PSI ಪ್ರಬಂಧ ರಚನೆ
ಪಿಎಸ್ಐ ಪ್ರಬಂಧಕ್ಕೆ ನಿಗದಿಪಡಿಸಿದ ಒಟ್ಟು ಅಂಕಗಳು ಎಷ್ಟು ?
ಪ್ರಬಂಧ |
20 |
ಭಾಷಾಂತರ ಕನ್ನಡ
ದಿಂದ ಇಂಗ್ಲಿಷ ಇಂಗ್ಲಿಷ
ದಿಂದ ಕನ್ನಡ |
10 10 |
ಸಾರಾಂಶ
ಬರಹ |
10 |
ಒಟ್ಟು |
50 |
ಪರೀಕ್ಷೆಯಲ್ಲಿ ಕೇಳುವ ಒಟ್ಟು ಪ್ರಬಂಧಗಳು ಎಷ್ಟು ?
ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಟ್ಟು ೦೫ ಪ್ರಬಂಧಗಳನ್ನು ಪರೀಕ್ಷೆಯಲ್ಲಿ ನೀಡಲಾಗಿರುತ್ತದೆ ಅದರಲ್ಲಿ ಯಾವುದಾದರು ಒಂದು ಪ್ರಬಂಧವನ್ನು ಆಯ್ಕೆ ಮಾಡಿಕೊಂಡು ಬರೆಯಬಹುದಾಗಿದೆ.
![]() |
How to Write Essay for PSI |
ಸಾಮಾನ್ಯವಾಗಿ ಪ್ರಬಂಧದಲ್ಲಿ ಕೆಳಲಾಗುವ ವಿಷಯಗಳು
* ಸಾಂಪ್ರದಾಯಿಕ ಪ್ರಬಂಧಗಳು
* ಪ್ರಚಲಿತ ವಿಷಯದ ಪ್ರಬಂಧಗಳು
ಪ್ರಬಂಧವನ್ನು ಯಾವ ಭಾಷೆಯಲ್ಲಿ ಬರೆಯಬಹುದು
ಪ್ರಬಂಧವನ್ನು ಕನ್ನಡ ಮತ್ತು ಇಂಗ್ಲಿಷ್ ಇವುಗಳಲ್ಲಿ ಯಾವ ಭಾಷೆಯಲ್ಲಾದರು ಬರೆಯಬಹುದು.
ಪ್ರಬಂಧವನ್ನು ಎಷ್ಟು ಬರೆಯಬೇಕು
ಪ್ರಬಂಧವನ್ನು ನಿಗದಿಪಡಿಸಿದ ಪದಗಳಿಗಿಂತ ಹೆಚ್ಚಾಗಿ ಅಥವಾ ಕಡಿಮೆಯಾಗಿ ಬರೆಯಬಾರದು ಪ್ರಬಂಧವು ನಿಗದಿಪಡಿಸಿದ ಪದಗಳ ಮಿತಿಗೊಳಪಟ್ಟಿರಬೇಕು.
ಪ್ರಬಂಧದ ಆಯ್ಕೆ ಹೇಗಿರಬೇಕು ?
ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಬಂಧವನ್ನು ಆಯ್ಕೆ ಮಾಡಿಕೊಳ್ಳುವುದು ಅತಿ ಪ್ರಮುಖ ಅಂಶವಾಗಿದೆ. ಪ್ರಬಂಧವನ್ನು ಆಯ್ಕೆ ಮಾಡಿಕೊಳ್ಳುವಾಗ ಸಾಕಷ್ಟು ವಿಷಯವನ್ನು ತಿಳಿದಿರುವ ಪ್ರಬಂಧವನ್ನು ಆಯ್ಕೆ ಮಾಡಿಕೊಳ್ಳಬೇಕು ಪ್ರಬಂಧ ಬರೆಯುವ ವಿಷಯದ ಬಗ್ಗೆ ಸಾಕಷ್ಟು ಅಂಶಗಳು ಗೊತ್ತಿರುವ ಪ್ರಬಂಧವನ್ನು ಆಯ್ಕೆ ಮಾಡಿಕೊಳ್ಳಬೇಕು. ನಾವು ಆಯ್ಕೆ ಮಾಡಿಕೊಳ್ಳುವ ಪ್ರಬಂಧದ ವಿಷಯದ ಬಗ್ಗೆ ನಮಗೆ ಸಾಕಷ್ಟು ಅಂಶಗಳು ಗೊತ್ತಿಲ್ಲದಿದ್ದರೆ ಅಂತಹ ಪ್ರಬಂಧವನ್ನು ಆಯ್ಕೆ ಮಾಡಬಾರದು. ನಾವು ಯಾವ ಪ್ರಬಂಧವನ್ನು ಬರೆದರೆ ಉತ್ತಮ ಅಂಕಗಳನ್ನು ಗಳಿಸಬಲ್ಲೆ ಎಂದು ಯೋಚಿಸಿ ಪ್ರಬಂಧವನ್ನು ಆಯ್ಕೆ ಮಾಡಿಕೊಳ್ಳಬೇಕು.
ಪ್ರಬಂಧದ ಬರವಣಿಗೆ ಹೇಗಿರಬೇಕು ?
* ಪಿಠಿಕೆ
* ವಿಷಯ ವಿಸ್ತಾರ
* ಉಪಸಂಹಾರ
ಪ್ರಬಂಧವನ್ನು ಬರೆಯುವಾಗ ಪಿಠಿಕೆ, ವಿಷಯ ಬೆಳವಣಿಗೆ, ಉಪಸಂಹಾರ ಎಂದು ಪ್ರಬಂಧ ಬರೆಯುವಾಗ ಇವುಗಳನ್ನು ಉಲ್ಲೇಖಿಸುವ ಅಗತ್ಯವಿಲ್ಲ. ಆದರೆ ಪ್ರಬಂಧವು ಈ ರೀತಿಯಲ್ಲಿ ಇರಬೇಕು. ಸಾಮಾನ್ಯವಾಗಿ ನಾವು ಪ್ರೌಢ ಶಾಲಾ ಮತ್ತು ಕಾಲೇಜು ಪರೀಕ್ಷೆಯಲ್ಲಿ ಪ್ರಬಂಧ ಬರೆಯುವಾಗ ಪಿಠಿಕೆ, ವಿಷಯ ಬೆಳವಣಿಗೆ, ಉಪಸಂಹಾರ ಎಂದು ಬರೆಯುತ್ತಿದ್ದೆವು ಆದರೆ ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಬಂಧ ಬರೆಯುವಾಗ ಪಿಠಿಕೆ, ವಿಷಯ ಬೆಳವಣಿಗೆ, ಉಪಸಂಹಾರ ಎಂದು ಯಾವುದೇ ಕಾರಣಕ್ಕೂ ಬರೆಯ ಬಾರದು ಆದರೆ ಪ್ರಬಂಧವನ್ನು ಈ ಪ್ರಕಾರವಾಗಿಯೇ ಬರೆಯಬೇಕು.
ಪ್ರಬಂಧದ ಪಿಠಿಕೆ ಹೇಗಿರಬೇಕು ?
ಪ್ರಬಂಧವನ್ನು ಬರೆಯುವಾಗ ಒಟ್ಟು ವಿಷಯದಲ್ಲಿ ಶೇ 10 ರಷ್ಟು ಅಂಶವನ್ನು ಒಳಗೊಂಡಿರಬೇಕು. ಪ್ರಬಂಧದಲ್ಲಿ ನೀವು ಪ್ರಸ್ತುತ ಪಡಿಸುವ ಒಟ್ಟು ವಿಷಯವನ್ನು ಕೇವಲ ಪಿಠಿಕೆಯ ಐದಾರು ಸಾಲುಗಳೆ ಹೇಳುವಂತಿರಬೇಕು. ಮನುಷ್ಯನ ದೇಹದಲ್ಲಿ ಯಾವ ರೀತಿ ತೆಲೆಯ ಭಾಗ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆಯೋ ಅಷ್ಟೇ ಪ್ರಮುಖ ಪಾತ್ರ ಪ್ರಬಂಧದಲ್ಲಿ ಪಿಠಿಕೆ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಬರೆದಿರುವ ಪಿಠಿಕಯು ಮೌಲ್ಯಮಾಪನ ಮಾಡುವವರಿಗೆ ಆಕರ್ಷಕವಾಗಿರಬೇಕು ಹಾಗೆಂದರೆ ಅಂದ ಚಂದವಲ್ಲ ಮುಖ್ಯವಾಗಿ ನೀವು ಆ ರೀತಿ ಪ್ರಬಂಧದ ಪಿಠಿಕೆಯನ್ನು ಬರೆದಿರಬೇಕು. ಪ್ರಬಂಧದ ಪಿಠಿಕೆಯನ್ನು ಬರೆಯುವಾಗ ಗಾದೆಮಾತುಗಳು, ಉಕ್ತಿಗಳು, ಪ್ರಸಿದ್ಧ ವ್ಯಕ್ತಿಗಳ ಮಾತುಗಳನ್ನು ಸೇರಿಸಿ ಬರೆಯುವುದರಿಂದ ಇದು ಮೌಲ್ಯಮಾಪಕರಿಗೆ ಹೆಚ್ಚು ಆಕರ್ಷಕವಾಗಿ ಕಾಣುವುದು ಮತ್ತು ಉತ್ತಮ ಅಂಕಗಳನ್ನು ಗಳಿಸಲು ಸಹಕಾರಿಯಾಗುವುದು.
ವಿಷಯದ ಬೆಳವಣಿಗೆ ಹೇಗಿರಬೇಕು ?
ಪ್ರಬಂಧದ ವಿಸ್ತರಣೆ ಎಂದರೆ ನೀವು ಹೇಳಬೇಕೆಂದು ಕೊಂಡಿರುವ ವಿಷಯವನ್ನು ವಿಸ್ತಾರವಾಗಿ ಬರೆಯುವುದು ಇದು ಒಟ್ಟು ಪ್ರಬಂಧದ ಶೇ 80 ರಷ್ಟು ಭಾಗವನ್ನು ಒಳಗೊಂಡಿರಬೇಕು. ವಿಷಯದ ವಿಸ್ತರಣೆಯಲ್ಲಿ ಪ್ರಬಂಧದ ಸಾಕಷ್ಟು ಮಾಹಿತಿ ಒಳಗೊಂಡಿರಬೇಕು ಮತ್ತು ಮಾಹಿತಿಯು ನೀವು ಪ್ರಸ್ತುತ ಪಡಿಸುವ ವಿಷಯಕ್ಕೆ ಹತ್ತಿರವಾಗಿರಬೇಕು ವಿಷಯಕ್ಕೆ ದೂರವಿರುವ ಅಂಶಗಳನ್ನು ಪ್ರಬಂಧದಲ್ಲಿ ಬರೆಯಬಾರದು. ಪ್ರಬಂಧ ಬರೆಯುವಾಗ ವಿಷಯ ವಿಸ್ತರಣೆಯಲ್ಲಿ ಮಹತ್ವ, ಕಾರಣಗಳು, ಅನುಕೂಲಗಳು ಪರಿಣಾಮಗಳು, ಪ್ರಮುಖ ಘಟನಾವಳಿಗಳು, ಸ್ಪಷ್ಟ ಅಂಕಿಅಂಶಗಳು, ಸಲಹೆ ಸೂಚನೆಗಳನ್ನು, ಸರ್ಕಾರದ ಕಾರ್ಯಕ್ರಮಗಳು ಮತ್ತು ಕರ್ತವ್ಯಗಳನ್ನು ಸೇರಿಸಿ ಬರೆಯುವುದರಿಂದ ಹೆಚ್ಚು ಪರಿಣಾಮಕಾರಿಯಾಗಿದೆ.
ಪ್ರಬಂಧದ ಮುಕ್ತಾಯ ಹೇಗಿರಬೇಕು ?
ಪ್ರಬಂಧದ ಉಪಸಂಹಾರ ಎಂದರೆ ಪ್ರಬಂಧವನ್ನು ಕೊನೆಗೊಳಿಸುವ ರೀತಿ ಇದು ಸಾಮಾನ್ಯವಾಗಿ ಒಟ್ಟು ಪ್ರಬಂಧದ ಶೇ 10 ರಷ್ಟು ಅಂಶವನ್ನು ಒಳಗೊಂಡಿರಲಿ. ಇಲ್ಲಿ ಮುಖ್ಯವಾಗಿ ಗಾದೆಮಾತುಗಳು, ಉಕ್ತಿಗಳು, ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳನ್ನು ಬರೆದು ಏನಾದರು ನಿಮ್ಮ ಸಲಹೆ ಸೂಚನೆಗಳು ಇದ್ದರೆ ಬರೆಯಬಹುದು. ಉಪಸಂಹಾರದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ ಉತ್ತಮ ರೀತಿಯಲ್ಲಿ ಪ್ರಬಂಧವನ್ನು ಮುಕ್ತಾಯಗೊಳಿಸಿ. ನೀವು ಪ್ರಬಂಧವನ್ನು ಕೊನೆಗೊಳಿಸುವ ರೀತಿ ಮೌಲ್ಯಮಾಪಕರಿಗೆ ಇಷ್ಟವಾಗುವ ರೀತಿಯಲ್ಲಿರಬೇಕು.
ಪ್ರಬಂಧವನ್ನು ಬರೆಯಲು ಕೆಲವು ಸಲಹೆಗಳು ✍️
- ಪಿಠಿಕೆ, ಪ್ರಬಂಧ ಬೆಳವಣಿಗೆ, ಉಪಸಂಹಾರ ಎಂದು ಬರೆಯುವ ಅಗತ್ಯ ಇಲ್ಲ.
- ನಿಮ್ಮ ಪ್ರಬಂಧವು ನಿಗದಿಪಡಿಸಿದ ಪದಗಳ ಮಿತಿಗೊಳಪಟ್ಟಿರಬೇಕು.
- ಪದೇ ಪದೇ ತಿದ್ದಿ ಪ್ರಬಂಧದ ಅಂದವನ್ನು ಹಾಳು ಮಾಡಬಾರದು.
- ಒಂದೇ ಬಣ್ಣದ ಪೆನ್ನನ್ನು ಬಳಸಿ. ಬೇರೆ ಬೇರೆ ಬಣ್ಣದ ಪೆನ್ನನ್ನು ಬಳಸಬಾರದು.
- ದೇವರ ಹೆಸರನ್ನು ಬರೆದು ಪ್ರಬಂಧ ಬರೆಯಲು ಪ್ರಾರಂಭಿಸಲು ಹೋಗಬೇಡಿ ಮತ್ತು ಯಾವುದೆ ಧಾರ್ಮಿಕ ಚಿನ್ಹೆಗಳನ್ನು ಬಳಸಬೇಡಿ.
- ಬರವಣಿಗೆ ಅಂದವಾಗಿ ಮತ್ತು ಸ್ಪಷ್ಟವಾಗಿರಬೇಕು.
- ಪ್ರತಿ ಪುಟಗಳಿಗೆ 2 ರಿಂದ 3 ಪ್ಯಾರಾ ಪ್ರಬಂಧದ ಅಂದವನ್ನು ಹೆಚ್ಚಿಸುತ್ತದೆ.
0 ಕಾಮೆಂಟ್ಗಳು