KEA ಕಡ್ಡಾಯ ಕನ್ನಡ ಪರೀಕ್ಷೆಯ ತಯಾರಿ ಹೇಗಿರಬೇಕು
ಸ್ನೇಹಿತರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುವ ಮುಂಚೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಹತೆ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಯಾವ ರೀತಿ ತಮ್ಮ ತಯಾರಿ ನಡೆಸಬೇಕು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
![]() |
| How to Prepare KEA Compulsory Kannada |
ಪ್ರಶ್ನೆ ಪತ್ರಿಕೆ ಸ್ವರೂಪ Exam Pattern
- ಒಟ್ಟು ನೂರು ಪ್ರಶ್ನೆಗಳನ್ನು ಒಳಗೊಂಡಿರುತ್ತದೆ
- ಪ್ರತಿಯೊಂದು ಪ್ರಶ್ನೆಗೆ 1.5 ಅಂಕ ನೀಡಲಾಗುತ್ತದೆ
- ಒಟ್ಟು 150 ಅಂಕಗಳಿಗೆ ಈ ಒಂದು ಪರೀಕ್ಷೆಯನ್ನು ನಡೆಸಲಾಗುತ್ತದೆ.
- ಪರೀಕ್ಷೆಯಲ್ಲಿ ಯಾವುದೇ ಋಣಾತ್ಮಕ ಅಂಕಗಳು ಇರುವುದಿಲ್ಲ ಹೀಗಾಗಿ ಅಭ್ಯರ್ಥಿಗಳು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬಹುದು.
- ಪ್ರಶ್ನೆ ಪತ್ರಿಕೆ ಉತ್ತರಿಸಲು 02 ಗಂಟೆ ಅವಕಾಶ ಇದೆ
- ಈ ಪರೀಕ್ಷೆಯಲ್ಲಿ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಹತೆ ಹೊಂದಬೇಕಾದರೆ 150 ಅಂಕಗಳಲ್ಲಿ 50 ಅಂಕಗಳನ್ನು ಗಳಿಸುವುದು ಕಡ್ಡಾಯ.
ವ್ಯಾಕರಣದ ಬಗ್ಗೆ ಅರಿವಿರಲಿ
ಇತ್ತೀಚೆಗೆ ನಡೆದ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕನ್ನಡ ವ್ಯಾಕರಣಕ್ಕೆ ಹೆಚ್ಚು ಒತ್ತನ್ನು ಕೊಟ್ಟಿದೆ ಹೀಗಾಗಿ ಅಭ್ಯರ್ಥಿಗಳು ಕನ್ನಡ ವ್ಯಾಕರಣದಲ್ಲಿ ಬರುವ ಪ್ರಮುಖ ವಿಷಯಗಳಾದ ಕನ್ನಡ ವರ್ಣಮಾಲೆಗಳ ಸಂಪೂರ್ಣ ಮಾಹಿತಿ, ಕನ್ನಡ ವರ್ಣಮಾಲೆಗಳು ಹುಟ್ಟುವ ಮೂಲಗಳು, ಸಂಧಿ, ಸಮಾಸ, ವಚನಗಳು, ವಿಭಕ್ತಿ ಪ್ರತ್ಯಯಗಳು, ಕೃದಂತ, ತದ್ದಿತಾಂತ, ಅಲಂಕಾರ ಮುಂತಾದ ವ್ಯಾಕರಣಗಳ ಕುರಿತು ಸಂಪೂರ್ಣವಾದ ಮಾಹಿತಿ ಇರಲಿ.
ಕನ್ನಡದ ಪದಗಳ ಸಂಗ್ರಹಣೆ ಇರಲಿ
ಪರೀಕ್ಷೆಗೆ ಕೇವಲ ಕನ್ನಡ ವ್ಯಾಕರಣ ಅಷ್ಟೇ ಅಲ್ಲದೆ ಕನ್ನಡದ ಪದಗಳ ಸಂಗ್ರಹಣೆ ಇರಬೇಕು ಈ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಾಗೂ ಈ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಬೇರೆ ಭಾಷೆಯ ಪದಗಳು, ಅಚ್ಚಗನ್ನಡ ಪದಗಳು ಯಾವುವು ಎಂಬುದರ ಮೇಲೆ ಪ್ರಶ್ನೆಗಳು ಬರುತ್ತವೆ. ಕನ್ನಡದ ಸಾಹಿತ್ಯಿಕ ಶಬ್ದಗಳ ಅರ್ಥ ಹಾಗೂ ನುಡಿಗಟ್ಟುಗಳ ಅರ್ಥ, ತತ್ಸಮ ತದ್ಭವ, ವಿರುದ್ಧಾರ್ಥಕ ಶಬ್ದಗಳು, ಸಮನಾರ್ಥಕ ಶಬ್ದಗಳು, ದ್ವಿರುಕ್ತಿ, ಅನುಕರಣಾವ್ಯಯಗಳು ಮುಂತಾದ ಪ್ರಶ್ನೆಗಳು ಭಾಷಾಜ್ಞಾನಕ್ಕೆ ಸಂಬಂಧಿಸಿದಂತೆ ಕಡ್ಡಾಯವಾಗಿ ಪ್ರಶ್ನೆ ಪತ್ರಿಕೆಯಲ್ಲಿ ಇದ್ದೇ ಇರುತ್ತವೆ.
ಕನ್ನಡ ಸಾಹಿತ್ಯ ಓದುವ ಹವ್ಯಾಸ ಇರಲಿ
ಪ್ರಶ್ನೆ ಪತ್ರಿಕೆಯಲ್ಲಿ ಕೇವಲ ಕನ್ನಡ ವ್ಯಾಕರಣ ಹಾಗೂ ಭಾಷಾಜ್ಞಾನದ ವಿಷಯಗಳನ್ನು ಹೊರತುಪಡಿಸಿ ಕನ್ನಡ ಭಾಷೆಗೆ ಸಂಬಂಧಪಟ್ಟಂತೆ ಸಾಹಿತ್ಯ ಚರಿತ್ರೆಯ ಬಗ್ಗೆ ವಿವಿಧ ಲೇಖಕರು ಬರೆದಿರುವ ವಿವಿಧ ಪುಸ್ತಕಗಳು ಮತ್ತು ಸಾಹಿತಿಗಳ ಜೀವನ ಚರಿತ್ರೆ ಹಾಗೂ ಅವರಿಗೆ ಸಂದಿರುವ ಪ್ರಶಸ್ತಿಗಳು, ಬಿರುದುಗಳು, ಅಂಕಿತನಾಮ ಮುಂತಾದ ಪ್ರಶ್ನೆಗಳನ್ನು ಕೇಳುತ್ತಾರೆ ಹೀಗಾಗಿ ಎಲ್ಲಾ ಸಾಹಿತಿಗಳ ಮಾಹಿತಿ ಕಲೆಹಾಕಿ ಓದುವುದು ಕಷ್ಟ ಎನಿಸಿದರು ಕೂಡ ಪ್ರಮುಖ ಸಾಹಿತಿಗಳಾದ :- ಕುವೆಂಪು, ತೇಜಸ್ವಿ, ದ ರಾ ಬೇಂದ್ರೆ, ಶಿವರಾಮ ಕಾರಂತ, ಗಿರೀಶ್ ಕಾರ್ನಾಡ್, ವೈದೇಹಿ (ಜಾನಕಿ ಶ್ರೀನಿವಾಸ್ ಮೂರ್ತಿ), ಅನುಪಮಾ ನಿರಂಜನ್, ಸಾರಾ ಅಬೂಬಕ್ಕರ್, ಡಿವಿಜಿ, ವಿ ಕೃ ಗೋಕಾಕ್, ಡಿಎಸ್ ಕರ್ಕಿ, ಕೆ ಎಸ್ ನಿಸಾರ್ ಅಹಮದ್, ಚಂದ್ರಶೇಖರ್ ಕಂಬಾರ, ಹಾಗೂ ಹಳೆಗನ್ನಡದ ಕವಿಗಳಾದ ಪಂಪ, ರನ್ನ ಜನ್ನ, ನಾಗವರ್ಮ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ, ಕೇಶಿರಾಜ, ಭಟ್ಟಳಂಕ ಮುಂತಾದ ಕವಿ ಪರಿಚಯ ಇರಲಿ
ಕರ್ನಾಟಕದ ಇತಿಹಾಸ ನೆನಪಿರಲಿ
ಸಾಮಾನ್ಯ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಹಾಗೂ ಕಡ್ಡಾಯ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಕರ್ನಾಟಕದ ಇತಿಹಾಸದ ಬಗ್ಗೆ ಪ್ರಶ್ನೆಗಳು ಇದ್ದೇ ಇರುತ್ತವೆ ಮತ್ತು ಇಂತಹ ಪ್ರಶ್ನೆಗಳು ನಿಮ್ಮ ಅಂಕಗಳನ್ನು ಹೆಚ್ಚಿಸುತ್ತದೆ. ಉದಾಹರಣೆಗೆ : ಕರ್ನಾಟಕದ ವಿವಿಧ ರಾಜವಂಶಗಳು ಮತ್ತು ಅವರ ಕೊಡುಗೆ, ಸಾಹಿತ್ಯದ ಚರಿತ್ರೆ, ಧಾರ್ಮಿಕ ಚರಿತ್ರೆ, ರಾಜರ ಬಿರುದುಗಳ ಮೇಲೆ ಪ್ರಶ್ನೆ ಕೇಳಲಾಗುತ್ತದೆ.
ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ
ಅಭ್ಯರ್ಥಿಗಳು ಮುಖ್ಯವಾಗಿ ಪ್ರಶ್ನೆ ಪತ್ರಿಕೆಗಳನ್ನು ಸಾಕಷ್ಟು ಬಿಡಿಸುವುದರ ಮೂಲಕ ಪ್ರಶ್ನೆಗಳು ಯಾವ ರೀತಿ ಬರುತ್ತವೆ ? ಯಾವ ರೀತಿ ಕೇಳಬಹುದು ? ಎಂಬುದರ ಮೇಲೆ ಹಿಡಿತ ಸಾಧಿಸುವುದರ ಮೂಲಕ ಅತಿ ಹೆಚ್ಚು ಅಂಕ ಗಳಿಸಲು ಇದು ಸಹಕಾರಿಯಾಗುತ್ತದೆ. ಆದ್ದರಿಂದ ಸಾಕಷ್ಟು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದರ ಮೂಲಕ ನಿಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಬಹುದು.

0 ಕಾಮೆಂಟ್‌ಗಳು