ಭಾರತೀಯ ಸೇನಾ ನೇಮಕಾತಿ ಅಗ್ನಿಪಥ ಯೋಜನೆಯ ಮಾಹಿತಿ
ಭಾರತೀಯ ಸೇನಾ ನೇಮಕಾತಿಯಲ್ಲಿ ಅಗ್ನಿಪಥ ಯೋಜನೆಯು ಬದಲಾವಣೆಯ ನೇಮಕಾತಿಯಾಗಿದೆ. ಈಗಿರುವ ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಅಂದರೆ ಯಾವ ರೀತಿ ರ್ಯಾಲಿಗಳ ಮೂಲಕ ನೇಮಕಾತಿ ನಡೆಯುತ್ತಿತ್ತು ನಂತರ ವೈದ್ಯಕೀಯ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿತ್ತು ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಒಂದು ಅಗ್ನಿಪಥ ಯೋಜನೆಯಲ್ಲಿ ವರ್ಷಕ್ಕೆ 45,000 ಸಾವಿರಕ್ಕಿಂತ ಹೆಚ್ಚು ಅಗ್ನಿವೀರರ ನೇಮಕಾತಿ ನಡೆಯಲಿದೆ. ಅಗ್ನಿಪಥ ಯೋಜನೆಯಲ್ಲಿ ನೇಮಕಾತಿ ಹೊಂದುವ ಅಭ್ಯರ್ಥಿಗಳಿಗೆ ಅಗ್ನಿವೀರರು ಎಂದು ಕರೆಯುತ್ತೇವೆ.
ಭಾರತೀಯ 03 ಸೇನೆಗಳಾದ ಭೂ ಸೇನೆ, ವಾಯು ಸೇನೆ, ಮತ್ತು ನೌಕಾ ಸೇನೆಯಲ್ಲಿ ಈ ಒಂದು ಅಗ್ನಿವೀರರ ನೇಮಕಾತಿ ನಡೆಯುತ್ತದೆ.
ಅಗ್ನಿಪಥ ಯೋಜನೆಯು ಮಾಹಿತಿ
ನೇಮಕಾತಿ ಅರ್ಹತೆ
- ಅಭ್ಯರ್ಥಿಗಳು ಮೊದಲನೆಯದಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿರಬೇಕು.
- ವಯೋಮಿತಿ 17.5 ಇಂದ 21 ವರ್ಷ
- ವಿದ್ಯಾರ್ಹತೆ : SSLC, PUC, ITI, Deploma, Other
- ಅಭ್ಯರ್ಥಿಗಳು ಯಾವುದೇ ದಂಗೆಯಲ್ಲಿ ಭಾಗಿಯಾಗಿರ ಬಾರದು.
ನೇಮಕಾತಿ ಪ್ರಕ್ರಿಯೆಗೆ
- ನೇಮಕಾತಿ ಪ್ರಕ್ರಿಯೆಗೆ ಯಾವ ರೀತಿ ಹಿಂದೆ ನಡೆಯುತ್ತಿತ್ತು ಅದೆ ಮಾದರಿಯಲ್ಲಿ ನೇಮಕಾತಿ ಪ್ರಕ್ರಿಯೆ ಮುಂದುವರೆಯಲಿದೆ.
- ಅಗ್ನಿಪಥ ಯೋಜನೆಯಲ್ಲಿ ಅಗ್ನಿ ವೀರರನ್ನು ಕೇವಲ 04 ವರ್ಷದ ಸೇವಾ ಅವಧಿಗೆ (06 ತಿಂಗಳ ತರಬೇತಿ ಒಳಗೊಂಡಂತೆ) ಮಾತ್ರ ಭರ್ತಿ ಮಾಡಲಾಗುತ್ತದೆ.
- ನಾಲ್ಕು ವರ್ಷಗಳು ಸೇವಾ ಅವಧಿ ಮುಗಿದ ನಂತರ ಅಭ್ಯರ್ಥಿಗಳ ಜೇಷ್ಠತೆ, ಅಭ್ಯರ್ಥಿಗಳು ತೋರಿರುವ ಉತ್ತಮ ಸಾಮರ್ಥ್ಯ, ಅಭ್ಯರ್ಥಿಗಳು ಹೊಂದಿರುವ ಉತ್ತಮ ಕೌಶಲ್ಯ, ದೈಹಿಕ ಮತ್ತು ಮಾನಸಿಕ ಸದೃಢತೆಯ ಆಧಾರದ ಮೇಲೆ ಶೇಕಡಾ 25 ರಷ್ಟು ಅಗ್ನಿ ವೀರರನ್ನು ಖಾಯಂ ಅವಧಿಗೆ ನೇಮಕ ಮಾಡಲಾಗುತ್ತದೆ.
- ಹೀಗೆ ಇನ್ನುಳಿದ ಶೇಕಡಾ 75 ರಷ್ಟು ಅಭ್ಯರ್ಥಿಗಳು 04 ವರ್ಷ ಸೇವಾ ಅವಧಿ ಮುಗಿದ ನಂತರ ನಿವೃತ್ತಿ ಹೊಂದುತ್ತಾರೆ.
- ನಿವೃತ್ತಿ ಹೊಂದಿರುವ ಅಗ್ನಿ ವೀರರಿಗೆ ಪಿಂಚಣಿಯ ಸೌಲಭ್ಯ ಇರುವುದಿಲ್ಲ.
- ಹೀಗೆ ನಿವೃತ್ತಿ ಹೊಂದಿರುವ ಅಗ್ನಿ ವೀರರಿಗೆ ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ.
ರಜಾ ಸೌಲಭ್ಯಗಳು
ವಾರ್ಷಿಕ ಒಟ್ಟು ರಜೆಗಳು - 30 ಮತ್ತು ವೈದ್ಯಕೀಯ ಸಲಹೆಯ ಮೇಲೆ ಅನಾರೋಗ್ಯದ ಕಾರಣ ಇದ್ದಲ್ಲಿ Sick Leave ಸೌಲಭ್ಯ ಇದೆ.
ಅಗ್ನಿ ವೀರರು ಮಧ್ಯದಲ್ಲಿ ಸೇವೆ ಬಿಡಬಹುದೆ.
ಅಗ್ನಿ ವೀರರು ಸ್ವಇಚ್ಛೆಯಿಂದ ಸೇನೆಯನ್ನು ಅರ್ಧದಲ್ಲಿ ಬಿಡಲು ಅವಕಾಶ ಇಲ್ಲ.
ಆದರೆ ಕೆಲವು ಸಂದರ್ಭದಲ್ಲಿ ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ.
ಸಂಬಳ ಮತ್ತು ಇತರೆ ಸೌಲಭ್ಯಗಳು
Year |
Salary
P.M |
In
Hand Salary (70%) |
Corpus
Fund (30%) |
Contribution
to Corpus Fund by Gol |
Monthly Contribution in RS |
||||
1st |
30,000 |
21,000 |
9,000 |
9,000 |
2nd |
33,000 |
23,100 |
9,900 |
9,900 |
3rd |
36,500 |
25,550 |
10,950 |
10,950 |
4th |
40,000 |
28,000 |
12,000 |
12,000 |
All Figures in RS (Monthly Contribution) |
||||
Total Contribution in Agniveers Corpus Fund After
4 Years |
RS. 5.02 ಲಕ್ಷ |
RS. 5.02 ಲಕ್ಷ |
||
04 ವರ್ಷದ
ನಂತರ |
RS 10.04 ಸೇವಾ ನೀಧಿ + ಬಡ್ಡಿ = 11.71 ಲಕ್ಷ Tax Free |
- ಪ್ರಥಮ ವರ್ಷದಲ್ಲಿ ತಿಂಗಳಿಗೆ ಅಗ್ನಿ ವೀರರಿಗೆ RS. 30,000 ಸಾವಿರ ವೇತನ ನೀಡಲಾಗುತ್ತದೆ. ಇದರಲ್ಲಿ 21,000 ಸಾವಿರ ಕೈಗೆ ದೊರೆಯುವ ಸಂಬಳವಾಗಿದೆ ಸಂಬಳದ ಶೇ 30% ರಷ್ಟು ಅಗ್ನಿ ವೀರರ ನಿಧಿಗೆ ಸೇರಿಸಲಾಗುತ್ತದೆ ಇದರ ಜೊತೆಗೆ ಇಷ್ಟೇ ಪ್ರಮಾಣದ ಹಣವನ್ನು ಸರ್ಕಾರ ನೀಡುತ್ತದೆ ಅಂದರೆ ಪ್ರಥಮ ವರ್ಷ 21,000 ಕೈಗೆ ದೊರೆಯುವ ಸಂಬಳವಾದರೆ 9000 Corpus Fund + ಸರ್ಕಾರ ಹೆಚ್ಚುವರಿಯಾಗಿ 9000 ನೀಡಲಾಗುತ್ತದೆ.
- 2nd Year 33,000 ಸಾವಿರ ಸಂಬಳ ತಿಂಗಳಿಗೆ. ಕೈಗೆ ದೊರೆಯುವ ವೇತನ 23,100 Corpus Fund ಗೆ 9,900 + 9,900 ಹೆಚ್ಚುವರಿಯಾಗಿ ಸರ್ಕಾರದಿಂದ ನೀಡಲಾಗುತ್ತದೆ.
- 3rd Year 36,500 ತಿಂಗಳಿಗೆ ವೇತನ. ಇದರಲ್ಲಿ ಕೈಗೆ ದೊರೆಯುವ ಸಂಬಳ 25,500. Corpus Fund ಗೆ 10,950 + ಸರ್ಕಾರ ಹೆಚ್ಚುವರಿಯಾಗಿ ನೀಡುವ ಹಣ 10,950
- 4th Year 40,000 ತಿಂಗಳಿಗೆ ವೇತನ 28,000 ಕೈಗೆ ದೊರೆಯುವ ಸಂಬಳ 12000 ರೂ Corpus Fund ಗೆ + 12000 ಸರ್ಕಾರ ಹೆಚ್ಚುವರಿಯಾಗಿ ನೀಡಲಾಗುತ್ತದೆ.
- ಅಂದರೆ ನಾಲ್ಕು ವರ್ಷ ಸೇವಾ ಅವಧಿ ಮುಗಿದ ನಂತರ ಅಗ್ನಿ ವೀರರಿಗೆ ಅವರ ಸಂಬಳದಲ್ಲಿ ಉಳಿಸಲಾದ ಮೊತ್ತ 5.02 ಲಕ್ಷ ಮತ್ತು ಸರ್ಕಾರ ಹೆಚ್ಚುವರಿಯಾಗಿ ನೀಡುವ 5.02 ಲಕ್ಷ ಹಣ + ಇದಕ್ಕೆ ಬಡ್ಡಿಯ ಹಣ ಸೇರಿ 12 ಲಕ್ಷ ಸೇವಾ ನಿಧಿ ಪ್ಯಾಕೇಜ್ ಅನ್ನು ನೀಡಲಾಗುತ್ತದೆ.
- ಸೇವೆಯಲ್ಲಿ ಮೃತಪಟ್ಟವರಿಗೆ 44 ಲಕ್ಷ ರೂಪಾಯಿ ಪರಿಹಾರ.
4 ವರ್ಷದ ನಂತರ ?
- 12 ಲಕ್ಷ ಸೇವಾ ನಿಧಿ ಪ್ಯಾಕೇಜ್
- ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ
- 48 ಲಕ್ಷದ ವರೆಗೆ ಯಾವುದೇ ವಂತಿಗೆ ಇಲ್ಲದೆ ಜೀವ ವಿಮೆ
- 12ನೇ ತರಗತಿ ಪ್ರಮಾಣಪತ್ರ ಹಾಗೂ 3 Years Skill Based Bachelor Degree ಪದವಿ ಪ್ರಮಾಣ ಪತ್ರ ನೀಡಲಾಗುವುದು.
- Skill Certificate (ಕೌಶಲ್ಯ ಪ್ರಮಾಣ ಪತ್ರ) ವಿವಿಧ ಉದ್ಯೋಗವಕಾಶಕ್ಕಾಗಿ.
- CAPFs, Coast Guards, Defence Civillians, Assam Rifles ನಲ್ಲಿ ಶೇಕಡಾ 10 ರಷ್ಟು ಮಿಸಲಾತಿ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೀಸಲಾತಿ ಸೌಲಭ್ಯ ಸಿಗಲಿದೆ.
- ಹಲವಾರು ಖಾಸಗಿ ಕಂಪನಿಗಳಲ್ಲಿ ಅಗ್ನಿ ವೀರರಿಗೆ ಮೀಸಲಾತಿ ಸೌಲಭ್ಯ ಸಿಗಲಿದೆ.
- ಭಾರತೀಯ ಸೇನೆಯಿಂದ ಅಗ್ನಿ ವೀರರು ಉತ್ತಮ ತರಬೇತಿ ಪಡೆದಿರುವುದರಿಂದ ತಮ್ಮದೇ ಆದ ಸ್ವಂತ ಸೆಕ್ಯೂರಿಟಿ ಏಜೆನ್ಸಿ ಅನ್ನು ಸ್ಥಾಪಿಸಬಹುದು.
ಅಗ್ನಿಪಥ ಯೋಜನೆಯ ಪ್ರಯೋಜನ
- ಹೆಚ್ಚಿನ ಉದ್ಯೋಗವಕಾಶಗಳನ್ನು ಸೃಷ್ಟಿಸುವುದು
- ಪುರುಷ ಮತ್ತು ಮಹಿಳೆಯರು ಕೂಡ ಸೇನೆಯಲ್ಲಿ ಸೇರುವ ಅವಕಾಶ
- ಭಾರತೀಯ ಸೇನೆಯ ಶಕ್ತಿ ಹೆಚ್ಚಳವಾಗುವುದು
- ಯುವಕರಿಂದ ಕೂಡಿದ ಬಲಿಷ್ಠ ಸೇನೆ
- ಭಾರತೀಯ ಸೇನೆಯು ಸದೃಢ ಮತ್ತು ಕೌಶಲ್ಯಯುಕ್ತ ಯುವಕರಿಂದ ಕೂಡಿರುತ್ತದೆ
- ತಾಂತ್ರಿಕವಾಗಿ ಭಾರತೀಯ ಸೇನೆಯು ಬಲಿಷ್ಠವಾಗುತ್ತದೆ
- ಪಿಂಚಣಿ ಹಣವನ್ನು ಉಳಿಸುವುದರ ಮೂಲಕ ಆ ಹಣವನ್ನು ಸೇನೆಯ ಆಧುನೀಕರಣಕ್ಕೆ ಬಳಸಲಾಗುವುದು
- ಭಾರತೀಯ ಸೇನೆಯ ಸರಾಸರಿ ವಯಸ್ಸು 32 ಇದೆ ಇದರಿಂದ 24-26 ಕ್ಕೆ ಸರಾಸರಿ ವಯಸ್ಸು ಕಡಿಮೆಯಾಗುತ್ತದೆ.
- ಯುವಕರಲ್ಲಿ ರಾಷ್ಟ್ರಪ್ರೇಮ ಹೆಚ್ಚಿಸುತ್ತದೆ
- ಅಗ್ನಿಪಥ ಯೋಜನೆಯಿಂದ ಅಗ್ನಿ ವೀರರಿಗೆ ಸಮಾಜದಲ್ಲಿ ಉತ್ತಮ ಗೌರವ ಮತ್ತು ಮನ್ನಣೆ.
0 ಕಾಮೆಂಟ್‌ಗಳು