ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಶ್ನೋತ್ತರಗಳು ಪಿಡಿಎಫ್

ವಿಜ್ಞಾನದ ಪ್ರಮುಖ ನಿಯಮಗಳು ಹಾಗೂ ಅವುಗಳ ಅನ್ವಯಿಕಗಳು : ಎಲ್ಲಾ SDA, FDA, PSI, PC, PDO, ಸ್ಪಧಾ೯ತ್ಮಕ ಪರೀಕ್ಷೆಯಲ್ಲಿ ವಿಜ್ಞಾನದ ನಿಯಮಗಳು ಹಾಗೂ ಅವುಗಳ ಅನ್ವಯಿಕಗಳ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಶ್ನೋತ್ತರಗಳು ಪಿಡಿಎಫ್

ಆರ್ಕಿಮಿಡಿಸ್ ತತ್ವ

ಆರ್ಕಿಮಿಡೀಸ್ ತತ್ವದ ನಿಯಮ : ಒಂದು ದ್ರವದಲ್ಲಿರುವ ವಸ್ತುವನ್ನು ಮೇಲ್ಮುಖವಾಗಿ ಒತ್ತುವ ಬಲವನ್ನು ಆ ವಸ್ತುವು ಹೊರದೂಡಿದ ದ್ರವದ ತೂಕಕ್ಕೆ ಸಮನಾಗಿರುತ್ತದೆ.

ಉದಾಹರಣೆಗೆ: ಒಂದು ಕಲ್ಲನ್ನು ಪೂರ್ಣ ಪ್ರಮಾಣದಲ್ಲಿ ನೀರು ತುಂಬಿದ ಪಾತ್ರೆಯಲ್ಲಿ ಎಸೆದಾಗ ಕಲ್ಲಿನಷ್ಟೇ ತೂಕದ ನೀರು ಹೊರಚೆಲ್ಲುತ್ತದೆ.

ಆರ್ಕಿಮಿಡೀಸ್ ತತ್ವದ ಅನ್ವಯ 

  • ಮೊಟ್ಟೆಯು ನೀರಿನಲ್ಲಿ ಮುಳುಗುವುದು ಮತ್ತು ಉಪ್ಪುನೀರಿನಲ್ಲಿ ತೇಲುವುದು
  • ಕಬ್ಬಿಣದ ಸಣ್ಣ ಮೊಳೆ ನೀರಿನಲ್ಲಿ ಮುಳುಗುವುದು ಹಡಗು ತೇಲುವುದು
  • ಕಬ್ಬಿಣವು ನೀರಿನಲ್ಲಿ ಮುಳುಗಿದರೆ ಪಾದರಸದಲ್ಲಿ ತೇಲುತ್ತದೆ.

ಆಲ್ಬರ್ಟ್ ಐನ್ಸ್ಟೀನ್ ಅವರ ಸಾಪೇಕ್ಷತಾ ಸಿದ್ಧಾಂತ 

ಆಲ್ಬರ್ಟ್ ಐನ್ಸ್ಟೀನ್ ಅವರ ಸಾಪೇಕ್ಷತಾ ಸಿದ್ಧಾಂತ ಈ ರೀತಿಯಾಗಿ ವಿವರಿಸುತ್ತದೆ ಬೆಳಕಿನ ವೇಗವನ್ನು ಹೊರತುಪಡಿಸಿ ಉಳಿದೆಲ್ಲವೂ ಕೂಡ ಸಾಪೇಕ್ಷವಾದವು, ಬೆಳಕಿನ ಶಕ್ತಿ ಮಾತ್ರ ನಿರಪೇಕ್ಷವಾಗಿದೆ.

ಉದಾಹರಣೆಗೆ : ಪ್ರತಿಯೊಂದು ವಸ್ತುವನ್ನು ಮತ್ತೊಂದು ವಸ್ತುವಿಗೆ ಹೋಲಿಸಬಹುದು ಆದರೆ ಬೆಳಕಿನ ವೇಗವನ್ನು ಮಾತ್ರ ಹೋಲಿಕೆ ಮಾಡಲು ಸಾಧ್ಯವಿಲ್ಲ.

ಡಾಪ್ಲರ್ ನ ನಿಯಮ 

ಡಾಪ್ಲರ್ ನಿಯಮವು ಶಬ್ದಕ್ಕೆ ಸಂಬಂಧಿಸಿದ್ದು ಒಂದು ಶಬ್ದ ಮಾಡುವಂತಹ ವಾಹನವು ಹತ್ತಿರ ಬಂದಂತೆ ಶಬ್ದವು ಹೆಚ್ಚಾಗುತ್ತದೆ ಹಾಗೂ ದೂರ ಹೋದಂತೆ ಶಬ್ದವು ಕಡಿಮೆಯಾಗುವುದು ಇದು ಡಾಪ್ಲರ್ ನ ಪರಿಣಾಮವಾಗಿದೆ.

ಡಾಪ್ಲರ್ ಪರಿಣಾಮದ ಅನ್ವಯ

  • ಒಂದು ಬಸ್ಸು ಬಸ್ಟ್ಯಾಂಡ್ ಹತ್ತಿರ ಬಂದಂತೆ ಶಬ್ದ ಹೆಚ್ಚು ಕೇಳಿಸುತ್ತದೆ ಹಾಗೂ ದೂರ ಹೋದಂತೆ ಶಬ್ದ ಕಡಿಮೆ ಕೇಳಿಸುತ್ತದೆ.
  • ಆರಕ್ಷಕ ವಾಹನದ ಸೈರನ್
  • ಆಂಬುಲೆನ್ಸ್ ವಾಹನದ ಸೈರನ್ ಶಬ್ದ
  • ಹಾಗೂ ಅಗ್ನಿಶಾಮಕದಳದ ವಾಹನದ ಶಬ್ದ

ಶಕ್ತಿ ನಿತ್ಯತೆಯ ನಿಯಮ

ಶಕ್ತಿ ನಿತ್ಯತೆಯ ನಿಯಮ ಸ್ಥಿತಿ ಶಕ್ತಿ ಕಡಿಮೆಯಾದಾಗ ಗತಿ ಶಕ್ತಿ ಹೆಚ್ಚಾಗುತ್ತದೆ ಆದ್ದರಿಂದ ಸೃಷ್ಟಿಸಲು ಹಾಗೂ ನಾಶಗೊಳಿಸಲು ಸಾಧ್ಯವಿಲ್ಲ

ಉದಾಹರಣೆ : ಒಂದು ಬೆಟ್ಟದ ಮೇಲೆ ಇರುವ ಕಲ್ಲು ಸ್ಥಿತಿ ಶಕ್ತಿ ಹೊಂದಿದ್ದು ಅದನ್ನು ನೂಕಿದಾಗ ಗತಿ ಶಕ್ತಿಯು ಉಂಟಾಗುತ್ತದೆ ಕಲ್ಲಿನಲ್ಲಿರುವ ಸ್ಥಿತಿ ಶಕ್ತಿಯನ್ನು ನಾಶ ಮಾಡಲು ಸಾಧ್ಯವಿಲ್ಲ.

ಶಕ್ತಿ ಸಂರಕ್ಷಣೆಯ ನಿಯಮ

ಶಕ್ತಿಯನ್ನು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಬದಲಾಯಿಸಬಹುದು ಹೀಗೆ ಬದಲಾಯಿಸುವಾಗ ಶಕ್ತಿಯಲ್ಲಿ ಲಾಭವಾಗಲಿ ಅಥವಾ ನಷ್ಟವಾಗಲಿ ಉಂಟಾಗುವುದಿಲ್ಲ.

ಉದಾಹರಣೆ : ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಬಹುದು ಹಾಗೂ ಗಾಳಿ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಬಹುದು ಮತ್ತು ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸಬಹುದು.

ಶಕ್ತಿಯನ್ನು ಒಂದು ವಿಧದಿಂದ ಮತ್ತೊಂದು ರೂಪಕ್ಕೆ ಪರಿವರ್ತಿಸುವ ಸಾಧನಗಳು

  • ಹೀಟರ್ - ವಿದ್ಯುತ್ ಶಕ್ತಿಯನ್ನು ಶಾಖ ಶಕ್ತಿಯಾಗಿ
  • ಬಲ್ಬ್ - ವಿದ್ಯುತ್ ಶಕ್ತಿಯನ್ನು ಬೆಳಕಿನ ಶಕ್ತಿಯಾಗಿ
  • ಸೌರಕೋಶ - ಸೌರ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ 
  • ಡೈನಮೋ - ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ
  • ಮೈಕ್ರೊಫೋನ್ - ಶಬ್ದ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ 

ಶಬ್ದದ ಪ್ರತಿಫಲನ ನಿಯಮ

ಶಬ್ದವು 16.6 ಮೀ ದೂರದ ತಡೆಗೆ ತಾಕಿ ಮತ್ತೆ ಪ್ರತಿಫಲನ ಅಥವಾ ಪ್ರತಿದ್ವನಿ ಉಂಟಾಗುತ್ತದೆ ಶಬ್ದವು ಪ್ರತಿಫಲನ ಗೊಳ್ಳಲು 33.2 ಮೀಟರ್ ದೂರ ಕ್ರಮಿಸುತ್ತದೆ.

ಟಿಂಡಾಲ್ ನಿಯಮ

ಬೆಳಕು ರಂದ್ರದ ಮೂಲಕ ಹಾದುಹೋಗುತ್ತಿರುವಾಗ ಅದನ್ನು 90 ಡಿಗ್ರಿ ಕೋನದಲ್ಲಿ ನೋಡಿದರೆ ಅದರ ಚಲಿಸುವ ಪಥವು ಶಂಕಾಕೃತಿಯಾಗ ಕಾಣುತ್ತದೆ ಈ ಪರಿಣಾಮವನ್ನು ಟಿಂಡಾಲ್ ನಿಯಮ ಎನ್ನುವರು.

ಟಿಂಡಾಲ್ ನಿಯಮದ ಅನ್ವಯ 

ಮನೆಯ ಕಿಟಕಿಯಿಂದ ಸೂರ್ಯನ ಬೆಳಕು ಕತ್ತಲೆ ಕೊನೆಯನ್ನು ಪ್ರವೇಶಿಸುವಾಗ ಟಿಂಡಾಲ್ ನಿಯಮ ಕಂಡುಬರುತ್ತದೆ.

ವಿಜ್ಞಾನದ ಹಾಗೂ ಸಾಮಾನ್ಯ ಜ್ಞಾನದ ಪ್ರಮುಖ ಪ್ರಶ್ನೋತ್ತರಗಳ 

ಡೌನ್ಲೋಡ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

Click Here to Download

ವಿಜ್ಞಾನದ ಕೆಲವೊಂದು ಅನ್ವಯಿಕ ಪ್ರಶ್ನೆಗಳು ಹಾಗೂ ಉತ್ತರ

1. ನಕ್ಷತ್ರಗಳು ಮಿನುಗಲು ಕಾರಣ

ನಕ್ಷತ್ರಗಳಿಂದ ಬರುವ ಬೆಳಕು ವಾಯುಮಂಡಲದ ಹಲವು ಪದರುಗಳಲ್ಲಿ ದಾಟಿ ಬರುತ್ತದೆ ಇದರಿಂದ ಬೆಳಕಿನ ವಕ್ರೀಭವನ ಉಂಟಾಗಿ ನಕ್ಷತ್ರಗಳು ಮಿನುಗುತ್ತವೆ. 

2. ಮಾನವನ ಕೂದಲು ಅಕಾಲಿಕ ಬೆಳ್ಳಗಾಗಲು ಕಾರಣ

ಕೂದಲು ಅನುವಂಶಿಯತೆಯ ತೊಂದರೆಗಳು, ಹಾರ್ಮೋನುಗಳಲ್ಲಿ ಉಂಟಾಗುವ ವ್ಯತ್ಯಾಸ, 

3. ದಿಕ್ಕನ್ನು ತಿಳಿಯಲು ದಿಕ್ಸೂಚಿಯನ್ನು ಏಕೆ ಬಳಸಲಾಗುತ್ತದೆ

ಭೂಮಿಯ ಒಂದು ಅಯಸ್ಕಾಂತದಂತೆ ವರ್ತಿಸುತ್ತದೆ ದಿಕ್ಸೂಚಿಯಲ್ಲಿರುವ ಕಾಂತವು ಭೂಮಿಗೆ ಅನುಗುಣವಾಗಿ ಉತ್ತರ ದಕ್ಷಿಣವಾಗಿ ನಿಂತುಕೊಳ್ಳುತ್ತದೆ ಇದನ್ನು ಆಧರಿಸಿ ದಿಕ್ಕನ್ನು ತಿಳಿಯಬಹುದಾಗಿದೆ.

4. ರೈಲ್ವೆ ಟ್ರ್ಯಾಕ್ ನಲ್ಲಿ ದೀಪದ ಕಂಬಗಳು ಕೆಂಪು ಬಣ್ಣವನ್ನು ಹೊಂದಿರುತ್ತವೆ ಏಕೆ 

ಕೆಂಪು ಬಣ್ಣವು ಹೆಚ್ಚು ತರಂಗ ದೂರವನ್ನು ಹೊಂದಿದೆ ಹಾಗೂ ಮಂಜು ಕವಿದ ವಾತಾವರಣದಲ್ಲಿ ಎಲ್ಲಾ ಬಣ್ಣಗಳಂತೆ ಮಸುಕಾಗುವುದಿಲ್ಲ ಆದ್ದರಿಂದ ರೈಲ್ವೆ ಟ್ರ್ಯಾಕ್ ನಲ್ಲಿ ದೀಪದ ಕಂಬಗಳು ಕೆಂಪು ಬಣ್ಣವನ್ನು ಹೊಂದಿರುತ್ತವೆ.

5. ಉಪಗ್ರಹ ಉಡಾವಣೆ ಯಾವಾಗಲೂ ಪೂರ್ವಕ್ಕೆ ಮುಖ ಮಾಡಿರಲು ಕಾರಣ

ಉಪಗ್ರಹಗಳು ಮತ್ತು ಇತರೆ ಬಾಹ್ಯಾಕಾಶ ನೌಕೆಗಳನ್ನು ಭೂಮಿಯ ಸುತ್ತಲಿನ ಕಕ್ಷೆಯಲ್ಲಿ ಕೂರಿಸಲು ಅವುಗಳನ್ನು ಅತಿವೇಗವಾಗಿ ಉಡಾವಣೆ ಮಾಡಬೇಕಾಗುತ್ತದೆ.

ಭೂಮಿ ತಿರುಗುವ ವಿರುದ್ಧ ದಿಕ್ಕಿಗೆ ಉಡಾವಣೆ ಮಾಡಿದರೆ ಹೆಚ್ಚಿನ ಶಕ್ತಿಯು ವ್ಯಯವಾಗುತ್ತದೆ ಭೂಮಿಯು ಪಶ್ಚಿಮದಿಂದ ಪೂರ್ವಕ್ಕೆ ಪ್ರದಕ್ಷಿಣೆ ಹಾಕುವುದು ಮತ್ತು ಸೂರ್ಯನು ಪೂರ್ವದಿಂದ ಉದಯಿಸುವನು ಹೀಗಾಗಿ ಭೂಮಿ ಪ್ರದಕ್ಷಿಣೆ ಹಾಕುವ ದಿಕ್ಕಿಗೆ ಉಡಾವಣೆ ಮಾಡಿದರೆ ಬಾಹ್ಯಾಕಾಶಕ್ಕೆ ಹೆಚ್ಚಿನ ಭಾರವನ್ನು ಹೊತ್ತೊಯ್ಯಲು ಅನುಕೂಲ. ಆದರೆ ಉಪಗ್ರಹಗಳನ್ನು ಪೂರ್ವದಿಕ್ಕಿನಲ್ಲಿ ಉಡಾವಣೆ ಮಾಡಲಾಗುವುದಿಲ್ಲ ಭೂ ವೀಕ್ಷಣೆ ಉಪಗ್ರಹಗಳು ಭೂಮಂಡಲ ವೀಕ್ಷಿಸುವಂತೆ ಸಹಾಯಕವಾಗಲು ಅವುಗಳ ಧ್ರುವಗಳ ಕಕ್ಷೆಗೆ ಸೇರಿಸಲು ದಕ್ಷಿಣ ದಿಕ್ಕಿನಲ್ಲಿ ಉಡಾವಣೆ ಮಾಡಲಾಗುವುದು.

6. ಪ್ರೆಶರ್ ಕುಕ್ಕರ್ ನಲ್ಲಿ ಆಹಾರ ಬೇಗ ಬೇಯಲು ಕಾರಣ

ಪ್ರೆಶರ್ ಕುಕ್ಕರ್ನಲ್ಲಿ ಒತ್ತಡ ಹೆಚ್ಚಾಗಿರುತ್ತದೆ ಒತ್ತಡ ಹೆಚ್ಚಿದ್ದರೆ ಕುದಿಯುವ ಬಿಂದು ಹೆಚ್ಚಾಗಿರುತ್ತದೆ ಆದ್ದರಿಂದ ಪ್ರೆಶರ್ ಕುಕ್ಕರ್ ನಲ್ಲಿ ಆಹಾರ ಬೇಗ ಬೇಯುತ್ತದೆ.

ಇತರ ಹೆಚ್ಚಿನ ವಿಜ್ಞಾನದ ಪ್ರಮುಖ ನಿಯಮಗಳು ಹಾಗೂ ಅವುಗಳ ಅನ್ವಯಿಕಗಳು ನೋಟ್ಸ್‌ PDF Notes ಡೌನ್ಲೋಡ ಮಾಡಿ

Click Here to Download 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Call Letter Update of Central and State Government Recruitment