ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ಭಾರತೀಯ ಅಂಚೆ ಇಲಾಖೆ GDS ನೇಮಕಾತಿ ಹಂತಗಳು

ಭಾರತೀಯ ಅಂಚೆ ಇಲಾಖೆ ಗ್ರಾಮೀಣ ಡಾಕ್ ಸೇವಕ ಹುದ್ದೆಗಳ ಸಂಪೂರ್ಣ ಮಾಹಿತಿ

GDS ಹುದ್ದೆಗಳ ಕಾರ್ಯವೈಖರಿ ಮತ್ತು ಕೆಲಸದ ಅವಧಿಗಳು

BPM (Branch Postmaster)

ಈ ಒಂದು ಹುದ್ದೆಗಳಿಗೆ ಸಂಬಂಧಪಟ್ಟಂತಹ ಕಾರ್ಯವೈಖರಿಯಲ್ಲಿ ಆಫೀಸಿಗೆ ಸಂಬಂಧಪಟ್ಟಂತಹ ವ್ಯವಸ್ಥಾಪಕರ ಕಾರ್ಯಗಳನ್ನು ಒಳಗೊಂಡಿರುತ್ತದೆ

ಉದಾಹರಣೆಗೆ: 

* ಬ್ಯಾಂಕಿಂಗ್ ಆಫೀಸ್ ವರ್ಕ್

* ಸ್ಮಾರ್ಟ್ಫೋನ್ ಮತ್ತು ಕಂಪ್ಯೂಟರ್ ಮುಖಾಂತರ ಅಂಚೆಕಚೇರಿಯ ಕಾರ್ಯಗಳನ್ನು ನಿರ್ವಹಿಸುವುದು

ABPM (Assistant Branch Postmaster)

ಈ ಒಂದು ಹುದ್ದೆಗಳಿಗೆ ಸಂಬಂಧಪಟ್ಟಂತೆ ಕಾರ್ಯವೈಖರಿಯೂ ಆಫೀಸಿಗೆ ಸಂಬಂಧಪಟ್ಟಂತಹ ವ್ಯವಸ್ಥಾಪಕರ ಕಾರ್ಯಗಳಿಗೆ ಸಹಾಯಕರಾಗಿರುತ್ತಾರೆ ಅಂದರೆ ಮುಖ್ಯವಾಗಿ BPM ಅವರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ.

ಉದಾಹರಣೆಗೆ: 

* ಅಂಚೆಚೀಟಿ ಮತ್ತು ಲೇಖನ ಸಾಮಗ್ರಿಗಳ ಮಾರಾಟ

* IPPB ಅಡಿಯಲ್ಲಿ ಪಾವತಿ/ ಮೇಲ್ ವಿತರಣೆ

* ಮೇಲಧಿಕಾರಿಗಳು ಆದೇಶಿಸಿದಾಗ BPM ಗೆ ಸಂಬಂಧಿಸಿದ ಕೆಲವೊಂದು ಕಾರ್ಯಗಳನ್ನು ಮಾಡಬೇಕಾಗುತ್ತೆ


GDS (Gramin Dak Sevak)

ಈ ಒಂದು ಹುದ್ದೆಗಳಿಗೆ ಸಂಬಂಧಿಸಿದಂತೆ ಕೆಲವೊಂದು ವ್ಯವಸ್ಥಾಪಕ ಕಾರ್ಯಗಳು ಹಾಗೂ ವ್ಯವಸ್ಥಾಪಕ ಸಹಾಯಕ ಕಾರ್ಯಗಳು ಮಾಡಬೇಕಾಗುತ್ತೆ

ಉದಾಹರಣೆಗೆ:

* ಅಂಚೆಚೀಟಿಗಳ ಮತ್ತು ಲೇಖನ ಸಾಮಗ್ರಿಗಳ ಮಾರಾಟ

* ಸಂದೇಶಗಳ ರವಾನೆ ಮತ್ತು ವಿತರಣಾ ಕಾರ್ಯಗಳು

* ರೈಲ್ವೆ ಮೇಲ್ ಸೇವೆಗಳಲ್ಲಿ ಇವರು ಮುಖ್ಯವಾಗಿ RMS ನಿರ್ವಹಿಸುವ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ ಉದಾಹರಣೆಗೆ:

*  ಚೀಲಗಳನ್ನು ಮುಚ್ಚುವುದು/ತೆರೆಯುವುದು

* ಚೀಲವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸುವ

GDS ಉದ್ಯೋಗಿಗಳು ಕಾರ್ಯನಿರ್ವಹಿಸುವ ಅವಧಿ

BPM:    4 or Maximum 5 ಗಂಟೆಗಳ ಕಾಲ ಅಂಚೆ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಅವಧಿ
ABPM: 4 or Maximum 5 ಗಂಟೆಗಳ ಕಾಲ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅವಧಿ

GDS ಉದ್ಯೋಗಿಗಳಿಗೆ ನೀಡುವ ವೇತನ ಸೇವೆ ಸೌಲಭ್ಯಗಳು 

ಈ ಒಂದು ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಸಂಬಂಧಪಟ್ಟಂತೆ ಉದ್ಯೋಗಿಗಳಿಗೆ ವೇತನದ ಬದಲು ಅವರು ಕಾರ್ಯನಿರ್ವಹಿಸಿದ ವೇಳೆಗೆ ಅನುಗುಣವಾಗಿ ಅವರಿಗೆ ಗೌರವಧನ ನೀಡಲಾಗುತ್ತದೆ.

BPM: 12,000/- ----- 29,380/-

ABPM / GDS : 10,000/- ----- 24,470/-

* ಈ ಒಂದು BPM and ABPM ಹುದ್ದೆಗಳಿಗೆ ಸಂಬಂಧಪಟ್ಟಂತೆ ಸರ್ಕಾರಿ ನೌಕರಿಗೆ ನೀಡುವ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುವುದಿಲ್ಲ ಈ ಒಂದು ಹುದ್ದೆಗಳಿಗೆ ಗೌರವಧನ ಮಾತ್ರ ನೀಡಲಾಗುತ್ತದೆ.

* ಈ ಒಂದು BPM and ABPM ಹುದ್ದೆಗಳಿಗೆ ಸಂಬಂಧಪಟ್ಟಂತೆ ಪ್ರತಿವರ್ಷ 3% ಗೌರವ ಧನದ ಮೇಲೆ ಇಂಕ್ರಿಮೆಂಟ್ ನೀಡಲಾಗುತ್ತದೆ.


ಈ ಒಂದು ಹುದ್ದೆಗಳು ಪೂರ್ಣಪ್ರಮಾಣದ ಸರ್ಕಾರಿ ಹುದ್ದೆಗಳಾ ಅಥವಾ ತಾತ್ಕಾಲಿಕ ಹುದ್ದೆಗಳಾ? 

ಈ ಒಂದು ಹುದ್ದೆಗಳಿಗೆ ಸಂಬಂಧಪಟ್ಟಂತೆ BPM ಹಾಗೂ ABPM/GDS ಹುದ್ದೆಗಳು ಸರಕಾರಿ ಹುದ್ದೆಗಳ ಆಗಿದ್ದು ಅವಧಿಯ ಆಧಾರದ ಮೇಲೆ ಕಾರ್ಯನಿರ್ವಹಿಸುವುದರ ಮೂಲಕ ಸರ್ಕಾರದಿಂದ ಗೌರವಧನವನ್ನು ಪಡೆಯುವ ಹುದ್ದೆಯಾಗಿದೆ ಇದರಲ್ಲಿ ಮುಖ್ಯವಾಗಿ 65 ವರ್ಷಗಳವರಿಗೆ ಕಾರ್ಯವನ್ನು ನಿರ್ವಹಿಸಬಹುದಾಗಿದೆ ಒಂದು ರೀತಿಯಲ್ಲಿ ಹೇಳಬೇಕಾದರೆ ಇದು ಪರ್ಮನೆಂಟ್ ಜಾಬ್ ಆಗಿದೆ. ಆದರೆ ಮುಖ್ಯವಾಗಿ ಸರ್ಕಾರಿ ನೌಕರರಿಗೆ ಸಿಗುವ ಇತರೆ ಸೌಲಭ್ಯಗಳು ಈ ಒಂದು ಹುದ್ದೆಗಳಿಗೆ ಸಿಗುವುದಿಲ್ಲ.

GDS ಹುದ್ದೆಗಳಿಗೆ ಸಂಬಂಧಪಟ್ಟಂತೆ ಉದ್ಯೋಗಿಗಳ ವರ್ಗಾವಣೆ ಹಾಗೂ ಮುಂಬಡ್ತಿ ( transfer and promotion)

ವರ್ಗಾವಣೆ

ಈ ಒಂದು ಹುದ್ದೆಗಳಿಗೆ ಸಂಬಂಧಪಟ್ಟಂತೆ ವರ್ಗಾವಣೆ ಮತ್ತು ಮುಂಬಡ್ತಿ ಸೌಲಭ್ಯಗಳು ಇರುತ್ತವೆ ಅದು ಹೇಗೆ ಎಂಬುದನ್ನು ನೋಡುವುದಾದರೆ ಕೆಲವೊಂದಿಷ್ಟು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ (ಕನಿಷ್ಠ ಮೂರು ವರ್ಷ) ನಂತರ ಅಭ್ಯರ್ಥಿಯು ಇಚ್ಚಿಸಿದಲ್ಲಿ ಉದ್ಯೋಗಿಗಳನ್ನು ವರ್ಗಾವಣೆ ಮಾಡಬಹುದು. 

ಮುಂಬಡ್ತಿ

ಈ ಒಂದು ಹುದ್ದೆಗಳಿಗೆ ಸಂಬಂಧಪಟ್ಟಂತೆ BPM and ABPM ಉದ್ಯೋಗಿಗಳು ಮುಂಬಡ್ತಿಯನ್ನು ಹೊಂದಲು ಅಂಚೆ ಇಲಾಖೆಯು ನಡೆಸುವ ಹಾಗೂ ಸಿಬ್ಬಂದಿ ನೇಮಕಾತಿ ಆಯೋಗ ನಡೆಸುವ SSC ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದರ ಮೂಲಕ ಮುಂಬಡ್ತಿಯನ್ನು ಹೊಂದಬಹುದಾಗಿದೆ.

GDS ಹುದ್ದೆಗಳ ನೇಮಕಾತಿ ಹಂತಗಳು

1. ಎಸೆಸೆಲ್ಸಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸೆಲೆಕ್ಟ್ ಆದ ಅಭ್ಯರ್ಥಿಗಳಿಗೆ ಮೊದಲು ಎಸ್ಎಂಎಸ್ ಅನ್ನ ಕಳುಹಿಸಲಾಗುತ್ತದೆ.

2. ಎಸೆಸೆಲ್ಸಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸೆಲೆಕ್ಷನ್ ಲಿಸ್ಟ್ ಅನ್ನ ತಯಾರಿಸಲಾಗುತ್ತದೆ.

3. ನಂತರ ಸೆಲೆಕ್ಟ್ ಆದ ಅಭ್ಯರ್ಥಿಗಳಿಗೆ ಡಾಕ್ಯೂಮೆಂಟ್ ವೇರಿಫಿಕೇಶನ್ ಗಾಗಿ ಇಂಟಿಮೇಶನ್ ಲೆಟರ್ ಅನ್ನು ಕಳುಹಿಸಲಾಗುತ್ತದೆ.

4. ಇಂಟಿಮೇಶನ್ ಲೆಟರ್ ಪಡೆದ ಅಭ್ಯರ್ಥಿಗಳು ಡಾಕ್ಯೂಮೆಂಟ್ ವೆರಿಫಿಕೇಶನ್ ಗಾಗಿ ಹೇಳಿದ ದಿನಾಂಕದಂದು ಹಾಜರಾಗಿ ಡಾಕ್ಯೂಮೆಂಟ್ ವೇರಿಫಿಕೇಶನ್ ಮಾಡಿಸತಕ್ಕದ್ದು.

5. ಡಾಕ್ಯುಮೆಂಟ್ ವೆರಿಫಿಕೇಶನ್ ಆದನಂತರ ಪ್ರೋವಿಷನಲ್ ಜೋಯಿನಿಂಗ್ ಆರ್ಡರ್ ನೀಡಲಾಗುತ್ತದೆ.

6. ನಂತರ ಪರಮನೆಂಟ್ ಜೋಯಿನಿಂಗ್ ಆರ್ಡರ್ ನೀಡಲಾಗುತ್ತದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Karnataka 540 Forest Guard Physical Date 2025