ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ಭಾರತದ ವಾಯುಗುಣ

ಭಾರತದ ವಾಯುಗುಣ : ಭಾರತವು ಉಷ್ಣವಲಯದ ಮಾನ್ಸೂನ್‌ ಮಾದರಿಯ ವಾಯುಗುಣ ಹೊಂದಿದೆ. ಮಾನ್ಸೂನ್‌ ಎಂಬ ಪದವು ಅರೇಬಿಕ್‌ ಭಾಷೆಯ ಮೌಸಿಮ್‌ ಎಂಬ ಪದದಿಂದ ಬಂದಿದೆ ಅಂದರೆ ಋತುಮಾನ ಅಥವಾ ನಿಯತಕಾಲಿಕೆ ಎಂಬ ಅರ್ಥನಿಡುತ್ತದೆ. ಭಾರತದ ವ್ಯವಸಾಯವನ್ನು ಮಾನ್ಸೂನ್‌ ಮಳೆ ಜೋತೆಗೆ ಆಡುವ ಜೂಟಾಟ ಎನ್ನುವರು.

ಭಾರತದ ವಾಯುಗುಣ, about india climate


ಭಾರತದಲ್ಲಿ ಕಂಡುಬರುವ 04 ವಿಧದ ಋತುಮಾನಗಳು

1. ಬೇಸಿಗೆ ಕಾಲ ( ಮಾರ್ಚ್‌ ನಿಂದ ಮೇ ವರೆಗೆ )

ಈ ವೇಳೆಯಲ್ಲಿ ಸೂರ್ಯನ ಕಿರಣಗಳು ಉತ್ತರಾರ್ಧಗೋಳಕ್ಕೆ ಬೀಳುವುದರಿಂದ ಅತಿ ಹೆಚ್ಚು ಉಷ್ಣಾಂಶ ಇರುತ್ತದೆ ರಾಜಸ್ಥಾನದ ಗಂಗಾ ನಗರವು 52 ಡಿಗ್ರಿ ಸೆಂ ನಷ್ಟು ಉಷ್ಣಾಂಶ ಹೊಂದಿದ್ದು ದೇಶದಲ್ಲಿ ಅತಿ ಹೆಚ್ಚು ಉಷ್ಣಾಂಶ ಹೊಂದಿದ ಪ್ರದೇಶವಾಗಿದೆ.
ಈ ಪ್ರದೇಶದಲ್ಲಿ ಎಪ್ರೀಲ್‌ ಮತ್ತು ಮೇ ತಿಂಗಳಲ್ಲಿ ಪ್ರಚಲನ ಪ್ರವಾಹದಿಂದ ಮಳೆಯಾಗುತ್ತದೆ ಈ ಮಳೆಯನ್ನು ಪಶ್ಚಿಮ ಬಂಗಾಳದಲ್ಲಿ ಬೈಸಾಕಿ ಎಂದು ದಕ್ಷಿಣ ಭಾರತದ ಕರ್ನಾಟಕದಲ್ಲಿ ಕಾಫಿ ತುಂತುರು ಹಾಗೂ ಕೇರಳದಲ್ಲಿ ಮಾವಿನ ಕೊಯ್ಲು ಎಂದು ಕರೆಯುತ್ತೆವೆ. ಬೇಸಿಗೆಯಲ್ಲಿ ದೇಶದ ಒಟ್ಟು ಮಳೆಯಲ್ಲಿ ಶೇ 10 ರಷ್ಟು ಮಾತ್ರ ಮಳೆಯನ್ನು ಪಡೆಯುತ್ತೆವೆ. 

2. ನೈರುತ್ಯ ಮಾನ್ಸೂನ್‌ ( ಜೂನ್‌ ನಿಂದ ಸೆಪ್ಟೆಂಬರ್‌ ವರೆಗೂ )

ಇದನ್ನು ಮುಂಗಾರು ಮಳೆ ಎಂದು ಕರೆಯುತ್ತೆವೆ. ಭಾರತದಲ್ಲಿ ಅತಿ ಹೆಚ್ಚು ಭಾಗದಲ್ಲಿ ಮಳೆ ಸುರಿಸುತ್ತದೆ. ಭಾರತದ ಒಟ್ಟು ಮಳೆಯಲ್ಲಿ ಶೇ 25 ರಷ್ಟು ಮಳೆ ಈ ವೇಳೆಯಲ್ಲಿ ಬೀಳುತ್ತದೆ ತಮಿಳುನಾಡು ಹೊರತುಪಡಿಸಿ, ಭಾರತದ ಹೆಚ್ಚು ಭಾಗಕ್ಕೆ ನೈರುತ್ಯ ಮಳೆ ಸುರಿಸುತ್ತದೆ.


3. ಮಾನ್ಸೂನ್‌ ಮಾರುತಗಳ ನಿರ್ಗಮನ ಕಾಲ (ಹಿಂಗಾರು ಮಳೆಗಾಲ ) ಅಕ್ಟೋಬರ್‌ ನಿಂದ ನವೆಂಬರ )

ನೈರುತ್ಯ ಮಾನ್ಸೂನ್‌ ಮಾರುತಗಳು ಅಕ್ಟೋಬರ್‌ ನಲ್ಲಿ ನಿಧಾನವಾಗಿ ನವೆಂಬರ ತಿಂಗಳ ವೇಳೆಗೆ ಬಿಸುವುದನ್ನು ನಿಲ್ಲಿಸುತ್ತವೆ . ಈ ಕಾಲವನ್ನೆ ಮಾನ್ಸೂನ್‌ ಮಾರುತಗಳ ನಿರ್ಗಮನ್‌ ಕಾಲ ಅಥವಾ ಮಾನ್ಸೂನ್‌ ಮಾರುತಗಳ ಕಾಲ ಎನ್ನುವರು. ಈ ಅವಧಿಯಲ್ಲಿ ಭಾರತವು ಶೇ 13 ರಷ್ಟು ಮಳೆಯನ್ನು ಪಡೆಯುತ್ತವೆ, ಈ ಕಾಲದಲ್ಲಿ ಚಂಡಮಾರುತಗಳು ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ನಿರ್ಮಾನಗೊಳ್ಳುತ್ತದೆ. 

೪. ಚಳಿಗಾಲ - ಡಿಸೆಂಬರ್‌ ನಿಂದ ಫೆಬ್ರುವರಿ 

ಈ ವೇಳೆಯಲ್ಲಿ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶಗಳಲ್ಲಿ ಉಷ್ಣಾಂಶ ತುಂಬಾ ಕಡಿಮೆಯಿದ್ದು. ದಕ್ಷಿಣ ಭಾರತದಲ್ಲಿ ಉಷ್ಣಾಂಶ ಸಾಧಾರಣವಾಗಿರುತ್ತದೆ. ಈ ವೇಳೆಯಲ್ಲಿ ವಾರ್ಷಿಕ ಮಳೆ ಶೇ 2 ರಷ್ಟು ಮಾತ್ರ ಇರುತ್ತದೆ. ಚಳಿಗಾಲದಲ್ಲಿ ಅತಿ ಕಡಿಮೆ ಮಳೆಯನ್ನು ಪಡೆಯುತ್ತೆವೆ. 

ಭಾರತದಲ್ಲಿ ಮಳೆಯ ಹಂಚಿಕೆಯ ಪ್ರಮಾಣ

ಎ) ಕಡಿಮೆ ಮಳೆ ಬಿಳುವ ಪ್ರದೇಶ 

ಈ ಪ್ರದೇಶದಲ್ಲಿ ವಾರ್ಷಿಕ 50 ಸೆ ಮೀ ಗಿಂತ ಕಡಿಮೆ ಮಳೆ ಬಿಳುತ್ತದೆ.  ರಾಜಸ್ಥಾನದ ಥಾರ ಮರಭೂಮಿ ಅದಕ್ಕೆ ಹೊಂದಿಕೊಂಡಿರುವ ಪಂಜಾಬ ಹರಿಯಾಣ ಗುಜರಾತನ ಕಛ್‌ ಪ್ರದೇಶ ಕರ್ನಾಟಕದ ಒಳನಾಡುಗಳನ್ನು ಒಳಗೊಂಡಿದೆ ರಾಜಸ್ಥಾನದ ರೊಹ್ಲಿ 8.3 ಸೆ ಮೀ ಮಳೆಯನ್ನು ಪಡೆಯುತ್ತದೆ ಇದು ದೇಶದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ.

ಬಿ) ಸಾಧಾರಣ ಮಳೆಯ ಪ್ರದೇಶಗಳು 

50 ರಿಂದ 250 ಸೆ ಮೀ ಮಳೆಯನ್ನು ಪಡೆಯುವ ಪ್ರದೇಶಗಳಾಗಿವೆ.

ಸಿ) ಅಧಿಕ ಮಳೆಯ ಪ್ರದೇಶಗಳು 

250 ಸೆ ಮೀ ಗಿಂತ ಅಧಿಕ ಮಳೆಯನ್ನು ಪಡೆಯುವ ಪ್ರದೇಶಗಳಾಗಿವೆ. ಮೇಘಾಲಯದ ಮೌಸಿನ್‌ ರಾಂ ಜಗತ್ತಿನಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಕರ್ನಾಟಕದಲ್ಲಿ ಆಗುಂಬೆ ಯು ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಕರ್ನಾಟಕದ ಭೂಗೋಳ ಶಾಸ್ತ್ರದ ಕಿರು ಪರಿಚಯ ಜಗತ್ತಿನಲ್ಲಿ ಭಾರತದ ವಾಯುಗುಣ ಬೇರೆ ದೇಶದಲ್ಲಿ ಕಾಣಲು ಸಾಧ್ಯವಿಲ್ಲ ಭಾರತವು ವಿಶಿಷ್ಟವಾದ ಹವಾಮಾನ ಮತ್ತು ವಾಯುಗುಣವನ್ನು ಹೊಂದಿದೆ.

ಭಾರತದ ಭೂ ಬಳಕೆ ಮತ್ತು ವ್ಯವಸಾಯ


ನಿವ್ವಳ ಸಾಗುವಳಿ ಕ್ಷೇತ್ರ: ಭಾರತವು ಪ್ರಪಂಚದ ಸಾಗುವಳಿ ಕ್ಷೇತ್ರದ ವಿಸ್ತೀರ್ಣದಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ಮೊದಲನೆ ಸ್ಥಾನದಲ್ಲಿ ಅಮೇರಿಕಾ ಸ್ಥಾನವನ್ನು ಪಡೆದಿದೆ

ಅರಣ್ಯ ಭೂಮಿ : ಭಾರತದ ಸಮೀಕ್ಷೆಯ ಪ್ರಕಾರ ಒಟ್ಟು ಪ್ರದೇಶದಲ್ಲಿ ಪ್ರತಿಶತ 21.3% ರಷ್ಟು ಅರಣ್ಯವಿದೆ.

ವ್ಯವಸಾಯೇತರ ಬಳಕೆ : ಕೈಗಾರಿಕೆ, ರಸ್ತೆ, ಜಲಾಶಯ, ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗುತ್ತಿದೆ.

ಹುಲ್ಲುಗಾವಲು ಪ್ರದೇಶ : ಹಿಮಾಚಲ ಪ್ರದೇಶವು ಹೆಚ್ಚು ಹುಲ್ಲುಗಾವಲನ್ನು ಹೊಂದಿದ ಪ್ರದೇಶವಾಗಿದ್ದು, ಪಂಜಾಬ್, ಹರಿಯಾಣ, ರಾಜ್ಯಗಳು ಅತಿ ಕಡಿಮೆ ಹೊಂದಿವೆ.

ವ್ಯವಸಾಯ

ಭಾರತವು ಕೃಷಿ ಪ್ರಧಾನವಾದ್ದರಿಂದ ಅತಿ ಹೆಚ್ಚು ಭೂಮಿಯನ್ನು ಸಾಗುವಳಿಗೆ ಬಳಸುತ್ತಿದೆ. ಭಾರತದ ಪ್ರಮುಖ ಉದ್ಯೋಗವು ವ್ಯವಸಾಯವೆ ಆಗಿದೆ.

ಭಾರತದಲ್ಲಿ ವ್ಯವಸಾಯ ಕ್ಷೇತ್ರದ ಸಂಶೋಧನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳು.
  • ICAR (Indian Council of Agriculture Research) ಇದರ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ.
  • IIHR (Indian Institute of Horticulture Research) ಇದರ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ.

ವ್ಯವಸಾಯದ ವಿಧಗಳು

  1. ಸಾಂದ್ರ ಬೇಸಾಯ (intensive farming) ಒಂದೇ ವ್ಯವಸಾಯ ಕ್ಷೇತ್ರದಿಂದ 2 ರಿಂದ 3 ಬೆಳೆಗಳನ್ನು ಬೆಳೆಯುವುದನ್ನು ಸಾಂದ್ರ ಬೇಸಾಯ ಎನ್ನುವರು.
  2. ಜೀವನಾಧಾರದ ಬೇಸಾಯ ರೈತರು ತಮ್ಮ ಜೀವನಕ್ಕೆ ಅವಶ್ಯಕವಿರುವ ಹುಟ್ಟುವಳಿಗಳನ್ನು ಬೆಳೆಯುವುದಕ್ಕೆ ಜೀವನಾಧಾರ ಬೇಸಾಯ ಎನ್ನುವರು. ಇದರಲ್ಲಿ 2 ವಿಧ ಎ) ಸ್ಥಿರ ಬೇಸಾಯ, ಬಿ) ಸ್ಥಳಾಂತರ ಬೇಸಾಯ
  3. ವಾಣಿಜ್ಯ ಬೇಸಾಯ ವ್ಯಾಪಾರದ ಉದ್ದೆಶದಿಂದ ಮಾಡುವ ಬೇಸಾಯ ಉದಾಹರಣೆಗೆ:- ಅಡಿಕೆ, ತೆಂಗು, ಹೊಗೆಸೊಪ್ಪು, ಕಬ್ಬು, ಹತ್ತಿ, ರಬ್ಬರ್, ಕಾಫಿ, etc.
  4. ಮಿಶ್ರ ಬೇಸಾಯ: ಕೃಷಿ ಭೂಮಿಯನ್ನು ಬೆಳೆಯುವುದಷ್ಟೆ ಅಲ್ಲದೇ ದನಕರು ಸಾಕಾಣಿಕೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ, ಹಂದಿ ಸಾಕಾಣಿಕೆ ಮುಂತಾದ ಉದ್ದೇಶಗಳಿಗೆ ಬಳಸುವುದು.
  5. ತೋಟಗಾರಿಕೆ ( Horticulture ) ಒಂದೇ ಬೆಳೆಯನ್ನು ವಿಸ್ತಾರವಾಗಿ ಬೆಳೆಯುವುದು. ಉದಾಹರಣೆಗೆ:- ಮಾವು, ಹೂವು, ಚಹಾ, ಕಾಫಿ, etc.
ಭಾರತದ ಹವಾಮಾನ ಮತ್ತು ಭೂ ಬಳಕೆ ಮತ್ತು ವ್ಯವಸಾಯದ ಶಾರ್ಟ ನೋಟ್ಸ್

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

KEA and KPSC Recruitment Notifications - Reservation wise post