ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ಕಂದಾಯ ಕಾನೂನು ಕುರಿತು ಸಂಪೂರ್ಣ ಮಾಹಿತಿ ಕನ್ನಡದಲ್ಲಿ

ಕಂದಾಯ ಕಾನೂನು (Revenue Law) 

ಸ್ನೇಹಿತರೆ ಕಂದಾಯ ಕಾನೂನು ಗ್ರಾಮ ಲೆಕ್ಕಾಧಿಕಾರಿ (ಗ್ರಾಮ ಆಡಳತ ಅಧಿಕಾರಿ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 25 ಪ್ರಶ್ನೇಗಳನ್ನು ಕೇಳಲಾಗುತ್ತದೆ ಕಂದಾಯ ಕಾನೂನು ಎಂದರೇನು ? ಕಂದಾಯ ಇಲಾಖೆಯು ಯಾವ ರೀತಿ ಕೆಲಸ ಮಾಡುತ್ತದೆ ಮತ್ತು ಕಂದಾಯ ಅಧಿಕಾರಿಗಳ ಕೆಲಸ ಏನು ? ಅವರ ಹಕ್ಕು ಮತ್ತು ಕರ್ತವ್ಯಗಳು ಹಾಗೂ ಜವಾಬ್ದಾರಿ ಏನು ? ಗ್ರಾಮ ಮಟ್ಟದಲ್ಲಿನ ಆಡಳಿತ ಕುರಿತು ಯಾವ ಯಾವ ವಿಷಯಗಳನ್ನು ಓದಿಕೋಳ್ಳಬೇಕು ಎಂಬುದನ್ನು ನೊಡೋಣ. 


ಕಂದಾಯ ಕಾನೂನು ಕುರಿತು ಸಂಪೂರ್ಣ ಮಾಹಿತಿ ಕನ್ನಡದಲ್ಲಿ, Revenue Law in Kannada
village Accountant


ಭೂ ಕಂದಾಯ ಅಧಿನಿಯಮ 1964

ಈ ಪರೀಕ್ಷೆಗೆ ಇರುವ ಕಂದಾಯ ಕಾನೂನು ಕರ್ನಾಟಕ ಭೂ ಕಂದಾಯ ಅಧಿನಿಯಮ ೧೯೬೪ ಎಂದು ಕರೆಯತ್ಕದ್ದು. ಇದು ಈಡಿ ಕರ್ನಾಟಕ ರಾಜ್ಯಕ್ಕೆ ವ್ಯಾಪ್ತವಾಗತಕ್ಕದ್ದು. ಇದರ ಪ್ರಾರಂಭ ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದ ದಿನಾಂಕದಂದು ಜಾರಿಗೆ ಬರತಕ್ಕದ್ದು. 

ಪ್ರಮುಖವಾಗಿ ಈ ಒಂದು ಪರೀಕ್ಷೆಯ ಕಂದಾಯ ಕಾನೂನಿಗೆ ಸಂಬಂಧಿಸಿದಂತೆ ವಿವಿಧ ಪರಿಭಾಷೆಗಳ ಬಗ್ಗೆ ತಿಳಿದುಕೊಳ್ಳಬೆಕಾಗುತ್ತದೆ.
ಉದಾಹರಣೆಗೆ : ವರ್ಗಾವಣೆ ಮಾಡಿದ, ಕಟ್ಟಡ ನಿವೇಷನ , ಎಲ್ಲೆಗೆರೆ ಗುರುತು (ಸಿಮೆ), ಪ್ರಮಾಣಿಕೃತ ನಕಲು, ಚಾವಡಿ, ನಗರ, ಭೂಮಿಯ ವರ್ಗ, ಭೂಮಿ, ಭೂದಾಖಲೆಗಳು, ಭೂ ಮಾಲಿಕ, ಸ್ಥಳೀಯ ಪ್ರಾಧಿಕಾರ, ಗೇಣಿ, ಗೇಣಿ ಮೌಲ್ಯ, ಕಂದಾಯ, ಕಂದಾಯ ವ್ಯವಸ್ಥೆ ಮುಂತಾದವುಗಳ ಪರಿಭಾಷೆಗಳ ಬಗ್ಗೆ ಅರಿವು ಇರಬೇಕು ಏಕೆಂದರೆ ಪ್ರತಿ ಗ್ರಾಮ ಮಟ್ಟದ ಆಡಳಿತದಲ್ಲಿಈ ಪದಗಳು ಹೆಚ್ಚಾಗಿ ಬಳಕೆಯಲ್ಲಿರುತ್ತವೆ ಆದ್ದರಿಂದ ಪರೀಕ್ಷಾ ದೃಷ್ಟಿಯಿಂದ ಇವುಗಳನ್ನು ತಿಳಿದುಕೋಳ್ಳ ಬೇಕಾಗುತ್ತದೆ. 

ರೆವೆನ್ಯೂ ಅಧಿಕಾರಿಗಳ ನೇಮಕಾತಿ ಮತ್ತು ಅವರ ಅಧಿಕಾರಗಳು ರೆವೆನ್ಯೂ ಅಧಿಕಾರಿಗಳ ವ್ಯಾಪ್ತಿ, ಹಕ್ಕು ಮತ್ತು ದಾಖಲೆಗಳನ್ನಿಡುವುದು ಭೂ ಕಂದಾಯ, ಮುಂತಾದ ಗ್ರಾಮ ಆಡಳಿತಕ್ಕೆ ತಕ್ಕಂತೆ ವಿವಿಧ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕು. 


ರೆವಿನ್ಯೂ ಅಧಿಕಾರಿಗಳು ಅಂದರೆ  ಯಾರು ? 

ಒಂದು ರಾಜ್ಯವನ್ನು ಪ್ರದೇಶವನ್ನಾಗಿ ಪ್ರದೇಶವನ್ನು ಜಿಲ್ಲೆಗಳಾಗಿ ಜಿಲ್ಲೆಗಳಲ್ಲಿ ಹೋಬಳಿಗಳು ಮತ್ತು ಗ್ರಾಮಗಳನ್ನೂಳಗೊಂಡ ತಾಲೂಕುಗಳು ಇರುತ್ತವೆ. ರೀಜನಲ್‌ ಕಮೀಷನರ್‌ ನೇಮಕ, ಉಪ ಕಮಿಷನರ್, ಅಸಿಸ್ಟೆಂಟ್‌ ಕಮಿಷನರ್‌, ತಹಶಿಲ್ದಾರ, ವಿಶೇಷ ತಹಶಿಲ್ದಾರರು, ರೆವಿನ್ಯೂ ಇನ್‌ಸ್ಪೆಕ್ಟರ್ ಮತ್ತು ಗ್ರಾಮ ಮಟ್ಟದಲ್ಲಿ ಗ್ರಾಮ ಲೆಕ್ಕಾಧಿಕಾರಿ ಈ ಹುದ್ದೆಗಳ ನೇಮಕ ಮತ್ತು ಅಧಿಕಾರಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. 

ಇತರೆ ಅಂಶಗಳು 

  • ರೆವಿನ್ನೂ ಅಧಿಕಾರ ವ್ಯಾಪ್ತಿ
  • ಭೂಮಿ ಮತ್ತು ಭೂ ಕಂದಾಯ ಭೂಮಿ
  • ಭೂ ಕಂದಾಯ ವ್ಯವಸ್ಥೆ
  • ಭೂ ಕಂದಾಯ ಮತ್ತು ಇತರೆ ತಗಾದೆಗಳ ವಸೂಲಿ
  • ಭೂಮಿಯ ಮೋಜಣಿ ಮತ್ತು ಎಲ್ಲೆ ಗುರುತುಗಳ ಬಗೆಗಿನ ವಿವಾಧಗಳ ಇತ್ಯರ್ಥ
  • ಇತರೆ ಭೂ ಕಂದಾಯ ವ್ಯವಸ್ಥೆಗೆ ಸಂಬಂಧಿಸಿದ ವಿಷಯ 


ಕರ್ನಾಟಕ ಕಂದಾಯ ಇಲಾಖೆಯಲ್ಲಿನ ಗ್ರಾಮ ಲೆಕ್ಕಾಧಿಕಾರಿ (ಗ್ರಾಮ ಆಡಳಿತ ಅಧಿಕಾರಿ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇಲಾಖೆ ಸಿದ್ಧಪಡಿಸಿದ ಎಕ್ಸಾಮ್‌ ಪ್ಯಾಟರ್ನ ಕುರಿತು ಯಾವ ವಿಷಯಗಳಲ್ಲಿ ಏನೇನು ಓದಬೇಕು ಎಂಬುದನ್ನು ಕೆಳಗೆ ನೀಡಿರುವ ಸಿಲಬಸ್‌ ಮೇಲೆ ಕ್ಲೀಕ್‌ ಮಾಡಿ ನೋಡಬಹುದು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Call Letter Update of Central and State Government Recruitment