ಶ್ರೀ ರಾಮ ಮಂದಿರ ಅಯೋಧ್ಯಾ ಕುರಿತು ಸಂಪೂರ್ಣ ಮಾಹಿತಿ
ಐತಿಹಾಸಿಕ ತಾಣವಾದ ಉತ್ತರ ಪ್ರದೇಶದಲ್ಲಿ ಶ್ರೀ ರಾಮ ಮಂದಿರದ ಉದ್ಘಾಟನೆ ಇದೇ ಜನವರಿ 22/2024 ರಂದು ಉತ್ತರ ಪ್ರದೇಶದ ಅಯೋದ್ಯೆ ನಗರದಲ್ಲಿ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಲಿದೆ. ಇದಕ್ಕಾಗಿ ಅಯೋದ್ಯೆ ನಗರದಲ್ಲಿ ಸಕಲ ಸಿದ್ಧತೆಗಳು ಬರದಿಂದ ಸಾಗಿವೆ. ಜನವರಿ 22 ರಂದು ಈಡಿ ದೇಶಾದ್ಯಂತ ಮನೆ ಮನೆಗಳಲ್ಲಿ ದೀಪ ಬೆಳಗಿ ಮತ್ತು ಎಲ್ಲಾ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಕೈಗೋಳ್ಳಲು ತಿಳಿಸಲಾಗಿದೆ.
![]() |
| ಶ್ರೀರಾಮ ಜನ್ಮಭೂಮಿ |
ದೇವಸ್ಥಾನದ ಶೈಲಿ
ಶ್ರೀರಾಮ ಮಂದಿರ ಭಾರತದ ಸಂಸ್ಕೃತಿಕ ಶೈಲಿಯಾದ ನಾಗರ ಶೈಲಿಯಲ್ಲಿ ಈ ಒಂದು ಮಂದಿರ ನಿರ್ಮಾಣವಾಗಿದೆ. ಪ್ರಮುಖವಾಗಿ ಈ ಪ್ರಕಾರದ ಶೈಲಿಯನ್ನು ನಾವು ಉತ್ತರದ ಭಾರತದ ಹಲವಾರು ಮಂದಿರಗಳಲ್ಲಿ ನೋಡಬಹುದು. ಮುಖ್ಯವಾಗಿ ನಮ್ಮ ಭಾರತದಲ್ಲಿ ಅನೇಕ ಪ್ರಕಾರದ ವಾಸ್ತುಶಿಲ್ಪ ಶೈಲಿಯನ್ನು ಕಾಣುತ್ತೇವೆ ಅದರಲ್ಲಿ ಪ್ರಮುಖವಾಗಿ ನಾವು ಉತ್ತರ ಭಾರತದ ಭಾಗದಲ್ಲಿ ನಾಗರಶೈಲಿಯನ್ನು ಕಾಣುತ್ತೇವೆ ಮತ್ತು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ದ್ರಾವೀಡ್ ಶೈಲಿ ಮತ್ತು ಹೋಯ್ಸಳ, ಪಲ್ಲವ ಮತ್ತು ಚಾಲುಕ್ಯ ಶೈಲಿಯನ್ನು ಕಾಣುತ್ತೇವೆ.
ಈ ಮಂದಿರ 2.7 ಎಕರೆ ಪ್ರದೇಶದಲ್ಲಿ 54,700 ಚ.ಕೀ.ಮೀ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ. ಮಂದಿರ ನಿರ್ಮಾನದ ಒಟ್ಟು 1400Cr to 1800Cr ವೆಚ್ಚ ಆಗಬಹುದು ಎಂದು ಹೇಳಲಾಗುತ್ತಿದೆ. ಮಂದಿರವನ್ನು ನಿರ್ಮಾಣ ಮಾಡುತ್ತಿರುವುದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ ಇದಕ್ಕಾಗಿ ಸರ್ಕಾರದ ಹಣ ಬಳಕೆಯಾಗುತ್ತಿಲ್ಲ ಬದಲಾಗಿ ಟ್ರಸ್ಟಗೆ ಡೋನೆಷನ್ ಮೂಲಕ ಹಣವನ್ನು ಭಕ್ತರಿಂದ ಸಂಗ್ರಹಿಸಲಾಗಿದೆ.
ಆಯಾಮಗಳು : 380 ಅಡಿ ಉದ್ದ, 235 ಅಡಿ ಅಗಲ, 161 ಅಡಿ ಎತ್ತರ ಹೊಂದಿದೆ ಮತ್ತು ಮೂರು ಅಂತಸ್ತಿನ 20 ಅಡಿ ಎತ್ತರದ ಮಹಡಿಗಳಿವೆ. 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ. 32 ಮೆಟ್ಟಿಲುಳಿವೆ ಹಾಗೂ ಮುಖ್ಯ ಗರ್ಭಗುಡಿಯಲ್ಲಿ ಭಗವಾನ್ ಶ್ರೀರಾಮನ ಬಾಲ್ಯರೂಪದ ಮೂರ್ತಿ ಪ್ರತಿಷ್ಟಾಪಣೆಯಾಗಲಿದೆ. ಮೂದಲ ಮಹಡಿಯಲ್ಲಿ ಶ್ರೀರಾಮ ದರ್ಬಾರ ಇದೆ. ಮುಖ್ಯವಾಗಿ ಈ ಮಂದಿರ ಐದು ಮಂಟಪಗಳನ್ನು ಒಳಗೊಂಡಿದೆ. ಕಂಬಗಳು ಮತ್ತು ಗೋಡೆಗಳ ಮೇಲೆ ದೇವರುಗಳ ಪ್ರತಿಮೆಗಳ ಶಿಲ್ಪಕಲೆ ಇದೆ. ನಾಗರ ಶೈಲಿಯಲ್ಲಿ ಈ ದೇವಸ್ಥಾನದ ನಿರ್ಮಾಣದ ಕಾರ್ಯವನ್ನು ಸೋಂಪುರ ಕುಟುಂಬ ವಿನ್ಯಾಸ ಮಾಡಿ ನಿರ್ಮಾಣ ಮಾಡುತ್ತಿದೆ.
ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ : 👉 ಕ್ಲಿಕ್ ಹಿಯರ್
ಶ್ರೀ ರಾಮ ಮಂದಿರ ಅಯೋಧ್ಯಾ ಐದು ಮಂಟಪಗಳು
ನಿರ್ಮಾನದ ವೈಶಿಷ್ಟತೆಗಳು
- ಈ ಒಂದು ಮಂದಿರದ ನಿರ್ಮಾನದಲ್ಲಿ ಕಬ್ಬಿಣವನ್ನು ಬಳಸಲಾಗಿಲ್ಲ
- ಇದರ ಅಡಿಪಾಯ : ಕೃತಕ ಬಂಡೆಯ ನೋಟಕ್ಕಾಗಿ 14m ದಪ್ಪದ ರೋಲರ್-ಕಾಂಪ್ಯಾಕ್ಟ ಕಾಂಕ್ರೀಟ್ ಬಳಸಲಾಗಿದೆ.
- ಮಂದಿರದ ರಕ್ಷಣೆಗೆ ನೆಲದ ತೆವಾಂಶದ ವಿರುದ್ಧ ಗ್ರಾನೈಟ್ ನೊಂದಿಗೆ 21 ಅಡಿ ಎತ್ತರದ ಸ್ತಂಭ
ಪೂರಕ ರಚನೆಗಳು
- ಕಾಂಪೌಂಡ್ ಮೂಲೆಗಳಲ್ಲಿ ಮಂದಿರಗಳು : ಸೂರ್ಯ ದೇವ್, ದೇವಿ ಭಗವತಿ, ಗಣೇಶ ಭಗವಾನ್, ಭಗವಾನ್ ಶಿವ್, ಮಾ ಅನ್ನಪೂರ್ಣ, ಹನುಮಾನ ಜಿ
- ಹತ್ತಿರದ ಐತಿಹಾಸಿಕ ಬಾವಿ (ಸೀತಾ ಕೂಪ್)
- ಸಂಕೀರ್ಣದಲ್ಲಿ ಪ್ರಸ್ತಾವಿಕ ಮಂದಿರಗಳು : ವಾಲ್ಮೀಕಿ, ವಶಿಷ್ಠ, ವಿಶ್ವಾಮಿತ್ರ, ಅಗಸ್ತ್ಯ, ನಿಶಾದ್ ರಾಜ್, ಮಾತಾ ಶಬರಿ, ದೇವಿ ಅಹಲ್ಯಾ ಮಂದಿರಗಳು
- ಕುಬೇರ ತಿಲ : ಜಟಾಯು ಸ್ಥಾಪಣೆಯೊಂದಿಗೆ ಭಗವಾನ್ ಶಿವ ಮಂದಿರವನ್ನು ಪುನಃಸ್ಥಾಪಿಸಲಾಗಿದೆ.
ಮೂಲ ಸೌಕರ್ಯ ಮತ್ತು ಪರಿಸರ
ಒಳಚರಂಡಿ ಸಂಸ್ಕರಣೆ, ನೀರಿನ ಸಂಸ್ಕರಣೆ, ಅಗ್ನಿ ಸುರಕ್ಷತೆಗೆ ನೀರು ಸರಬರಾಜು, ಸ್ವತಂತ್ರ್ಯ ವಿದ್ಯುತ್ ಕೇಂದ್ರ ಇದೆ. ಸ್ನಾನದ ಪ್ರದೇಶ, ವಾಶ್ ರೂಮ್‌ಗಳು, ತೆರೆದ ಟ್ಯಾಪ್‌ಗಳು ಇತರೆ ಸೌಲಭ್ಯಗಳಿವೆ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಪರಿಸರ ಸ್ನೇಹಿ ವಿಧಾನಗಳನ್ನು ಒಳಗೊಂಡಿದೆ. ಮಂದಿರ ಭದ್ರತೆಗೆ ವಿಶೇಷ ತರಬೇತಿ ಪಡೆದ ಭದ್ರತಾ ಪಡೆ ಇದೆ ಇದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾರ್ಯ ನಿರ್ವಹಿಸುತ್ತದೆ.


0 ಕಾಮೆಂಟ್‌ಗಳು