ್ಲಿ (Air Show) ವೈಮಾನಿಕ ಪ್ರದರ್ಶನವನ್ನು ಚೆನ್ನೈನ ಮರಿನಾ ಬೀಚ್ ನಲ್ಲಿ ನಡೆಸಲಾಯಿತು ಈ ಸಮಯದಲ್ಲಿ ಹಲವಾರು ಯುದ್ಧ ಹೆಲಿಕ್ಯಾಪ್ಟರ್ಗಳು ಮತ್ತು ಯುದ್ಧ ವಿಮಾನಗಳು ಪಾಲ್ಗೊಂಡಿದ್ದವು.
![]() |
Indian Air Force Day |
ಭಾರತೀಯ ವಾಯುಪಡೆಯ ಹಿನ್ನೆಲೆ
ಭಾರತೀಯ ವಾಯು ಪಡೆಯು 1932 ಅಕ್ಟೋಬರ್ 8ರಂದು ಅಸ್ತಿತ್ವಕ್ಕೆ ಬಂದಿತ್ತು. ಇದರಿಂದಾಗಿ ಪ್ರತಿ ವರ್ಷ ಅಕ್ಟೋಬರ್ 8ರಂದು ಭಾರತೀಯ ವಾಯು ಪಡೆಯ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶಕ್ಕಾಗಿ ಮಡಿದ ವಾಯುಪಡೆಯ ಸೈನಿಕರಿಗೆ ಆಚರಣೆಯೊಂದಿಗೆ ಗೌರವವನ್ನು ಸೂಚಿಸಲಾಗುತ್ತದೆ. ಮುಖ್ಯವಾಗಿ ಈ ದಿನದಂದು ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು, ಹೆಲಿಕ್ಯಾಪ್ಟರ್ ಗಳ ಪ್ರದರ್ಶನ ಇರುತ್ತದೆ.
ಭಾರತೀಯ ವಾಯುಪಡೆಯನ್ನು ಈ ಹಿಂದೆ ರಾಯಲ್ ಇಂಡಿಯನ್ ಏರ್ ಫೋರ್ಸ್ ಎಂದು ಕರೆಯಲಾಗುತ್ತಿತ್ತು. ನಂತರದಲ್ಲಿ ಸ್ವತಂತ್ರಗೊಂಡ ಭಾರತ ರಾಯಲ್ ಎಂಬ ಪದ ತೆಗೆದು ಹಾಕಲಾಯಿತು. ವಾಯು ಸೇನೆಯ ನಂಬರ್ ಒನ್ ಸ್ಕ್ವಾಡ್ರನ್ 1933 ರಲ್ಲಿ ಕರಾಚಿಯಲ್ಲಿ ಕಾರ್ಯರೂಪಕ್ಕೆ ಬಂತು. ಆಗ ನಮ್ಮ ವಾಯು ಸೇನೆಯಲ್ಲಿ ಇದ್ದದ್ದು ಕೇವಲ ನಾಲ್ಕು ಯುದ್ಧ ವಿಮಾನಗಳು ಮತ್ತು ಐದು ಜನ ಪೈಲಟ್ ಗಳು ಇದ್ದು ಪ್ರಸ್ತುತವಾಗಿ 1400ಕ್ಕೂ ಅಧಿಕ ಯುದ್ಧ ವಿಮಾನಗಳಿವೆ. ಮತ್ತು ವಿಶ್ವದ ನಾಲ್ಕನೇ ಅತಿ ದೊಡ್ಡ ವಾಯುಪಡೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತೀಯ ವಾಯುಪಡೆಯ IAF (Indian Air Force) ಪ್ರಮುಖ ಕಾರ್ಯಾಚರಣೆಗಳು
- ಭಾರತೀಯ ವಾಯುಪಡೆ ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡ ಅತಿ ದೊಡ್ಡ ಸ್ವಯಂಸೇವಕ ಪಡೆ
- ಭಾರತ ಮತ್ತು ಚೀನಾ ನಡುವಿನ ಯುದ್ಧದ ಸಮಯದಲ್ಲಿ ಪಾಲ್ಗೊಂಡಿದೆ
- ಆಪರೇಷನ್ ವಿಜಯ, ಕಾರ್ಗಿಲ್ ಯುದ್ಧ, ಕಾಂಗೋ ಬಿಕ್ಕಟ್ಟು ಮುಂತಾದ ಕಾರ್ಯಾಚರಣೆಯಲ್ಲಿ ಭಾರತೀಯ ವಾಯು ಸೇನೆಯನ್ನು ಬಳಸಿಕೊಳ್ಳಲಾಗಿದೆ.
- ಆಪರೇಷನ್ ಮೇಘದೂತ್ : ಸಿಯಾಚಿನ್ ಗ್ಲೇಶಿಯರ್ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕಾರ್ಯಾಚರಣೆ 1984
- ಆಪರೇಷನ್ ಗಂಗಾ ಮೂಲಕ ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಮಯದಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಕರೆತರುವ ವ್ಯವಸ್ಥೆ.
- Operation Polo : ಹೈದರಾಬಾದ್ ಸಂಸ್ಥಾನದ ವಿಲೀನ ಕಾರ್ಯಾಚರಣೆ
- Operation Cactus, etc
1 ಕಾಮೆಂಟ್ಗಳು
Nice Information 🥰Keep it Up
ಪ್ರತ್ಯುತ್ತರಅಳಿಸಿ