ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಪಠ್ಯಕ್ರಮ ಅಗತ್ಯ ಪಠ್ಯಕ್ರಮ ತಿಳಿಯದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಸಾಧ್ಯವಿಲ್ಲ ಹೀಗಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯರ್ಥಿಗಳು ತಯಾರಾಗುವಾಗ ಪಠ್ಯಕ್ರಮಕ್ಕೆ ಸಂಬಂಧಪಟ್ಟ ಒಂದೇ ವಿಷಯಗಳನ್ನು ಓದಬಾರದು ಅವುಗಳಲ್ಲಿ ಹೊಸಹೊಸ ವಿಷಯಗಳ ಕುರಿತು ಬೇರೆ ಬೇರೆ ವಿಷಯಗಳ ಕುರಿತು ಅಧ್ಯಯನ ಮಾಡುವುದರಿಂದ ಸಂಪೂರ್ಣ ಪಠ್ಯಕ್ರಮದ ಅಧ್ಯಯನ ಮಾಡುವುದು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಸಹಕಾರಿಯಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆ ಪಠ್ಯಕ್ರಮ
Police constable, SDA, FDA, PSI, PDO, SSC, ಮುಂತಾದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನದ ಪಠ್ಯಕ್ರಮ
1 ಭಾರತೀಯ ಸಂವಿಧಾನ
2. ಅರ್ಥಶಾಸ್ತ್ರ
3. ಭಾರತೀಯ ಇತಿಹಾಸ
4. ಸಾಮಾನ್ಯ ವಿಜ್ಞಾನ
5. ಭೂಗೋಳ ಶಾಸ್ತ್ರ
6. ಕಂಪ್ಯೂಟರ ಸಾಕ್ಷರತೆ
7. ಅಂತರಾಷ್ಟ್ರೀಯ ಸಂಸ್ಥೆಗಳ ಕುರಿತು
8. ಮಾನಸಿಕ ಸಾಮರ್ಥ್ಯ
9. ದೈನಂದಿನ ಜೀವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ
10. ಪ್ರಚಲಿತ ವಿದ್ಯಮಾನಗಳು
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಪಠ್ಯಕ್ರಮದಲ್ಲಿ ಓದಬೇಕಾದ ಪ್ರಮುಖ ಅಂಶಗಳು
1. ಭಾರತೀಯ ಸಂವಿಧಾನ
- ಭಾರತೀಯ ಸಂವಿಧಾನ ಹಿನ್ನೆಲೆ
- ಭಾರತೀಯ ಸಂವಿಧಾನದ ಪ್ರಸ್ತಾವನೆ
- ಸಂವಿಧಾನದ ಪ್ರಮುಖ ತಿದ್ದುಪಡಿಗಳು ಮತ್ತು ವಿಧಿಗಳು
- ಭಾರತದ ರಾಜ್ಯಗಳ ಒಕ್ಕೂಟ ಮತ್ತು ರಾಜ್ಯಗಳ ಪುನರ್ ವಿಂಗಡನೆ
- ಮೂಲಭೂತ ಹಕ್ಕುಗಳು, ರಾಜನೀತಿ ನಿರ್ದೇಶಕ ತತ್ವಗಳು, ಮೂಲಭೂತ ಕರ್ತವ್ಯಗಳು
- ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ
- ಚುನಾವಣಾ ಆಯೋಗ
- ವಿವಿಧ ಆಯೋಗಗಳು
- ರಾಷ್ಟ್ರಪತಿ
- ರಾಷ್ಟ್ರದ ಕಾನೂನು ವ್ಯವಸ್ಥೆ
2. ಅರ್ಥಶಾಸ್ತ್ರ
- ಅರ್ಥಶಾಸ್ತ್ರದ ಹಿನ್ನೆಲೆ
- ಸಾಮಾನ್ಯ ಅರ್ಥಶಾಸ್ತ್ರ
- ಬೇಡಿಕೆ ಮತ್ತು ಪೂರೈಕೆ ನಿಯಮಗಳು
- ಭಾರತದ ಅರ್ಥವ್ಯವಸ್ಥೆ
- ಜನಸಂಖ್ಯೆ, ಬಡತನ, ಹಸಿವು, ನಿರುದ್ಯೋಗ
- ಅರ್ಥಶಾಸ್ತ್ರದ ವಲಯಗಳು ಪ್ರಾಥಮಿಕ ವಲಯ ಮಾಧ್ಯಮಿಕ ವಲಯ, ಸೇವಾ ವಲಯ
- ಪ್ರಮುಖ ಆರ್ಥಿಕ ಯೋಜನೆಗಳು
- ಅರ್ಥಶಾಸ್ತ್ರಕ್ಕೆ ಸಂಬಂಧಪಟ್ಟ ಸಂವಿಧಾನಾತ್ಮಕ ವಿಷಯಗಳು ಮತ್ತು ವಿಧಿಗಳು
- ಅರ್ಥಶಾಸ್ತ್ರಕ್ಕೆ ಸಂಬಂಧಪಟ್ಟ ಪ್ರಮುಖ ಸಮಿತಿಗಳು
- ಅಂತರಾಷ್ಟ್ರೀಯ ವ್ಯಾಪಾರ ವಹಿವಾಟು WTO
- ಭಾರತದಲ್ಲಿ ರಾಷ್ಟ್ರೀಯ ವರಮಾನ
- ರಾಷ್ಟ್ರದ ಅರ್ಥವ್ಯವಸ್ಥೆಯಲ್ಲಿ ಉಂಟಾದ ಪ್ರಮುಖ ಕ್ರಾಂತಿಗಳು ಹಸಿರು ಕ್ರಾಂತಿ, ಶ್ವೇತ ಕ್ರಾಂತಿ, ನೀಲಿ ಕ್ರಾಂತಿ, etc
- ಯೋಜನಾ ಆಯೋಗ
- ನೀತಿ ಆಯೋಗದ ರಚನೆ
- ಕೇಂದ್ರ ಮತ್ತು ರಾಜ್ಯ ಹಣಕಾಸು ಆಯೋಗ
- ಮಾನವ ಅಭಿವೃದ್ಧಿ ಸೂಚ್ಯಂಕ
- ಅಂತರರಾಷ್ಟ್ರೀಯ ಹಣಕಾಸು ನಿಧಿ IMF
- ಶೇರು ಮಾರುಕಟ್ಟೆ
- ಹಣ ಮತ್ತು ಬ್ಯಾಂಕಿಂಗ್ ವ್ಯವಸ್ಥೆ
- ಪಂಚವಾರ್ಷಿಕ ಯೋಜನೆಗಳು
- ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
- ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆ
- ಭಾರತೀಯ ರಿಸರ್ವ್ ಬ್ಯಾಂಕ್
- ಹಣದುಬ್ಬರ, ರೂಪಾಯಿ ಅಪಮೌಲ್ಯೀಕರಣ
- ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ
- ಮೊದಲನೇ ಹಂತದ ಬ್ಯಾಂಕುಗಳ ರಾಷ್ಟ್ರೀಕರಣ ಎರಡನೇ ಹಂತದ ಬ್ಯಾಂಕುಗಳ ರಾಷ್ಟ್ರೀಕರಣ
- ಮುಂಗಡ ಪತ್ರ
- ಕೇಂದ್ರ ಬಜೆಟ್ ರಾಜ್ಯ ಬಜೆಟ್
- ತೆರಿಗೆಗೆ ಸಂಬಂಧಪಟ್ಟ ಪರಿಕಲ್ಪನೆ ಕುರಿತು ಮಾಹಿತಿ
- ಭಾರತದಲ್ಲಿನ ಪೇಮೆಂಟ್ ಆಪ್ ಬಗ್ಗೆ
- ಭಾರತದಲ್ಲಿ ಡಿಜಿಟಲ್ ಆಪ್ಗಳ್ ಬೆಳವಣಿಗೆ
- ATM, Net Banking, SMS Banking, Mini ATM, Core Banking ವ್ಯವಸ್ಥೆ
3. ಭಾರತೀಯ ಇತಿಹಾಸ
- ಪ್ರಾಚೀನ ಭಾರತದ ಇತಿಹಾಸ
- ಹಳೆ ಶಿಲಾಯುಗ, ಮಧ್ಯ ಶಿಲಾಯುಗ, ನವಶಿಲಾಯುಗ
- ಜಗತ್ತಿನ ಪ್ರಮುಖ ನಾಗರಿಕತೆಗಳು
- ವೇದಗಳು, ಉಪನಿಷತ್ತುಗಳು
- ಭಾರತದಲ್ಲಿ ಧರ್ಮಗಳ ಉಗಮ ಮತ್ತು ಬೆಳವಣಿಗೆ
- ಭಾರತದಲ್ಲಿ ಹೊಸಮತಗಳ ಉಗಮ
- ಮಧ್ಯಕಾಲೀನ ಭಾರತದ ಇತಿಹಾಸ
- ಪ್ರಮುಖ ರಾಜವಂಶಗಳು
- ವಾಸ್ತುಶಿಲ್ಪ, ಕಲೆ ಮತ್ತು ಸಾಹಿತ್ಯ, ಶಾಸನಗಳು, ತೆರಿಗೆ, ನಾಣ್ಯ, ಕೊಡುಗೆಗಳು, ಪ್ರಮುಖ ಗ್ರಂಥಗಳು, ಆಚಾರ-ವಿಚಾರ ಸಂಪ್ರದಾಯಗಳು, ಧರ್ಮ, ಶೌರ್ಯ ಮತ್ತು ಸಾಹಸ, ಬಿರುದು, ಸ್ಮಾರಕಗಳು, ಸೈನ್ಯ ಮುಂತಾದವುಗಳು
- ನವೋದಯ ವಿಜ್ಞಾನದ ಬೆಳವಣಿಗೆ
- ವೈದ್ಯಕೀಯ ವಿಜ್ಞಾನ, ಆಯುರ್ವೇದ, ಖಗೋಳಶಾಸ್ತ್ರ, ಗಣಿತಶಾಸ್ತ್ರಗಳ ಬೆಳವಣಿಗೆ
- ಭೌಗೋಳಿಕ ಅನ್ವೇಷಣೆಗಳು
- ಭಾರತಕ್ಕೆ ಯುರೋಪಿಯನ್ನರ ಆಗಮನ
- ಪ್ರಮುಖ ಯುದ್ಧಗಳು ಮತ್ತು ಒಪ್ಪಂದಗಳು
- ಬ್ರಿಟಿಷರ ಆಡಳಿತದ ಸುಧಾರಣೆಗಳು
- ಬ್ರಿಟಿಷ್ ಕಾನೂನು ವ್ಯವಸ್ಥೆ
- ಬ್ರಿಟಿಷರ ಶಿಕ್ಷಣ ನೀತಿ
- ಬ್ರಿಟಿಷ್ ಸೇನಾಡಳಿತ, ತೆರಿಗೆ ಪದ್ಧತಿ, ಒಡೆದು ಆಳುವ ನೀತಿ
- ಧಾರ್ಮಿಕ ಸುಧಾರಕರು ಹಾಗೂ ಪ್ರಮುಖ ಸಿದ್ಧಾಂತದ ಪ್ರತಿಪಾದಕರು
- ಭಕ್ತಿಪಂಥ
- ಕರ್ನಾಟಕದ ಇತಿಹಾಸ
- ಕರ್ನಾಟಕದ ಪ್ರಮುಖ ರಾಜಮನೆತನಗಳು
- ಭಾರತದ ಸ್ವಾತಂತ್ರ್ಯ ಚಳುವಳಿ
- ಗಾಂಧಿ ಯುಗ
- ಭಾರತ ಸ್ವಾತಂತ್ರ್ಯ ಚಳುವಳಿಯ ಪ್ರಮುಖ ಘಟನೆಗಳು, ಚಳುವಳಿಗಳು, ದಂಗೆಗಳು, ಹೋರಾಟಗಳು, ಸತ್ಯಾಗ್ರಹ, ಪ್ರಮುಖ ಕಾಯ್ದೆಗಳು, ಸುಧಾರಣೆಗಳು
- ಭಾರತದ ಮತ್ತು ಕರ್ನಾಟಕದ ಪ್ರಮುಖ ರಾಜಮನೆತನಗಳು
- ದಕ್ಷಿಣ ಭಾರತದ ರಾಜವಂಶಗಳು
- ಪ್ರಮುಖ ರಾಜಮನೆತನಗಳು ಕಲೆ-ಸಾಹಿತ್ಯ ವಾಸ್ತುಶಿಲ್ಪ ಸಂಸ್ಕೃತಿ
- ವಿಶ್ವ ಪಾರಂಪರಿಕ ಸ್ಥಳಗಳು
- ಐತಿಹಾಸಿಕ ಸ್ಮಾರಕಗಳು ಮಾಹಿತಿ
4. ಸಾಮಾನ್ಯ ವಿಜ್ಞಾನ
- ರಸಾಯನಶಾಸ್ತ್ರ
- ಮೂಲ ವಸ್ತುಗಳು, ಸಂಯುಕ್ತ ವಸ್ತುಗಳು ಹಾಗೂ ಮಿಶ್ರಣಗಳು
- ವಸ್ತುಗಳ ಸ್ಥಿತಿಗಳು
- ಪರಮಾಣು
- ರಾಸಾಯನಿಕ ಬದಲಾವಣೆಗಳು
- ರಸಾಯನಶಾಸ್ತ್ರದ ಅನ್ವಯಿಕ ಪ್ರಶ್ನೆಗಳು
- ದೈನಂದಿನ ಜೀವನದಲ್ಲಿ ರಸಾಯನಶಾಸ್ತ್ರ ಉದಾ : ಕಬ್ಬಿಣ ತುಕ್ಕು ಹಿಡಿಯುವುದು, ಹಾಲು ಮೊಸರಾಗುವುದು, ಪಟಾಕಿ ಸುಡುವುದು etc
- ಆಮ್ಲ ಪ್ರತ್ಯಾಮ್ಲ ಮತ್ತು ಲವಣಗಳು
- ಲೋಹ ಅಲೋಹಗಳು
- ನೀರು, ಗಾಳಿ, ಗಾಜು, ಸಿಮೆಂಟ್ ಪ್ರಮುಖ ಆಸಕ್ತಿದಾಯಕ ಮಾಹಿತಿಗಳು
- ಪ್ರಮುಖ ಔಷಧಿಗಳ ನಿವಾರಕವಾಗಿ ಬಳಕೆ ಉದಾ : ಜ್ವರ ನಿವಾರಕಗಳು - ಪ್ಯಾರಸಿಟಮಾಲ್, ಆಂಟಿಬಯೋಟಿಕ್ - ಪೆನ್ಸಿಲಿನ್
- ಪ್ರಮುಖ ರಾಸಾಯನಿಕಗಳ ಉಪಯೋಗಗಳು
- ಭೌತಶಾಸ್ತ್ರ
- ಬೆಳಕು
- ಬೆಳಕಿನ ವಿದ್ಯಮಾನಗಳು, ದರ್ಪಣಗಳು
- ಆಯಸ್ಕಾಂತ, ವಿದ್ಯುಚ್ಛಕ್ತಿ, ಶಕ್ತಿ, ಉಷ್ಣ
- ಚಲನೆ, ಚಲನೆಯ ನಿಯಮಗಳು
- ಶಬ್ದ, ಶಬ್ದದ ನಿಯಮಗಳು
- ಭೌತಶಾಸ್ತ್ರದ ಅನ್ವಯಿಕ ಪ್ರಶ್ನೆಗಳು
- ಅಂತರಾಷ್ಟ್ರೀಯ ಏಕಮಾನಗಳು
- ಶಕ್ತಿಯ ಪರಿವರ್ತಿಸುವಿಕೆ
- ಭೌತಶಾಸ್ತ್ರದ ಪ್ರಮುಖ ತತ್ವ-ಸಿದ್ಧಾಂತಗಳು
- ಜೀವಶಾಸ್ತ್ರ
- ಜೀವಿಯ ವಿಕಾಸ
- ಮಾನವನ ವಿಕಾಸ
- ವಿಶ್ವದ ಉಗಮ
- ಜೀವಕೋಶ ಸಸ್ಯ ಜೀವಕೋಶ, ಪ್ರಾಣಿ ಜೀವಕೋಶ
- ಆಹಾರ ಮತ್ತು ಆಹಾರದ ಘಟಕಗಳು
- ಮಾನವನ ದೇಹದ ಅಂಗಗಳು
- ರಕ್ತದ ಗುಂಪುಗಳು
- ಪ್ರಮುಖ ರೋಗಗಳು ಹರಡುವ ವಿಧಾನ
- ಕರೋನವೈರಸ್
- ವಿಜ್ಞಾನದ ಪ್ರಮುಖ ವಿಷಯಗಳು ಮತ್ತು ಅವುಗಳ ಅಧ್ಯಯನ
5. ಅಂತರರಾಷ್ಟ್ರೀಯ ಸಂಸ್ಥೆಗಳು
- ವಿಶ್ವಸಂಸ್ಥೆ
- ವಿಶ್ವಸಂಸ್ಥೆಯ ಉಗಮ, ಹಿನ್ನೆಲೆ, ಕಾರ್ಯಗಳು
- ಇತ್ತೀಚಿಗೆ ವಿಶ್ವಸಂಸ್ಥೆಗೆ ಸೇರ್ಪಡೆಯಾದ ರಾಷ್ಟ್ರಗಳು
- ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳು
- ವಿಶ್ವಸಂಸ್ಥೆಯ ಪ್ರಧಾನ ಅಂಗಸಂಸ್ಥೆಗಳು
- ವಿಶ್ವಸಂಸ್ಥೆ ಸಾಮಾನ್ಯ ಸಭೆ
- ವಿಶ್ವಸಂಸ್ಥೆ ಭದ್ರತಾಮಂಡಳಿ
- ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ
- ವಿಶ್ವಸಂಸ್ಥೆಯ ಸಚಿವಾಲಯ
- ಅಂತರಾಷ್ಟ್ರೀಯ ನ್ಯಾಯಾಲಯ
- ವಿಶ್ವಸಂಸ್ಥೆಯ ಕಾರ್ಯದರ್ಶಿಗಳು
- ಭಾರತ ಮತ್ತು ವಿಶ್ವಸಂಸ್ಥೆಯ ಸಂಬಂಧ
- ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಸ್ಥಾಪನೆ, ಕೇಂದ್ರ ಕಚೇರಿ, ಉದ್ದೇಶ, ಮತ್ತು ಧ್ಯೇಯವಾಕ್ಯ
- ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO)
- ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (FAO)
- ವಿಶ್ವಸಂಸ್ಥೆಯ ಶೈಕ್ಷಣಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO)
- ವಿಶ್ವ ಆರೋಗ್ಯ ಸಂಸ್ಥೆ ( WHO)
- ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತುನಿಧಿ (UNICEF)
- ಸಾರ್ಕ್, ಬ್ರಿಕ್ಸ್, WWF world wide fund for nature, G-7 ರಾಷ್ಟ್ರಗಳ ಸಂಘಟನೆ, G-4 ರಾಷ್ಟ್ರಗಳು, G-20 ರಾಷ್ಟ್ರಗಳು, ASEAN ರಾಷ್ಟ್ರಗಳ ಒಕ್ಕೂಟ, ಯುರೋಪಿಯನ್ ಯೂನಿಯನ್, ಇವುಗಳ ಸ್ಥಾಪನೆ ಕೇಂದ್ರ ಕಚೇರಿ, ಪ್ರಮುಖ ಉದ್ದೇಶಗಳು
- ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ರಾಷ್ಟ್ರೀಯ ಮತ್ತು ಖಾಸಗಿ ಸಂಸ್ಥೆಗಳು ಮತ್ತು ಕೈಗಾರಿಕೆಗಳು ಉದಾಹರಣೆಗೆ : ICMR, ICAR, UPSC, NCERT, BHEL, NACO, HP, HCL, IISC, HMT, WIPRO, INFOSYS, BEL, NIMHANS
6. ಮಾನಸಿಕ ಸಾಮರ್ಥ್ಯ
- ಚಿತ್ರಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಉದಾಹರಣೆಗೆ ಚೌಕ, ತ್ರಿಭುಜ
- ಕಾಲ ಮತ್ತು ಸಮಯ, ಗಡಿಯಾರದ ಸಮಸ್ಯೆ, ಕೆಲಸ ಮತ್ತು ಸಮಯ
- ಕ್ಯಾಲೆಂಡರ್ ಸಮಸ್ಯೆಗಳು, ಸಂಬಂಧಗಳು, ವಯಸ್ಸು ಪತ್ತೆ ಹಚ್ಚುವ ಸಮಸ್ಯೆ
- ಕಾಲ ಮತ್ತು ದೂರದ ಸಮಸ್ಯೆ
- ಸರಳ ಬಡ್ಡಿ, ಚಕ್ರಬಡ್ಡಿ, ಬಿಟ್ಟ ಸಂಖ್ಯೆ ತುಂಬಿ
- ಸರಣಿ ಪೂರ್ಣಗೊಳಿಸಿ
- ಶೇಕಡಾವಾರು, ಗಣಗಳು, ಸಂಭವನೀಯತೆ, ವರ್ಣಮಾಲೆ ಸಮಸ್ಯೆ
7. ದೈನಂದಿನ ಜೀವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ
- ಇಸ್ರೋ
- DRDO
- ಚಂದ್ರಯಾನ
- ಮೊಬೈಲ್ ಸಾಫ್ಟ್ವೇರ್ ಆಂಡ್ ಟೆಕ್ನಾಲಜಿ
- ದೈನಂದಿನ ಜೀವನದಲ್ಲಿ ವಿಜ್ಞಾನ
- ಅನ್ವಯಿಕ ಪ್ರಶ್ನೆಗಳು
- ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನೆ
8. ಪ್ರಚಲಿತ ಘಟನೆಗಳು
- ಪ್ರಚಲಿತ ವಿದ್ಯಮಾನಗಳು
- ಅಂತರರಾಷ್ಟ್ರೀಯ ವ್ಯಾಪಾರ ವಹಿವಾಟು, ಒಪ್ಪಂದಗಳು
- ಬಾಹ್ಯಾಕಾಶ ಸಂಶೋಧನೆ ವಿಜ್ಞಾನ ಮತ್ತು ತಂತ್ರಜ್ಞಾನ
- ಇತ್ತೀಚಿನ ಕ್ರೀಡಾ ಚಟುವಟಿಕೆಗಳು
- ಪ್ರಶಸ್ತಿಗಳು ಮತ್ತು ಪ್ರಶಸ್ತಿ ವಿಜೇತರು
- ಇತ್ತೀಚಿಗೆ ಸರ್ಕಾರ ಕೈಗೊಂಡ ಪ್ರಮುಖ ಯೋಜನೆಗಳು
- ಜಾಗತಿಕ ಮಟ್ಟದಲ್ಲಿ ಭಾರತದ ಬೆಳವಣಿಗೆ
- ರಾಜಕೀಯ ವಿದ್ಯಮಾನಗಳು, ಕಾನೂನು ವ್ಯವಸ್ಥೆ
- ಪ್ರಸಿದ್ಧ ಲೇಖಕರು ಹಾಗೂ ಲೇಖಕರ ಕೃತಿಗಳು
- ಜಾಗತಿಕ ವಿದ್ಯಮಾನಗಳು
- ಭಾರತೀಯ ರಕ್ಷಣಾ ಇಲಾಖೆ
9. ಜನರಲ್ ನಾಲೆಜ್
- ಸಂಶೋಧನೆ ಮತ್ತು ಸಂಶೋಧಕರು
- ಮೂಲವಸ್ತುಗಳ ಸಂಕೇತಗಳು
- ವಿವಿಧ ಕ್ಷೇತ್ರದ ಪಿತಾಮಹರು
- ಅಂತರಾಷ್ಟ್ರೀಯ ಸಂಘಟನೆ ಮತ್ತು ವಿಶ್ವಸಂಸ್ಥೆ
- ವಿವಿಧ ಸಿದ್ಧಾಂತದ ಪ್ರತಿಪಾದಕರು
- ರಾಷ್ಟ್ರಗಳ ನಡುವಿನ ಸಮರಭ್ಯಾಸ
- ನದಿಗಳ ಉಗಮ ಸ್ಥಾನ ವಿಶೇಷತೆ
10. ಕಂಪ್ಯೂಟರ್ ಸಾಕ್ಷರತೆ
- Extensions
- Shortcut Keys
- Windows
- Operating system
- Computer Parts
- Hardware and Software
- Computer generation and types of computer
- Input and output devices of computer
- Virus, Internet
- Application software
- Computer memory and storage devices
- 3G, 4G, 5G technology
- Supercomputer
- Present Computer technology
11. ಭೂಗೋಳಶಾಸ್ತ್ರ
- ವಿಶ್ವದ ಉಗಮ, ನಕ್ಷತ್ರ, ಗ್ರಹಗಳು, ಉಲ್ಕೆಗಳು, ಧೂಮಕೇತುಗಳು, ಗ್ಯಾಲಕ್ಸಿ ಇವುಗಳಿಗೆ ಸಂಬಂಧಪಟ್ಟ ಪ್ರಮುಖ ಮಾಹಿತಿ
- ಸೂರ್ಯ ಮತ್ತು ಸೌರವ್ಯೂಹ
- ಗ್ರಹಗಳು, ಉಪಗ್ರಹಗಳು, ಕ್ಷುದ್ರಗ್ರಹ, ಗ್ರಹಗಳ ಚಲನೆ, ಸೂರ್ಯಗ್ರಹಣ ಚಂದ್ರಗ್ರಹಣ
- ನಮ್ಮ ಭೂಮಿ
- ಅಕ್ಷಾಂಶಗಳು, ರೇಖಾಂಶಗಳು, ಭೂಮಿಯ ವಲಯಗಳು
- ಭೂಕಂಪಗಳು, ಚಂಡಮಾರುತ, ಸುನಾಮಿ, ಜ್ವಾಲಾಮುಖಿಗಳು, ಉಬ್ಬರವಿಳಿತಗಳು
- ಭೂಮಿಯ ವಾಯುಮಂಡಲ ( ಪರಿವರ್ತನಾ ಮಂಡಲ, ಸಮೋಷ್ಣ ಮಂಡಲ, ಶೀತ ಮಂಡಲ, ಉಷ್ಣ ಮಂಡಲ ಮತ್ತು ಬಾಹ್ಯ ಮಂಡಲ
- ವಾಯುವಿನ ಒತ್ತಡ ಪಟ್ಟಿಗಳು
- ಭೂಮಿಯ ಜಲಗೋಳ
- ಪ್ರಮುಖ ಕಾಲುವೆಗಳು, ವಿದ್ಯುತ್ ಉತ್ಪಾದನಾ ಕೇಂದ್ರಗಳು
- ಪರ್ವತಗಳು, ದ್ವೀಪಗಳು, ಸಾಗರ ಪ್ರವಾಹಗಳು
- ಜಗತ್ತಿನ ಏಳು ಖಂಡಗಳು
- ಭಾರತದ ಭೂಗೋಳಶಾಸ್ತ್ರ
- ಭಾರತದ ಭೌಗೋಳಿಕ ಮೇಲ್ಮೈ ಲಕ್ಷಣಗಳು
- ಭಾರತದ ಪ್ರಮುಖ ಬಂದರುಗಳು
- ಭಾರತದ ನೀರಾವರಿ ವ್ಯವಸ್ಥೆ
- ಭಾರತದ ಪ್ರಮುಖ ನದಿಗಳು
- ಅಂತರ್ ರಾಜ್ಯ ಜಲ ವಿವಾದಗಳು
- ಭಾರತದ ವಿವಿಧೋದ್ದೇಶ ಯೋಜನೆಗಳು
- ಭಾರತದ ವಾಯುಗುಣ
- ಭಾರತದ ಮಣ್ಣು
- ಭಾರತದ ಕೃಷಿ ವ್ಯವಸ್ಥೆ
- ಪ್ರಮುಖ ಬೆಳೆಗಳು ಉತ್ಪಾದನಾ ಸ್ಥಳಗಳು
- ಭಾರತದಲ್ಲಿ ಸಂಪನ್ಮೂಲಗಳ ಲಭ್ಯತೆ
- ಭಾರತದ ಕೈಗಾರಿಕಾ ವ್ಯವಸ್ಥೆ
- ಭಾರತದ ಸಾರಿಗೆ ವ್ಯವಸ್ಥೆ ( ರೈಲು ಸಾರಿಗೆ, ರಸ್ತೆ ಸಾರಿಗೆ, ವಾಯು ಸಾರಿಗೆ ಮತ್ತು ಜಲಸಾರಿಗೆ)
- ಭಾರತದಲ್ಲಿ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು
- ಭಾರತದ ಅರಣ್ಯ ಪ್ರದೇಶ
- ಭಾರತದ ರಕ್ಷಣಾ ಪಡೆಗಳು
- ಭಾರತದ ಗಡಿರೇಖೆಗಳು
- ಕರ್ನಾಟಕದ ಭೂಗೋಳಶಾಸ್ತ್ರ
- ಕರ್ನಾಟಕದ ಭೌಗೋಳಿಕ ಸ್ಥಾನ, ವಿಸ್ತೀರ್ಣ, ಪ್ರಮುಖ ಜಿಲ್ಲೆಗಳು ಮತ್ತು ವಿಶೇಷತೆಗಳು, ಜನಸಂಖ್ಯೆ, ಮಾನವ ಸಂಪನ್ಮೂಲ
- ಕರ್ನಾಟಕದ ಪ್ರಾಕೃತಿಕ ವಿಭಾಗಗಳು
- ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗ
- ಕರ್ನಾಟಕದ ಅರಣ್ಯ ಸಂಪತ್ತು
- ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳು
- ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು ಅವುಗಳ ಉಗಮ ಸ್ಥಾನ ಅವುಗಳ ವಿಶೇಷತೆ
- ಕರ್ನಾಟಕದ ಕೃಷಿ ಮತ್ತು ಕೈಗಾರಿಕೆ
- ಕರ್ನಾಟಕದಲ್ಲಿ ದೊರೆಯುವ ಖನಿಜ ಸಂಪನ್ಮೂಲಗಳು
- ಕರ್ನಾಟಕದಲ್ಲಿ ಬೆಳೆಯುವ ಪ್ರಮುಖ ಬೆಳೆಗಳು
- ಕರ್ನಾಟಕ ಸಾರಿಗೆ ಸಂಪರ್ಕ ವ್ಯವಸ್ಥೆ
12. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ
- ಕರ್ನಾಟಕದ ಗೃಹ ಸಚಿವಾಲಯದ ಕುರಿತು ಮಾಹಿತಿ
- ಪೊಲೀಸ್ ಇಲಾಖೆಯ ಉನ್ನತ ಹಂತದ ಹುದ್ದೆಗಳು
- ಕರ್ನಾಟಕ ರಾಜ್ಯ ಪೊಲೀಸ್ ವಲಯಗಳು
- ಕರ್ನಾಟಕ ರಾಜ್ಯ ಪೊಲೀಸ್ ವ್ಯವಸ್ಥೆ, ಅಧಿಕಾರಿವರ್ಗ ಮತ್ತು ತರಬೇತಿ ನೀಡುವ ಸಂಸ್ಥೆಗಳು
- ಪ್ರಮುಖ ಪೊಲೀಸ್ ದಿನಾಚರಣೆಗಳು.

0 ಕಾಮೆಂಟ್‌ಗಳು