ಕೋಚಿಂಗ್ ಇಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವುದು ಹೇಗೆ ? ಪ್ರಮುಖ ಟಿಪ್ಸ್ಗಳು
ಕೋಚಿಂಗ್ ಇಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಬೇಕು ಎಂಬುವುದು ಹಲವಾರು ಸ್ಪರ್ಧಾರ್ಥಿಗಳ ಗೊಂದಲವಾಗಿದೆ ಆದರೆ ಯಾವುದೇ ಕೋಚಿಂಗ್ ಇಲ್ಲದೆ ಹಲವಾರು ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದಾರೆ ಮುಖ್ಯವಾಗಿ ಈ ಕೆಳಗಿನ 10 ಟಿಪ್ಸ್ಗಳನ್ನು ಫಾಲೋ ಮಾಡಿದರೆ ಖಂಡಿತವಾಗಿಯು ನೀವು ಯಾವುದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬಹುದು.
How to Prepare Competitive Exams Without Coaching
![]() |
How to Prepare Competitive Exams |
1. ಸ್ಪಷ್ಟಗುರಿ
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ತಾವು ಸಾಧಿಸಬೇಕಾದ ಗುರಿಯ ಬಗ್ಗೆ ಸ್ಪಷ್ಟವಾಗಿರಬೇಕು. ನಮ್ಮ ಗುರಿ ಸ್ಪಷ್ಟವಾಗಿ ಇಲ್ಲದಿದ್ದರೆ ಜೀವನದಲ್ಲಿ ಏನನ್ನು ಸಾಧಿಸಲು ಸಾಧ್ಯವಿಲ್ಲ. ಆದರಿಂದ ಯಾವ ವಿದ್ಯಾರ್ಥಿ ತನ್ನ ಕೆಲಸದ ಬಗ್ಗೆ ಸ್ಪಷ್ಟಗುರಿ ಹೊಂದಿರುತ್ತಾನೊ ಅವನ ಸಾಧನೆಯನ್ನು ತಡೆಯಲು ಸಾಧ್ಯವಿಲ್ಲ ಅದರಿಂದ ಜೀವನದಲ್ಲಿ ಯಶಸ್ಸು ಸಾಧ್ಯ.
2. ಸೂಕ್ತವಾದ ಯೋಜನೆ
ಕೇವಲ ಸ್ಪಷ್ಟಗುರಿ ಹೊಂದಿದರೆ ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ಆ ಗುರಿಯನ್ನು ಸಾಧಿಸಲು ಸೂಕ್ತವಾದ ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡಬೇಕು. ನಾವು ಯಾವ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದೆವೆ ಆ ಒಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಬೇಕಾಗುವ ಯೋಜನೆ ರೂಪಿಸಿ ಅಧ್ಯಯನ ಮಾಡುವುದು. ಇದಕ್ಕಾಗಿ ಸೂಕ್ತ ವೇಳಾಪಟ್ಟಿ ರೂಪಿಸಿಕೊಂಡು ಅಧ್ಯಯನ ಕೈಗೊಳ್ಳಬೇಕು.
3. ಪಠ್ಯಕ್ರಮದ ಬಗ್ಗೆ ಮಾಹಿತಿ
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಾಗ ನೀವು ಯಾವ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಿರಿ ಆ ಒಂದು ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮದ ಮಾಹಿತಿ ಇರಬೇಕಾಗುತ್ತದೆ. ಆದ್ದರಿಂದ ಬೇಡದೆ ಇರುವ ವಿಷಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಕ್ಕಿಂತ ಪರೀಕ್ಷೆಗೆ ಎಷ್ಟು ಬೇಕೊ ಅಷ್ಟೆ ಅಧ್ಯಯನ ಮಾಡಬೇಕು.
4. ಪ್ರಶ್ನೆಪತ್ರಿಕೆ ಸ್ವರೂಪದ ಬಗ್ಗೆ ತಿಳುವಳಿಕೆ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಶ್ನೆಪತ್ರಿಕೆ ಸ್ವರೂಪದ ಒಂದೆ ರೀತಿ ಇರುವುದಿಲ್ಲ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರಶ್ನೆಪತ್ರಿಕೆ ಸ್ವರೂಪ ಬೇರೆ ಬೇರೆಯಾಗಿರತ್ತೆ. ಆದರಿಂದ ನಾವು ಯಾವ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸ್ತಾಯಿದ್ದಿವಿ ಆ ಒಂದು ಪರೀಕ್ಷೆಗೆ ಸಂಬಂಧಪಟ್ಟಂತೆ ಪ್ರಶ್ನೆಪತ್ರಿಕೆ ಸ್ವರೂಪದ ಬಗ್ಗೆ ಅದರಲ್ಲಿ ಎಷ್ಟು ಪ್ರಶ್ನೆಗಳಿರುತ್ತವೆ, ಪ್ರತಿ ಪ್ರಶ್ನೆಗೆ ಸಿಗುವ ಅಂಕಗಳೆಷ್ಟು ಮತ್ತು ಎಷ್ಟು ಪ್ರಶ್ನೆಪತ್ರಿಕೆ ಒಳಗೊಂಡಿದೆ, ಪ್ರಶ್ನೆಪತ್ರಿಕೆ ಉತ್ತರಿಸಲು ಎಷ್ಟು ಸಮಯ ಬೇಕು ಎಂಬುದರ ಅರಿವಿರಬೇಕು.
5. 6-12th Books ಓದಿ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಮೊದಲಿಗೆ ಬೇಸಿಕ್ ಆಗಿರುವ ಆರರಿಂದ ಹನ್ನೆರಡನೆ ತರಗತಿಯ ಪುಸ್ತಕಗಳನ್ನು ಕಡ್ಡಾಯವಾಗಿ ಓದಲೇಬೇಕು ಯಾಕೆಂದರೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸುಮಾರು 60 ಪ್ರಶ್ನೆಗಳ ತನಕ ಮುಖ್ಯವಾಗಿ ಈ ಒಂದು ಪುಸ್ತಕದಿಂದ ಬಂದಿರುತ್ತವೆ. ಹಿಗಾಗಿ ವಿದ್ಯಾರ್ಥಿಗಳು 6-12th Books ಗಳನ್ನು ಓದಿ.
6. ವಿಷಯವನ್ನು ಆಳವಾಗಿ ಅಧ್ಯಯನ ಮಾಡಿ
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಾಗ ಹೆಚ್ಚಿನ ವಿದ್ಯಾರ್ಥಿಗಳು All In One GK Books ಒಂದನ್ನೆ ಅಧ್ಯಯನ ಮಾಡುತ್ತಾರೆ ಆದರೆ ಇದು ತಪ್ಪು ಕಲ್ಪನೆ ಆಗಿದೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಲು ಪ್ರತಿಯೊಂದು ವಿಷಯವನ್ನು ಅಧ್ಯಯನ ಮಾಡಬೇಕು ಉದಾಹರಣೆಗೆ:- ಇತಿಹಾಸಕ್ಕೆ ಸಂಬಂಧಿಸಿದಂತೆ ಇತಿಹಾಸದ ಪುಸ್ತಕವನ್ನು ಸಂವಿಧಾನದ ವಿಷಯಕ್ಕೆ ಸಂಬಂಧಿಸಿದಂತೆ ಸಂವಿಧಾನದ ಪುಸ್ತಕವನ್ನು ಹಾಗೂ ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ವಿಜ್ಞಾನದ ಪ್ರತಿಯೊಂದು ವಿಷಯಕ್ಕೆ ಸಂಬಂಧಪಟ್ಟಂತೆ ಆಳವಾಗಿ ಅಧ್ಯಯನ ಮಾಡುವುದರಿಂದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಬಹುದು.
7. ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿರಿ
ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದುರಿಂದ ಪರೀಕ್ಷೆಯಲ್ಲಿ ಯಾವ ರೀತಿ ಪ್ರಶ್ನೆಗಳನ್ನು ಕೆಳಲಾಗುತ್ತದೆ. ಹೇಗೆ ಉತ್ತರಿಸಬೇಕು ಮತ್ತು ಯಾವ ವಿಷಯಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ ಯಾವ ವಿಷಯದ ಮೇಲೆ ಹೆಚ್ಚಿನ ಗಮನ ನೀಡಬೇಕು ಎಂಬದನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಪರೀಕ್ಷೆಯಲ್ಲಿ ಸುಮಾರು 30-40 ಪ್ರಶ್ನೆಗಳು ಬಂದಿರುತ್ತವೆ ಆದರಿಂದ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದು ಉತ್ತಮ.
8. ಮಾಕ್ ಟೆಸ್ಟ್ ಅಟೆಂಡ್ ಮಾಡಿ
ಮುಖ್ಯವಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗಲು ಶಾಲಾ ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಅಣುಕು ಪರೀಕ್ಷೆಗಳಲ್ಲಿ ಭಾಗವಹಿಸಿ ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಯ ವಾತಾವರಣದ ಪರಿಚಯ ಆಗುತ್ತೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಾಮರ್ಥ್ಯ ಬರುತ್ತದೆ ಹಾಗೂ ಕರ್ನಾಟಕದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಆನ್ಲೈನ್ ಮೂಲಕ ಮಾಕ್ ಟೆಸ್ಟ್ ಉಚಿತವಾಗಿ ನಡೆಸುತ್ತಿವೆ ಅದರ ಸದುಪಯೊಗ ಮಾಡಿಕೊಳ್ಳಿ.
9. YouTube ನ ಸದುಪಯೋಗ ಪಡೆದುಕೊಳ್ಳಿ
![]() |
Exam Study Tips |
ಪ್ರಸ್ತುತ ದಿನಗಳಲ್ಲಿ ಡಿಜಿಟಲ್ ಕಲಿಕೆಯಿಂದ ಸಾಕಷ್ಟು ವಿದ್ಯಾರ್ಥಿಗಳು ಯಾವುದೇ ಕೋಚಿಂಗ್ ಸಹಾಯವಿಲ್ಲದೆ ಮೋಬೈಲ್ ಮೂಲಕ YouTube ನಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಸಾಕಷ್ಟು ವಿದ್ಯಾಸಂಸ್ಥೆಯ ಚಾನಲ್ ಗಳು ಉಚಿತವಾಗಿ ಕೋಚಿಂಗ್ ನೀಡುತ್ತಿವೆ. ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮ, ಪ್ರಶ್ನೆಪತ್ರಿಕೆ ಸ್ವರೂಪ, ಪರೀಕ್ಷೆಯನ್ನು ಎದುರಿಸುವ ಪರಿ ವಿಷಯದ ಬಗ್ಗೆ ತಿಳಿಸಲಾಗುತ್ತಿದೆ. ಕರ್ನಾಟಕ ಸರ್ಕಾರ ಯುವಕರ ಒಲವನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆ ಸೆಳೆಯಲು ವಿದ್ಯಾರ್ಥಿಗಳಿಗೆ ಮನೆಯಲ್ಲಿಯೆ ಸ್ಪರ್ಧಾತ್ಮಕ ಪರೀಕ್ಷಗೆ ತಯಾರಾಗಲು ರಾಜ್ಯದ ಅನುಭವಿ ಶಿಕ್ಷಕರಿಂದ ಪಾಠ ಬೋಧಿಸಲು ವಿಜಯಿ ಭವ YouTube ಚಾನಲ್ ಪ್ರಾರಂಭಿಸಿದೆ ಮತ್ತು Digital Library ಮೂಲಕ ವಿದ್ಯಾರ್ಥಿಗಳಿಗೆ ಓದಲು ಅನುವು ಮಾಡಿಕೊಟ್ಟಿದೆ ಅಷ್ಟೆ ಅಲ್ಲದೆ ವಿವಿಧ ಖಾಸಗಿ YouTube Channel ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡುತ್ತಿವೆ ಇದರ ಸಹಾಯ ಪಡೆದುಕೊಳ್ಳಿ. ಮಾನಸಿಕ ಸಾಮರ್ಥ್ಯ ವಿಷಯಗಳಿಗೆ ಸಂಬಂಧಿಸಿದಂತೆ ಯುಟ್ಯೂಬ್ ವಿಡಿಯೋ ಗಳನ್ನು ವಿಕ್ಷೀಸುದರಿಂದ ಹೆಚ್ಚು ಪರಿಣಾಮಕಾರಿಯಾಗಿದೆ. ಆದ್ದರಿಂದ ಮನೆಯಲ್ಲಿಯೆ ಕುಳಿತು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು YouTube ಕಲಿಕೆಯು ಹೆಚ್ಚು ಪರಿಣಾಮಕಾರಿಯಾಗಿದೆ.
10. ಕಲಿಕೆಯಲ್ಲಿ ಆಸಕ್ತಿ ಇರಲಿ
ಕಲಿಯುವಾಗ ಕಲಿಕೆಯಲ್ಲಿ ಆಸಕ್ತಿ ಇರಲಿ ಆಸಕ್ತಿ ಇಲ್ಲದೆ ಎಷ್ಟು ಸಮಯ ಓದಿದರು ವ್ಯರ್ಥ ಹೀಗಾಗಿ ಶ್ರದ್ಧೆಯಿಂದ ಓದಿ ದಿನನಿತ್ಯ ದಿನಪತ್ರಿಕೆ ಓದಿ ದಿನ ಪತ್ರಿಕೆ ಓದಲು ನಿಮ್ಮ ಮನೆಯಲ್ಲಿ ಅನುಕೂಲ ಇಲ್ಲದಿದ್ದರೆ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮತ್ತು ಶಾಲಾ ಕಾಲೇಜುಗಳ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಿ ಓದುವಾಗ ಏಕಾಗ್ರತೆಗಾಗಿ ಯೋಗ ಪ್ರಾಣಾಯಾಮ ಮಾಡಿ ಮತ್ತು ಸಾಧಕರ ಮಾರ್ಗದರ್ಶನ ಪಡೆದುಕೊಳ್ಳಿ.
0 ಕಾಮೆಂಟ್ಗಳು