ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

X-ray Polarimeter Satellite (XPoSat) Information in Kannada

 X-ray Polarimeter Satellite (XPoSat) ಕುರಿತು ಕನ್ನಡದಲ್ಲಿ ಸಂಪೂರ್ಣ ಮಾಹಿತಿ 

ಸ್ನೇಹಿತರೆ ಹೂಸ ವರ್ಷದ ಜನವರಿ ೧ ರಂದು ಇಸ್ರೋದ X-ray Polarimeter Satellite (XPoSat) ಅನ್ನು ಆಂಧ್ರಪ್ರದೇಶದ ಬಾಹ್ಯಾಕಾಶ ಉಡಾವಣಾ ಕೇಂದ್ರ ಶ್ರೀ ಹರಿಕೊಟಾದಿಂದ ಉಡಾವನೆ ಮಾಡಲಾಯಿತು. ಈ ಯೋಜನೆಯ ಪ್ರಮುಖ ಉದ್ದೆಶಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದ್ದು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಿದೆ. 


X-ray Polarimeter Satellite (XPoSat) Information in Kannada
XPoSat


ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ರಾಮನ್‌ ರೀಸರ್ಚ ಇನ್ಸ್ಟಿಟ್ಯುಟ್‌ನೊಂದಿಗೆ ಮತ್ತು ಯು. ಆರ್‌. ರಾವ್‌ ಸ್ಪೇಸ್‌ ಸೆಂಟರ್‌ ಅವರೊಂದಿಗೆ ಕೂಡಿ ಈ ಒಂದು ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯು ತೀವ್ರ ಪರಿಸ್ಥಿತಿಯಲ್ಲಿ ಪ್ರಕಾಶಮಾನವಾದ ಖಗೋಳ ಎಕ್ಸ್-ರೇ ಮೂಲಗಳ ವಿವಿಧ ಡೈನಾಮಿಕ್ಸ್‌ ಅನ್ನು ಅಧ್ಯಯನ ಮಾಡುತ್ತದೆ. 

ಸಾಧನೆ 

ಎಕ್ಸ್‌ ರೇ ಪೋಲಾರಿಮೀಟರ್‌ ಉಪಗ್ರಹವನ್ನು 2024 ಜನವರಿ 1ನೇ ತಾರಿಖಿನಂದು ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಇದು ಅಮೇರಿಕಾದ 2021 ರ ನಾಸಾದ ಇಮೇಜಿಂಗ್‌ ಎಕ್ಸ್‌ ರೇ ಪೋಲಾರಿಮೆಟ್ರಿ ಎಕ್ಸ್ ಪ್ಲೋರರ್‌ IXPE (Imaging X-Ray Polarimeter Explorer)  ಹೋರತುಪಡಿಸಿ ವಿಶ್ವದ ಎರಡನೇಯ ಧ್ರುವೀಯ ಮಿಷನ್‌ ಆಗಿದೆ. ಇಸ್ರೋದ ಈ ಒಂದು ಯೋಜನೆ ತಿವ್ರವಾದ ಪರಿಸ್ಥತಿಗಳಲ್ಲಿ ಪ್ರಕಾಶಮಾನವಾದ ಖಗೋಳ ಎಕ್ಸ್‌ ರೇ ಮೂಲಗಳನ್ನು ಅಧ್ಯಯನ ಮಾಡುತ್ತದೆ. 

XPoSat ಏನನ್ನು ಒಳಗೊಂಡಿದೆ. 

ಮುಖ್ಯವಾಗಿ ಈ ಒಂದು ಉಪಗ್ರಹ POLIX (Polarimeter Instrument in x-ray) ಪ್ರಾಥಮಿಕ ಪೆಲೋಡ್ ಆಗಿದೆ.‌ ಇದನ್ನು ಅಭಿವೃದ್ಧಿ ಪಡಿಸಿದವರು ರಾಮನ್‌ ರೀಸರ್ಚ ಇನ್ಸ್ಟಿಟ್ಯುಟ್‌   ಮತ್ತು  XSPECT (X - ray Spectroscopy and Timing) ಪೆಲೋಡ್‌ಗಳನ್ನು ಹೊಂದಿದೆ. ಇದನ್ನು ಅಭಿವೃದ್ಧಿ ಪಡಿಸಿದವರು ಯು. ಆರ್‌. ರಾವ್‌ ಸ್ಪೇಸ್‌ ಸೆಂಟರ್‌ 


X-ray Polarimeter Satellite (XPoSat) Information in Kannada
ISRO XPoSat

ಪ್ರಮುಖ ಕಾರ್ಯಗಳು

  • ಯೋಜಿತ ಐದು ವರ್ಷಗಳ ಕಾರ್ಯಾಚರಣೆಯಲ್ಲಿ POLIX ವಿವಿಧ ವರ್ಗಗಳ 40 ಪ್ರಕಾಶಮಾನವಾದ ಖಗೋಳ ಮೂಲಗಳನ್ನು ವಿಕ್ಷಿಸಬಹುದು.
  • XSPECT ಇದು ಪಲ್ಸರ್ಗಳು, ಬ್ಲಾಕ್‌ ಹೊಲ್‌ ಬೈನರಿ, ನ್ಯೂಟಾನ್‌ ನಕ್ಷತ್ರಗಳು ಮುಂತಾದ ಖಗೋಳ ಕಾಯಗಳ ಕಿರಣಗಳ ಹೋರ ಸೂಸುವಿಕೆ ಬಗ್ಗೆ ಅಧ್ಯಯನ ಮಾಡುತ್ತದೆ. ಅಂದರೆ ಇಲ್ಲಿ ಬೆಳಕು ಹೇಗೆ ಹಿರಿಕೋಳ್ಳುತ್ತದೆ ಮತ್ತು ಹೋರಸೂಸುತ್ತದೆ ಎಂಬುವುದನ್ನು ಮಾಹಿತಿ ನೀಡುತ್ತದೆ.  


ಪ್ರಮುಖ ಮಾಹಿತಿಗಳು

  • ಬಳಸಲಾದ ರಾಕೇಟ್ : PSLV C-58 (Polar Satellite Launch Vehicle) ‌ಇದು 60Th ಲಾಂಚ್‌ ವೇಹಿಕಲ್‌ ಆಗಿದೆ. 
  • ಲಾಂಚ್‌ ವೇಹಿಕಲ್‌ ಎತ್ತರ : 44.4 Meter
  • ಕೊಂಡೊಯ್ಯಬಲ್ಲ ತೂಕದ ಸಾಮರ್ಥ್ಯ : 260 ಟನ್‌ 
  • Propulsion Stages : 4 stages
  • XPoSat Orbit : 7028.317KM and 650.18KM from Equatorial 
  • Inclination : 6.0 Degree 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Call Letter Update of Central and State Government Recruitment