ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಕಡಿಮೆ ದಿನಗಳ ತಯಾರಿ ಹೇಗಿರಬೇಕು

ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ತಯಾರಿ ಹೇಗೆ ? 

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಲಾಗುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅತಿ ಕಡಿಮೆ ಅವಧಿಯಲ್ಲಿ ಯಾವ ರೀತಿ ಓದಬೇಕು ಮತ್ತು ಕೊನೆಯ ಹಂತದಲ್ಲಿ ಉತ್ತಮ ಅಂಕ ಗಳಿಸುವಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಕೆಲವೊಂದಿಷ್ಟು ಟಿಪ್ಸ್ ಅಂಡ್ ಟ್ರಿಕ್ಸ್ ನೀಡಲಾಗಿದೆ.

Focus on Core Subjects: ಅತಿ ಮುಖ್ಯ ವಿಷಯಗಳ ಕಡೆ ಗಮನ ಕೊಡಿ 

ಈ ಒಂದು ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಾಮಾನ್ಯ ಜ್ಞಾನದ ಪ್ರಶ್ನೆ ಪತ್ರಿಕೆಗಳಲ್ಲಿ ಅತಿ ಹೆಚ್ಚು ಅಂಕವನ್ನು ಗಳಿಸಲು ಸಾಮಾನ್ಯ ಜ್ಞಾನದ ವಿಷಯದಲ್ಲಿ ಅತಿ ಮುಖ್ಯ ವಿಷಯವಾಗಿರುವ ರಾಜ್ಯಶಾಸ್ತ್ರ, ಭಾರತೀಯ ಸಂವಿಧಾನ, ಕರ್ನಾಟಕ ಭೂಗೋಳ, ಕರ್ನಾಟಕ ಇತಿಹಾಸ, ಭಾರತ ಮತ್ತು ಕರ್ನಾಟಕ ಅರ್ಥಶಾಸ್ತ್ರ, ಕರ್ನಾಟಕದ ಪರಿಸರ (Environment) ಹಾಗೂ KEA ಇತ್ತೀಚಿಗೆ ಸುದ್ದಿಯಲ್ಲಿರುವ ವಿಷಯಗಳ ಬಗ್ಗೆ ಪ್ರಚಲಿತ ಘಟನೆಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗೂ ಪ್ರಚಲಿತ ಘಟನೆಗಳ ಕಡೆಗೆ ಗಮನ ಕೊಡಿ ಮುಖ್ಯವಾಗಿ ಇತ್ತೀಚಿನ ಕ್ರೀಡಾಕೂಟಗಳ ಬಗ್ಗೆ ಮತ್ತು ಪ್ರಶಸ್ತಿ ಮತ್ತು ಪ್ರಶಸ್ತಿ ಪುರಸ್ಕೃತರ ಕುರಿತು ಪ್ರಶ್ನೆಗಳು ಕೂಡ ಬರಬಹುದು ಈ ಬಗ್ಗೆ ಆದಷ್ಟು ಗಮನಹರಿಸಿ. 


ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಕಡಿಮೆ ದಿನಗಳ ತಯಾರಿ ಹೇಗಿರಬೇಕು, How to Prepare VAO Exam in Short Term
How to Prepare VAO Exam


ಮುಖ್ಯವಾಗಿ ಈ ಒಂದು ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಾಮಾನ್ಯ ವಿಜ್ಞಾನಕ್ಕಿಂತ ದೈನಂದಿನ ಜೀವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಪ್ರಶ್ನೆಗಳನ್ನು ಕೇಳಬಹುದಾಗಿದೆ ಆದ್ದರಿಂದ ವಿಜ್ಞಾನ ಮತ್ತು ತಂತ್ರಜ್ಞಾನದ (Science and Tech) ಪ್ರಶ್ನೆಗಳು ನಿಮ್ಮ ಅಂಕಗಳನ್ನು ಹೆಚ್ಚಿಸುತ್ತವೆ.

Daily 30 Minutes For Mental Ability 


ಈ ಒಂದು ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿರುವ ಅಧಿಕೃತ ಸಿಲಬಸ್ಸಲ್ಲಿ Mental Ability ಮಾನಸಿಕ ಸಾಮರ್ಥ್ಯದ ಪ್ರಶ್ನೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿಲ್ಲ ಅಂದ ಮಾತ್ರಕ್ಕೆ ಅದನ್ನು ಕೇಳುವುದಿಲ್ಲ ಎಂದುಕೊಳ್ಳುವುದು ತಪ್ಪು ಸ್ವಲ್ಪ ಈ ಬಗ್ಗೆ ಗಮನ ಕೊಟ್ಟು ಉಳಿದಿರುವ ಬಾಕಿ ದಿನಗಳಲ್ಲಿ ಅರ್ಧ ತಾಸು ಈ ಒಂದು ಮಾನಸಿಕ ಸಾಮರ್ಥ್ಯಕ್ಕೆ ಕೊಟ್ಟು ಪ್ರಶ್ನೆಗಳನ್ನ ಬಿಡಿಸುವುದರ ಮೂಲಕ ಪ್ರಶ್ನೆಗಳನ್ನು ಕೇಳಿದಾಗ ಅವು ನಿಮ್ಮ ಅಂಕವನ್ನು ಮತ್ತಷ್ಟು ಹೆಚ್ಚಿಸುತ್ತವೆ ಮತ್ತು ನಿಮ್ಮ ಕಟ್ ಆಫ್ ಅಂಕಗಳನ್ನು ದಾಟಲು ಸುಲಭವಾಗುತ್ತದೆ. 

ಈ ವಿಷಯಗಳನ್ನು ರಿವಿಜನ್ ಮಾಡಿಕೊಳ್ಳಿ 

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿರುವ ಪಠ್ಯಕ್ರಮದಲ್ಲಿ ಈ ಕೆಳಗಿನ ವಿಷಯಗಳು ಕೂಡ ಇದ್ದು ಈಗಾಗಲೇ ನೀವು ಈ ವಿಷಯದ ಬಗ್ಗೆ ನೋಟ್ಸ್ ಮಾಡಿದರೆ ಒಂದೆರಡು ಸಲ ರಿವಿಜನ್ ಮಾಡಿ 
  1. ಸಹಕಾರದ ತತ್ವಗಳು (Co Operative Principal)
  2. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ 
  3. ಕರ್ನಾಟಕದಲ್ಲಿ ಭೂ ಸುಧಾರಣೆ 
  4. ಕಂದಾಯ ಅಧಿಕಾರಿಗಳ ಕಾರ್ಯಗಳು : ಉದಾಹರಣೆಗೆ ಗ್ರಾಮ ಲೆಕ್ಕಾಧಿಕಾರಿ, ತಹಶೀಲ್ದಾರ್, AC, DC ಇತ್ಯಾದಿ

Revise Communication Paper 2 Syllabus 

ಇನ್ನು ಮುಖ್ಯವಾಗಿ ಪ್ರಶ್ನೆ ಪತ್ರಿಕೆ ಎರಡರಲ್ಲಿ ಕಂಪ್ಯೂಟರ್ ಜ್ಞಾನ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ 100 Marks ಇದೆ. ಯಾವ ವಿಷಯ ಇದುವರೆಗೂ ಓದಿಲ್ಲ ಅಂತಹ ವಿಷಯ ಸ್ವಲ್ಪ ಕನ್ನಾಡಿಸಿ ಮತ್ತು ಸಾದ್ಯವಾದಷ್ಟು ಮರುಮನನ (ರಿವಿಜನ್) ಮಾಡಿ ಇದು ಓದುವ ಸಮಯಕ್ಕಿಂತ ನೀವು ಓದಿದನ್ನು ಮನನ ಮಾಡಿಕೋಳ್ಳುವ ಸಮಯ ಮತ್ತು ಸಾಧ್ಯವಾದರೆ ಅನುಕು ಪರೀಕ್ಷೆಯನ್ನು ಹೆಚ್ಚೇಚ್ಚು ತೆಗೆದುಕೋಳ್ಳಿ ಇದು ಪರೀಕ್ಷೆಯಲ್ಲಿ ಸಮರ್ಥವಾಗಿ ಉತ್ತರಿಸಲು ಸಹಕಾರಿ ಆಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

Latest jobs update 2025 in Kannada