ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

SSLC ನಂತರ ಕೋರ್ಸ್ ಆಯ್ಕೆಗಳ ಮಾಹಿತಿ

SSLC ನಂತರ ಕೋರ್ಸ್ ಗಳ ಆಯ್ಕೆ

SSLC ನಂತರ ಮುಂದೇನು ? ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ಎಲ್ಲಾ‌ ವಿದ್ಯಾರ್ಥಿಗಳಲ್ಲಿ ಮೂಡುವುದು ಸಹಜ ಯಾಕೆಂದರೆ SSLC ನಂತರ ನಾವು ತೆಗೆದುಕೊಳ್ಳುವ ನಿರ್ಧಾರ ತುಂಬಾ ಮುಖ್ಯವಾಗಿರತ್ತೆ. ಇದು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಆದ್ದರಿಂದ ವಿದ್ಯಾರ್ಥಿಗಳು SSLC ನಂತರ ಯಾವ ಕೋರ್ಸ್ ಮಾಡಿದರೆ ಉತ್ತಮ ಹಾಗೂ ಯಾವ ಕೋರ್ಸ್ ಮಾಡಿದರೆ ಮುಂದೆ ಉತ್ತಮ ಉದ್ಯೋಗವಕಾಶಗಳು ದೊರೆಯುತ್ತವೆ ಎಂದು ಅರಿತು ಮುನ್ನಡೆಯಬೇಕು.


SSLC ನಂತರ ಕೋರ್ಸ್ ಆಯ್ಕೆಗಳ ಮಾಹಿತಿ

SSLC ನಂತರ ಯಾವೆಲ್ಲಾ ಕೋರ್ಸ್ ಗಳಿವೆ

1. PUC 
2. Diploma Eng.
3. Paramedical Science
4. ITI
5. Certificate Course 


SSLC ನಂತರ ಇರುವ ಕೋರ್ಸ್ ಆಯ್ಕೆ ಹೇಗಿರಬೇಕು

1. ಸ್ಪಷ್ಟ ಗುರಿ 

SSLC ನಂತರ ಮುಂದಿನ ಕೋರ್ಸ್ ಗಳ ಆಯ್ಕೆ ಮಾಡಬೇಕಾದರೆ ಸ್ಪಷ್ಟ ಗುರಿ ಹೊಂದಿರಬೇಕು. ನೀವು ಆಯ್ಕೆ ಮಾಡಿಕೊಳ್ಳುವ ಕೋರ್ಸ್ ನಿಮ್ಮನ್ನು ನಿಮ್ಮ ಗುರಿಯ ಕಡೆ ಕರೆದುಕೊಂಡು ಹೋಗುವ ಹಾಗಿರಬೇಕು. ಉದಾಹರಣೆಗೆ ನೀವು ಮುಂದೆ ಒಂದು ಕಂಪನಿಯಲ್ಲಿ CS ಅಥವಾ CA ಆಗಿ ಕೆಲಸ ಮಾಡಬೇಕು ಎಂದು ಗುರಿ ಹೊಂದಿದ್ದರೆ ಅಥವಾ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದಾದರೆ SSLC ನಂತರ ನೀವು Commerce ವಿಭಾಗವನ್ನು ಆಯ್ಕೆ ಮಾಡಬೇಕು. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಆಸೆಯಿದ್ದಲ್ಲಿ Science ವಿಭಾಗವನ್ನು ಆಯ್ಕೆಮಾಡಿ ಅಥವಾ ಡಿಪ್ಲೊಮಾ ಕೋರ್ಸ್ ಆಯ್ಕೆ ಮಾಡಿಕೊಳ್ಳಿ ಹಾಗೂ ನೀವು ಪತ್ರಿಕೋದ್ಯಮದಲ್ಲಿ ಅಥವಾ ಸಮಾಜ ಕಾರ್ಯದಲ್ಲಿ ಕಾರ್ಯನಿರ್ವಹಿಸಬೇಕಾದರೆ Arts ವಿಭಾಗವನ್ನು ಆಯ್ಕೆ ಮಾಡಿ. ನೀವು ನಮ್ಮದೆ ಆದ ಉದ್ಯೋಗ ಸ್ಥಾಪಿಸುವ ಇಚ್ಛೆ ಇದ್ದರೆ ಹಲವಾರು ವೃತ್ತಿಪರ ಕೋರ್ಸ್ ಗಳಿವೆ ಒಟ್ಟಿನಲ್ಲಿ ನೀವು ಆಯ್ಕೆ ಮಾಡಿಕೊಳ್ಳುವ ಕೋರ್ಸ್ ನಿಮ್ಮನ್ನು ನಿಮ್ಮ ಗುರಿಯ ಕಡೆ ಕರೆದುಕೊಂಡು ಹೋಗುವ ಹಾಗಿರಬೇಕು.

2. ಕೋರ್ಸ್ ಬಗ್ಗೆ ಆಸಕ್ತಿ ಇರಲಿ

SSLC ನಂತರ ನೀವು ಯಾವುದೇ ಕೋರ್ಸ್ ಆಯ್ಕೆ ಮಾಡಿಕೊಂಡರು ಆ ಕೋರ್ಸ್ ಬಗ್ಗೆ ಆಸಕ್ತಿ ಇರಲಿ. ಆಸಕ್ತಿಯಿಂದ ನೀವು ಕೋರ್ಸ್ ಆಯ್ಕೆ ಮಾಡಿಕೊಂಡರೆ ಅದರಲ್ಲಿ ಉತ್ತಮ ಯಶಸ್ಸು ಪಡೆಯಬಹುದು.

3. ನಿಮ್ಮಿಷ್ಟದ ಕೋರ್ಸ್ ಆಯ್ಕೆ ಮಾಡಿ 

SSLC ನಂತರ ಮುಂದಿನ ಕೋರ್ಸ್ ಆಯ್ಕೆ ಮಾಡುವಾಗ ನಿಮ್ಮಿಷ್ಟದ ಕೋರ್ಸ್ ಆಯ್ಕೆ ಮಾಡಿ. ನೀವು ಮಾಡಲು ಬಯಸುವ ಕೋರ್ಸ್ ಗಳ ಕುರಿತು ನಿಮ್ಮ ಸಿನಿಯರ್ಸ್ ಅವರಿಂದ ಆ ಕೋರ್ಸ್ ಗಳ ಸಂಪೂರ್ಣ ಮಾಹಿತಿ ತಿಳಿಯಿರಿ. ಎಲ್ಲಾ ಸಾಧಕ ಬಾಧಕಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಿ.

4. ಕೋರ್ಸ್ ಕುರಿತು ಮಾಹಿತಿ ಪಡೆಯಿರಿ 

SSLC ನಂತರ ನೀವು ಮಾಡುವ ಕೋರ್ಸ್ ಗಳ ಬಗ್ಗೆ  ಸಾಕಷ್ಟು ತಿಳಿಯಿರಿ. ಈಗಾಗಲೇ ನಿಮ್ಮ ಸಿನಿಯರ್ಸ್ ಅವರಿಂದ ಮಾಹಿತಿ ಪಡೆಯಿರಿ. ನೀವು ಆಯ್ಕೆ ಮಾಡಿಕೊಳ್ಳುವ ಕೋರ್ಸ್ ಗಳ ಮುಂದೆ ಭವಿಷ್ಯದಲ್ಲಿ ನೀಡುವ ಉದ್ಯೋಗವಕಾಶಗಳನ್ನು ತಿಳಿಯಿರಿ. ನೀವು ಆಯ್ಕೆ ಮಾಡಿಕೊಳ್ಳುವ ಕೋರ್ಸ್ ಗಳಿಗೆ ಸರ್ಕಾರಿ ಮತ್ತು ಖಾಸಗಿ ಎರಡು ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳು ಲಭ್ಯತೆ ಗಳ ಕುರಿತು ತಿಳಿಯಿರಿ .

5. ಕಾಲೇಜುಗಳ ಆಯ್ಕೆ  

SSLC ನಂತರ ಮುಂದಿನ ಉತ್ತಮ ಕೋರ್ಸ್ ಗಳ ಆಯ್ಕೆ ಮಾಡಿಕೊಳ್ಳುವುದು ಎಷ್ಟು ಮುಖ್ಯವೋ ಅಷ್ಟೇ ಉತ್ತಮ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವುದು ಪ್ರಮುಖ ಕೆಲಸವಾಗಿದೆ. ವಿದ್ಯಾರ್ಥಿಗಳಲ್ಲಿ ಉತ್ತಮ ರೀತಿಯಲ್ಲಿ ಕೌಶಲ್ಯತೆಯನ್ನು ಬೆಳೆಸುವುದರ ಮೂಲಕ ಉತ್ತಮ ರೀತಿಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಪಾಠ ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ತಮ್ಮ ಗುರಿ ಸಾಧಿಸಲು ಸರಿಯಾದ ಮಾರ್ಗದರ್ಶನದಲ್ಲಿ ಕರೆದುಕೊಂಡು ಹೋಗುವ ಕಾಲೇಜುಗಳನ್ನು ಆಯ್ಕೆಮಾಡಿಕೊಳ್ಳಬೇಕು. ಉತ್ತಮ ಕೋರ್ಸ್ ಆಯ್ಕೆ ಮಾಡಿ ಸರಿಯಾಗಿ ಪಾಠ ಬೋಧಿಸುವ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ಸಾಕಷ್ಟು ತೊಂದರೆಯನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಉತ್ತಮ ಕೋರ್ಸ್ ಆಯ್ಕೆ ಮಾಡಿಕೊಂಡು ಉತ್ತಮ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಮುಖ್ಯ. ಕೆಲವೊಂದು ವಿದ್ಯಾರ್ಥಿಗಳು ಉತ್ತಮ ಕಾಲೇಜುಗಳಲ್ಲಿ ಓದುತ್ತಿದ್ದರು ಹಿಂದುಳಿಯುತ್ತಾರೆ ಅವರಲ್ಲಿ ಓದುವ ಆಸಕ್ತಿಯೆ ಇಲ್ಲವಾದರೆ ಏನು ಪ್ರಯೋಜನ ಹಿಗಾಗಿ ಯಾವುದೇ ಕೋರ್ಸ್ ನಲ್ಲಿ ಓದಬೇಕಾದರೆ ಆಸಕ್ತಿ, ಕೌಶಲ್ಯತೆ, ಸೃಜನಶೀಲತೆ, ಹಾಗೂ ಸ್ಪಷ್ಟಗುರಿ ಇರಬೇಕು ಅಂದಾಗ ಮಾತ್ರ ಆ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಗಳಿಸಬಹುದು. ಕೆಲವೊಂದು ವಿದ್ಯಾರ್ಥಿಗಳು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಇರುವಂತ ಶಿಕ್ಷಣ ಸರ್ಕಾರಿ ಕಾಲೇಜಿನಲ್ಲಿ ಇರುವುದಿಲ್ಲ ಎಂಬ ಮನೋಭಾವ ಹೊಂದಿರುತ್ತಾರೆ ಆದರೆ ಇದು ಅವರ ತಪ್ಪು ಕಲ್ಪನೆಯಾಗಿದೆ ಎಷ್ಟೋ ಸರ್ಕಾರಿ ಕಾಲೇಜಿನಲ್ಲಿ ಇರುವಷ್ಟು ಉತ್ತಮ ಶಿಕ್ಷಣ ಖಾಸಗಿ ಕಾಲೇಜುಗಳಲ್ಲಿ ಇರುವುದೆ ಇಲ್ಲ ಹಿಗಾಗಿ ನೀವು ಯಾವುದೇ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಮೊದಲು ಈಗಾಗಲೇ ಅಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳನ್ನು ಕೇಳಿ ಅವರಿಂದ ಮಾರ್ಗದರ್ಶನ ಪಡೆಯಿರಿ ಅಲ್ಲಿ ಯಾವ ರೀತಿ ಶಿಕ್ಷಣ ಇದೆ ಎಂಬುದನ್ನು ಕೇಳಿ ನಂತರ ಪ್ರವೇಶ ಪಡೆಯಿರಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Call Letter Update of Central and State Government Recruitment