ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ಕನಾ೯ಟಕ ರಾಜ್ಯ ಪೊಲೀಸ್‌ ಇಲಾಖೆ ಬಗ್ಗೆ ಮಾಹಿತಿ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಹುದ್ದೆಗಳ ಹಂತಗಳು


ಪೊಲೀಸ್‌ ಮಹಾನಿದೇ೯ಶಕರು-DGP



ಹೆಚ್ಚುವರಿ ಪೊಲೀಸ್‌ ಮಹಾನಿದೇ೯ಶಕರು-ADGP



ಪೊಲೀಸ್‌ ಮಹಾನಿರಿಕ್ಷಕರು-IGP



ಉಪ ಪೊಲೀಸ್‌ ಮಹಾನಿರಿಕ್ಷಕರು-DIGP



ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ-SP



ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ-ASP



ಪೊಲೀಸ್‌ ಉಪ ಅಧೀಕ್ಷಕರು-DySP



ಪೊಲೀಸ್‌ ವೃತ್ತ ನಿರೀಕ್ಷಕರು-CPI



ಪೊಲೀಸ್‌ ಉಪನಿರೀಕ್ಷಕರು-PSI



ಸಹಾಯಕ ಪೊಲೀಸ್‌ ಉಪನಿರೀಕ್ಷಕರು-ASI



ಮುಖ್ಯ ಪೊಲೀಸ್‌ ಕಾನ್ಸ್ಟೇಬಲ್-Head Constable



ಪೊಲೀಸ್‌ ಕಾನ್ಸ್ಟೇಬಲ್-Police Constable



ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಹುದ್ದೆಗಳ ಮಾಹಿತಿ

  • ಪೊಲೀಸ್ ಮಹಾನಿರ್ದೇಶಕರು

Director General of Police DGP ರಾಜ್ಯ ಪೊಲೀಸ್ ಮಹಾನಿರ್ದೇಶಕರು ರಾಜ್ಯದ ಅತ್ಯುನ್ನತ ಪೊಲೀಸ್ ಅಧಿಕಾರಿಯಾಗಿದ್ದು ರಾಜ್ಯದ ಐಪಿಎಸ್ ಅಧಿಕಾರಿಗಳಲ್ಲಿಯೆ ಅತ್ಯುನ್ನತ ಹುದ್ದೆಯಾಗಿದೆ. ನೀಲಮಣಿ ಎನ್ ರಾಜು ಅವರು ಕರ್ನಾಟಕದ ಮೊಟ್ಟ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗಿದ್ದರು.

  • ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು 

Additional Director General of Police - ADGP ರಾಜ್ಯ ಪೊಲೀಸ್ ಮಹಾನಿರ್ದೇಶಕರ ಅಡಿಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರುಗಳು ಕಾರ್ಯನಿರ್ವಹಿಸುತ್ತಾರೆ. ಬೆಂಗಳೂರು ಕಮಿಷನರ್ ಹುದ್ದೆಯು ADGP ದರ್ಜೆಯ ಹುದ್ದೆಗೆ ಸಮನಾಗಿರುತ್ತದೆ. ಪೊಲೀಸ್ ಇಲಾಖೆಯ ಕೆಲವು ವಿಭಾಗಗಳಲ್ಲಿ ಇವರು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ.

  • ಪೊಲೀಸ್ ಮಹಾನಿರೀಕ್ಷಕರು IGP

Inspector General of Police ಈ ಹುದ್ದೆಯು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಅಡಿಯಲ್ಲಿ ಬರುವ ಹುದ್ದೆಯಾಗಿದ್ದು ಗ್ರಾಮೀಣ ಭಾಗದಲ್ಲಿ ಕೆಲವು ಜಿಲ್ಲೆಗಳನ್ನು ಒಟ್ಟುಗೂಡಿಸಿ ವಲಯಗಳನ್ನಾಗಿ ಮಾಡಲಾಗಿದ್ದು, ವಲಯಗಳ ಮುಖ್ಯಸ್ಥರಾಗಿ ಪೊಲೀಸ್ ಮಹಾನಿರೀಕ್ಷಕರು ಕಾರ್ಯನಿರ್ವಹಿಸುತ್ತಾರೆ.
ಪ್ರಸ್ತುತವಾಗಿ ಕರ್ನಾಟಕದಲ್ಲಿ 07 ವಲಯಗಳಿವೆ ಪ್ರತಿ ವಲಯಕ್ಕೂ ಪೊಲೀಸ್ ಮಹಾನಿರೀಕ್ಷಕರು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. ನಗರಗಳಾದ ಮೈಸೂರು ಮಂಗಳೂರು ಪೊಲೀಸ್ ಕಮಿಷನರ್ಗಳ ಹುದ್ದೆಯು ಐಜಿಪಿ ದರ್ಜೆಯ ಹುದ್ದೆಯಾಗಿದೆ

ವಲಯ

ಕೇಂದ್ರ

ಕಛೇರಿ

ವ್ಯಾಪ್ತಿಗೆ ಸೇರುವ

ಜಿಲ್ಲೆಗಳು

ದಕ್ಷಿಣ

ಮೈಸೂರು

ಮೈಸೂರು, ಕೊಡಗು

ಮಂಡ್ಯ, ಹಾಸನ, ಚಾಮರಾಜನಗರ

ಪಶ್ಚಿಮ

ಮಂಗಳೂರು

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು

ಪೂವ೯

ದಾವಣಗೆರೆ

ಚಿತ್ರದುಗ೯, ಹಾವೇರಿ, ಶಿವಮೊಗ್ಗ, ದಾವಣಗೇರೆ

ಕೇಂದ್ರ

ಬೆಂಗಳೂರು

ತುಮಕೂರು, ಕೋಲಾರ, ಬೆಂಗಳೂರು, ಕೆಜಿಎಫ್‌, ಚಿಕ್ಕಬಳ್ಳಾಪುರ, ರಾಮನಗರ

ಉತ್ತರ

ಬೆಳಗಾವಿ

ಬೆಳಗಾವಿ, ವಿಜಯಪುರ, ಧಾರವಾಡ, ಬಾಗಲಕೋಟೆ, ಗದಗ

ಈಶಾನ್ಯ

ಕಲ್ಬುಗಿ೯

ಕಲ್ಬುಗಿ೯, ಬೀದರ,

ಯಾದಗಿರಿ

ಬಳ್ಳಾರಿ

ಬಳ್ಳಾರಿ

ಬಳ್ಳಾರಿ, ರಾಯಚೂರು,

ಕೊಪ್ಪಳ

  • ಉಪ ಪೊಲೀಸ್ ಮಹಾನಿರೀಕ್ಷಕರು

Deputy Inspector General of Police DIGP
ಈ ಹುದ್ದೆಯು ಪೊಲೀಸ್ ಮಹಾನಿರೀಕ್ಷಕರ ಅಡಿಯಲ್ಲಿ ಬರುವ ಹುದ್ದೆಯಾಗಿದೆ ಬೆಳಗಾವಿ ನಗರದ ಪೊಲೀಸ್ ಕಮಿಷನರ್ ಗಳ ಹುದ್ದೆಯು ಉಪ ಪೊಲೀಸ್ ಮಹಾ ನಿರೀಕ್ಷಕರ DIG ಹುದ್ದೆಗೆ ಸಮನಾಗಿರುತ್ತದೆ.

  • ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Superintendent of Police SP ಇವರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದು ಜಿಲ್ಲೆಯ ಪೊಲೀಸ್ ಇಲಾಖಾ ವ್ಯಾಪ್ತಿಯ ಮುಖ್ಯಸ್ಥರಾಗಿರುತ್ತಾರೆ. ಬೆಂಗಳೂರು-ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ನಗರಗಳಲ್ಲಿ ನಗರ ಪೊಲೀಸ್ ಕಮಿಷನರ್ಗಳು ನಗರದ ನಿಯಂತ್ರಣ ಹೊಂದಿರುತ್ತಾರೆ ಉಳಿದ ಜಿಲ್ಲೆಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿಯುು ನಗರದ ಮೇಲೂ ಮತ್ತು ಗ್ರಾಮೀಣ ಭಾಗದಲ್ಲಿ ತಮ್ಮ ಅಧಿಕಾರ ವ್ಯಾಪ್ತಿಯನ್ನು  ಹೊಂದಿರುತ್ತಾರೆ.

  • ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ

Additional Superintendent of Police ASP
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ‌ ಅಧೀನದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಯಾಗಿರುತ್ತಾರೆ.

  • ಪೊಲೀಸ್ ಉಪ ಅಧೀಕ್ಷಕರು

Deputy Superintendent of Police DySP 
ಇವರು ಉಪವಿಭಾಗಗಳ ಪೊಲೀಸ್ ಮುಖ್ಯಸ್ಥರಾಗಿರುತ್ತಾರೆ ಅನೇಕ ತಾಲ್ಲೂಕುಗಳನ್ನು ಸೇರಿ ಉಪ ವಿಭಾಗವನ್ನು ಮಾಡಲಾಗಿರುತ್ತದೆ. ಇವರು ಕೆಎಸ್ಪಿಎಸ್ ದರ್ಜೆಯ ಅಧಿಕಾರಿಯಾಗಿರುತ್ತಾರೆ. ಇವರಲ್ಲಿ ಕೆಲವರು ಕೆಪಿಎಸ್ಸಿ ನಡೆಸುವ ಪ್ರೊಬೆಷನರಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆಯಾದರೆ ಕೆಲವರು ಬಡ್ತಿ ಮೂಲಕ ಆಯ್ಕೆಯಾಗುತ್ತಾರೆ.

  • ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್

Circle Police Inspector CPI ಇವರು ಉಪವಿಭಾಗದ ಪೊಲೀಸ್ ಅಧೀಕ್ಷಕರ‌‌ ಅಧೀನದಲ್ಲಿ ಗ್ರಾಮೀಣ ಪ್ರದೇಶದಲ್ಲಿ CPI ಆಗಿ ಕಾರ್ಯನಿರ್ವಹಿಸುತ್ತಾರೆ.

  • ಪೋಲಿಸ್ ಉಪನಿರೀಕ್ಷಕರು

Police Sub Inspector ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗ್ರಾಮೀಣ ಭಾಗದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಾರೆ. ಕೆಲವೂಬ್ಬರು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆಯಾದರೆ ಕೆಲವರು ಬಡ್ತಿ ಮೂಲಕ ಆಯ್ಕೆಯಾಗುತ್ತಾರೆ.

  • ಸಹಾಯಕ ಪೊಲೀಸ್ ಉಪ ನಿರೀಕ್ಷಕರು ASI

Assistant Police Sub Inspector ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳ ಅಧೀನದಲ್ಲಿ ಅಸಿಸ್ಟೆಂಟ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಇವರು ಕಾರ್ಯ ನಿರ್ವಹಿಸುತ್ತಾರೆ.

  • ಮುಖ್ಯ ಕಾನ್ಸ್ಟೇಬಲ್

Head Constable ಅಸಿಸ್ಟೆಂಟ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರ ಅಧೀನದಲ್ಲಿ ಮುಖ್ಯ ಕಾನ್ಸ್ಟೇಬಲ್ ಕಾರ್ಯನಿರ್ವಹಿಸುತ್ತಾರೆ.

  • ಪೊಲೀಸ್ ಕಾನ್ಸ್ಟೇಬಲ್

Police Constable ಮುಖ್ಯ ಕಾನ್ಸ್ಟೇಬಲ್ಗಳ ಅಧೀನದಲ್ಲಿ ಪೊಲೀಸ್ ಕಾನ್ಸ್ಟೇಬಲ್ಗಳು ಕಾರ್ಯನಿರ್ವಹಿಸುತ್ತಾರೆ.


ಕರ್ನಾಟಕ ರಾಜ್ಯದ ಗೃಹ ಸಚಿವಾಲಯ

ಪೋಲಿಸ್ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿಭಾಗಗಳು

  • ಗುಪ್ತಚರ ಇಲಾಖೆ
  • ಅಪರಾಧ ಮತ್ತು ತಾಂತ್ರಿಕ ಸೇವೆಗಳು
  • COD, ವಿಶೇಷ ಘಟಕ ಮತ್ತು ಆರ್ಥಿಕ ಅಪರಾಧ
  • ಕರ್ನಾಟಕ ರಾಜ್ಯ ಮೀಸಲು ಪೊಲೀಸ್
  • ಸಾರಿಗೆ ದೂರಸಂಪರ್ಕ ಮತ್ತು ಆಧುನಿಕರಣ
  • ಪೊಲೀಸ್ ನೇಮಕಾತಿ ಮತ್ತು ತರಬೇತಿ
  • ನಾಗರಿಕ ಹಕ್ಕು ಜಾರಿ
  • ಕಾನೂನು ಮತ್ತು ಸುವ್ಯವಸ್ಥೆ
  • ಆಡಳಿತ
  • ರಾಜ್ಯ ಪೊಲೀಸ್ ವಸತಿ ನಿಗಮ
  • ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ
  • ಕಾರಾಗೃಹ ಇಲಾಖೆ
  • ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ
  • ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಇಲಾಖೆ
  • ಕಾನೂನು ಇಲಾಖೆ
  • ರಾಜ್ಯ ಗ್ರಹ ನಿಗಮ
  • ವಿದೇಶಿಯರ ವಿಭಾಗ


ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಪ್ರಮುುಖ ಪ್ರಶ್ನೋತ್ತರಗಳು

ಕನಾ೯ಟಕ ರಾಜ್ಯ ಪೊಲೀಸ್‌ ಇಲಾಖೆ ಬಗ್ಗೆ ಮಾಹಿತಿ, ಪ್ರಶ್ನೋತ್ತರಗಳು ಪಿಡಿಎಫ್
ಕನಾ೯ಟಕ ರಾಜ್ಯ ಪೊಲೀಸ್‌ ಇಲಾಖೆ


MCQ Question and Answer

  • ಐಪಿಎಸ್ ಅಧಿಕಾರಿಗಳಿಗೆ ತರಬೇತಿ ನೀಡುವ ಕೇಂದ್ರ ಎಲ್ಲಿದೆ - ಹೈದರಾಬಾದ್
  • ಹೈದರಾಬಾದ್ ನಲ್ಲಿರುವ ಐಪಿಎಸ್ ಅಧಿಕಾರಿಗಳಿಗೆ ತರಬೇತಿ ನೀಡುವ ಕೇಂದ್ರ ಯಾವುದು - ಸರ್ದಾರ್ ವಲ್ಲಭಭಾಯಿ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡೆಮಿ
  • ದೇಶದ ಐಪಿಎಸ್ ಅಧಿಕಾರಿಗಳಲ್ಲಿ ಅತ್ಯುನ್ನತ ಹುದ್ದೆ - ಗುಪ್ತಚರ ಇಲಾಖೆಯ ನಿರ್ದೇಶಕರು
  • ಐಪಿಎಸ್ ಅಧಿಕಾರಿಗಳು ಯಾರಿಂದ ನೇಮಕ ಮತ್ತು ವಜಾಗೂಳ್ಳುತ್ತಾರೆ - ಭಾರತದ ರಾಷ್ಟ್ರಪತಿಗಳು
  • ಸಿಬಿಐ ಅಧಿಕಾರಿಗಳಿಗೆ ತರಬೇತಿ ನೀಡುವ ಕೇಂದ್ರ - ಉತ್ತರ ಪ್ರದೇಶದ ಗಾಜಿಯಾಬಾದ್
  • CBI - Central Bureau of Investigations
  • ಕರ್ನಾಟಕ ಪೊಲೀಸ್ ಅಕಾಡೆಮಿ ಎಲ್ಲಿದೆ - ಮೈಸೂರು
  • COD - Corps of Detectives
  • ದೇಶದ ಮೊದಲ ಸೈಬರ್ ಪೊಲೀಸ್ ಠಾಣೆ - ಬೆಂಗಳೂರು
  • ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆ ಎಲ್ಲಿದೆ - ಚೆನ್ನಪಟ್ಟಣ
  • ಟ್ರಾಫಿಕ್ ತರಬೇತಿ ಸಂಸ್ಥೆ - ಬೆಂಗಳೂರು
  • ಪೊಲೀಸ್ ಡಿ.ಆರ್ - ಬೆಂಗಳೂರು
  • ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಕೇಂದ್ರ - ಕಲಬುರ್ಗಿ
  • ತರಬೇತಿ ಸಂಸ್ಥೆಯ ವಿಶೇಷ ವಿಭಾಗ - ಬೆಂಗಳೂರು
  • ವೈರ್ ಲೇಸ್ ತರಬೇತಿ ಸಂಸ್ಥೆ - ಬೆಂಗಳೂರು
  • ಪೊಲೀಸ್ ಹುತಾತ್ಮರ ದಿನಾಚರಣೆ - ಅಕ್ಟೋಬರ್ 21
  • ಭಾರತೀಯ ಭೂ ಸೇನಾ ದಿನ - ಜನವರಿ 15
  • ಭಾರತೀಯ ನೌಕಾ ದಿನ - ಡಿಸೆಂಬರ್ 4
  • ಪೊಲೀಸ್ ಧ್ವಜ ದಿನಾಚರಣೆ - ಏಪ್ರಿಲ್ 2
  • ಕಾರ್ಗಿಲ್ ವಿಜಯ ದಿವಸ - ಜುಲೈ 26
  • ಭಾರತದ ಮೊದಲ ಮಹಿಳಾ ಡಿಜಿಪಿ ಮತ್ತು ಎರಡನೇ ಐಪಿಎಸ್ ಅಧಿಕಾರಿ ಯಾರು - ಕಾಂಚನ ಚೌಧರಿ ಭಟ್ಟಾಚಾರ್ಯ
  • ಭಾರತದ ಮೊದಲ ಐಪಿಎಸ್ ಅಧಿಕಾರಿ - ಕಿರಣ್ ಬೇಡಿ
  • ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿ - ನೀಲಮಣಿ ಎನ್ ರಾಜು
  • ಭಾರತದ ಮೊದಲ ತೃತೀಯಲಿಂಗಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ - ಕೆ ಪ್ರೀತಿಕಾ ಯಾಶಿನಿ (ತಮಿಳುನಾಡು)
  • ಭಾರತದ ಮೊದಲ ಮಹಿಳಾ ಪೊಲೀಸ್ ಠಾಣೆ - ಕೇರಳದ ಕಾಜೀಕೊಡೈ
  • ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಠಾಣೆ - ಬೆಂಗಳೂರಿನ ಹಲಸೂರುಗೇಟ್ 1994

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Karnataka 540 Forest Guard Physical Date 2025