ಭಾರತದ ಹಣಕಾಸು ಆಯೋಗದ ಬಗ್ಗೆ ಸಂಪೂರ್ಣ ಮಾಹಿತಿ
ಭಾರತ ಸರ್ಕಾರದ ರಾಷ್ಟ್ರಪತಿಗಳು ಇತ್ತಿಚಿಗೆ 16ನೇ ಹಣಕಾಸು ಆಯೋಗವನ್ನು ರಚನೆ ಮಾಡಿದರು ಮುಖ್ಯವಾಗಿ ಭಾರತ ಸರ್ಕಾರದ 16ನೇ ಹಣಕಾಸು ಆಯೋಗದ ಮುಖ್ಯಸ್ಥರಾಗಿ ಅರವಿಂದ ಪಣಗಾರಿಯಾ ಅವರನ್ನು ನೇಮಕ ಮಾಡಲಾಯಿತು. ಮತ್ತು ಕಾರ್ಯದರ್ಶಿಯಾಗಿ ರಿತ್ವಿಕ್ ರಂಜನಮ್ ಪಾಂಡೆ ಅವರನ್ನು ನೇಮಕ ಮಾಡಲಾಯಿತು. ಈ ಬಗ್ಗೆ ಹಣಕಾಸು ಆಯೋಗದ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದರ ಸಂಪೂರ್ಣ ಮಾಹಿತಿ ಮತ್ತು ಸಂಭವನಿಯ ಪ್ರಶ್ನೆಗಳ ಮಾಹಿತಿಯನ್ನು ನೀಡಲಾಗಿದ್ದು ಅಭ್ಯರ್ಥಿಗಳು ನೋಡಿಕೋಳ್ಳಬಹುದಾಗಿದೆ.
![]() |
finance commission of India |
ಹಣಕಾಸು ಆಯೋಗ ಎಂದರೇನು ?
ಹಣಕಾಸು ಆಯೋಗ ಒಂದು ಸಂವಿಧಾನಿಕ ಸಂಸ್ಥೆ (Constitutional Body) ಆಗಿದೆ. ಇದನ್ನು ಸಂವಿಧಾನದ 280ನೇ ವಿಧಿಯ ಪ್ರಕಾರವಾಗಿ ಭಾರತದ ರಾಷ್ಟ್ರಪತಿಗಳು ಪ್ರತಿ ಐದು ವರ್ಷಕೊಮ್ಮೆ ಹಣಕಾಸು ಆಯೋಗವನ್ನು ರಚನೆ ಮಾಡುತ್ತಾರೆ. ಮತ್ತು ಹಣಕಾಸು ಆಯೋಗದ ಮುಖ್ಯಸ್ಥರನ್ನು ರಾಷ್ಟ್ರಪತಿಗಳೆ ನೇಮಕವನ್ನು ಮಾಡುತ್ತಾರೆ. ಇದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವೆ ತೆರಿಗೆ ಮತ್ತು ಹಣಕಾಸಿನ ಹಂಚಿಕೆಯನ್ನ ವ್ಯಾಖ್ಯಾನಿಸುತ್ತದೆ. ಮತ್ತು ಭಾರತದ ಕನ್ಸಾಲಿಡೆಟೇಡ್ ಫಂಡ್ ನಿಂದ ರಾಜ್ಯಗಳ ಆದಾಯದ ಅನುಧಾನ ಮತ್ತು ಸಹಾಯವನ್ನು ನಿಯಂತ್ರಿಸುವ ತತ್ವಗಳನ್ನು ತಿಳಿಪಡಿಸುವುದು.
ಮೊದಲ ಹಣಕಾಸು ಆಯೋಗವನ್ನು ರಾಷ್ಟ್ರಪತಿಗಳ ಆಜ್ಞೆ ಹೋರಡಿಸಿ 1951 ನವೆಂಬರ 22 ರಂದು ಅಂದಿನ ಕೆ. ಸಿ. ನಿಯೋಗಿ ಅವರ ಅಧ್ಯಕ್ಷತೆಯಲ್ಲಿ 6ನೇ ಎಪ್ರೀಲ್ 1952 ರಲ್ಲಿ ನೇಮಕ ಮಾಡಲಾಯಿತು. ಹಣಕಾಸು ಆಯೋಗದ ಪ್ರಧಾನ ಕಚೇರಿ ಇರುವುದು ನವದೆಹಲಿಯಲ್ಲಿದೆ.
ಭಾರತದ ಹಣಕಾಸು ಆಯೋಗದ ರಚನೆ
ಹಣಕಾಸು ಆಯೋಗವು ಒಬ್ಬ ಅಧ್ಯಕ್ಷರನ್ನು ಮತ್ತು ನಾಲ್ಕು ಜನ ಸದಸ್ಯರನ್ನು ಒಳಗೊಂಡಿದೆ. ಅಧ್ಯಕ್ಷರನ್ನು ಸೇರಿಸಿದಂತೆ ಸದಸ್ಯರನ್ನು ಭಾರತದ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಮತ್ತು ಇವರುಗಳು ರಾಷ್ಟ್ರಪತಿ ಅವರಿಂದ ಮರು ಆಯ್ಕೆಗೂ ಅರ್ಹತೆಯನ್ನು ಹೊಂದಿರುತ್ತಾರೆ. ಇವರು ಯಾವ ಅರ್ಹತೆಯ ಆಧಾರದ ಮೇಲೆ ಆಯ್ಕೆಯಾಗಬೇಕು ಎಂಬುವುದನ್ನು ಭಾರತದ ಸಂವಿಧಾನ ಸಂಸತ್ತಿಗೆ ಅಧಿಕಾರವನ್ನು ನೀಡುತ್ತದೆ. ಕಾಲ ಕಾಲಕ್ಕೆ ಅಧ್ಯಕ್ಷರು ಮತ್ತು ಸದಸ್ಯರು ಯಾವ ಅರ್ಹತೆ ಹೊಂದಿರಬೆಕೆಂದು ಸಂಸತ್ತು ನಿರ್ಧರಿಸುತ್ತದೆ.
ಅಧ್ಯಕ್ಷರು : ಸಾರ್ವಜನಿಕ ವ್ಯವಹಾರದಲ್ಲಿ ಅನುಭವ ಹೊಂದಿರಬೇಕು. ಮತ್ತು ನಾಲ್ಕು ಸದಸ್ಯರು ಈ ಕೆಳಗಿನ ಅರ್ಹತೆಯನ್ನು ಹೊಂದಿರಬೇಕಾಗುತ್ತದೆ.
- ಹೈಕೊರ್ಟಿನ ಮುಖ್ಯ ನ್ಯಾಯಾಧೀಶರಾಗುವ ಅರ್ಹತೆಯನ್ನು ಅವರು ಹೊಂದಿರಬೇಕು.
- ಖಾತೆ ಮತ್ತು ಹಣಕಾಸು ವಿಷಯದಲ್ಲಿ ಪರಿಣಿತಿ ಹೊಂದಿರಬೇಕು
- ಹಣಕಾಸಿನ ವ್ಯವಹಾರದಲ್ಲಿ ಮತ್ತು ಆಡಳಿತದಲ್ಲಿ ಪರಿಣಿತಿ ಹೊಂದಿರಬೇಕು
- ಅರ್ಥಶಾಸ್ತ್ರದ ವಿಷಯದಲ್ಲಿ ವ್ಯಾಪಕವಾದ ಜ್ಞಾನವನ್ನು ಹೊಂದಿರಬೇಕು.
ಕಾರ್ಯದರ್ಶಿ
ಹಣಕಾಸು ಆಯೋಗ ಏಕೆ ಬೇಕು ?
ಹಣಕಾಸು ಆಯೋಗದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಲಂಭ ಮತ್ತು ಅಡ್ಡ ಹಣಕಾಸಿನ ಹಂಚಿಕೆಯ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ. ಈ ರೀತಿಯಾದ ವ್ಯವಸ್ಥೆಯನ್ನು ಆಸ್ಟೇಲಿಯಾ ಮತ್ತು ಕೆನಡಾ ದೇಶದಲ್ಲಿ ಕಾಣಬಹುದಾಗಿದೆ.
ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಹೇಗೆ ಕಾರ್ಯಗತಗೋಳಿಸಬಹು ?
ಅಧ್ಯಕ್ಷರ ಆದೇಶದ ಮೂಲಕ
ಕೇಂದ್ರದ ತೆರಿಗೆ, ಸುಂಕ ಮತ್ತು ಸಹಾಯಧನಗಳ ವಿತರಣೆಗೆ ಸಂಬಂಧಿಸಿದಂತ ಶಿಫಾರಸ್ಸುಗಳು.
ಕಾರ್ಯದರ್ಶಿಗಳ ಮೂಲಕ
ಹಣಕಾಸು ಆಯೋಗದ ಉಲ್ಲೇಖಗಳ ನಿಯಮಗಳ ಪ್ರಕಾರ ಮಾಡಬೇಕಾದಂತಹ ಶಿಫಾರಸ್ಸುಗಳು.
ಹಣಕಾಸು ಆಯೋಗದ ಶಿಫಾರಸ್ಸುಗಳು ಸರ್ಕಾರ ಒಪ್ಪಿಕೋಳ್ಳಬೇಕೆ ?
ಹಣಕಾಸು ಅಯೋಗ ಮಾಡಿದ ಶಿಫಾರಸ್ಸುಗಳನ್ನು ಸರ್ಕಾರ ಒಪ್ಪಿಕೋಳ್ಳಬಹುದು ಅಥವಾ ಬಿಡಬಹುದು (Recommendations are not binding)
ರಾಜ್ಯ ಹಣಕಾಸು ಆಯೋಗ
ಸ್ಟೇಟ್ ಫೈನಾನ್ಸಿಯಲ್ ಕಮೀಷನ್ ಒಂದು ಸಂವಿಧಾನದ ಅಡಿಯಲ್ಲಿ ರಚಿತವಾದ ಸಂಸ್ಥೆಗಳಾಗಿವೆ ಇದು ಕೇಂದ್ರದಲ್ಲಿ ಹೇಗೆ ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರಗಳ ನಡುವೆ ಹಣಕಾಸಿನ ಹಂಚಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಆಯೋಗ ಇದೆಯೋ ಅದೇ ರೀತಿಯಲ್ಲಿ ರಾಜ್ಯ ಸರ್ಕಾರದಲ್ಲಿ ರಾಜ್ಯ ಮತ್ತು ಸ್ಥಳೀಯ ಸರ್ಕಾರದ ಮಧ್ಯೆ ಹಣಕಾಸಿನ ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯ ಹಣಕಾಸು ಆಯೋಗ ಕಾರ್ಯನಿರ್ವಹಿಸುತ್ತದೆ. ಇದರ ಮುಖ್ಯ ಉದ್ದೇಶ ಪಂಚಾತಯತ್ ಹಣಕಾಸಿನ ಸ್ಥಿತಿಗತಿಗಳನ್ನು ಪರಿಶೀಲಿಸುವುದಾಗಿದೆ.
ರಾಜ್ಯ ಹಣಕಾಸು ಆಯೋಗದ ರಚನೆ
ರಾಜ್ಯ ಹಣಕಾಸು ಆಯೋಗವನ್ನು ರಾಜ್ಯದ ರಾಜ್ಯಪಾಲರು ಐದು ವರ್ಷಗಳಿಗೆ ಸಂವಿಧಾನದ 243 I ಪ್ರಕಾರ ನೇಮಿಸಬೇಕು ಎಂದು ತಿಳಿಸುತ್ತದೆ. ರಾಜ್ಯಪಾಲರು ಒಬ್ಬರು ಅಧ್ಯಕ್ಷರನ್ನು ಮತ್ತು ನಾಲ್ಕು ಜನ ಸದಸ್ಯರನ್ನು ನೇಮಿಸಬಹುದು.
ಸಂವಿಧಾನದ 243 Y ವಿಧಿಯು 243 I ಪ್ರಕಾರ ರಚಿತವಾದ ಹಣಕಾಸು ಆಯೋಗವು ಪುರಸಭೆಗಳಿಗೆ ಇದೆ ರೀತಿ ಶೀಫಾರಸ್ಸುಗಳನ್ನು ಮಾಡುತ್ತದೆ. ಇದು ಮುನ್ಸಿಪಾಲಿಟಿಗಳ ಹಣಕಾಸಿನ ಸ್ಥಿತಿಗತಿಗಳ ಕುರಿತು ರಾಜ್ಯಪಾಲರಿಗೆ ಶಿಫಾರಸ್ಸು ಮಾಡುತ್ತದೆ.
ಸಂವಿಧಾನದ ವಿಧಿ 243Y ಪ್ರಕಾರ ರಾಜ್ಯ ಹಣಕಾಸು ಆಯೋಗ ಮಾಡಿದ ಪ್ರತಿಯೊಂದು ಶೀಫಾರಸ್ಸು ಮತ್ತು ಅವುಗಳ ಮೇಲೆ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವಿರವಾದ ಜ್ಞಾಪಕ ಪತ್ರವನ್ನು ರಾಜ್ಯಪಾಲರು ರಾಜ್ಯ ಶಾಸಕಾಂಗದ ಮುಂದೆ ಈಡಬೇಕು.
0 ಕಾಮೆಂಟ್‌ಗಳು