ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

2020 ರ ಟೋಕಿಯೋ ಒಲಿಂಪಿಕ್ಸ್ ಭಾರತದ ಸಾಧನೆ

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ 

2020-21

2020ರ ಒಲಿಂಪಿಕ್ಸ್ ಕ್ರೀಡಾಕೂಟ ಜಪಾನಿನ ಟೋಕಿಯೋ ದಲ್ಲಿ ನಡೆಯಬೇಕಾಗಿತ್ತು ಆದರೆ ಕೊರೋನಾ ಹಿನ್ನೆಲೆಯಿಂದಾಗಿ 2021 ಜುಲೈ 23 ರಂದು ಟೋಕಿಯೋ ಒಲಿಂಪಿಕ್ಸ್ ಗೆ ಚಾಲನೆ ದೊರಕಿತು ದಿನಾಂಕ 23-07-2021 ರಿಂದ 08-08-2021 ರ ವರೆಗೆ ನಡೆದ ಒಲಿಂಪಿಕ್ಸ್ ಕೂಟದಲ್ಲಿ ಭಾರತದ ಸಾಧನೆಯ ಕುರಿತು ಸಂಕ್ಷಿಪ್ತ ಮಾಹಿತಿ.

2020 ರ ಟೋಕಿಯೋ ಒಲಿಂಪಿಕ್ಸ್ ಭಾರತ ಸಾಧನೆ

2020ರ ಟೋಕಿಯೋ ಒಲಿಂಪಿಕ್ಸ್ ಪ್ರಮುಖ ಮಾಹಿತಿ

  • ಒಲಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಮಹಿಳಾ ಹಾಕಿ ತಂಡ ಸೆಮಿಫೈನಲ್ ಪ್ರವೇಶಿಸಿತು.
  • ಕನ್ನಡದ ಕುವರಿ ಅದಿತಿ ಅಶೋಕ್ ಅವರು ಗಾಲ್ಫ್ ನಲ್ಲಿ ಕಂಚಿನ ಪದಕವನ್ನು ಕೈಚೆಲ್ಲಿದರು ಗಾಲ್ಫ್ ನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
  • ಫೆನ್ಸಿಂಗ್ ನಲ್ಲಿ ಇದುವರೆಗೂ ಭಾರತ ಈ ವಿಭಾಗದಲ್ಲಿ ಸ್ಪರ್ಧೆ ನೀಡಿರಲಿಲ್ಲ ಇದೇ ಮೊದಲ ಬಾರಿಗೆ ಭಾರತದ ಫೆನ್ಸರ್ ಭವಾನಿ ದೇವಿ ಫೆನ್ಸಿಂಗ್ ವಿಭಾಗದಲ್ಲಿ ಪಾದಾರ್ಪಣೆ ಮಾಡಿದರು.
  • ಭಾರತದ ಪುರುಷರ ಹಾಕಿ ತಂಡವು 1980 ರ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕವನ್ನು ಗೆದ್ದಿತ್ತು ಆದರೆ 41 ವರ್ಷಗಳ ನಂತರ ಕಂಚಿನ ಪದಕವನ್ನು ಪಡೆಯಿತು.
  • ಇದುವರೆಗೂ ಭಾರತ ಹಾಕಿಯಲ್ಲಿ 08 ಚಿನ್ನದ ಪದಕ 01 ಬೆಳ್ಳಿಯ ಪದಕ 03 ಕಂಚಿನ ಪದಕವನ್ನು ಪಡೆಯುವುದರ ಮೂಲಕ ಭಾರತವು ಹಾಕಿಯಲ್ಲಿ ಅತಿ ಹೆಚ್ಚು ಪದಕವನ್ನು ಗೆದ್ದ ದೇಶವಾಗಿದೆ.
  • ವೈಯಕ್ತಿಕ ವಿಭಾಗದಲ್ಲಿ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು. ಇದುವರೆಗೂ ವೈಯಕ್ತಿಕ ವಿಭಾಗದಲ್ಲಿ ಕೇವಲ ಒಂದು ಚಿನ್ನದ ಪದಕ ಶೂಟಿಂಗ್ ವಿಭಾಗದಲ್ಲಿ ಅಭಿನವ ಬಿಂದ್ರಾ ಅವರು ಪಡೆದಿದ್ದರು. ನಂತರ ನೀರಜ್ ಚೋಪ್ರಾ ಅವರು ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಎರಡನೇ ಆಟಗಾರರಾಗಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ 07 ತಾರೆಯರ ಸಂಕ್ಷಿಪ್ತ ಮಾಹಿತಿ


01. ಮೀರಾಬಾಯಿ ಚಾನು 🥈

ಮೀರಾಬಾಯಿ ಚಾನು ಅವರು ಟೋಕಿಯೋ ಒಲಿಂಪಿಕ್ಸ್ ಮೊದಲ ದಿನವೇ ಬೆಳ್ಳಿ ಪದಕ ಗೆದ್ದರು 49 ಕೆಜಿ (weight lifting) ವಿಭಾಗದಲ್ಲಿ ಒಟ್ಟು 202 ಕೆಜಿ ( 87+115) ಭಾರ ಎತ್ತುವ ಮೂಲಕ ರಜತ ಪದಕವನ್ನು ತಮ್ಮದಾಗಿಸಿಕೊಂಡರು. ಈ ವಿಭಾಗದಲ್ಲಿ ಚೀನಾದ ಝೀ ಎಚ್ ಹೌ ಅವರು ಚಿನ್ನದ ಪದಕ ಗೆದ್ದರೆ ಇಂಡೋನೇಷ್ಯಾದ ಐಸಾಹ್ ಅವರು ಕಂಚಿನ ಪದಕ ಗೆದ್ದರು.

02. ಪಿ ವಿ ಸಿಂಧು 🥉

ಪಿ ವಿ ಸಿಂಧು ಅವರು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದ ಕಂಚಿನ ಪದಕದ ಸುತ್ತಿನಲ್ಲಿ ಗೆದ್ದು ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟರು. ಇದು 2020ರ ಟೋಕಿಯೋ ಒಲಂಪಿಕ್ಸ್ ನ ಎರಡನೇ ಪದಕವಾಗಿದೆ. ಪಿ ವಿ ಸಿಂಧು ಅವರು ಈ ಹಿಂದೆ ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿಯ ಪದಕವನ್ನು ಗೆದ್ದುಕೊಟ್ಟಿದ್ದರು ಈ ಮೂಲಕ ಇವರು ಒಲಿಂಪಿಕ್ಸ್ ಇತಿಹಾಸದಲ್ಲಿ ಎರಡು ಬಾರಿ ಪದಕ ಪಡೆದ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

03. ಲವ್ಲಿನಾ ಬೊರ್ಗೊಹೈನ್ 🥉

ಮಹಿಳಾ ಬಾಕ್ಸಿಂಗ್ ನ 69 ಕೆಜಿ ವಿಭಾಗದ ಸೆಮಿಫೈನಲ್ ನಲ್ಲಿ ಲವ್ಲಿನಾ ಎದುರಾಳಿ ಅಗ್ರ ಶ್ರೇಯಾಂಕಿತೆ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ವಿರುದ್ಧ ಸೋತರು. ಈ ಮೂಲಕ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಲವ್ಲಿನಾ ಅವರು ಇದೀಗ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಮೂರನೇ ಬಾಕ್ಸರ್ ಆಗಿದ್ದಾರೆ ಈ ಹಿಂದೆ 2008ರಲ್ಲಿ ವಿಜೇಂದರ್ ಸಿಂಗ್ ಹಾಗೂ 2012ರಲ್ಲಿ ಮೇರಿಕೋಮ್ ಈ ಸಾಧನೆ ಮಾಡಿದ್ದರು.

04. ರವಿಕುಮಾರ್ ದಹಿಯಾ 🥈

ಟೋಕಿಯೋ ಒಲಿಂಪಿಕ್ಸ್ ಲ್ಲಿ ಫ್ರೀಸ್ಟೈಲ್ 57 ಕೆಜಿ ವಿಭಾಗದ ಕುಸ್ತಿ ಫೈನಲ್ ಪಂದ್ಯಾವಳಿಯಲ್ಲಿ ರವಿಕುಮಾರ್ ದಹಿಯಾ ರಷ್ಯಾದ ದಾವುದ್ ಉಗೇವ್ ವಿರುದ್ಧ 4-7 ಅಂತರದಿಂದ ಸೋತಿದ್ದು ಬೆಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಗೆದ್ದ ಏಳನೇ ಭಾರತೀಯರಾಗಿದ್ದಾರೆ.
ರವಿಕುಮಾರ್ ದಹಿಯಾ ಅವರು ಕೇಡಿ ಜಾದವ್, ಸುಶೀಲ್ ಕುಮಾರ್, ಯೋಗೇಶ್ವರ್ ದತ್ತ, ಸಾಕ್ಷಿ ಮಲಿಕ್ ನಂತರ ಪದಕ ಗೆದ್ದಿರುವ ಭಾರತದ ಐದನೇ ಕುಸ್ತಿಪಟು ಆಗಿದ್ದಾರೆ.

05. ಪುರುಷರ ಹಾಕಿ ತಂಡ 🥉

ಪುರುಷರ ಹಾಕಿ ತಂಡ ಈ ಸಾಲಿನ ಟೋಕಿಯೋ ಒಲಂಪಿಕ್ಸ್ನಲ್ಲಿ ಜರ್ಮನಿ ತಂಡವನ್ನು 5-4 ಅಂತರದಲ್ಲಿ ಸೋಲಿಸುವ ಮೂಲಕ ಕಂಚಿನ ಪದಕವನ್ನು ಪಡೆಯಿತು. ಕಂಚಿನ ಪದಕವನ್ನು ಪಡೆಯುವುದರ ಮೂಲಕ ಭಾರತೀಯ ಹಾಕಿ ತಂಡವು ನಾಲ್ಕು ದಶಕಗಳ ನಂತರ ಈ ಸಾಧನೆ ಮಾಡಿತು ಯಾಕೆಂದರೆ 1980 ರ ಮಾಸ್ಕೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ನಂತರ ಮುಂಬರುವ ಯಾವುದೇ ಒಲಂಪಿಕ್ಸ್ನಲ್ಲಿ ಭಾರತದ ಹಾಕಿ ತಂಡ ಪದಕವನ್ನು ಗೆದ್ದಿರಲಿಲ್ಲ ಹೀಗಾಗಿ ಸುಮಾರು 41 ವರ್ಷಗಳ ಬಳಿಕ ಈಗ ಮತ್ತೆ ಕಂಚಿನ ಪದಕವನ್ನು ಗೆಲ್ಲುವುದರ ಮೂಲಕ ಪುರುಷರ ಹಾಕಿ ತಂಡ ಹೊಸ ಇತಿಹಾಸ ನಿರ್ಮಿಸಿದೆ. ಪುರುಷರ ಹಾಕಿ ತಂಡವು ಒಲಿಂಪಿಕ್ಸ್ ಇತಿಹಾಸದಲ್ಲಿ ಅತಿ ಹೆಚ್ಚು ಪದಕ ಗೆದ್ದಿರುವ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಇದುವರೆಗೂ ಹಾಕಿ ತಂಡವು 08 🥇 ಚಿನ್ನದ ಪದಕ 01 ಬೆಳ್ಳಿಯ ಪದಕ 🥈 ಹಾಗೂ 03 ಕಂಚಿನ 🥉 ಪದಕವನ್ನು ಗೆಲ್ಲುವುದರ ಮೂಲಕ ಅತಿ ಹೆಚ್ಚು ಪದಕಗಳನ್ನು ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

06. ಬಜರಂಗ ಪೂನಿಯಾ 🥉

ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿ ಪಂದ್ಯಾವಳಿಯಲ್ಲಿ ಒಲಿಂಪಿಕ್ಸ್ ಚೊಚ್ಚಲ ಪ್ರದರ್ಶನದಲ್ಲಿ ಕಂಚಿನ ಪದಕವನ್ನು ಪಡೆದರು. ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿ ಫ್ಲೇ-ಆಫ್ ನಲ್ಲಿ ಕಜಕಿಸ್ತಾನದ ದೌಲತ್ ನಿಯಾಝ್ ಕೋವ್ ಅವರನ್ನು 8-0 ಅಂತರದಿಂದ ಸೋಲಿಸಿ ಕಂಚಿನ ಪದಕವನ್ನು ಗೆದ್ದರು.

07. ನೀರಜ್ ಚೋಪ್ರಾ 🥇

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಹಲವು ವರ್ಷಗಳ ನಂತರ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು. ಪುರುಷರ ಜಾವೇಲಿನ್ ಥ್ರೋ ಪಂದ್ಯದಲ್ಲಿ 87.58 ಮೀಟರ್ ಬರ್ಜಿ ಎಸೆಯುವುದರ ಮೂಲಕ ಹೊಸ ಇತಿಹಾಸವನ್ನು ಸುವರ್ಣಾಕ್ಷರದಲ್ಲಿ ಬರೆದರು. ಭಾರತದ ಒಲಿಂಪಿಕ್ಸ್ ನ ಇತಿಹಾಸದಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಎರಡನೇ ಭಾರತೀಯ ಆಟಗಾರರಾಗಿದ್ದಾರೆ. ಈ ಹಿಂದೆ ಅಭಿನವ್ ಬಿಂದ್ರಾ ಅವರು ಶೂಟಿಂಗ್ ವಿಭಾಗದಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಆಟಗಾರರಾಗಿದ್ದಾರೆ. 

ಭಾರತವು ಟೋಕಿಯೋ ಒಲಿಂಪಿಕ್ಸ್ನಲ್ಲಿ ಒಟ್ಟು ಏಳು ಪದಕಗಳನ್ನು ಗೆದ್ದಿದ್ದು ಇದರಲ್ಲಿ 01 🥇 ಚಿನ್ನದ ಪದಕ 02 🥈 ಬೆಳ್ಳಿಯ ಪದಕ ಮತ್ತು 04 🥉 ಕಂಚಿನ ಪದಕವನ್ನು ಗೆಲ್ಲುವುದರ ಮೂಲಕ ಪದಕ ಪಟ್ಟಿಯಲ್ಲಿ 48ನೇ ಸ್ಥಾನವನ್ನು ಪಡೆದಿದೆ.

ವಿವಿಧ ದೇಶಗಳು ಪಡೆದ ಪದಕಗಳು 

ದೇಶ

ಚಿನ್ನ

ಬೆಳ್ಳಿ

ಕಂಚು

ಒಟ್ಟು

ಅಮೇರಿಕಾ

39

41

33

113

ಚೀನಾ

38

32

18

88

ಜಪಾನ

27

14

17

58

ಬ್ರೀಟನ್

22

21

22

65

ರಷ್ಯಾ

20

28

23

71


ಟೋಕಿಯೋ ಒಲಿಂಪಿಕ್ಸ್ ಕೊನೆಯ ದಿನ

ಜುಲೈ 23ರಂದು ಪ್ರಾರಂಭವಾದ ಕ್ರೀಡಾಕೂಟ ಆಗಸ್ಟ್ 8 2021ರಂದು ಮುಕ್ತಾಯವಾಯಿತು. 32ನೇ ಆವೃತ್ತಿ ಒಲಂಪಿಯಾಡ್ ಮುಕ್ತಾಯವಾಗಿದೆ ಹಾಗೂ 33ನೇ ಒಲಿಂಪಿಕ್ಸ್ ಇನ್ನು ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ನಡೆಯಲಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷರಾದ ಥಾಮಸ್ ಬಾಕ್ ಅವರು ಘೋಷಿಸಿದರು.
ಕುಸ್ತಿಪಟು ಬಜರಂಗ ಪೂನಿಯಾ ಅವರು ಸಮಾರೋಪ ಸಮಾರಂಭದಲ್ಲಿ ಅಥ್ಲೆಟಿಕ್ಸ್ ಪಥಸಂಚಲನದ ವೇಳೆ ಭಾರತ ತಂಡದ ನೇತೃತ್ವವನ್ನು ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Call Letter Update of Central and State Government Recruitment