ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ಕರ್ನಾಟಕದ ಭೂಗೋಳಶಾಸ್ತ್ರದ ನೋಟ್ಸ್ (Karnataka Geography)

ಕರ್ನಾಟಕದ ಭೂಗೋಳಶಾಸ್ತ್ರ 

ಕರ್ನಾಟಕ ಹೆಸರಿನ ಹಿನ್ನಲೆ 

ಕರ್ನಾಟಕ ಸಾಮಾನ್ಯವಾಗಿ ಅಂಗಿಕೃತವಾದದ್ದು ಕರು+ನಾಡು ಅಂದರೆ ಎತ್ತರವಾದ ಭಾಗ ಎಂಬ ಅರ್ಥವನ್ನು ಕೊಡುವ ಕನ್ನಡ ಪದದಿಂದ ರೂಪುಗೊಂಡಿದೆ ಕರ್ನಾಟಕದ ಉತ್ತರ ಭಾಗದಲ್ಲಿ ಕಾಣುವ ಕಪ್ಪು ಹತ್ತಿಯ ಮಣ್ಣಿಗೆ ಕರು ಅಂದರೆ ಕಪ್ಪು ಹಾಗೂ ನಾಡು ಎಂದರೆ ಪ್ರದೇಶ ಎಂದು ಅರ್ಥ ನೀಡುತ್ತದೆ.

ನೃಪತುಂಗನ ಆಸ್ಥಾನದ ಕವಿ ಶ್ರೀ ವಿಜಯನ ಅಲಂಕಾರ ಗ್ರಂಥದ ಕವಿರಾಜ ಮಾರ್ಗದಲ್ಲಿ ಕರ್ನಾಟಕವು ಕಾವೇರಿಯಿಂದ ಗೋದಾವರಿಯರೆಗೆ ಹಬ್ಬಿತ್ತು ಎಂದು ಕವಿ ತನ್ನ ಗ್ರಂಥದಲ್ಲಿ ಬರೆದಿದ್ದಾನೆ.

ಕರ್ನಾಟಕದ ಭೂಗೋಳಶಾಸ್ತ್ರದ ನೋಟ್ಸ್ (Karnataka Geography)


ಏಕಿಕೃತ ವಿಶಾಲ ಮೈಸೂರು

1956ರ ನವೆಂಬರ್ 1ರಂದು ಬಾಂಬೆ, ಹೈದ್ರಾಬಾದ್, ಮದ್ರಾಸ್ ಮತ್ತು ಕೊಡಗು ಪ್ರಾಂತ್ಯದಲ್ಲಿ ಹಂಚಿ ಹೋಗಿತ್ತು ಕನ್ನಡ ಭಾಷೆಯನ್ನು ಮಾತನಾಡುವ ಜನರನ್ನು ಒಂದುಗೂಡಿಸಿ ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು. ಏಕಿಕೃತಗೊಂಡ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಎಸ್ ನಿಜಲಿಂಗಪ್ಪ ಹಾಗೂ ಜಯಚಾಮರಾಜೆಂದ್ರ ಒಡೆಯರ್ ಮೊದಲ ರಾಜ್ಯಪಾಲರಾದರು. ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರು ಆಡಳಿತಾವದಿಯಲ್ಲಿ 1973 ನವೆಂಬರ್ 1 ರಂದು ಕರ್ನಾಟಕ ಎಂಬ ಹೆಸರು ಪಡೆಯಿತು. ಈ ಕರ್ನಾಟಕ ಎಂಬ ಹೆಸರನ್ನು ಸೂಚಿಸಿದವರು ಸಾಹಿತಿಗಳಾದ ಚದುರಂಗ ಅವರು ಸೂಚಿಸಿದರು. 

ಕರ್ನಾಟಕದ ಭೂಗೋಳಶಾಸ್ತ್ರದ ನೋಟ್ಸ್ (Karnataka Geography), Karnataka Geography pdf notes

ಕರ್ನಾಟಕದ ಭೌಗೋಳಿಕ ಸ್ಥಾನ 

ಕರ್ನಾಟಕ ರಾಜ್ಯವು ದೇಶದ 28 ರಾಜ್ಯದಲ್ಲಿ ಒಂದಾಗಿದೆ. ಭಾರತದ ದಕ್ಷಿಣದ ರಾಜ್ಯವಾಗಿದೆ. ಪರ್ಯಾಯ ದ್ವೀಪದ ಪಶ್ಚಿಮದಲ್ಲಿದೆ. ಕರ್ನಾಟಕದ ಅಕ್ಷಾಂಶದ ಸ್ಥಾನ 

ಕರ್ನಾಟಕವು 11°-31ಮತ್ತು 18°-45ಉತ್ತರ ಅಕ್ಷಾಂಶದಲ್ಲಿದೆ ಹಾಗೂ 74°-12ಮತ್ತು 78°-40ಪೂರ್ವ ರೇಖಾಂಶದ ನಡುವೆ ವಿಸ್ತರಿಸಿದೆ. 

ಕರ್ನಾಟಕ ರಾಜ್ಯದ ವಿಸ್ತೀರ್ಣ

ಕರ್ನಾಟಕ 1,91,791ಚ.ಕಿ.ಮೀ ವಿಸ್ತೀರ್ಣ ಒಳಗೊಂಡಿದೆ 2011ರ ಜನಗಣತಿಯಂತೆ ವಿಸ್ತೀರ್ಣದಲ್ಲಿ ಭಾರತದ 8ನೇ ದೊಡ್ಡ ರಾಜ್ಯವಾಗಿದೆ. ಇದು ಭಾರತದ ಒಟ್ಟು ಭೌಗೋಳಿಕ 5.83% ದಷ್ಟು ಒಳಗೊಂಡಿದೆ.

ಕರ್ನಾಟಕದ ತುದಿಗಳು

ಉತ್ತರದ ತುದಿ - ಬೀದರ್ ನ ಔರಾದ್ ತಾಲೂಕ 

ದಕ್ಷಿಣದ ತುದಿ - ಚಾಮರಾಜ ನಗರ ಜಿಲ್ಲೆಯ ಮೋಯರ್ ನದಿ 

ಕರ್ನಾಟಕ ಉತ್ತರ ದಕ್ಷಿಣವಾಗಿ 750 ಕಿಮೀ ಉದ್ದವಿದೆ 

ಪೂರ್ವದಿಂದ - ಪಶ್ಚಿಮವಾಗಿ 400ಕಿಮೀ ಅಗಲವಿದೆ 

ಪೂರ್ವ ತುದಿ - ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು.

ಕರ್ನಾಟಕ ಭೂ ಮತ್ತು ಜಲ ಗಡಿ ಎರಡನ್ನೂ ಹೊಂದಿದೆ. ಹಾಗೂ 320ಕಿಮೀ ಉದ್ದದ ಕರಾವಳಿ ಪ್ರದೇಶ ಒಳಗೊಂಡಿದೆ.

ಹೆಚ್ಚಿನ ಓದು: ಭಾರತದ ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳು

ಕರ್ನಾಟಕದ ನೇರೆಯ ಪ್ರದೇಶಗಳು

ಕರ್ನಾಟಕದ ಪಶ್ಚಿಮಕ್ಕೆ ಅರಬ್ಬಿ ಸಮುದ್ರ, ಉತ್ತರಕ್ಕೆ ಮಹಾರಾಷ್ಟ್ರ , ಪೂರ್ವಕ್ಕೆ ಆಂಧ್ರಪ್ರದೇಶ, ಈಶಾನ್ಯಕ್ಕೆ ತೆಲಂಗಾಣ, ದಕ್ಷಿಣ ಮತ್ತು ಆಗ್ನೇಯಕ್ಕೆ ತಮಿಳುನಾಡು, ನೈರುತ್ಯಕ್ಕೆ ಕೇರಳ, ವಾಯುವ್ಯಕ್ಕೆ ಗೋವಾ ಇದೆ. 

ಕರ್ನಾಟಕದ ಕಿರು ಪರಿಚಯ

ಕರ್ನಾಟಕ ಆಕಾರದಲ್ಲಿ ಗೋಡಂಬಿ ಆಕಾರವನ್ನು ಹೊಂದಿದೆ. ಕರ್ನಾಟಕ ರಾಜ್ಯವು 31 ಜಿಲ್ಲೆಯನ್ನು ಒಳಗೊಂಡಿದೆ. ಕರ್ನಾಟಕದ ರಾಜಧಾನಿ ಬೆಂಗಳೂರು 

ಕರ್ನಾಟಕದಲ್ಲಿ ಬೆಳಗಾವಿ ಜಿಲ್ಲೆಯು ವಿಸ್ತೀರ್ಣದಲ್ಲಿ ಅತಿದೊಡ್ಡ ಜಿಲ್ಲೆಯಾಗಿದೆ. ಬೆಂಗಳೂರು ನಗರ ಅತಿ ಚಿಕ್ಕ ಜಿಲ್ಲೆಯಾಗಿದೆ. ಮೈಸೂರು ಸಾಂಸ್ಕೃತಿಕ ರಾಜಧಾನಿ ಎಂದೆ ಖ್ಯಾತಿ ಪಡೆದಿದೆ.

ಕರ್ನಾಟಕ ಒಟ್ಟು 04 ಕಂದಾಯ ವಿಭಾಗಗಳನ್ನು ಹೊಂದಿದೆ ಅವುಗಳೆಂದರೆ 

1. ಬೆಂಗಳೂರು

2. ಮೈಸೂರು 

3. ಬೆಳಗಾವಿ 

4. ಕಲಬುರ್ಗಿ

ಕರ್ನಾಟಕದ ಸಂಕೇತಗಳು

ಕರ್ನಾಟಕ ರಾಜ್ಯದ ಲಾಂಛನ - ಗಂಡುಬೇರುಂಡ 

ಭಾಷೆ - ಕನ್ನಡ 

ಹಾಡು - ಜಯ ಭಾರತ ಜನನಿಯ ತನುಜಾತೆ 

ನೃತ್ಯ - ಯಕ್ಷಗಾನ 

ರಾಜ್ಯದ ಪ್ರಾಣಿ - ಆನೆ 

ರಾಜ್ಯದ ಪಕ್ಷಿ - ನೀಲಕಂಠ 

ರಾಜ್ಯದ ಹೂವು - ಕಮಲ 

ರಾಜ್ಯದ ಮರ - ಶ್ರೀಗಂಧದ ಮರ 


ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

Call Letter Update of Central and State Government Recruitment