ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ದೇಶದಲ್ಲಿಯೇ ಅತ್ಯಂತ ಮೌಲ್ಯಯುತವಾದ ಬ್ರಾಂಡ್ ಟಾಟಾ | ರತನ್ ಟಾಟಾ ಅವರ ಕುರಿತಾದ ರೋಚಕ ಸಂಗತಿಗಳು

ರತನ್ ಟಾಟಾ ಅವರ ಬಗ್ಗೆ ನೀವು ಅರಿಯದ ರೋಚಕ ಸಂಗತಿಗಳು 

ಸ್ನೇಹಿತರೆ ದೇಶದ ಮೌಲ್ಯಯುತವಾದ ಆಸ್ತಿ ಎಂದೇ ಕರೆಯುವ ಟಾಟಾ ಕಂಪನಿಯ ಮುಖ್ಯಸ್ಥರು ಪದ್ಮವಿಭೂಷಣ ರತನ್ ಟಾಟಾ ನಮ್ಮನ್ನು ಅಗಲಿದ್ದಾರೆ. ದೇಶದಲ್ಲಿಯೇ ಪ್ರತಿಷ್ಠಿತವಾದ ಮತ್ತು ಹೆಮ್ಮೆಯ ಟಾಟಾ ಕಂಪನಿಯನ್ನು ಕಟ್ಟಲು ರತನ್ ಟಾಟಾ ಅವರ ಕೊಡುಗೆ ಅಪಾರ. ಭಾರತೀಯ ಉದ್ಯಮ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿರುವ ರತನ್ ಟಾಟಾ ಅವರು ಒಬ್ಬ ಶ್ರೇಷ್ಠ ಉದ್ಯಮಿ ಅಷ್ಟೇ ಅಲ್ಲದೆ ಕರುಣಾಮಯಿ ಮತ್ತು ಮಾತೃ ಹೃದಯಿ ಆಗಿದ್ದರು ತಮ್ಮ ಸಂಪಾದನೆಯ 60ರಿಂದ 70ರಷ್ಟು ಲಾಭವನ್ನು ದೇಶದ ಪ್ರಗತಿಗಾಗಿ ಖರ್ಚು ಮಾಡುತ್ತಿದ್ದರು ಇಂತಹ ರತನ್ ಟಾಟಾ ಅವರ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ. 

ದೇಶದಲ್ಲಿಯೇ ಅತ್ಯಂತ ಮೌಲ್ಯಯುತವಾದ ಬ್ರಾಂಡ್ ಟಾಟಾ | ರತನ್ ಟಾಟಾ ಅವರ ಕುರಿತಾದ ರೋಚಕ ಸಂಗತಿಗಳು
Ratan Tata

ದೇಶದಲ್ಲಿಯೇ ಅತ್ಯಂತ ಮೌಲ್ಯಯುತವಾದ ಬ್ರಾಂಡ್ ಟಾಟಾ 

ಸ್ನೇಹಿತರೆ ಭಾರತ ದೇಶದಲ್ಲಿ ಅತ್ಯಂತ ಮೌಲ್ಯಯುತವಾದ ಪ್ರತಿಷ್ಠೆಯ ಬ್ರಾಂಡ್ ಇದ್ದರೆ ಅದು ಟಾಟಾ ಕಂಪನಿ. ಟಾಟಾ ಕಂಪನಿಯು ಕೇವಲ ಒಂದು ಉದ್ಯಮ ಕ್ಷೇತ್ರದಲ್ಲಿ ತೊಡಗದೆ ಹಲವಾರು ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡುವುದರ ಮೂಲಕವಾಗಿ ಆ ಕ್ಷೇತ್ರದಲ್ಲಿ ಯಾವಾಗಲೂ ನಂಬರ್ ಒನ್ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಜನರ ಭರವಸೆಯನ್ನು ಕಾಯ್ದುಕೊಂಡಿದೆ. 

ಹಲವು ಕ್ಷೇತ್ರಗಳಲ್ಲಿ ಉದ್ಯಮ 

ಉದ್ಯಮದ ಎಲ್ಲಾ ಕ್ಷೇತ್ರಗಳಲ್ಲಿ ಟಾಟಾ ಕಂಪನಿ ತೊಡಗಿಕೊಂಡಿದೆ. ಟಾಟಾ ಕಂಪನಿಯ ಇನ್ನಿತರ ಕಂಪನಿಗಳ ಕುರಿತು ಹೇಳುತ್ತಾ ಹೋದರೆ ಒಂದು ದೊಡ್ಡ ಪಟ್ಟಿಯನ್ನೇ ಮಾಡಬೇಕಾಗುತ್ತದೆ ಅಷ್ಟು ಉದ್ಯಮದ ವಿವಿಧ ಕ್ಷೇತ್ರದಲ್ಲಿ ಟಾಟಾ ಕಂಪನಿಯು ತನ್ನನ್ನು ತಾನು ತೊಡಗಿಸಿಕೊಂಡಿದೆ. 

ಟಾಟಾ ಕಂಪನಿಯ ವಿವಿಧ ಕ್ಷೇತ್ರದ ಕಂಪನಿಗಳು 

ರಕ್ಷಣಾ ಕ್ಷೇತ್ರದಲ್ಲಿ ಟಾಟಾ : Tata Advanced System 
ಜಾಗತಿಕ ವ್ಯಾಪಾರ : Tata International Group
IT ಉದ್ಯಮ : Tata Consultancy Services : it was started in 2004 (India's one of the biggest software company)
Tata Iron and Steel
Tata Projects 
Power and Electronics 
Tata Motors
Tata Digital
Tata Chemicals
Air India : ವಿಮಾನಯಾನ ಸಂಸ್ಥೆ
Indian Hotel Company
Vistar 
Tata Play in Entertainment Sector
Taj Hotel Mumbai 
Tata Food and Beverages 
Tata Housing, Tata Finance, etc 

ಜೀವನ ಚರಿತ್ರೆ 

ರತನ್ ಟಾಟಾ ಅವರು ಹುಟ್ಟಿದ್ದು 1937 Dec 28 ರಂದು ಮುಂಬೈನಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶಿಮ್ಲಾದಲ್ಲಿ ಪೂರೈಸಿ, ನಂತರ ತಮ್ಮ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಗೆ ತೆರಳಿದರು. ಅಮೆರಿಕಾದಲ್ಲಿ ಒಂದು ಹುಡುಗಿಯನ್ನು ಪ್ರೀತಿಸಿದ್ದ ರತನ್ ಟಾಟಾ ಅವರು ಅವರನ್ನ ಮದುವೆಯಾಗುವ ಇಚ್ಛೆ ಇತ್ತು ಆದರೆ ಇದಕ್ಕೆ ಹುಡುಗಿಯ ಮನೆಯವರಿಗೆ ತಮ್ಮ ಮಗಳು ಭಾರತಕ್ಕೆ ಹೋಗುವುದು ಇಷ್ಟ ಇರಲಿಲ್ಲ ಮತ್ತು 1962ರಲ್ಲಿ ಭಾರತ ಮತ್ತು ಚೀನಾ ನಡುವಿನ ಯುದ್ಧ ಸಂಭವಿಸಿದ್ದರಿಂದ ತಮ್ಮ ಮಗಳನ್ನು ಭಾರತಕ್ಕೆ ಕಳುಹಿಸಲು ಹುಡುಗಿಯ ಮನೆ ಕಡೆಯವರು ಒಪ್ಪಲಿಲ್ಲ ಹೀಗಾಗಿ ರತನ್ ಟಾಟಾ ಅವರು ಮದುವೆ ಆಗದೆಯೇ ಉಳಿದರು. ಯಾರಾದರೂ ಟಾಟಾ ಅವರಿಗೆ ನಿಮ್ಮ ಫ್ಯಾಮಿಲಿ ಇಲ್ಲ ಎಂದು ಹೇಳಿದರೆ ಅವರು ದೇಶದ ಜನತೆಯೇ ನನ್ನ ಫ್ಯಾಮಿಲಿ ಎನ್ನುತ್ತಿದ್ದರು. ರತನ್ ಟಾಟಾ ಅವರು ಟಾಟಾ ಸನ್ಸ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದು 1991ರಲ್ಲಿ ಇದಾದ ನಂತರ ನಡೆದದ್ದು ಇತಿಹಾಸ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Call Letter Update of Central and State Government Recruitment