ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ಶಿಕ್ಷಣ

ಅಂತರಾಷ್ಟ್ರೀಯ ಸಂಘಟನೆಗಳು



ವಿಶ್ವಸಂಸ್ಥೆ

ವಿಶ್ವಸಂಸ್ಥೆ 1945 ಅಕ್ಟೋಬರ್ 24ರಂದು ವಿಶ್ವ ಸಂಸ್ಥೆಯ ಅಸ್ತಿತ್ವಕ್ಕೆ ಬಂದಿತ್ತು 
ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಇರುವುದು ಅಮೆರಿಕಾದ ನ್ಯೂಯಾರ್ಕ್ ನಲ್ಲಿ
ವಿಶ್ವಸಂಸ್ಥೆಯ ಮೊದಲ ಸಭೆ ಜನೆವರಿ 6 1946 ಲಂಡನ್ ನಲ್ಲಿ ನಡೆಯಿತು
ಪ್ರಸ್ತುತ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾಗಿ ಆಂಟಾನಿಯೋ ಗುಟೆರಸ್ ಅವರು (2020) ಕಾರ್ಯನಿರ್ವಹಿಸುತ್ತಿದ್ದಾರೆ 

ವಿಶ್ವಸಂಸ್ಥೆಯ ಪ್ರಮುಖ ಉದ್ದೇಶಗಳು

* ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು
* ರಾಷ್ಟ್ರ ರಾಷ್ಟ್ರಗಳ ನಡುವೆ ಸ್ನೇಹ ಮತ್ತು ಸಹಬಾಳ್ವೆ ಅರಿವು ಮೂಡಿಸುವುದು
* ಅಂತರರಾಷ್ಟ್ರೀಯ ವಿವಾದವನ್ನು ಶಾಂತಿಯಿಂದ ಬಗೆಹರಿಸುವುದು
* ರಾಷ್ಟ್ರ ರಾಷ್ಟ್ರಗಳ ನಡುವೆ ನಡೆಯುವ ಯುದ್ಧಗಳನ್ನು ತಡೆಗಟ್ಟುವುದು
* ವಿಶ್ವಸಂಸ್ಥೆಯು ನಿಶಸ್ತ್ರೀಕರಣವನ್ನು ಸಾರಿಸುವುದು
* ಅಂತರರಾಷ್ಟ್ರೀಯ ಕಾನೂನುಗಳನ್ನು ಮತ್ತು ಒಪ್ಪಂದಗಳನ್ನು ರಕ್ಷಿಸುವುದು
* ಮಾನವನ ಮೂಲಭೂತ ಹಕ್ಕುಗಳ ಬಗೆಗೆ ನಂಬುಗೆಯನ್ನು ಹೆಚ್ಚಿಸುವುದು


ವಿಶ್ವಸಂಸ್ಥೆಯ ಪ್ರಮುಖ ಅಂಶಗಳು

1. ವಿಶ್ವಸಂಸ್ಥೆಯ ಸನ್ನದು ಮತ್ತು ಪ್ರಣಾಳಿಕೆಯನ್ನು ಸಿದ್ಧಪಡಿಸಿದವರು ಯಾರು
* ಯುಎಸ್ಎ ಫೀಲ್ಡ್ ಮಾರ್ಷಲ್ ಹ್ಯಾಟ್ಸ್
2. ಯುಎನ್ಓ ಎಂದು ಮೊದಲು ನಾಮಕರಣ ಮಾಡಿದವರು ಯಾರು 
* ಅಮೇರಿಕಾದ ಅಧ್ಯಕ್ಷ ರೂಸ್ ವೆಲ್ಟ್
3. ವಿಶ್ವಸಂಸ್ಥೆಯ ಪ್ರಾರಂಭಿಕ ಸದಸ್ಯ ರಾಷ್ಟ್ರಗಳ ಸಂಖ್ಯೆ
* 51
4. ವಿಶ್ವಸಂಸ್ಥೆಯ ಪ್ರಸ್ತುತ ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆ
* 193
5. ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳು
* ಅರೇಬಿಕ್
* ಚೈನಿಸ್
* ಇಂಗ್ಲಿಷ್
* ಫ್ರೆಂಚ್
* ರಷ್ಯನ್
* ಸ್ಪ್ಯಾನಿಶ್

ವಿಶ್ವಸಂಸ್ಥೆಯ ಪ್ರಧಾನ ಅಂಗಸಂಸ್ಥೆಗಳು

1. ಸಾಮಾನ್ಯ ಸಭೆ

* ಸಾಮಾನ್ಯ ಸಭೆಯು ಮುಖ್ಯವಾಗಿ ಪ್ರಪಂಚದ ಶಾಸಕಾಂಗದಂತೆ ಕಾರ್ಯನಿರ್ವಹಿಸುತ್ತದೆ
* ಒಂದು ರಾಷ್ಟ್ರ ಐದು ಪ್ರತಿನಿಧಿಗಳನ್ನು ಸಾಮಾನ್ಯ ಸಭೆಗೆ ಕಳುಹಿಸಿಕೊಡುತ್ತದೆ
* ಪ್ರತಿಯೊಂದು ರಾಷ್ಟ್ರಕ್ಕೂ ಒಂದು ಮತವನ್ನು ಮಾತ್ರ ಚಲಾಯಿಸಲು ಹಕ್ಕಿರುತ್ತದೆ
* ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ಮೂರನೇ ಮಂಗಳವಾರ ಅಧಿವೇಶನವನ್ನು ಕರೆಯಲಾಗುತ್ತದೆ
* ಸಾಮಾನ್ಯ ಸಭೆಯ ಮೊದಲ ಸಭೆ ನಡೆದದ್ದು 1946 ಜನೆವರಿ 10
* ಭಾರತವು ಸಾಮಾನ್ಯ ಸಭೆಯ ಸದಸ್ಯತ್ವವನ್ನು ಅಕ್ಟೋಬರ್ 30 1945 ರಂದು ಪಡೆಯಿತು
* 71ನೇ ಸಾಮಾನ್ಯ ಸಭೆಯ ಅಧ್ಯಕ್ಷರು ಪೀಟರ್ ಥಾಮ್ಸನ್
* 72ನೇ ಸಾಮಾನ್ಯ ಸಭೆಯ ಅಧ್ಯಕ್ಷರು ಮಿರೊಸ್ಲಾವ್ ಲಾಜಾಕ್
* 1953-54 ರಲ್ಲಿ ಭಾರತದ ವಿಜಯಲಕ್ಷ್ಮಿ ಪಂಡಿತ್ ಅವರು ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು
* ಹೆಚ್ಚಿನ ಪ್ರಮುಖ ನಿರ್ಧಾರಗಳಿಗೆ ಮೂರನೆಯ ಎರಡರಷ್ಟು ಹಾಜರಾದ ಸದಸ್ಯರ ಅನುಮೋದನೆ ಅವಶ್ಯಕವಾಗಿರುತ್ತದೆ

2. ಭದ್ರತಾ ಮಂಡಳಿ

* ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ವಿಶ್ವದ ಕಾರ್ಯಾಂಗದಂತೆ ಕಾರ್ಯವನ್ನು ನಿರ್ವಹಿಸುತ್ತದೆ
* ವಿಶ್ವಸಂಸ್ಥೆಯ ಕಾಯಂ ಸದಸ್ಯ ರಾಷ್ಟ್ರಗಳು
1. ಅಮೇರಿಕಾ
2. ರಷ್ಯಾ
3. ಫ್ರಾನ್ಸ್
4. ಬ್ರಿಟನ್
5. ಚೀನಾ
* ಕಾಯಂ ಸದಸ್ಯತ್ವವನ್ನು ಹೊಂದಿದ ರಾಷ್ಟ್ರಗಳಿಗೆ ವಿಟೋ ಅಧಿಕಾರವಿದೆ
* ವಿಶ್ವಸಂಸ್ಥೆಯು 10 ಕಾಯಂ ಸದಸ್ಯತ್ವ ಅಲ್ಲದ ರಾಷ್ಟ್ರಗಳನ್ನು ಒಳಗೊಂಡಂತೆ 2 ವರ್ಷಗಳ ಅವಧಿಗೆ ಸಾಮಾನ್ಯ ಸಭೆ ಆರಿಸುತ್ತದೆ
* ಭಾರತವು ಕೂಡ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಕಾಯಂ ಸದಸ್ಯತ್ವಕ್ಕಾಗಿ ಯತ್ನಿಸುತ್ತಿದೆ

3. ಧರ್ಮದರ್ಶಿ ಮಂಡಳಿ

* ಧರ್ಮದರ್ಶಿ ಮಂಡಳಿಯು ಯುದ್ಧದಲ್ಲಿ ನಿರಾಶ್ರಿತರಾದವರಿಗೆ ಸಾಮಾಜಿಕ ಆರ್ಥಿಕ ರಾಜಕೀಯ ಮತ್ತು ಶೈಕ್ಷಣಿಕ ಪ್ರಗತಿಯನ್ನು ಸಾಧಿಸಲು ಯತ್ನಿಸುತ್ತದೆ
* ನವೆಂಬರ್ 01 1994ರಂದು ಧರ್ಮದರ್ಶಿ ಮಂಡಳಿಯನ್ನು ಅಮಾನತು ಮಾಡಲಾಗಿದೆ

4. ಅಂತರರಾಷ್ಟ್ರೀಯ ನ್ಯಾಯಾಲಯ

* ಅಂತರಾಷ್ಟ್ರೀಯ ನ್ಯಾಯಾಲಯವು ರಾಷ್ಟ್ರ ರಾಷ್ಟ್ರಗಳ ನಡುವಿನ ಸಮಸ್ಯೆಗಳನ್ನು ಬಗೆಹರಿಸುವುದಾಗಿದೆ ಇದು ಅಂತರಾಷ್ಟ್ರೀಯ ನ್ಯಾಯಾಲಯವಾಗಿ ಕಾರ್ಯನಿರ್ವಹಿಸುತ್ತದೆ
* ಅಂತರಾಷ್ಟ್ರೀಯ ನ್ಯಾಯಾಲಯದ ಕೇಂದ್ರ ಕಚೇರಿ ನೆದರ್ಲ್ಯಾಂಡ್ ನ್ ಹೇಗ್ ನಲ್ಲಿದೆ
* ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಒಟ್ಟು ಸಂಖ್ಯೆ 15 
* ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅಧಿಕಾರ ಅವಧಿ 9 ವರ್ಷಗಳು
* ಅಂತರರಾಷ್ಟ್ರೀಯ ನ್ಯಾಯಾಲಯದ ಸ್ಥಾಪನೆ 1945
* ಪ್ರಸ್ತುತ ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಜಸ್ಟೀಸ್ ಭಂಡಾರಿ ಕಾರ್ಯನಿರ್ವಹಿಸುತ್ತಿದ್ದಾರೆ
* ಮೂರು ವರ್ಷಗಳ ಅವಧಿಗೆ ಓರ್ವ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನ್ಯಾಯಾಲಯದ ನ್ಯಾಯಾಧೀಶರು ನೇಮಕ ಮಾಡುತ್ತಾರೆ

5. ಆರ್ಥಿಕ ಹಾಗೂ ಸಾಮಾಜಿಕ ಸಮಿತಿ

* ಈ ಸಮಿತಿಯಲ್ಲಿ 54 ಮಂದಿ ಸದಸ್ಯರಿದ್ದು ಇದರ ಪೈಕಿ 18 ಮಂದಿ ಸದಸ್ಯರು ಪ್ರತಿ ಮೂರು ವರ್ಷಕ್ಕೊಮ್ಮೆ ಆರಿಸಲ್ಪಡುತ್ತಾರೆ ತಮ್ಮ ಸದಸ್ಯರೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ.

ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯ ಪ್ರಮುಖ ಕಾರ್ಯಗಳು

* ಅಂತರಾಷ್ಟ್ರೀಯ ವಲಯದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ ಹಾಗೂ ಇನ್ನಿತರ ಸಂಬಂಧಿತ ವಿಷಯಗಳ ಅಧ್ಯಯನ ಹಾಗೂ ವರದಿ ಮಾಡುವಿಕೆ
* ನಿರಾಶ್ರಿತರ ಕುರಿತು, ಮಹಿಳೆಯರ ಸ್ಥಾನಮಾನ, ವಸತಿ ಸಮಸ್ಯೆ ಮುಂತಾದ ವಿಚಾರಗಳು ಈ ಸಮಿತಿಯ ಕಾರ್ಯವ್ಯಾಪ್ತಿ ಅಡಿಯಲ್ಲಿ ಬರುತ್ತವೆ
* ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯ ಗಳ ಬಗ್ಗೆ ಈ ಸಮಿತಿಯು ಶಿಫಾರಸು ಮಾಡುತ್ತದೆ
* ಮಾನವ ಸಂಪನ್ಮೂಲ, ಸಂಸ್ಕೃತಿ, ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಅಂತರಾಷ್ಟ್ರೀಯ ಸಮ್ಮೇಳನಗಳನ್ನು ಸಂಘಟಿಸುವುದು

ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯ ಪ್ರಮುಖ ಸಂಸ್ಥೆಗಳು
1. ಅಂತರಾಷ್ಟ್ರೀಯ ಕಾರ್ಮಿಕ ಸಂಘ (ILO)
2. ಆಹಾರ ಮತ್ತು ಕೃಷಿ ಸಂಸ್ಥೆ (FAO)
3. ಜಾಗತಿಕ ಆರೋಗ್ಯ ಸಂಸ್ಥೆ (WHO)

06. ಸಚಿವಾಲಯ

* ಮಹಾಕಾರ್ಯದರ್ಶಿ ಮತ್ತು ವಿಶ್ವಸಂಸ್ಥೆಯ ಸಿಬ್ಬಂದಿವರ್ಗವನ್ನು ಒಳಗೊಂಡಿರುತ್ತದೆ
* ಮಹಾ ಕಾರ್ಯದರ್ಶಿಯವರು ಕಾರ್ಯಾಂಗದ ಮುಖ್ಯಸ್ಥರಾಗಿದ್ದಾರೆ
* ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಯವರನ್ನು ಸಾಮಾನ್ಯ ಸಭೆಯು ಐದು ವರ್ಷಗಳ ಅವಧಿಗೆ ಭದ್ರತಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಆರಿಸಲಾಗುತ್ತದೆ
* ವಿಶ್ವಸಂಸ್ಥೆ ಸಚಿವಾಲಯ ಅಮೇರಿಕಾದ ನ್ಯೂಯಾರ್ಕ್ ನಲ್ಲಿದೆ
* ಸಚಿವಾಲಯದ ಶಾಖೆಗಳು
1. ಜಿನೇವಾ
2. ವಿಯೆನ್ನಾ
3. ನೈರೋಬಿ

ವಿಶ್ವಸಂಸ್ಥೆಯ ವಿವಿಧ ಸಂಘ ಸಂಸ್ಥೆಗಳು

1. ಆಹಾರ ಮತ್ತು ಕೃಷಿ ಸಂಸ್ಥೆ (FAO) 

* ಆಹಾರ ಮತ್ತು ಕೃಷಿ ಸಂಸ್ಥೆ 1945 ರಂದು ಬಡತನ ಮತ್ತು ಹಸಿವು ಅಪೌಷ್ಟಿಕತೆ ವಿರುದ್ಧ ಹೋರಾಡಲು ಸ್ಥಾಪಿಸಲಾಯಿತು
* ಇದರ ಪ್ರಮುಖ ಮೂರು ಒಳವಿಭಾಗಗಳು
1. ಸಮ್ಮೇಳನ 2. ಸಮಿತಿ 3. ಮಹಾ ನಿರ್ದೇಶಕರು

ಆಹಾರ ಮತ್ತು ಕೃಷಿ ಸಂಸ್ಥೆ ಪ್ರಮುಖ ಉದ್ದೇಶಗಳು

* ಕೃಷಿ ಕ್ಷೇತ್ರದ ಅಭಿವೃದ್ಧಿ ಮಾಡುವುದು
* ಪೌಷ್ಟಿಕ ಆಹಾರ ಒದಗಿಸುವುದು
* ಜಾಗತಿಕವಾಗಿ ಹಸಿವು ಮುಕ್ತ ಮಾಡುವುದು
* ಗ್ರಾಮಾಂತರ ಪ್ರದೇಶದ ಜನರ ಜೀವನಮಟ್ಟ ಸುಧಾರಣೆ

2. ವಿಶ್ವ ಆರೋಗ್ಯ ಸಂಸ್ಥೆ (WHO)

* 1948 ರಂದು ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾಯಿತು
* ಪ್ರಪಂಚದ ಮಾನವರ ಆರೋಗ್ಯವನ್ನು ಸುಧಾರಿಸುವುದು ಇದರ ಪ್ರಮುಖ ಗುರಿಯಾಗಿದೆ
* ವಿಶ್ವ ಆರೋಗ್ಯ ಸಂಸ್ಥೆಯು ಕಾಲರಾ, ಪ್ಲೇಗ್, ಮಲೇರಿಯಾ, ಸಿಡುಬು, ಮುಂತಾದ ರೋಗಗಳನ್ನು ತೊಡೆದುಹಾಕಲು ಪ್ರಯತ್ನಿಸುತ್ತಿವೆ ಮತ್ತು ಸಿಡುಬು ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಿದೆ
* ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಕಚೇರಿ ಇರುವುದು ಸ್ವಿಟ್ಜರ್ಲ್ಯಾಂಡಿನ ಜಿನೇವಾದಲ್ಲಿ

03. ಯುನೆಸ್ಕೋ ( United Nations Educational Scientific and Cultural Organisations)

* ಯುನೆಸ್ಕೋ 1946 ರಂದು ಸ್ಥಾಪಿತವಾಯಿತು
* ಯುನೆಸ್ಕೋದ ಕೇಂದ್ರ ಕಚೇರಿ ಪ್ಯಾರಿಸ್ ನಲ್ಲಿದೆ
* ಯುನೆಸ್ಕೋದ ಪ್ರಮುಖ ಗುರಿ
ವಿಜ್ಞಾನ ಶಿಕ್ಷಣ ಸಂಸ್ಕೃತಿ ಮುಂತಾದವುಗಳನ್ನು ಪ್ರೋತ್ಸಾಹಿಸಿ ಅದರಲ್ಲಿ ಕಾರ್ಯೋನ್ಮುಖವಾಗಿರುತ್ತದೆ

04. ಯುನಿಸೆಫ್ (United Nations International Children's Emergency Fund)

* ಯುನಿಸೆಫ್ 1946 ರಂದು ಸ್ಥಾಪನೆಯಾಯಿತು
* ಯುನಿಸೆಫ್ ಸಂಸ್ಥೆಯ ಪ್ರಮುಖ ಉದ್ದೇಶ
    ಮಕ್ಕಳ ಕ್ಷೇಮಾಭಿವೃದ್ಧಿ
* ಒಟ್ಟು ಸದಸ್ಯರ ಸಂಖ್ಯೆ 30
* ಮಹಿಳೆಯರ ಹಾಗೂ ಮಕ್ಕಳ ಅಭಿವೃದ್ಧಿಗೆ ಪೂರಕವಾದ ಪರಿಸರವನ್ನು ಒದಗಿಸುವುದು ಇದರ ಪ್ರಮುಖ ಉದ್ದೇಶ
* 1965 ರಲ್ಲಿ ಯುನಿಸೆಫ್ ನೊಬೆಲ್ ಪ್ರಶಸ್ತಿಯನ್ನು ಪಡೆದಿದೆ
* ಶುಭಾಶಯ ಪತ್ರಗಳ ಮಾರಾಟದ ಮೂಲಕ ಸಂಸ್ಥೆ ಗಳಿಸುವ ಹಣವನ್ನು ಮಕ್ಕಳ ಯೋಗಕ್ಷೇಮಕ್ಕಾಗಿ ವಿನಿಯೋಗಿಸುತ್ತದೆ

05. ಐಎಂಎಫ್ (IMF)

* ಅಂತರರಾಷ್ಟ್ರೀಯ ಹಣಕಾಸು ನಿಧಿಯು 1945 ರಲ್ಲಿ ಪ್ರಾರಂಭಗೊಂಡಿತು
* ಅಂತರಾಷ್ಟ್ರೀಯ ಹಣಕಾಸು ನಿಧಿಯ ಪ್ರಧಾನ ಕಚೇರಿ ಅಮೇರಿಕಾದ ವಾಷಿಂಗ್ಟನ್
* ವಿವಿಧ ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳಿಗೆ ಕೇಂದ್ರ ಬ್ಯಾಂಕು ಎಂದು ಕರೆಯಬಹುದಾಗಿದೆ
* ಅಂತರರಾಷ್ಟ್ರೀಯ ಹಣಕಾಸು ನಿಧಿಯ ಪ್ರಮುಖ ಉದ್ದೇಶ ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ ಸಮಸ್ಯೆಗಳ ಪರಿಹಾರ
* ಆರ್ಥಿಕವಾಗಿ ಹಿಂದುಳಿದ ಮತ್ತು ಮುಂದುವರೆದ ರಾಷ್ಟ್ರಗಳ ಪರಸ್ಪರ ಸಂಬಂಧವನ್ನು ಬೆಸೆಯುವಲ್ಲಿ ಇದು ಸಹಕಾರಿಯಾಗಿದೆ

6. ಐ ಬಿ ಆರ್ ಡಿ (International Bank for Reconstruction and Development)

* ಐ ಬಿ ಆರ್ ಡಿ 1947 ರಲ್ಲಿ ಪ್ರಾರಂಭವಾಯಿತು
* ಇದನ್ನು ವಿಶ್ವಬ್ಯಾಂಕ್ ಎಂದು ಕರೆಯಲಾಗುತ್ತದೆ
* ಇದರ ಮುಖ್ಯ ಕಛೇರಿ ಅಮೇರಿಕಾದ ವಾಷಿಂಗ್ಟನ್ 
* ಇದರ ಪ್ರಮುಖ ಉದ್ದೇಶ
ಕೃಷಿ, ಕೈಗಾರಿಕೆ, ಸಾರಿಗೆ ಮತ್ತು ಸಂಪರ್ಕದ ಅಭಿವೃದ್ಧಿಗಾಗಿ ಸದಸ್ಯ ರಾಷ್ಟ್ರಗಳಿಗೆ ಸಾಲವನ್ನು ನೀಡುತ್ತದೆ ಮತ್ತು ವಿಶ್ವ ವ್ಯಾಪಾರ ಹಾಗೂ ವಿದೇಶಿ ವಿನಿಮಯ ಪಾವತಿ ಸಮತೋಲನಕ್ಕೆ ಸಹಾಯಮಾಡುತ್ತದೆ

7. ಅಂತರಾಷ್ಟ್ರೀಯ ಕಾರ್ಮಿಕ ಸಂಘ

* ಈ ಸಂಸ್ಥೆಯ ಪ್ರಮುಖ ಉದ್ದೇಶ ಕಾರ್ಮಿಕರ ಕ್ಷೇಮಾಭಿವೃದ್ಧಿ
*  ಅಂತರಾಷ್ಟ್ರೀಯ ಕಾರ್ಮಿಕ ಸಂಘದ ಕೇಂದ್ರ ಕಚೇರಿ ಇರುವುದು ಸ್ವಿಟ್ಜರ್ಲ್ಯಾಂಡಿನ ಜಿನೇವಾದಲ್ಲಿ
* ಪ್ರತಿಯೊಂದು ರಾಷ್ಟ್ರವು ಇಬ್ಬರು ಪ್ರತಿನಿಧಿಗಳನ್ನು ಈ ಸಂಸ್ಥೆಗೆ ಕಳುಹಿಸುತ್ತದೆ
* ಕಾರ್ಮಿಕ ವರ್ಗದ ಸಾಮಾಜಿಕ ಭದ್ರತೆ, ಆರೋಗ್ಯರಕ್ಷಣೆ, ಮತ್ತು ಉತ್ತಮ ಜೀವನಮಟ್ಟ ಇತ್ಯಾದಿ ವಿಚಾರಗಳು ಮತ್ತು ಮಹಿಳಾ ಕಾರ್ಮಿಕರ ಹೆರಿಗೆ ಸೌಲಭ್ಯ, ಕನಿಷ್ಠ ವೇತನ ಜಾರಿ, ವಸತಿ ನಿರ್ಮಾಣ ಮುಂತಾದ ವಿಷಯಗಳು ಈ ಸಂಸ್ಥೆಯ ಕಾರ್ಯ ವ್ಯಾಪ್ತಿಯಲ್ಲಿ ಸೇರಿವೆ

8. ವಿಶ್ವ ವ್ಯಾಪಾರ ಸಂಘಟನೆ (World Trade Organisation)

* ವಿಶ್ವ ವ್ಯಾಪಾರ ಸಂಘಟನೆಯು 1995 ಜನವರಿ 1 ರಂದು ಸ್ಥಾಪನೆಯಾಯಿತು
* ಇದರ ಪ್ರಮುಖ ಉದ್ದೇಶ
ಅಂತರಾಷ್ಟ್ರೀಯ ಮಟ್ಟದ ವಾಣಿಜ್ಯ ಮತ್ತು ವ್ಯಾಪಾರಗಳ ತೊಡಕುಗಳನ್ನು ನಿವಾರಿಸುವುದು
* ಐಎಂಎಫ್ ಮತ್ತು ಐ ಬಿ ಆರ್ ಡಿ ಸಂಸ್ಥೆಗಳೊಂದಿಗೆ ತೃತೀಯ ಆರ್ಥಿಕ ಆಧಾರಸ್ತಂಭ ಎಂದು ಕರೆಯಲಾಗುತ್ತದೆ
* ವಿಶ್ವ ವ್ಯಾಪಾರ ಸಂಸ್ಥೆಯ ಕೇಂದ್ರ ಕಚೇರಿ ಸ್ವಿಟ್ಜರ್ಲ್ಯಾಂಡಿನ ಜಿನೇವಾದಲ್ಲಿದೆ
* ವಿಶ್ವ ವ್ಯಾಪಾರ ಸಂಘಟನೆಯ ಸದಸ್ಯ ರಾಷ್ಟ್ರಗಳು ಸಾಮಾನ್ಯ ವ್ಯಾಪಾರ ಮತ್ತು ಸುಂಕ ಒಪ್ಪಂದಕ್ಕೆ ಸೂಚಿಸಿದವು















ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Call Letter Update of Central and State Government Recruitment