ಗ್ರಾಮ ಲೆಕ್ಕಾಧಿಕಾರಿಗಳು
Village Accountant Q&A
ಕರ್ನಾಟಕ ರಾಜ್ಯ ಸರ್ಕಾರ ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ Village Accountant Recruitment ಸಂಪೂರ್ಣ ಮಾಹಿತಿ. ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ ಅಧಿಸೂಚನೆ ? ಎಷ್ಟು ಹುದ್ದೆಗಳಿವೆ ? ನೇಮಕಾತಿ ಯಾವರೀತಿ ಇದೆ ? ವೇತನ ಶ್ರೇಣಿ ? ವಿದ್ಯಾರ್ಹತೆ ನೇಮಕಾತಿ ಸಂಪೂರ್ಣ ಮಾಹಿತಿ.
ಇಲಾಖೆ ಹೆಸರು
ಕರ್ನಾಟಕ ರಾಜ್ಯ ಕಂದಾಯ ಇಲಾಖೆ
ಕಂದಾಯ ಇಲಾಖೆ ಖಾಲಿ ಹುದ್ದೆಗಳು
1000
ಜಿಲ್ಲಾವಾರು ಹುದ್ದೆಗಳ ಮಾಹಿತಿ
ವಿದ್ಯಾರ್ಹತೆ ಏನು ?
- ದ್ವಿತೀಯ ಪಿಯುಸಿ
- ಕ್ಲಾಸ್ 12 TH CBSE or ICSE
- Arts/Science/Commerce ಯಾವುದೇ PUC ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಐಟಿಐ/Diploma ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ?
ಹೌದು Diploma and ITI ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಆದರೆ NIOS or PU Board PUC ಗೇ Equivalent Certificate ಬೇಕಾಗುತ್ತದೆ.
ಕಂಪ್ಯೂಟರ್ ಸರ್ಟಿಫಿಕೇಟ್
No Need
ನೇಮಕಾತಿ ಹಂತಗಳು
- Karnataka Examination Authority (KEA) ಮೂಲಕ ಸ್ಪರ್ಧಾತ್ಮಕ ಪರೀಕ್ಷೆ.
- ಪಿಯುಸಿ ಮೇರಿಟ್ ಇಲ್ಲ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸುವ ಅಂಕ ಮಾತ್ರ ಪರಿಗಣಿಸಲಾಗುತ್ತದೆ.
- ಜಿಲ್ಲಾಧಿಕಾರಿ ಮುಖ್ಯಸ್ಥರು
- ಜಿಲ್ಲಾವಾರು ನೇಮಕಾತಿ ನಡೆಯುತ್ತದೆ.
ಬದಲಾವಣೆಯಾದ ಸಿಲಬಸ್ ಮಾಹಿತಿ
👉 Exam Pattern and Syllabus
ವೇತನ ಶ್ರೇಣಿ ಎಷ್ಟು ?
21400 ರಿಂದ 42000 ವರೆಗೆ ಉತ್ತಮ ವೇತನ ಶ್ರೇಣಿ ಇದೆ.
ಪಿಂಚಣಿ ಸೌಲಭ್ಯ ಲಭ್ಯ
ವಯೋಮಿತಿ ಎಷ್ಟು ?
ಕನಿಷ್ಠ : 18 ವರ್ಷ
ಗರಿಷ್ಠ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 35 ವರ್ಷ
2A/2B/3A/3B ವರ್ಗದ ಅಭ್ಯರ್ಥಿಗಳಿಗೆ : 38 ವರ್ಷ
SC/ST/Category - 1 ಅಭ್ಯರ್ಥಿಗಳಿಗೆ : 40 ವರ್ಷ
ವಯೋಮಿತಿ ಸಡಿಲಿಕೆ ಮಾಜಿ ಸೈನಿಕರಿಗೆ/ವಿಧವೇಯರಿಗೆ ಇದೆ.
ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಅಭ್ಯರ್ಥಿಗಳು Online ಮುಖಾಂತರ ಅರ್ಜಿ ಸಲ್ಲಿಸಬಹುದು.
ಮೀಸಲಾತಿ ಇದೆಯಾ ?
ಹೌದು ವಿವಿಧ ರೀತಿಯ ಮೀಸಲಾತಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿಗೆ ಇದೆ.
ಉದಾಹರಣೆಗೆ : ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿ, ಯೋಜನಾ ನಿರಾಶ್ರಿತರಿಗೆ, ಜಾತಿ ಮೀಸಲಾತಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಮಿಸಲಾತಿ ಸೌಲಭ್ಯ ಇರುತ್ತದೆ.
ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಜಿಲ್ಲೆಗೆ ಅರ್ಜಿ ಸಲ್ಲಿಸಬಹುದೆ.
ಯಾವುದಾದರೂ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಎರಡು ಜಿಲ್ಲಿಗೆ ಅರ್ಜಿ ಸಲ್ಲಿಸಿದರೆ ಒಂದು ಜಿಲ್ಲೆಗೆ ಮಾತ್ರ ಪರಿಗಣಿಸಲಾಗುತ್ತದೆ.
ಒಂದು ವೇಳೆ ಗ್ರಾಮಲೆಕ್ಕಾಧಿಕಾರಿ ನೇಮಕಾತಿ HK ವೃಂದದ ಮೀಸಲಿರಿಸಿದ ಹುದ್ದೆಗಳಾಗಿದ್ದರೆ ಆಗ HK ವೃಂದದಲ್ಲಿ ಬರುವ ಜಿಲ್ಲೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕಡ್ಡಾಯ ಕನ್ನಡ ಪರೀಕ್ಷೆ ಬರೆಯಬೇಕಾ ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಪರೀಕ್ಷೆ ಬರೆಯ ಬೇಕು. ಈ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದರೆ ಮಾತ್ರ ಮುಂದಿನ ನೇಮಕಾತಿಗೆ ಪರಿಗಣಿಸಲಾಗುತ್ತದೆ.
ಕಡ್ಡಾಕ ಕನ್ನಡ ಪರೀಕ್ಷೆ ಅರ್ಹತೆ : 150 ಅಂಕಗಳಿಗೆ 50 ಅಂಕ ಪಡೆಯಬೇಕು.
ಬೇರೆ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದೆ ?
ಹೌದು ಆದರೆ ಅವರು ಕಡ್ಡಾಯ ಕನ್ನಡ ಪರೀಕ್ಷೆ ಬರೆಯಲೇ ಬೇಕು ಮತ್ತು ಪಾಸ್ ಆಗಬೇಕು
0 ಕಾಮೆಂಟ್‌ಗಳು