Global AI Summit 2025
ಸ್ನೇಹಿತರೆ ಜಾಗತಿಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಶೃಂಗಸಭೆ (AI Summit) ನಲ್ಲಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವುದರ ಮೂಲಕ ಜಗತ್ತಿನ ಪ್ರಸ್ತುತ AI ಬಳಕೆ ಮತ್ತು ಭವಿಷ್ಯದ AI ನ ಮಹತ್ವ ಮತ್ತು ಮುಂದಿನ ದಿನಗಳಲ್ಲಿ ಈ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಯಾವ ರೀತಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ ಎಂಬುದರ ವಿಷಯದ ಕುರಿತು ಚರ್ಚೆ ನಡೆಸಿದ್ದಾರೆ.
![]() |
Global AI Summit in Paris 2025 |
ಪ್ರಮುಖವಾಗಿ ಲಭ್ಯವಿರುವ AI (Artificial intelligence) ಉತ್ತಮವಾಗಿ ಬಳಸಿಕೊಳ್ಳುವುದರ ಮೂಲಕವಾಗಿ ಬೆಳವಣಿಗೆಯನ್ನು ಸಾಧಿಸಲು ವಿವಿಧ ರಾಷ್ಟ್ರಗಳು ಫೆಬ್ರುವರಿ 9, 10, 11 ರಂದು ಪ್ಯಾರಿಸ್ ನಲ್ಲಿ AI ಜಾಗತಿಕ ಶೃಂಗಸಭೆ ನಡೆಸಿವೆ.
AI Summit Paris 2025 🌎
ಸ್ನೇಹಿತರೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ AI ಬಳಸುವುದರ ಮೂಲಕವಾಗಿ ದೇಶದಲ್ಲಿ ಉದ್ಯೋಗಗಳು ನಾಶವಾಗುತ್ತಿವೆ ಎಂಬುದರ ಮಾತಿದೆ ಆದರೆ ನರೇಂದ್ರ ಮೋದಿಯವರು ಎಐ ಬಳಕೆಯ ಮೂಲಕವಾಗಿ ಯಾವುದೇ ಉದ್ಯೋಗದ ನಷ್ಟ ಉಂಟಾಗುವುದಿಲ್ಲ ಬದಲಾಗಿ ಕೆಲಸದ ವಿಧಾನಗಳಲ್ಲಿ ಬದಲಾವಣೆ ಆಗಬಹುದು ಮತ್ತು ಇದರಿಂದಾಗಿ ಹೊಸ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂಬುದನ್ನ ಪ್ರತಿಪಾದಿಸಿದ್ದಾರೆ.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆಯ ಮೂಲಕವಾಗಿ ದೇಶದ ಆರ್ಥಿಕ ಭದ್ರತೆ, ದೇಶದ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗೆ ಇದು ಕಾರಣವಾಗುತ್ತದೆ ಎಂಬುದನ್ನು ಒತ್ತಿ ಹೇಳಿದ್ದಾರೆ. ಈ ಹೊಸ ತಂತ್ರಜ್ಞಾನದಿಂದ ಕೆಲವರು ಉದ್ಯೋಗವಕಾಶಗಳ ನಷ್ಟ ಆಗಬಹುದು ಎಂಬ ಭಯವನ್ನು ಹೊಂದಿದ್ದಾರೆ ಆದರೆ ನಾವು ಈ ಹೊಸ ತಂತ್ರಜ್ಞಾನದ ಮೇಲೆ ನಂಬಿಕೆ ಮತ್ತು ವಿಶ್ವಾಸವನ್ನು ಹೆಚ್ಚಿಸಿ ಇದರ ಸರಿಯಾದ ಬಳಕೆಯ ಕಡೆಗೆ ನಮ್ಮ ನಡೆ ಇರಬೇಕು ಎಂಬುದನ್ನ ತಿಳಿಸಿದ್ದಾರೆ.
AI And Sustainability
"ಜಗತ್ತಿನಲ್ಲಿ ಯಾವುದೇ ಹೊಸ ತಂತ್ರಜ್ಞಾನ ಬಂದರೂ ಕೂಡ ಅದು ಯಾವುದೇ ಉದ್ಯೋಗದ ನಷ್ಟಕ್ಕೆ ಕಾರಣ ಆಗುವುದಿಲ್ಲ ಹೊಸ ರೀತಿಯ ತಂತ್ರಜ್ಞಾನ ಹೊಸ ರೀತಿಯ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ" ಎಂಬುದನ್ನು ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದರು. ಅದಕ್ಕಾಗಿ ನಾವು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಾಕಷ್ಟು ಹೂಡಿಕೆ ಮಾಡುವುದರ ಮೂಲಕ ಅದನ್ನು ಬಲ ಪಡಿಸಬೇಕೆಂದು ತಿಳಿಸಿದರು.
Artificial Intelligence ಈ ಹೊಸ ತಂತ್ರಜ್ಞಾನದ ಬೆಳವಣಿಗೆ ಹೊತ್ತಿನಲ್ಲಿ ಎಲ್ಲರಲ್ಲಿ ವಿಶ್ವಾಸಾರ್ಹತೆ ಹೆಚ್ಚಿಸಲು ಪಾರದರ್ಶಕ ವ್ಯವಸ್ಥೆ ರೂಪಿಸಬೇಕು ಎಂಬುದನ್ನ ಒತ್ತಿ ಹೇಳಿದ್ದಾರೆ. ಉತ್ತಮ ಗುಣಮಟ್ಟದ ದತ್ತಾಂಶ ಸಂಗ್ರಹಣೆ ವ್ಯವಸ್ಥೆ AIನ ಮುಖ್ಯ ಆಧಾರ ಎಂಬುದನ್ನು ಕೂಡ ತಮ್ಮ ಭಾಷಣದ ಮೂಲಕ ವ್ಯಕ್ತಪಡಿಸಿದರು ಜೊತೆಗೆ AI ತಂತ್ರಜ್ಞಾನ ಬೆಳೆಸುವಾಗ ವಿಶ್ವದ ದಕ್ಷಿಣದ ರಾಷ್ಟ್ರಗಳ ಅಗತ್ಯತೆಯನ್ನು ಕೂಡ ಒಳಗೊಂಡಿರಬೇಕು ಎಂಬುದನ್ನು ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ತಿಳಿಸಿದರು.
AI Impact on Global 🌐
ಹೀಗೆ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಕೇವಲ ಕೃತಕ ಬುದ್ಧಿಮತ್ತೆಯ ಅನುಕೂಲತೆಗಳನ್ನು ತಿಳಿಸುವುದಷ್ಟೇ ಅಲ್ಲದೆ. ಕೃತಕ ಬುದ್ಧಿಮತ್ತೆಯ ಕೆಲವೊಂದು ಲೋಪದೋಷಗಳನ್ನು ಕೂಡ ಎತ್ತಿ ಹೇಳಿದರು. ಈ ಎಲ್ಲಾ ಅಂಶಗಳು ಪ್ರಮುಖವಾಗಿ ನಾವು ಕೃತಕ ಬುದ್ಧಿಮತ್ತೆಗೆ ಯಾವ ರೀತಿ ತರಬೇತಿ ನೀಡುತ್ತೇವೆ ಎಂಬುದರ ಮೇಲೆ ನಿಂತಿದೆ ಎಂಬುದನ್ನು ಸ್ಪಷ್ಟಪಡಿಸಿದರು.
0 ಕಾಮೆಂಟ್ಗಳು